RRR ಗೆ ಹೊಸ ವ್ಯಾಖ್ಯಾನ ಕೊಟ್ಟು ತನ್ನ ಪ್ರಾಡಕ್ಟ್ ಮಾರಲು ಮುಂದಾದ ಕಾಂಡೋಮ್ ಕಂಪನಿ

'ಬಾಹುಬಲಿ- 2'ಚಿತ್ರ ಬಿಡುಗಡೆ ಆದ ಮೇಲೆ ಬಾಹುಬಲಿ ಕಾಮಿಕ್ಸ್, ಆಟಿಕೆಗಳು, ವಿಡಿಯೋ ಗೇಮ್ಸ್, ಕಾರ್ಟೂನ್, ದೇವಸೇನಾ ಸ್ಯಾರಿಗಳು ಹೀಗೆ ರಾಶಿ ರಾಶಿ ಪ್ರಾಡಕ್ಟ್ ಗಳನ್ನು ನಾವು ನೋಡಿದ್ವಿ. ಯಾವುದೇ ಒಂದು ಚಿತ್ರ ಭರ್ಜರಿ ಹಿಟ್ ಆದರೆ ಅದರ ನಂತರ ಮಾರ್ಕೆಟ್ನಲ್ಲಿ ಅದರ ಹೆಸರಿನಲ್ಲಿ ಪ್ರೊಡಕ್ಟ್ ಗಳು ಬರುವುದು ಸಹಜ.

ಹಿಂದೆ 'ಬಂಧನ' ಸಿನಿಮಾ ಬಿಡುಗಡೆಯಾದಾಗ ಸಿನಿಮಾದಲ್ಲಿ ಸುಹಾಸಿನಿ ಊಟ್ಟಿದ್ದ ಸೀರೆಗಳು ಭಾರಿ ಜನಪ್ರಿಯವಾಗಿತ್ತು. ಆ ಸಮಯದಲ್ಲಿ ಅಂಗಡಿಗಳಲ್ಲಿ 'ಬಂಧನ' ಸೀರೆಗಳು ಅಂತ ಮಾರಾಟ ಮಾಡಲಾಯಿತು. ಹೃತಿಕ್ ರೋಷನ್ ಅಭಿನಯದ 'ಕ್ರಿಶ್' ಸಿನಿಮಾ ಬಂದಾಗ ಕೂಡ ಕ್ರಿಶ್ ಆಟಿಕೆಗಳು ಸಾಕಷ್ಟು ಜನಪ್ರಿಯವಾಯಿತು. ಈಗ ಇತ್ತೀಚೆಗೆ ಬಿಡುಗಡೆಯಾಗಿ ಭರ್ಜರಿ ಯಶಸ್ಸನ್ನು ಕಾಣುತ್ತಿರುವ 'ಆರ್ ಆರ್ ಆರ್' ಚಿತ್ರದ ಸರದಿ.

RRR ಟೈಟಲ್ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ರಾಮಾರಾವ್ -ರಾಮ್ ಚರಣ್ ತೇಜ- ರಾಜಮೌಳಿ ಈ ಮೂರು ಕಾಂಬಿನೇಶನ್ 'ಆರ್ ಆರ್ ಆರ್' ಅಂತಹ ಆ ಸಮಯದಲ್ಲಿ ಉಲ್ಲೇಖಿಸಲಾಗಿತ್ತು. ಎಷ್ಟೋ ಕಾಲ 'ಆರ್ ಆರ್ ಆರ್ 'ಅಂತಲೇ ಟೈಟಲ್ ಫಿಕ್ಸ್ ಆಗಿತ್ತು, ಅದ ನಂತರವೇ ಆರ್ ಆರ್ ಆರ್ ಅಂದರೆ 'ರೌದ್ರಮ್-ರಣಂ-ರುಧಿರಮ್' ಅಂತ ಘೋಷಣೆ ಮಾಡಿದರು ಕೂಡ ಚಿತ್ರ ಕೊನೆಯವರೆಗೂ ಆರ್ ಆರ್ ಆರ್ ಅಂತಲೆ ಜನಸಾಮಾನ್ಯರಲ್ಲಿ ಉಳಿದುಹೋಯಿತು, ಅದೇ ಹೆಸರಿನಲ್ಲಿ ಈಗ ಭರ್ಜರಿ ಯಶಸ್ಸನ್ನು ಕಾಣುತ್ತಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿದೆ. ಭರ್ಜರಿ ಕಲೆಕ್ಷನ್‌ನೊಂದಿಗೆ ಬ್ಲಾಕ್‌ಬಸ್ಟರ್ ಆಗಿದೆ.

