'ಬಾಹುಬಲಿ'ಗೆ 9 ವರ್ಷ; ಮೌಳಿ ದೃಶ್ಯಕಾವ್ಯದ ಬಗ್ಗೆ 20 ಇಂಟ್ರೆಸ್ಟಿಂಗ್ ಸಂಗತಿಗಳು

ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಬರೆದ ಸಿನಿಮಾ 'ಬಾಹುಬಲಿ: ದಿ ಬಿಗಿನಿಂಗ್'. ಜುಲೈ 10, 2015ರಲ್ಲಿ ತೆರೆಗಪ್ಪಳಿಸಿದ್ದ ಈ ಕಾಸ್ಟ್ಯೂಮ್ ಡ್ರಾಮಾ ಸೃಷ್ಟಿಸಿದ ಸಂಚಲನ ಅಷ್ಟಿಷ್ಟಲ್ಲ. ರಾಜಮೌಳಿ ನಿರ್ದೇಶನದ ಚಿತ್ರದಲ್ಲಿ ಪ್ರಭಾಸ್, ರಾಣಾ, ಅನುಷ್ಕಾ ಶೆಟ್ಟಿ, ಸತ್ಯರಾಜ್, ರಮ್ಯಾಕೃಷ್ಣ, ತಮನ್ನಾ ಸೇರಿದಂತೆ ಘಟಾನುಘಟಿ ಕಲಾವಿದರು ನಟಿಸಿದ್ದರು.

ಅರ್ಕಾ ಮೀಡಿಯಾ ವರ್ಕ್ಸ್ ಬ್ಯಾನರ್ ಅಡಿಯಲ್ಲಿ ಶೋಬು ಯರ್ಲಗಡ್ಡ ಹಾಗೂ ಪ್ರಸಾದ್ ದೇವಿನೇನಿ ಸಿನಿಮಾ ನಿರ್ಮಿಸಿದ್ದರು. ಅಂದಾಜು 180 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ 650 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಜೊತೆಗೆ ಒಂದೇ ಕಥೆಯನ್ನು ಎರಡು ಭಾಗಗಳಾಗಿ ತೆರೆಗೆ ತರುವ ಪ್ರಯತ್ನಗಳು ಈ ಚಿತ್ರದಿಂದಲೇ ಆರಂಭವಾಯಿತು.

9 years of Baahubali The Beginning 20 unknown facts of the film

'ಬಾಹುಬಲಿ: ದಿ ಬಿಗಿನಿಂಗ್' ಸಿನಿಮಾ 9 ವರ್ಷ ಪೂರೈಸಿದ್ದನ್ನು ನಟಿ ತಮನ್ನಾ ಭಾಟಿಯಾ ನೆನಪಿಸಿಕೊಂಡಿದ್ದಾರೆ. ಅಭಿಮಾನಿಗಳು ಕೂಡ 'ಬಾಹುಬಲಿ' ಆರ್ಭಟವನ್ನು ಮತ್ತೊಮ್ಮೆ ಮೆಲುಕು ಹಾಕುತ್ತಿದ್ದಾರೆ. ಹಲವು ಮೊದಲುಗಳಿಗೆ ಕಾರಣವಾಗಿದ್ದ ಹಲವು ದಾಖಲೆಗಳನ್ನು ಬರೆದ ಅಪರೂಪದ ಚಿತ್ರದ ಬಗ್ಗೆ 25 ಇಂಟ್ರೆಸ್ಟಿಂಗ್ ಸಂಗತಿಗಳು ಮುಂದೆ ಇದೆ ಓದಿ..

1. ಸ್ಕ್ರಿಪ್ಟ್ ಮಾಡುವ ಸಮಯದಲ್ಲೇ 'ಬಾಹುಬಲಿ ದಿ: ಬಿಗಿನಿಂಗ್' ಚಿತ್ರವನ್ನು 2 ಭಾಗಗಳಾಗಿ ಕಟ್ಟಿಕೊಡಬೇಕು ಎಂದು ರಾಜಮೌಳಿ ನಿರ್ಧರಿಸಿದ್ದರು. ಅದನ್ನು ತಂಡಕ್ಕೆ ಒಪ್ಪಿಸಿ ಸಿನಿಮಾ ಮಾಡಿದ್ದರು. ಮೌಳಿ ಪ್ಲ್ಯಾನ್ ವರ್ಕೌಟ್ ಆಗಿತ್ತು. ಮೊದಲ ಭಾಗಕ್ಕಿಂತ 2 ಭಾಗ ಹೆಚ್ಚು ಸದ್ದು ಮಾಡಿತ್ತು.

