ಧೋನಿ To ಸಿದ್ದಾರ್ಥ್ ಮಲ್ಯ: ಮದ್ವೆಗೂ ಮುನ್ನ ಡಿಪ್ಪಿ ಜೊತೆ 7 ಜನರ ಹೆಸರು ತಳುಕು

ರಣ್‌ವೀರ್ ಸಿಂಗ್ - ದೀಪಿಕಾ ಪಡುಕೋಣೆ ಬಾಲಿವುಡ್‌ನ ಹಾಟ್ ಕಮಪ್ ಅನ್ನಿಸಿಕೊಂಡಿದ್ದಾರೆ. ಈ ಜೋಡಿಯನ್ನು ಒಟ್ಟಿಗೆ ನೋಡುವುದೇ ಅಭಿಮಾನಿಗಳ ಕಣ್ಣಿಗೆ ಹಬ್ಬ. ಆದರೆ ಮದುವೆಗೂ ಮುನ್ನ ಇಬ್ಬರ ಹೆಸರುಗಳು ಬೇರೆ ಬೇರೆಯವರೊಟ್ಟಿಗೆ ತಳಕು ಹಾಕಿಕೊಂಡಿತ್ತು.

ಕನ್ನಡದ 'ಐಶ್ವರ್ಯ' ಸಿನಿಮಾದಲ್ಲಿ ಡಿಪ್ಪಿ ಮೊದಲ ಬಾರಿಗೆ ನಟಿಸಿದ್ದರು. ನಂತರ ಬೆಂಗಳೂರು ಬಿಟ್ಟು ಮುಂಬೈ ಸೇರಿಕೊಂಡಿದ್ದರು. 'ಓಂ ಶಾಂತಿ ಓಂ' ಸಕ್ಸಸ್ ನಂತರ ಬಾಲಿವುಡ್‌ನಲ್ಲೇ ಸೆಟ್ಲ್ ಆಗಿಬಿಟ್ಟರು. ಬಾಲಿವುಡ್‌ನಲ್ಲಿ ದೀಪಿಕಾ ಮಿಮಚು ಹರಿಸುತ್ತಿದ್ದಂತೆ ಹುಡುಗರ ಹಾಟ್ ಫೇವರಿಟ್ ಅನ್ನಿಸಿಕೊಂಡು ಬಿಟ್ಟಿದ್ದರು. ಕ್ರಿಕೆಟ್ ಆಟಗಾರರು, ಉದ್ಯಮಿಗಳು, ಸಿನಿಮಾ ನಟರು ದೀಪಿಕಾ ಮೋಡಿಗೆ ಮರುಳಾಗಿದ್ದರು. ದೀಪಿಕಾಗೂ ಕೆಲವರ ಮೇಲೆ ಲವ್ವಾಗಿತ್ತು. ಆದರೆ ಯಾವುದು ಕೂಡ ಬಹಳ ದಿನ ಉಳಿಯಲಿಲ್ಲ. ಮದುವೆವರೆಗೂ ಬರಲಿಲ್ಲ.

'ರಾಮ್‌ಲೀಲಾ' ಸಿನಿಮಾ ಸಮಯದಲ್ಲಿ ರಣ್‌ವೀರ್- ದೀಪಿಕಾ ಹತ್ತಿರವಾಗಿದ್ದರು. ಇಬ್ಬರು ಪ್ರೀತಿಲಿ ಬಿದ್ದು 4 ವರ್ಷಗಳ ಹಿಂದೆ ಇಟಲಿಯಲ್ಲಿ ಅದ್ಧೂರಿಯಾಗಿ ಹಸೆಮಣೆ ಏರಿದ್ದರು. ಅದಕ್ಕೂ ಮುನ್ನ ಯಾರ್ಯಾರ ಜೊತೆ ಆಕೆ ಲವ್ವಿ ಡವ್ವಿ ನಡೆಸಿದ್ದರು ಎನ್ನುವ ಲಿಸ್ಟ್ ಮುಂದೆ ಇದೆ ಓದಿ.

