Shivarajkumar: 'ಆನಂದ್‌' To 'ವೇದ': 37 ವರ್ಷಗಳ ಸಿನಿಜರ್ನಿ.. 125 ಸಿನಿಮಾ.. ಒನ್‌ ಅಂಡ್ ಓನ್ಲಿ ಶಿವಣ್ಣ

ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್‌ ಕನ್ನಡದಲ್ಲಿ 37 ವರ್ಷ ಪೂರೈಸಿದ್ದಾರೆ. 1986 ಫೆಬ್ರವರಿ 19ರಂದು 'ಆನಂದ್' ಚಿತ್ರಕ್ಕಾಗಿ ಶಿವಣ್ಣ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು. ಈ ಸಿನಿಮಾ ಅದೇ ವರ್ಷ ಜೂನ್ 19ಕ್ಕೆ ತೆರೆಕಂಡಿತ್ತು. 'ಟುವ್ವಿ ಟುವ್ವಿ' ಎಂದು ಹಾಡುತ್ತಾ ಬಂದ ಅಣ್ಣಾವ್ರು ಹಿರಿಮಗ ಇಂದು ಸೆಂಚುರಿ ಸ್ಟಾರ್ ಆಗಿ ನಮ್ಮ ಮುಂದೆ ನಿಂತಿದ್ದಾರೆ.

ಒಬ್ಬ ನಟ 37 ವರ್ಷ ಚಿತ್ರರಂಗದಲ್ಲಿ ಹೀರೊ ಆಗಿ ಉಳಿದುಕೊಳ್ಳುವುದು, ಇವತ್ತಿಗೂ ಅದೇ ಕ್ರೇಜ್, ಬೇಡಿಕೆ ಉಳಿಸಿಕೊಳ್ಳುವುದು ತಮಾಷೆಯ ಮಾತಲ್ಲ. ಆ ವಿಚಾರದಲ್ಲಿ ಶಿವಣ್ಣ ಎಲ್ಲರಿಗೂ ಮಾದರಿ. ಈಗಲೂ ಶಿವಣ್ಣನ ಕೈಯಲ್ಲಿ ಐದಾರು ಸಿನಿಮಾಗಳಿವೆ. ಬರೀ ಹೀರೊ ಆಗಿ ಮಾತ್ರವಲ್ಲದೇ ಗಾಯಕರಾಗಿ, ನಿರ್ಮಾಪಕರಾಗಿಯೂ ಶಿವಣ್ಣ ಕನ್ನಡ ಚಿತ್ರರಂಗದಲ್ಲಿ ಮೆರೆಯುತ್ತಿದ್ದಾರೆ. ಕಳೆದ ಡಿಸೆಂಬರ್ 23ಕ್ಕೆ ತೆರಕಂಡ 'ವೇದ' ಮೂಲಕ ಮತ್ತೊಂದು ಹಿಟ್ ಚಿತ್ರವನ್ನು ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ.

ಚಿತ್ರರಂಗಕ್ಕೆ ಬರುವುದಕ್ಕು ಮೊದಲು ಶಿವರಾಜ್‌ಕುಮಾರ್ ಚೆನ್ನೈ ಫಿಲ್ಮ್ ಇನ್ಸಿಟ್ಯೂಟ್‌ನಲ್ಲಿ ನಟನೆಯ ಪಟ್ಟುಗಳನ್ನು ಕಲಿತಿದ್ದರು. ತಮ್ಮದೇ ಹೋಮ್‌ ಬ್ಯಾನರ್‌ನಲ್ಲಿ 'ಆನಂದ್' ಸಿನಿಮಾ ಮೂಲಕ ಬೆಳ್ಳಿ ಪರದೆ ಅಲಂಕರಿಸಿದರು. ತಮ್ಮ ಸಿನಿಜರ್ನಿಯಲ್ಲಿ ಶಿವಣ್ಣ ಸಾಕಷ್ಟು ಏಳುಬೀಳು ಕಂಡಿದ್ದಾರೆ.