2. ಶಿವಗಾಮಿ ಪಾತ್ರಕ್ಕೆ ರಾಜಮೌಳಿ ಮೊದಲ ಆಯ್ಕೆ ಶ್ರೀದೇವಿ ಆಗಿದ್ದರು. ಜಕ್ಕಣ್ಣ ಆಕೆಗೆ ಕಥೆ ಹೇಳಿ ಒಪ್ಪಿಸಿದ್ದರು. ಆದರೆ ಆಕೆಯ ಸಂಭಾವನೆ ಹಾಗೂ ಷರತ್ತುಗಳಿಗೆ ಬೆಚ್ಚಿಬಿದ್ದು ರಮ್ಯಾಕೃಷ್ಣ ಅವರನ್ನು ಆಯ್ಕೆ ಮಾಡಿಕೊಳ್ಳುವಂತಾಗಿತ್ತು.

3. ಶ್ರೀದೇವಿ ಇದ್ದರೆ ಹಿಂದಿ ಬೆಲ್ಟ್‌ನಲ್ಲಿ ಒಳ್ಳೆ ರೆಸ್ಪಾನ್ಸ್ ಸಿಗುತ್ತದೆ ಎನ್ನುವುದು ಮೌಳಿ ಲೆಕ್ಕಾಚಾರವಾಗಿತ್ತು. ಆದರೆ ಕಥೆ ಬರೆದುಕೊಂಡಾಗ ರಮ್ಯಾಕೃಷ್ಣ ಈ ಪಾತ್ರಕ್ಕೆ ಸೂಕ್ತ ಎಂದುಕೊಂಡಿದ್ದರಂತೆ. ಇದನ್ನು ಖುದ್ದು ಮೌಳಿ ಸಾಕಷ್ಟು ಬಾರಿ ಹೇಳಿದ್ದಾರೆ.

4. 'ಬಾಹುಬಲಿ' ಸರಣಿ ಸಿನಿಮಾಗಳ ಬಹುತೇಕ ಚಿತ್ರೀಕರಣ ಹೈದರಾಬಾದ್ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಶೂಟ್ ಮಾಡಲಾಗಿತ್ತು. ದೊಡ್ಡ ದೊಡ್ಡ ಸೆಟ್‌ಗಳನ್ನು ಅದಕ್ಕಾಗಿ ನಿರ್ಮಿಸಲಾಗಿತ್ತು.

5. ಶಿವುಡು ಹಾಗೂ ಅವಂತಿಕಾ ಚಿತ್ರದ ಆರಂಭದಲ್ಲೇ ಹಿಮಬೆಟ್ಟದಲ್ಲಿ ತಪ್ಪಿಸಿಕೊಳ್ಳುವ ಸನ್ನಿವೇಶ ಇದೆ. ಇದನ್ನು ಬಲ್ಗೇರಿಯಾದಲ್ಲಿ ಚಿತ್ರೀಕರಣ ಮಾಡಲಾಗಿತ್ತು.

6. ಮಾಹಿಷ್ಮತಿ ಹಾಗೂ ಕಾಲಕೇಯ ಸೇನೆಗಳ ನಡುವಿನ ರಣರೋಚಕ ಯುದ್ಧದ ಎಪಿಸೋಡ್ ಅನ್ನು 120 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿತ್ತು. ಆರಮೋಜಿ ಫಿಲ್ಮ್‌ಸಿಟಿಯಲ್ಲಿ ಇದಕ್ಕೆ ಪೀಟರ್ ಹೀನ್ಸ್ ಸಾಹಸ ಸಂಯೋಜನೆ ಮಾಡಿದ್ದರು.

