For Quick Alerts
  ALLOW NOTIFICATIONS  
  For Daily Alerts

  ಆರು ಟ್ವೀಟ್‌ನಲ್ಲೇ ದಾಖಲೆ ಮೇಲೆ ದಾಖಲೆ ಬರೆದ ವಿಜಯ್

  |

  ಪ್ರತಿ ವರ್ಷಾಂತ್ಯದಲ್ಲೂ ಈ ವರ್ಷ ಯಾರು ನಂಬರ್ ಒನ್, ಯಾರು ಸುದ್ದಿಯಲ್ಲಿದ್ದವರು, ಬಿದ್ದವರೆಷ್ಟು, ಎದ್ದವರೆಷ್ಟು ಎಂಬ ಚರ್ಚೆ ಸಾಮಾನ್ಯ. ಗೂಗಲ್ ಸೇರಿದಂತೆ ಹಲವು ಸರ್ಚ್‌ ಎಂಜಿನ್‌ಗಳು ಈ ವರ್ಷ ಜನರ ಗಮನ ಸೆಳೆದವರು ಯಾರು ಎಂಬ ಪಟ್ಟಿಯನ್ನು ಬಿಡುಗಡೆ ಮಾಡುತ್ತಾರೆ.

  ಈ ವರ್ಷ ಟ್ವಿಟ್ಟರ್‌ನಲ್ಲಿ ಸದ್ದು ಮಾಡಿದ ಸಿನಿಮಾಗಳು, ಯಾವುದು ಟಾಪ್?ಈ ವರ್ಷ ಟ್ವಿಟ್ಟರ್‌ನಲ್ಲಿ ಸದ್ದು ಮಾಡಿದ ಸಿನಿಮಾಗಳು, ಯಾವುದು ಟಾಪ್?

  ಅಂತೆಯೇ ಟ್ವಿಟ್ಟರ್‌ ಸಹ ಹೀಗೊಂದು ಪಟ್ಟಿ ಬಿಡುಗಡೆ ಮಾಡಿದ್ದು, ಯಾವ ನಟ-ನಟಿಯ ಬಗ್ಗೆ ಹೆಚ್ಚು ಟ್ವೀಟ್ ಆಗಿದೆ. ಯಾವ ಸಿನಿಮಾ ಬಗ್ಗೆ ಹೆಚ್ಚು ಟ್ವೀಟ್ ಮಾಡಲಾಗಿದೆ ಎಂಬ ಮಾಹಿತಿ ಬಹಿರಂಗಪಡಿಸಿದೆ. ದಕ್ಷಿಣ ಭಾರತದ ಸಿನಿಮಾ ನಟ-ನಟಿಯರ, ಸಿನಿಮಾಗಳ ಪ್ರತ್ಯೇಕ ಪಟ್ಟಿಯನ್ನು ಸಹ ಟ್ವಿಟ್ಟರ್ ಬಿಡುಗಡೆ ಮಾಡಿದೆ.

  ಹೊಸ ವರ್ಷಕ್ಕೆ ದಳಪತಿ ವಿಜಯ್ ಅಭಿಮಾನಿಗಳಿಗೆ ಕಾದಿದೆ ಬಿಗ್ ಸರ್ಪ್ರೈಸ್ ಹೊಸ ವರ್ಷಕ್ಕೆ ದಳಪತಿ ವಿಜಯ್ ಅಭಿಮಾನಿಗಳಿಗೆ ಕಾದಿದೆ ಬಿಗ್ ಸರ್ಪ್ರೈಸ್

  ಪಟ್ಟಿಯಲ್ಲಿ ಕೆಲವು ವಿಶೇಷತೆಗಳಿವೆ, ಆದರೆ ಪಟ್ಟಿಯಲ್ಲಿ ಹೆಚ್ಚು ಗಮನ ಸೆಳೆಯುತ್ತಿರುವುದು ನಟ ವಿಜಯ್. ವಿಜಯ್ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿಲ್ಲ, ಹಾಗಿದ್ದರೂ ಸಹ ಅವರು ಅತಿ ಹೆಚ್ಚು ಟ್ವೀಟ್ ಆದ ದಕ್ಷಿಣ ಭಾರತದ ನಟರಲ್ಲಿ ತಮಿಳು ಸ್ಟಾರ್ ನಟ ವಿಜಯ್ ಮೂರನೇ ಸ್ಥಾನದಲ್ಲಿದ್ದಾರೆ. ಇದು ಮಾತ್ರವೇ ಅಲ್ಲ, ವಿಜಯ್ ಮಾಡಿರುವ ಒಂದು ಸೆಲ್ಫಿ ಟ್ವೀಟ್ ಭಾರತದಲ್ಲಿ ಈ ವರ್ಷ ಅತಿ ಹೆಚ್ಚು ರೀಟ್ವೀಟ್ ಆದ ಚಿತ್ರ ಎಂಬ ಹೆಗ್ಗಳಿಕೆಯನ್ನು ಸಹ ಪಡೆದುಕೊಂಡಿದೆ.

  ವಿಜಯ್ ಮಾಡಿರುವು ಆರು ಟ್ವೀಟ್ ಮಾತ್ರ!

  ವಿಜಯ್ ಮಾಡಿರುವು ಆರು ಟ್ವೀಟ್ ಮಾತ್ರ!