ಹ್ಯಾಟ್ರಿಕ್ ಹೀರೋ ಪಟ್ಟ

ಹ್ಯಾಟ್ರಿಕ್ ಹೀರೋ ಪಟ್ಟ

80ರ ದಶಕದ ಕೊನೆಯವರೆಗೂ ಕನ್ನಡ ಚಿತ್ರರಂಗ ಮದ್ರಾಸ್‌ನಲ್ಲೇ ನೆಲೆಸಿತ್ತು. ಹಾಗಾಗಿ ಡಾ. ರಾಜ್‌ಕುಮಾರ್ ಸೇರಿದಂತೆ ಚಿತ್ರರಂಗದ ಬಹುತೇಕರು ಅಲ್ಲೇ ನೆಲೆಸುವಂತಾಗಿತ್ತು. ಹಾಗಾಗಿ ಶಿವಣ್ಣ ಬಾಲ್ಯ ಓದು ಎಲ್ಲಾ ಮದ್ರಾಸ್‌ನಲ್ಲೇ ಪೂರ್ಣಗೊಳಿಸಿದರು. 'ಆನಂದ್‌' ಚಿತ್ರ ಸತತ 38 ವಾರ ಪ್ರದರ್ಶನ ಕಂಡು ದಾಖಲೆ ಬರೆದಿತ್ತು. ಒಬ್ಬ ಯುವನಟನಿಗೆ ಬೇಕಾದ ಭದ್ರ ಬುನಾದಿಯನ್ನು ಆ ಸಿನಿಮಾ ಹಾಕಿತ್ತು. ಅದರ ಬೆನ್ನಲ್ಲೇ ಬಂದ 'ರಥಸಪ್ತಮಿ' ಹಾಗೂ 'ಮನಮೆಚ್ಚಿದ ಹುಡುಗಿ' ಸಿನಿಮಾಗಳು ಹಿಟ್ ಆಗಿ ಹ್ಯಾಟ್ರಿಕ್ ಹೀರೊ ಬಿರುದು ಶಿವರಾಜ್‌ಕುಮಾರ್ ಹೆಸರಿನ ಜೊತೆ ಸೇರಿಕೊಂಡಿತ್ತು.

ಟ್ರೆಂಡ್ ಸೆಟ್ಟರ್ ಚಿತ್ರಗಳಲ್ಲಿ ಶಿವಣ್ಣ

ಟ್ರೆಂಡ್ ಸೆಟ್ಟರ್ ಚಿತ್ರಗಳಲ್ಲಿ ಶಿವಣ್ಣ

'ಓಂ', 'AK- 47', 'ಜೋಗಿ', 'ಜನುಮದ ಜೋಡಿ', 'ಟಗರು' ರೀತಿಯ ಬ್ಲಾಕ್‌ಬಸ್ಟರ್‌ ಸಿನಿಮಾಗಳು ಶಿವರಾಜ್‌ಕುಮಾರ್ ಸಿನಿಜರ್ನಿಯಲ್ಲಿದೆ. ಹಲವು ಟ್ರೆಂಡ್ ಸೆಟ್ಟರ್ ಸಿನಿಮಾಗಳಲ್ಲಿ ಶಿವಣ್ಣ ನಟಿಸಿದ್ದಾರೆ. ಕಾದಂಬರಿ ಆಧರಿತ, ರೌಡಿಸಂ ಸಿನಿಮಾಗಳಲ್ಲೂ ನಟಿಸಿ ಗೆದ್ದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ರೌಡಿಸಂ ಸಿನಿಮಾಗಳಲ್ಲಿ 'ಓಂ'ಕಾರ ಹಾಡಿದ್ದು ಶಿವಣ್ಣ- ಉಪೇಂದ್ರ ಕಾಂಬಿನೇಷನ್‌ನ 'ಓಂ' ಸಿನಿಮಾ. ಈ ಸಿನಿಮಾ ಸಾಕಷ್ಟು ಬಾರಿ ರೀ ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಂಡಿತ್ತು. ಶಿವಣ್ಣ- ಉಪ್ಪಿ ಕಾಂಬಿನೇಷನ್‌ನಲ್ಲಿ ಮತ್ತೊಂದು ಚಿತ್ರಕ್ಕಾಗಿ ಸಿನಿರಸಿಕರು ಕಾಯುತ್ತಿದ್ದಾರೆ.

