"ಯಾರ್‌ ಮೇಲೂ ನಿರೀಕ್ಷೆ ಇಟ್ಕಂಡಿಲ್ಲ, ಸೊಸೆ ಬಂದು ಕೆಲ್ಸ ಮಾಡ್ತಾಳೆ, ಅನ್ಕೊತ್ತೀವಾ"; ಯಶ್ ತಾಯಿ

ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಪರಸ್ಪರ ಪ್ರೀತಿಸಿ ಮದುವೆ ಆದವರು. ಪೋಷಕರ ಒಪ್ಪಿಗೆ ಪಡೆದು ಅದ್ಧೂರಿಯಾಗಿ ಹಸೆಮಣೆ ಏರಿದ್ದರು. ಗೋವಾದಲ್ಲಿ ಮದುವೆ ನಿಶ್ಚಿತಾರ್ಥದ ಬಳಿಕ ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್‌ನಲ್ಲಿ ಮದುವೆ ನಡೆದಿತ್ತು.

ಯಶ್ ಪಕ್ಕಾ ಗೌಡರ ಮನೆ ಹುಡುಗ. ರಾಧಿಕಾ ಗೋವಾದಲ್ಲಿ ಓದಿ ಬೆಳೆದವರು. ಮದುವೆ ಬಳಿಕ ಯಶ್ ಅವರಿಗಾಗಿ ರಾಗಿ ಮುದ್ದೆ ಮಾಡುವುದನ್ನು ಕೂಡ ಕಲಿತಿರುವುದಾಗಿ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು. ಇದೀಗ ಯಶ್ ಅವರ ತಾಯಿ ಪುಷ್ಪಾ ಸಂದರ್ಶನವೊಂದರಲ್ಲಿ ಸೊಸೆ ರಾಧಿಕಾ ಬಗ್ಗೆ ಮಾತನಾಡಿದ್ದಾರೆ, 'ನ್ಯೂಸೋ ನ್ಯೂಸು' ಯೂಟ್ಯೂಬ್ ವಾಹಿನಿ ಸಂದರ್ಶನದಲ್ಲಿ ಅವರು ಮಾತನಾಡಿರುವುದು ವೈರಲ್ ಆಗುತ್ತಿದೆ.

Actor Yash s Mother Pushpa interesting comments on daughter in law Radhika

"ನಮ್ಮ ಸೊಸೆ ಕೆಲಸ ಮಾಡಬಾರದು, ಕಷ್ಟಪಡಬಾರದು ಎನ್ನುವುದು ನಮ್ಮ ಮನಸ್ಸಿನಲ್ಲಿತ್ತು. ರಾಧಿಕಾ ಅಂತ ಅಲ್ಲ, ಸೊಸೆ ಯಾರೇ ಆಗಿದ್ದರೂ ಅಷ್ಟೆ. ನಮ್ಮ ಮಗಳು, ಅಳಿಯ ಯಾರೇ ಆಗಿದ್ದರೂ ನಾವು ಕಷ್ಟಪಟ್ಟಂತೆ ಅವರು ಪಡುವುದು ಬೇಡ ಅನ್ನಿಸುತ್ತದೆ. ಈಗಿನ ಹುಡುಗಿಯರು ಇಷ್ಟಪಟ್ಟು ಕೆಲಸ ಮಾಡಲ್ಲ, ನಾವೆಲ್ಲಾ ಇಷ್ಟಪಟ್ಟು ಮಾಡುತ್ತಿದ್ದೆವು. ನಮ್ಮ ಮಗಳಿಗೂ ಮನೆಕೆಲಸ ಇಷ್ಟ ಇಲ್ಲ. ಕಷ್ಟದಿಂದ ಮಾಡ್ತಾಳೆ. ಅದನ್ನು ನೋಡಿದ್ಮೇಲೆ ನಮ್ಮ ಸೊಸೆಗೂ ಹಾಗೆ ಅನ್ನಿಸುತ್ತೆ ಅಲ್ವೇ" ಎಂದು ಪುಷ್ಪಾ ಹೇಳಿದ್ದಾರೆ.