  2020ನೇ ವರ್ಷದಲ್ಲಿ ನಟ ವಿಜಯ್ ಮಾಡಿರುವುದು ಕೇವಲ ಆರು ಟ್ವೀಟ್ ಮಾತ್ರ. ಕೇವಲ ಆರು ಟ್ವೀಟ್ ಮಾಡಿದ್ದರೂ ಸಹ ಟ್ವಿಟ್ಟರ್‌ನಲ್ಲಿ ಅತಿ ಹೆಚ್ಚು ಟ್ವೀಟ್ ವಿಜಯ್ ಕುರಿತಂತೆ ಆಗಿದೆ. ಹೆಚ್ಚು ಟ್ವೀಟ್ ಮಾಡಲ್ಪಟ್ಟ ನಟರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ನಿಲ್ಲಿಸಿದೆ.

  ಕಡಿಮೆ ಫಾಲೋವರ್‌ಗಳನ್ನು ಹೊಂದಿರುವ ವಿಜಯ್

  ಕಡಿಮೆ ಫಾಲೋವರ್‌ಗಳನ್ನು ಹೊಂದಿರುವ ವಿಜಯ್

  ವಿಜಯ್ ಟ್ವೀಟ್ ಕುರಿತು ಮತ್ತೊಂದು ಪ್ರಮುಖ ವಿಷಯವೆಂದರೆ ವಿಜಯ್ ಟ್ವಿಟ್ಟರ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಫಾಲೋವರ್‌ಗಳನ್ನು ಹೊಂದಿಲ್ಲ. ವಿಜಯ್‌ಗಿರುವುದು ಕೇವಲ 28 ಲಕ್ಷ ಫಾಲೋವರ್‌ಗಳು ಮಾತ್ರ. ಅದೇ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಮಹೇಶ್ ಬಾಬು ಗೆ ಇರುವುದು 1 ಕೋಟಿಗೂ ಹೆಚ್ಚು ಮಂದಿ ಫಾಲೋವರ್‌ಗಳು. ಹತ್ತು ಮಂದಿಯ ಪಟ್ಟಿಯಲ್ಲಿ ಚಿರಂಜೀವಿ, ರಾಮ್ ಚರಣ್ ತೇಜಾ ನಂತರ ಅತಿ ಕಡಿಮೆ ಫಾಲೋವರ್ಸ್ ಇರುವ ನಟ ವಿಜಯ್.

  ಮಾಸ್ಟರ್ ಸಿನಿಮಾ ಬಗ್ಗೆ ನಾಲ್ಕು ಟ್ವೀಟ್

  ಮಾಸ್ಟರ್ ಸಿನಿಮಾ ಬಗ್ಗೆ ನಾಲ್ಕು ಟ್ವೀಟ್

  ಇನ್ನು ವಿಜಯ್ ಅಭಿನಯದ 'ಮಾಸ್ಟರ್' ಸಿನಿಮಾ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಅತಿ ಹೆಚ್ಚು ಟ್ವೀಟ್ ಮಾಡಲ್ಪಟ್ಟ ಸಿನಿಮಾ ಆಗಿದೆ. ವಿಶೇಷವೆಂದರೆ ನಟ ವಿಜಯ್ ಮಾಸ್ಟರ್ ಸಿನಿಮಾ ಬಗ್ಗೆ ಮಾಡಿರುವುದು ಕೇವಲ ನಾಲ್ಕು ಟ್ವೀಟ್.

  #PowerOfYouth ಕರ್ನಾಟಕದ ಹುಡುಗಿಯರಿಗೆ ಚಾಲೆಂಜ್ ಹಾಕಿದ ಯುವರತ್ನ ಬೆಡಗಿ | Yuvarathnaa | Filmibeat Kannada
  ದಾಖಲೆ ಬರೆದ ವಿಜಯ್ ಸೆಲ್ಫಿ

  ದಾಖಲೆ ಬರೆದ ವಿಜಯ್ ಸೆಲ್ಫಿ

  ಫೆಬ್ರವರಿ 10 ರಂದು ವಿಜಯ್ ಮಾಡಿದ್ದ ಟ್ವೀಟ್ ಭಾರಿ ದಾಖಲೆ ಬರೆದಿದೆ. ಭಾರತದಲ್ಲಿಯೇ ಅತಿ ಹೆಚ್ಚು ರೀಟ್ವೀಟ್ ಆದ ಚಿತ್ರ ಅದಾಗಿದೆ. ನವ್ವೇಲಿಯಲ್ಲಿ ಅಭಿಮಾನಿಗಳೊಂದಿಗೆ ತೆಗೆಸಿಕೊಂಡ ಸೆಲ್ಫಿ ಚಿತ್ರ ಅದಾಗಿದ್ದು, ಮೋದಿ, ಕೊಹ್ಲಿ, ಬಚ್ಚನ್ ಅವರ ಟ್ವೀಟ್‌ಗಳನ್ನು ಮೀರಿಸಿ ದಾಖಲೆ ಬರೆದಿದೆ ಆ ಟ್ವೀಟ್.

  English summary
  Actor Vijay did only 6 tweets in this year 2020. But he creates three records. He has very minimum followers compare to other star actors still he is one of the top in most tweeted actors list.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X