ನಿಹಾರ್‌ ಜೊತೆ ಡಿಪ್ಪಿ ಲವ್ವಿಡವ್ವಿ

ನಿಹಾರ್‌ ಜೊತೆ ಡಿಪ್ಪಿ ಲವ್ವಿಡವ್ವಿ

ನಟಿ ದೀಪಿಕಾ ಪಡುಕೋಣೆ ಬೆಂಗಳೂರು ಬಿಟ್ಟು ಮುಂಬೈ ಪ್ರವೇಶಿಸುತ್ತಿದ್ದಂತೆ ಉದ್ಯಮಿ, ಮಾಡೆಲ್ ನಿಹಾರ್ ಪಾಂಡ್ಯಾ ಜೊತೆ ತಿರುಗಾಡುತ್ತಿದ್ದಾರೆ ಎನ್ನುವ ಗುಸುಗುಸು ಶುರುವಾಗಿತ್ತು. 3 ವರ್ಷಗಳ ಕಾಲ ಇವರಿಬ್ಬರು ರಿಲೇಶನ್‌ಶಿಪ್‌ನಲ್ಲಿ ಇದ್ದರು. ನಂತರ ದೂರಾಗಿದ್ದರು ಎನ್ನಲಾಗಿತ್ತು. ಆ ನಂತರ ನಿಹಾರ್ ಪಾಂಡ್ಯಾ ಗಾಯಕಿ ನೀತಿ ಮೋಹನ್ ಕೈ ಹಿಡಿದರು.

ದೀಪಿಕಾ ಮೇಲೆ ಧೋನಿಗೆ ಕ್ರಶ್

ದೀಪಿಕಾ ಮೇಲೆ ಧೋನಿಗೆ ಕ್ರಶ್

ಖ್ಯಾತ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿಗೆ ದೊಡ್ಡ ಮಹಿಳಾ ಅಭಿಮಾನಿ ಬಳಗ ಇದೆ. ಆದರೆ ಧೋನಿಗೆ ಮಾತ್ರ ದೀಪಿಕಾ ಮೇಲೆ ಕ್ರಶ್ ಆಗಿತ್ತು. ಇದನ್ನು ಅವರು ಕೂಡ ಹೇಳಿಕೊಂಡಿದ್ದರು. ಇನ್ನು ಇವರಿಬ್ಬರ ನಡುವಿ ಕೂಡ ಸಂಥಿಂಗ್ ಸಂಥಿಂಗ್ ನಡೆದಿತ್ತು ಎನ್ನುವ ಗುಸುಗುಸು ಕೇಳಿಬಂದಿತ್ತು. ಇನ್ನು ಧೋನಿ, ಯುವರಾಜ್ ಸಿಂಗ್, ದೀಪಿಕಾ ನಡುವೆ ತ್ರಿಕೋನ ಪ್ರೇಮಕಥೆ ನಡೀತಿತ್ತು. ಸ್ನೇಹಕ್ಕಾಗಿ ಧೋನಿ ಪ್ರೀತಿ ತ್ಯಾಗ ಮಾಡಿದ್ದರು ಎನ್ನುವ ಮಾತುಗಳು ಕೇಳಿಬಂದಿತ್ತು.

ಯುವಿ ಲವ್ ಅಫೇರ್ಸ್‌ಗೆ ಬರವಿಲ್ಲ

ಯುವಿ ಲವ್ ಅಫೇರ್ಸ್‌ಗೆ ಬರವಿಲ್ಲ

ಇನ್ನು ಯುವರಾಜ್ ಸಿಂಗ್ ಹಾಗೂ ದೀಪಿಕಾ ಲವ್ವಿ ಡವ್ವಿ ವಿಚಾರ ಗುಟ್ಟಾಗಿ ಏನು ಉಳಿದಿಲ್ಲ. ಒಂದ್ಕಾಲದಲ್ಲಿ ಇವರಿಬ್ಬರ ಡೇಟಿಂಗ್ ಸುದ್ದಿ ದೊಡ್ಡದಾಗಿ ಸದ್ದು ಮಾಡಿತ್ತು. ಯುವಿಗಾಗಿ ಸ್ಟೇಡಿಯಂಗೆ ಬಂದು ಚೀಯರ್ ಅಪ್ ಮಾಡುವಷ್ಟು ದೀಪಿಕಾ ಮತ್ತು ಯುವಿ ಸ್ನೇಹ ಬೆಳೆದಿತ್ತು. ಇನ್ನೇನು ಮದುವೆ ಆಗಿಯೇ ಬಿಡುತ್ತಾರೆ ಎನ್ನುವಷ್ಟರಲ್ಲಿ ನಾನೊಂದು ತೀರ ನೀನೊಂದು ಎನ್ನುವಂತಾಗಿಬಿಟ್ಟಿದದ್ದರು. ಕೊನೆಗೆ ಅದೆಲ್ಲಾ ಬರೀ ಗಾಸಿಪ್ ಆಗಿಯೇ ಉಳಿದುಬಿಟ್ಟಿತ್ತು.