ಜನಪ್ರಿಯವಾಗುತ್ತಿದೆ 'ಆರ್ ಆರ್ ಆರ್' ದೋಸೆಗಳು

ಜನಪ್ರಿಯವಾಗುತ್ತಿದೆ 'ಆರ್ ಆರ್ ಆರ್' ದೋಸೆಗಳು

ಒಬ್ಬ ವ್ಯಕ್ತಿ ಅಥವಾ ಯಾವುದೇ ಒಂದು ಸಿನಿಮಾ ಜನಪ್ರಿಯವಾದಾಗ ಅದನ್ನು ಎನ್ ಕ್ಯಾಶ್ ಮಾಡಿಕೊಳ್ಳಲು ಇತರ ರಂಗಗಳು ಸದಾ ಮುಂದಿರುತ್ತವೆ. ಹಿಂದೆ ಮೋದಿ ಪ್ರಧಾನಿಯಾದ ಸಂದರ್ಭದಲ್ಲಿ, ಧೋನಿ ವಿಶ್ವಕಪ್ ಗೆದ್ದ ಸಂದರ್ಭದಲ್ಲಿ ಕೂಡ ಅವರ ಹೆಸರುಗಳಲ್ಲಿ ಬಿಡುಗಡೆ ಮಾಡಲಾದ ಅನೇಕ ಕಂಪನಿಯ ಉತ್ಪನ್ನಗಳು ಸಾಕಷ್ಟು ಜನಪ್ರಿಯವಾಯಿತು. 'ಬಾಹುಬಲಿ- 2' ಚಿತ್ರದ ಸಂದರ್ಭದಲ್ಲೂ ಕೂಡ ಇಂತಹದೇ ಟ್ರೆಂಡ್ ನಾವು ಕಾಣಬಹುದಾಗಿತ್ತು. ಈಗ ಮತ್ತೊಮ್ಮೆ ಆರ್ ಆರ್ ಚಿತ್ರದ ಯಶಸ್ಸಿನ ಸಮಯದಲ್ಲಿ ಅದೇ ಟ್ರೆಂಡ್ ಮತ್ತೆ ಕಾಣುತ್ತಿದ್ದೇವೆ. RRR ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಸಾಕಷ್ಟು ಮ್ಯಾಜಿಕ್ ಚಾಲನೆಯಲ್ಲಿದೆ. ಈಗಾಗಲೇ ಆರ್‌ಆರ್‌ಆರ್ ದೋಸೆಗಳು (RRR: Real Rich Rejoice) ಪಾಪುಲರ್ ಆಗುತ್ತಿದೆ. ಈ ಬಗ್ಗೆ ಟಿಫಿನ್ ಸೆಂಟರ್ ಗಳಲ್ಲಿ ಚರ್ಚೆ ನಡೆಯುತ್ತಿದೆ. RRR ಹೆಸರಿನಲ್ಲಿ ಬಹಳಷ್ಟು ಉತ್ಪನ್ನಗಳು ಬೆಳಕಿಗೆ ಬರುತ್ತಿವೆ.