"ರಾಧಿಕಾ ಅಂತೂ ಎಲ್ಲೂ ಕೆಲಸ ಮಾಡಿಲ್ಲ. ನಂದಿನಿ(ಮಗಳು)ಗಾದ್ರೂ ಅಲ್ಪಸ್ವಲ್ಪ ಬರತ್ತೆ. ರಾಧಿಕಾ ಎಲ್ಲಿ ಕೆಲಸ ಮಾಡಿದ್ದಾಳೆ, ಶೂಟಿಂಗ್ ಹೋಗಿ ಬರುತ್ತಿದ್ದಳು, ಯಶ್‌ಗೆ ಇಷ್ಟ ಆಗಿದ್ದೆಲ್ಲಾ ಮಾಡೋಕೆ ಇಷ್ಟಪಡ್ತಾಳೆ. ಆಕ್ಟಿಂಗ್ ಎಲ್ಲಾ ಮಾಡ್ತಾಳೆ, ಅದನ್ನು ನಾವು ಮಾಡೋಕೆ ಆಗುತ್ತಾ? ನಮ್ಮ ಸೊಸೆ ಮಾಡ್ತಾಳೆ. ನಿರೀಕ್ಷೆ ಯಾರ ಮೇಲೂ ಇಟ್ಟುಕೊಳ್ಳುವವರಲ್ಲ, ಹಾಗಿರುವಾಗ ಸೊಸೆ ಮೇಲೆ ಯಾಕೆ ನಿರೀಕ್ಷೆ ಇಟ್ಟುಕೊಳ್ಳುತ್ತೇವೆ ಬಂದು ಕೆಲಸ ಮಾಡ್ತಾಳೆ ಅಂತ. ಅದೆಲ್ಲಾ ಓಬಿರಾಯನ ಕಾಲಕ್ಕೆ ಮುಗಿಯಿತು" ಎಂದು ಯಶ್ ಅವರ ತಾಯಿ ಮನದಾಳ ತೆರೆದಿಟ್ಟಿದ್ದಾರೆ.

ಆರು ವರ್ಷಗಳ ಹಿಂದೆ ಯಶ್ ಹಾಸನದಲ್ಲಿ ತೋಟ ಹಾಗೂ ಮನೆ ಖರೀದಿಸಿದ್ದರು. ಹಾಸನ ತಾಲೂಕು ತಿಮ್ಲಾಪುರ ಗ್ರಾಮದಲ್ಲಿ ಯಶ್ 80 ಎಕರೆ ಜಮೀನು ಖರೀದಿಸಿದ್ದರು. ತಂದೆ- ತಾಯಿ ಬಹುತೇಕ ಸಮಯ ಅಲ್ಲೇ ಕಳೆಯುತ್ತಾರೆ. ತೋಟದಲ್ಲಿ ವಿವಿಧ ಬಗೆಯ ಗಿಡ ಮರಗಳನ್ನು ಬೆಳೆಸುತ್ತಿದ್ದಾರೆ. ಪ್ರಕೃತಿ ಮಡಿಲಲ್ಲಿ ಕಾಲ ಕಳೆಯುತ್ತಿದ್ದಾರೆ. ಮೊದಲಿನಿಂದಲೂ ಇಂತಾದೊಂದು ಆಸೆ ಇತ್ತು. ಹಾಗಾಗಿ ಈಗ ಅದು ನೆರವೇರಿದೆ ಎಂದು ಆಗ ಯಶ್ ತಾಯಿ ಹೇಳಿಕೊಂಡಿದ್ದರು.

Actor Yash s Mother Pushpa interesting comments on daughter in law Radhika

ಯಶ್ ಕೂಡ ತಮ್ಮ ಬಿಡುವಿನ ಸಮಯವನ್ನು ಈ ತೋಟದಲ್ಲೇ ಕಳೆಯಲು ಮನಸ್ಸು ಮಾಡಿದ್ದಾರೆ. ಆದರೆ ಬಹುತೇಕ ಸಮಯದಲ್ಲಿ ಸಿನಿಮಾ ಕೆಲಸದಲ್ಲೇ ಬ್ಯುಸಿ ಆಗಿ ಇರುತ್ತಾರೆ. ಈ ಹಿಂದೆ ಯತ್ನಿ ಮಕ್ಕಳ ಜೊತೆ ಯಶ್ ತೋಟಕ್ಕೆ ಹೋಗಿದ್ದು ಟ್ರ್ಯಾಕ್ಟರ್ ಏರಿ ಸವಾರಿ ಮಾಡಿದ್ದ ಫೋಟೊಗಳು ವೈರಲ್ ಆಗಿತ್ತು.

More from Filmibeat

English summary
Actor Yash's mother, Pushpa, shared some interesting things about daughter in law Radhika and family members
Read more about: yash radhika pandit toxic
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X