ಸಿದ್ದಾರ್ಥ್ ಜೊತೆ ಡಿಪ್ಪಿ ಕಿಸ್ಸಿಂಗ್

ಸಿದ್ದಾರ್ಥ್ ಜೊತೆ ಡಿಪ್ಪಿ ಕಿಸ್ಸಿಂಗ್

ದೀಪಿಕಾ ಬಾಲಿವುಡ್ ಪ್ರವೇಶಿಸಿದ ಆರಂಭದಲ್ಲೇ ಭಾರತದಲ್ಲಿ ಐಪಿಎಲ್ ಕ್ರಿಕೆಟ್ ಕಾವು ಶುರುವಾಗಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಉದ್ಯಮಿ ವಿಜಯ್ ಮಲ್ಯ ಖರೀದಿಸಿದ್ದರು. ಅದೇ ಸಮಯದಲ್ಲಿ ಅವರ ಪುತ್ರ ಸಿದ್ಧಾರ್ಥ್ ಮಲ್ಯ ಜೊತೆ ದೀಪಿಕಾ ಹೆಸರು ತಳುಕು ಹಾಕಿಕೊಂಡಿತ್ತು. ಐಪಿಎಲ್ ಮ್ಯಾಚ್ ವೇಳೆಯೇ ಇಬ್ಬರು ಕಿಸ್‌ ಮಾಡುತ್ತಿರುವ ಫೋಟೊಗಳು ವೈರಲ್ ಆಗಿ ಭಾರೀ ಸುದ್ದಿ ಆಗಿತ್ತು.

ಕಪೂರ್ ಕುಡಿಯ ಜೊತೆ ಲವ್ ಸ್ಟೋರಿ

ಕಪೂರ್ ಕುಡಿಯ ಜೊತೆ ಲವ್ ಸ್ಟೋರಿ

ಇನ್ನು ರಣ್‌ಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ಲವ್ ಗುಟ್ಟಾಗಿ ಏನು ಇರಲಿಲ್ಲ. ಇನ್ನೇನು ಜೋಡಿ ಮದುವೆ ಆಗುತ್ತದೆ ಎಂದುಕೊಳ್ಳುವ ವೇಳೆಗೆ ದೂರಾಗಿದ್ದರು. ರಣ್‌ಬೀರ್ ಮೋಸ ಮಾಡಿದ ಎನ್ನುವಂತೆ ದೀಪಿಕಾ ಮಾತನಾಡಿದ್ದರು. ಆ ನಂತರ ರಣ್‌ವೀರ್ ಸಿಂಗ್‌ನ ಪ್ರೀತಿಸಿ ದೀಪಿಕಾ ಮದುವೆ ಆಗಿದ್ದರು. ಇನ್ನು ಮುಜಾಮಿಲ್ ಇಬ್ರಾಹಿಂ ಹಾಗೂ ಬಾಲಿವುಡ್ ನಟ ಉಪೆನ್ ಪಟೇಲ್ ಜೊತೆಗೂ ದೀಪಿಕಾ ಹೆಸರು ತಳಕು ಹಾಕಿಕೊಂಡಿತ್ತು.

More from Filmibeat

English summary
7 Love Affairs of Deepika Padukone Before Marrying Ranveer Singh. The Bollywood actress has dated many 5 men Including Ranbir Kapoor, Yuvraj Singh before She finally decided to settle down with her Husband Ranveer Singh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X