7. 'ಬಾಹುಬಲಿ' ಸರಣಿಯಲ್ಲಿ ಗ್ರಾಫಿಕ್ಸ್ ಹೈಲೆಟ್ ಆಗಿತ್ತು. ಮೌಳಿ ಅಂಡ್ ಟೀಂ ತೆರೆಮೇಲೆ ಮ್ಯಾಜಿಕ್ ಕ್ರಿಯೇಟ್ ಮಾಡಿದ್ದರು. ಮಕುಟ, ಫೈರ್‌ಫ್ಲೈ ಕ್ರಿಯೇಟಿವ್, ಟೌ ಫಿಲ್ಮ್ಸ್, ಪ್ರಸಾದ್ ಇಎಫ್‌ಎಕ್ಸ್, ಸೃಷ್ಟಿ ಮತ್ತು ಎಎಮ್‌ಡಿ ಸೇರಿದಂತೆ 800 ವಿಎಫ್‌ಎಕ್ಸ್ ತಂತ್ರಜ್ಞರು ಮತ್ತು 15 ವಿಎಫ್‌ಎಕ್ಸ್ ಸ್ಟುಡಿಯೋಗಳು ಈ ಚಿತ್ರಕ್ಕಾಗಿ ಕೆಲಸ ಮಾಡಿದ್ದರು.

8. ಚಿತ್ರದಲ್ಲಿ ಕಾಲಕೇಯ ಸೈನ್ಯಕ್ಕಾಗಿ ಕಿಲಿಕಿಲಿ ಎಂಬ ಕಾಲ್ಪನಿಕ ಭಾಷೆಯನ್ನು ರಚಿಸಲಾಗಿತ್ತು. ಇದು ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಎನ್ನಬಹುದು. ಗೀತರಚನೆಕಾರ ಮದನ್ ಕರ್ಕಿ ಕಾಲ್ಪನಿಕ ಭಾಷೆಯನ್ನು ಸೃಷ್ಟಿಸಿದ್ದರು.

9. ನಟ ಪ್ರಭಾಸ್ 'ಬಾಹುಬಲಿ' ಸರಣಿ ಸಿನಿಮಾಗಳಿಗಾಗಿ ಬರೋಬ್ಬರಿ 5 ವರ್ಷ ವ್ಯಯಿಸಿದ್ದರು. ಇದಕ್ಕೂ ಮುನ್ನ ಭಾರತೀಯ ಚಿತ್ರರಂಗದಲ್ಲಿ ಯಾವೊಬ್ಬ ನಟನೂ ಒಂದು ಚಿತ್ರಕ್ಕೆ ಇಷ್ಟು ಸಮಯ ವ್ಯಯಿಸಿರಲಿಲ್ಲ. ಅಂದಹಾಗ ಈ ಸಿನಿಮಾಗಳ ನಡುವೆ ಮತ್ಯಾವುದೇ ಸಿನಿಮಾ ಕೂಡ ಒಪ್ಪಿಕೊಂಡಿರಲಿಲ್ಲ.

10. ತಂದೆ ಮಗನಾಗಿ ಡಬಲ್ ರೋಲ್‌ನಲ್ಲಿ ಪ್ರಭಾಸ್ ನಟಿಸಿದ್ದರು. ಇದಕ್ಕಾಗಿ ದೇಹ ದಂಡಿಸಿ ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಅದಕ್ಕಾಗಿ ಡಯೆಟ್, ವ್ಯಾಯಾಮ ಮಾಡಿದ್ದರು. 1. 50 ಕೋಟಿ ವ್ಯಯಿಸಿ ಜಿಮ್ ಎಕ್ಯೂಪ್‌ಮೆಂಟ್ಸ್ ಕೊಂಡುಕೊಂಡಿದ್ದರು ಎನ್ನಲಾಗುತ್ತದೆ.

9 years of Baahubali The Beginning 20 unknown facts of the film

11. ಬಲ್ಲಾಳದೇವ ಆಗಿ ರಾಣಾ ದಗ್ಗುಬಾಟಿ ನಟನೆ ಕೂಡ ಮೋಡಿ ಮಾಡಿತ್ತು. ಪಾತ್ರಕ್ಕಾಗಿ 35 ಕೆಜಿ ತೂಕ ಹೆಚ್ಚಿಸಿಕೊಂಡು ರಾಣಾ ನಟಿಸಿದ್ದರು.

12. ರಾಣಾಗೂ ಮುನ್ನ ಬಲ್ಲಾಳದೇವ ಪಾತ್ರಕ್ಕೆ ಹಾಲಿವುಡ್ ನಟ ಜೇಸನ್ ಮೊಮೊವಾ ಇದ್ರೆ ಚೆನ್ನಾಗಿರುತ್ತದೆ ಎಂದು ರಾಜಮೌಳಿ ಅಂದುಕೊಂಡಿದ್ದರಂತೆ.