ಶಿವಣ್ಣನ ಎನರ್ಜಿಗೆ ಸಾಟಿಯಿಲ್ಲ

ಶಿವಣ್ಣನ ಎನರ್ಜಿಗೆ ಸಾಟಿಯಿಲ್ಲ

ಡಾ. ಶಿವರಾಜ್‌ಕುಮಾರ್‌ಗೆ ವಯಸ್ಸು ಅರವತ್ತಾಗಿದೆ. ಆದರೆ ಅವರು ತೆರೆಮೇಲೆ ಬಂದರೆ 20ರ ಯುವಕರನ್ನು ನಾಚಿಸುತ್ತಾರೆ. ಶಿವಣ್ಣನ ಎನರ್ಜಿಗೆ ಸಾಟಿಯಿಲ್ಲ. ತಮ್ಮ ಅದ್ಭುತ ಡ್ಯಾನ್ಸ್ ಹಾಗೂ ಪವರ್‌ಫುಲ್ ಪರ್ಫಾರ್ಮೆನ್ಸ್‌ನಿಂದ ಸದಾ ಅಭಿಮಾನಿಗಳನ್ನು ಸೆಳೆಯುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಅದ್ಭುತ ಡ್ಯಾನ್ಸ್ ಟ್ರೆಂಡ್ ಹುಟ್ಟಾಕ್ಕಿದ್ದು ಶಿವಣ್ಣ. ಇವತ್ತಿಗೂ ಶಿವಣ್ಣನ ಡ್ಯಾನ್ಸ್ ನೋಡೋದೇ ಕಣ್ಣಿಗೆ ಹಬ್ಬ. 'ವೇದ' ಸಿನಿಮಾ ಮೂಲಕ ಶಿವಣ್ಣ 125 ಸಿನಿಮಾಗಳ ಮೈಲಿಗಲ್ಲು ಸಾಧಿಸಿದ್ದಾರೆ.

ನಿರ್ದೇಶಕರ ಡಾರ್ಲಿಂಗ್ ಶಿವಣ್ಣ

ನಿರ್ದೇಶಕರ ಡಾರ್ಲಿಂಗ್ ಶಿವಣ್ಣ

ಶಿವಣ್ಣ ತರಹೇವಾರಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಮರ್ಷಿಯಲ್, ಕಾಮಿಡಿ, ಹಾರರ್, ಫ್ಯಾಮಿಲಿ ಸೆಂಟಿಮೆಂಟ್, ವಿಲೇಜ್ ಬ್ಯಾಕ್‌ಡ್ರಾಪ್, ಮಲ್ಟಿಸ್ಟಾರರ್, ರೌಡಿಸಂ, ಕಾದಂಬರಿ ಆಧರಿತ ಹೀಗೆ ಹತ್ತು ಹಲವು ಜಾನರ್ ಸಿನಿಮಾಗಳನ್ನು ಟ್ರೈ ಮಾಡಿದ್ಧಾರೆ. ಸದಾ ಹೊಸಬರಿಗೆ ಅವಕಾಶ ಕೊಡುತ್ತಾರೆ. ಇವತ್ತಿಗೂ ನಿರ್ದೇಶಕರು ಹೇಳಿದಂತೆ ನಟಿಸುತ್ತಾರೆ. ಅಣ್ಣಾವ್ರ ಮಗ, 100 ಸಿನಿಮಾಗಳ ಸರದಾರ, 37 ವರ್ಷಗಳ ಜರ್ನಿ ಆದರೂ ಯಾವುದೇ ಹಮ್ಮು ಬಿಮ್ಮು ಅವರಲ್ಲಿ ಇಲ್ಲ. ಸದ್ಯ 'ಕರಟಕ ದಮನಕ', 'ಘೋಸ್ಟ್' ಸೇರಿದಂತೆ ಹಲವು ಸಿನಿಮಾಗಳಲ್ಲಿ ಸೆಂಚುರಿ ಸ್ಟಾರ್ ನಟಿಸುತ್ತಿದ್ದಾರೆ.

More from Filmibeat

English summary
Actor Shivarajkumar completes 37 years in Kannada film industry. Shivanna has worked in over 125 films, some of which are blockbuster hits. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X