RRR ಹೆಸರಿನ ಹಿಂದೆ ಬಿದ್ದ ಕಾಂಡೋಮ್ ಕಂಪನಿ

RRR ಹೆಸರಿನ ಹಿಂದೆ ಬಿದ್ದ ಕಾಂಡೋಮ್ ಕಂಪನಿ

ಕಾಂಡೋಮ್ ಕಂಪನಿ ಕೂಡ RRR ಹೆಸರಿನ ಹಿಂದೆ ಬಿದ್ದಿದೆ, RRR ಜನಪ್ರಿಯತೆಯನ್ನು ಮತ್ತು ಅದರ ಬ್ರಾಂಡ್ ಅನ್ನು ತನ್ನ ಉತ್ಪನ್ನದ ಜಾಹೀರಾತಿಗಾಗಿ ಬಳಸಿಕೊಳ್ಳುತ್ತಿದೆ. ಅನೇಕ ಟಾಪ್ ಬ್ರ್ಯಾಂಡ್‌ಗಳು ನೇರವಾಗಿ ಅಥವಾ ಪರೋಕ್ಷವಾಗಿ RRR ಅಕ್ಷರಗಳನ್ನು ಬಳಸಿಕೊಂಡು ಚಲನಚಿತ್ರವನ್ನು ಪ್ರಚಾರ ಮಾಡುತ್ತಿದ್ದರೂ ಇದು ಅವರ ಬ್ರಾಂಡ್ ಪ್ರಚಾರಕ್ಕೆ ಪ್ಲಸ್ ಆಗುತ್ತಿದೆ. ಭಾರತದ ಪ್ರಸಿದ್ಧ ಕಾಂಡೋಮ್ ಬ್ರ್ಯಾಂಡ್‌ಗಳಲ್ಲಿ ಒಂದಾದ ಸ್ಕೋರ್ ಕಾಂಡೋಮ್' RRR ಮೇಲೆ ಕಣ್ಣಿಟ್ಟಿದೆ. ಸ್ಕೋರ್
ಕಾಂಡೋಮ್ ಗಳ ಕೆಲವು ಮಸಾಲೆಯುಕ್ತ ಟಿವಿ ಜಾಹೀರಾತುಗಳು. ಡಿಜಿಟಲ್ ಪ್ರಚಾರಗಳು ಜೋರಾಗಿರುತ್ತದೆ. ಇದೀಗ ಇದೆ ಜನಪ್ರಿಯ ಸ್ಕೋರ್ ಕಾಂಡೋಮ್‌ಗಳನ್ನು ಈಗ RRR ಫೈರ್ ಅಂಡ್ ಐಸ್' ಥೀಮ್‌ನೊಂದಿಗೆ ಪ್ರಚಾರ ಮಾಡಲು ಮುಂದಾಗಿದೆ. RRR ಅನ್ನು ತಮ್ಮ ಅನುಕೂಲಕ್ಕೆ ಪರಿಣಾಮಕಾರಿಯಾಗಿ ಬಳಸಿಕೊಂಡಿರುವ ಕಂಪನಿಯು ತನ್ನ ಉತ್ಪನ್ನಕ್ಕೆ RRR ಅನ್ನು Raw Responsible Romance ಎಂದು ಸಂಕ್ಷೇಪಿಸಲಾಗಿದೆ.

RRR ಹೆಸರು ಹೀಗೆ ಬಳಸಬಹುದೇ?

RRR ಹೆಸರು ಹೀಗೆ ಬಳಸಬಹುದೇ?