13. ಚಿತ್ರದಲ್ಲಿ ಬಾಹುಬಲಿ ಹಾಗೂ ಬಲ್ಲಾಳದೇವ ದೊಡ್ಡ ಪ್ರತಿಮೆಗಳು ಹೈಲೆಟ್ ಆಗಿತ್ತು. ಇದಕ್ಕಾಗಿ 125 ಅಡಿ ಎತ್ತರದ ಪ್ರತಿಮೆಯನ್ನು ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಿರ್ಮಿಸಲಾಗಿತ್ತು.

14. ಬಾಹುಬಲಿ: ದಿ ಬಿಗಿನಿಂಗ್ ಲಂಡನ್‌ನ ರಾಯಲ್ ಆಲ್ಬರ್ಟ್ ಹಾಲ್‌ನಲ್ಲಿ ಪ್ರದರ್ಶಿಸಲಾದ ಮೊದಲ ಇಂಗ್ಲಿಷ್ ಸಿನಿಮಾ ಎನಿಸಿಕೊಂಡಿತ್ತು.

15. ಚಿತ್ರಕ್ಕೆ 2015ರಲ್ಲಿ ಬೆಸ್ಟ್ ಫೀಚರ್ ಫಿಲ್ಮ್ ತೆಲುಗು ಹಾಗೂ ಬೆಸ್ಟ್ ಸ್ಪೆಷಲ್ ಎಫೆಕ್ಟ್ಸ್ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಸಿಕ್ಕಿತ್ತು.

16. 'ಬಾಹುಬಲಿ: ದಿ ಬಿಗಿನಿಂಗ್' ಚಿತ್ರದ ಯುದ್ಧದ ದೃಶ್ಯದ ಚಿತ್ರೀಕರಣಕ್ಕಾಗಿ 5000 ಹೆಚ್ಚು ಸಹ ಕಲಾವಿದರು 250 ದಿನಗಳ ಕಾಲ ಕೆಲಸ ಮಾಡಿದ್ದರು.

17. ಬರೋಬ್ಬರಿ 180 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿತ್ತು. ಅದರಲ್ಲಿ 80 ಕೋಟಿ ರೂ. ಹಣವನ್ನು ಬರೀ ಗ್ರಾಫಿಕ್ಸ್‌ವಾಗಿ ವ್ಯಯಿಸಿದ್ದರು ಎನ್ನಲಾಗುತ್ತದೆ.

18. ಚಿತ್ರದಲ್ಲಿ ಮಹೇಂದ್ರ ಬಾಹುಬಲಿಯಾಗಿ ಶಿವಗಾಮಿ ನವಜಾತ ಶಿಶುವನ್ನು ಎತ್ತಿಕೊಂಡು ಹೋಗುವ ಸನ್ನಿವೇಶ ಇದೆ. ನೀರಿನಲ್ಲಿ ಮುಳುಗಿದಾಗ ಆಕೆ ಒಂದೇ ಕೈಯಲ್ಲಿ ಮಗುವನ್ನು ಎತ್ತಿ ಹಿಡಿಯುವ ಸನ್ನಿವೇಶ ಇದೆ. ಅದು ಹೆಣ್ಣು ಮಗು ಆಗಿತ್ತು.

19. ಭಾರತೀಯ ಚಿತ್ರರಂಗದಲ್ಲಿ ಅವತ್ತಿನ ಕಾಲಕ್ಕೆ ಬಹಳ ದುಬಾರಿ ಸಿನಿಮಾ ಇದಾಗಿತ್ತು. 180 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ಮೂಡಿ ಬಂದಿತ್ತು.

20. ಬಾಹುಬಲಿ ಚಿತ್ರದ ಪಾತ್ರಗಳಿಗೆ ಮಹಾಭಾರತದ ಪಾತ್ರಗಳೇ ಪ್ರೇರಣೆ ಎಂದು ವಿಜಯೇಂದ್ರ ಪ್ರಸಾದ್ ಹೇಳಿದ್ದರು. ಕನ್ನಡದ ಕೆಲ ಸಿನಿಮಾಗಳಿಂದ ಪ್ರೇರಣೆಗೊಂಡು ಮೌಳಿ ಒಂದಷ್ಟು ಸನ್ನಿವೇಶಗಳನ್ನು ಕಟ್ಟಿಕೊಟ್ಟಿದ್ದರು.

More from Filmibeat

English summary
Baahubali: The Beginning completes 9 years; Interesting facts about the film
Read more about: baahubali rajamouli prabhas
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X