ಸ್ಕೋರ್ ಕಾಂಡೋಮ್‌ ಹೀಗೆ ಆರ್ ಆರ್ ಆರ್ ಅಕ್ಷರಗಳನ್ನು ಬಳಸಿಕೊಂಡಿರುವ ರೀತಿಯನ್ನು ಕಂಡು ಬಹಳಷ್ಟು ಮೀಮ್ ಮೇಕರ್‌ಗಳು, ಡಿಜಿಟಲ್ ಪ್ರವರ್ತಕರು ಈ ಸ್ಕೋರ್ ಜಾಹೀರಾತು ಪ್ರಚಾರಕ್ಕೆ ಫಿದಾ ಆಗಿದ್ದಾರೆ. ಆದರೆ RRR ಸಿನಿಮಾದವರು ಇದರ ವಿರುದ್ಧ ಯಾವುದಾದರೂ ಕ್ರಮ ಕೈಗೊಳ್ಳಬಹುದೇ? ಇದು ಅಸಾಧ್ಯವೆಂದು ತೋರುತ್ತದೆ. RRR ಸರಳವಾದ ಇಂಗ್ಲಿಷ್ ಸಂಕ್ಷಿಪ್ತ ರೂಪವಾಗಿರುವುದರಿಂದ, RRR ತಯಾರಕರು ಅದರ ಮೇಲೆ ಟ್ರೇಡ್‌ಮಾರ್ಕ್ ಅನ್ನು ಪಡೆಯಲು ಸಾಧ್ಯವಿಲ್ಲ. ಬ್ರ್ಯಾಂಡ್‌ಗಳನ್ನು ಆ ರೀತಿಯಲ್ಲಿ ಬಳಸುವುದಕ್ಕಾಗಿ ಮೊಕದ್ದಮೆ ಹೂಡಲಾಗುವುದಿಲ್ಲ. ಆದಾಗ್ಯೂ RRR ಎಲ್ಲಾ ವಿಭಾಗಗಳ ಮೂಲಕ ಅತ್ಯುತ್ತಮ ಉಚಿತ ಪ್ರಚಾರವನ್ನು ಪಡೆಯುತ್ತಿದೆ. ಅದಕ್ಕೆ ತೃಪ್ತಿ ಪಡಬೇಕು.

600 ಕೋಟಿ ಕ್ಲಬ್ ನಲ್ಲಿ ಆರ್ ಆರ್ ಆರ್

600 ಕೋಟಿ ಕ್ಲಬ್ ನಲ್ಲಿ ಆರ್ ಆರ್ ಆರ್

ಆರ್ ಆರ್ ಆರ್ ಇದನ್ನು ತಮಗೆ ತೋಚಿದಂತೆ ತಾವು ಬಳಸಿಕೊಳ್ಳುವ ಮೂಲಕ ಅನೇಕ ಕಂಪನಿಗಳು ತಮ್ಮ ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದೆ. ಸಿನಿಮಾ ಸಾಕಷ್ಟು ಜನಪ್ರಿಯವಾಗಿರುವ ಕಾರಣಕ್ಕೆ ಇದರ ಹೆಸರಿನಲ್ಲಿ ಹೊರಬರುವ ಪ್ರತಿಯೊಂದು ಉತ್ಪನ್ನ ಕೂಡ ಅಷ್ಟೇ ಜನಪ್ರಿಯವಾಗುತ್ತದೆ. ಇದು ಸಹಜವಾಗಿಯೇ ಮಾರ್ಕೆಟಿಂಗ್ ತಂತ್ರ ಅಂತ ಹೇಳಬಹುದು. ಇದು ಎಲ್ಲಾ ಕಾಲದಲ್ಲೂ ಕೂಡ ಆ ಸಿನಿಮಾಗಳ ಅಥವಾ ವ್ಯಕ್ತಿಗಳ ಜನಪ್ರಿಯತೆಯನ್ನು ಆಧಾರಿಸಿ ನಡೆಯುತ್ತಿರುತ್ತದೆ. ಇನ್ನು ಇದರ ಹೊರತಾಗಿ ಕೂಡ ನಾವು ಆರ್ ಆರ್ ಆರ್ ಚಿತ್ರದ ಬಗ್ಗೆ ಹೇಳುವುದಾದರೆ 'ಆರ್‌ಆರ್‌ಆರ್ ಚಿತ್ರ 600 ಕೋಟಿ ಕ್ಲಬ್ ಸೇರಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ' ಎಂದು ಫಿಲ್ಮಿ ಟ್ರೇಡ್ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಫುಲ್ ರನ್ನಿಂಗ್ ನಲ್ಲಿ ಚಿತ್ರ ಸಾವಿರ ಕೋಟಿ ಮಾಡಿದರು ಅಚ್ಚರಿಪಡಬೇಕಾಗಿಲ್ಲ ಎಂದು ಅವರು ವಿಶ್ಲೇಷಿಸುತ್ತಾರೆ.

More from Filmibeat

English summary
A Condom Company promoting RRR with a new definition. Company is now promoting it's new product with highlighting the letters RRR.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X