For Quick Alerts
  ALLOW NOTIFICATIONS  
  For Daily Alerts

  ನಟನೆ ಜೊತೆಗೆ ಉದ್ಯಮವನ್ನೂ ನಡೆಸುತ್ತಿರುವ ಸ್ಟಾರ್‌ಗಳು: ಪಟ್ಟಿ ಇಲ್ಲಿದೆ

  By ಫಿಲ್ಮಿಬೀಟ್ ಡೆಸ್ಕ್
  |

  ಬಹುತೇಕ ಸಿನಿಮಾ ನಟ-ನಟಿಯರು ಸಿನಿಮಾದ ಮೂಲಕ ಗಳಿಸಿದ ಆದಾಯವನ್ನು ಬೇರೆಡೆ ತೊಡಗಿಸುತ್ತಾರೆ. ಯಾವ ನಟ-ನಟಿಯರೂ ಸಹ ಸದಾ ಕಾಲ ಸ್ಟಾರ್‌ಗಳಾಗಿರುವುದಿಲ್ಲ, ಎಲ್ಲರ ಬೇಡಿಕೆಯೂ ಒಂದಲ್ಲ ಒಂದು ದಿನ ಕುಸಿದೇ ಕುಸಿಯುತ್ತದೆ. ಹಾಗಾಗಿಯೇ ಸಿನಿಮಾದಲ್ಲಿ ಗಳಿಸಿದ ಹಣವನ್ನು ಆದಾಯದ ಮೂಲ ನೋಡಿ ತೊಡಗಿಸುತ್ತಾರೆ.

  ದಕ್ಷಿಣ ಭಾರತದ ಹಲವು ಸಿನಿಮಾ ನಟ-ನಟಿಯರು ದೊಡ್ಡ ಉದ್ಯಮಿಗಳೂ ಆಗಿದ್ದಾರೆ. ಸ್ಟಾರ್ ನಟರು ಹಲವು ಮೂಲಗಳಲ್ಲಿ ಬಂಡವಾಳ ತೊಡಗಿಸಿ ದೊಡ್ಡ ಮಟ್ಟದ ಲಾಭ ಗಳಿಸುತ್ತಿದ್ದಾರೆ. ನಟಿಯರೂ ಸಹ ಹಲವು ಸ್ವಂತ ಉದ್ಯಮಗಳನ್ನು ತೆರೆದು ಲಾಭ ಕಾಣುತ್ತಿದ್ದಾರೆ.

  ನಟ-ನಟಿಯರು ಕಾಲ-ಕಾಲಕ್ಕೆ ತಮ್ಮ ಸಂಭಾವನೆ ಏರುವ ಜೊತೆ-ಜೊತೆಗೆ ಉದ್ಯಮದ ಮೂಲಕವೂ ಲಾಭ ಪಡೆಯುತ್ತಾ ಇನ್ನಷ್ಟು ಸಿರಿವಂತರಾಗಿ ಬೆಳೆಯುತ್ತಿದ್ದಾರೆ. ದಕ್ಷಿಣ ಭಾರತದ ಯಾವ ನಟ-ನಟಿಯರು ಎಲ್ಲೆಲ್ಲಿ ಹಣ ತೊಡಗಿಸಿದ್ದಾರೆ. ಯಾವ ಉದ್ಯಮಗಳನ್ನು ನಡೆಸುತ್ತಿದ್ದಾರೆ ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

  ವಿಜಯ್‌ ಹಣ ತೊಡಗಿಸಿರುವ ಉದ್ಯಮಗಳು

  ವಿಜಯ್‌ ಹಣ ತೊಡಗಿಸಿರುವ ಉದ್ಯಮಗಳು

  ನಟ ವಿಜಯ್‌ ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆವ ನಟ. ವಿಜಯ್‌ ತಮ್ಮದೇ ಆದ ಸ್ವಂತ ಪ್ರೊಡಕ್ಷನ್ ಹೌಸ್ ಹೊಂದಿರುವ ಜೊತೆಗೆ ರಿಯಲ್‌ ಎಸ್ಟೇಟ್‌ನಲ್ಲಿ ದೊಡ್ಡ ಮಟ್ಟದಲ್ಲಿ ಬಂಡವಾಳ ಹೂಡಿದ್ದಾರೆ. ಚೆನ್ನೈನಲ್ಲಿ ಹಲವು ಮದುವೆ ಛತ್ರಗಳು, ಅಪಾರ್ಟ್‌ಮೆಂಟ್‌ಗಳು ವಿಜಯ್ ಹೆಸರಿನಲ್ಲಿವೆ. ತಾಯಿ ಶೋಭಾ, ಮಗ ಸಂಜಯ್ ಮತ್ತು ಪತ್ನಿ ಸಂಗೀತ ಹೆಸರಿನಲ್ಲಿ ಸಾಕಷ್ಟು ಮದುವೆ ಛತ್ರಗಳು ಚೆನ್ನೈನಲ್ಲಿವೆ.

  ಹಲವು ಉದ್ಯಮ ಹೊಂದಿರುವ ರಾಮ್‌ ಚರಣ್ ತೇಜ

  ಹಲವು ಉದ್ಯಮ ಹೊಂದಿರುವ ರಾಮ್‌ ಚರಣ್ ತೇಜ

  ಚಿರಂಜೀವಿ ಪುತ್ರ ರಾಮ್ ಚರಣ್ ತೇಜ ಬಹಳ ಬುದ್ಧಿವಂತ ಉದ್ಯಮಿ. ಸ್ವಂತದ ಪ್ರೊಡಕ್ಷನ್ ಹೌಸ್ ಹೊಂದಿರುವ ರಾಮ್ ಚರಣ್, ತಂದೆಯ ಸಿನಿಮಾಗಳ ಮೇಲೆ ಬಂಡವಾಳ ಹೂಡಿ ದೊಡ್ಡ ಮಟ್ಟದ ಲಾಭ ಗಳಿಸುತ್ತಾರೆ. ಇದರ ಜೊತೆಗೆ ಟ್ರುಜೆಟ್ ಹೆಸರಿನ ಏರ್‌ಲೈನ್ಸ್ ಸಂಸ್ಥೆಯನ್ನು ನಡೆಸುತ್ತಾರೆ. ಜೊತೆಗೆ ಹೈದರಾಬಾದ್ ಪೋಲೊ ಆಂಡ್ ರೈಡಿಂಗ್‌ ಕ್ಲಬ್‌ನ ಮಾಲೀಕರು ಸಹ ಹೌದು. ಇದರಿಂದ ಪ್ರತಿ ತಿಂಗಳ ಲಕ್ಷಾಂತರ ಹಣ ಗಳಿಸುತ್ತಾರೆ ರಾಮ್ ಚರಣ್. ಇವರ ಪತ್ನಿ ಅಪೊಲೊ ಗ್ರೂಪ್‌ ಆಫ್ ಹಾಸ್ಪಿಟಲ್‌ ಮಾಲೀಕರ ಮಗಳು.

  ತೆಲುಗಿನ ಶ್ರೀಮಂತ ನಟ ನಾಗಾರ್ಜುನ

  ತೆಲುಗಿನ ಶ್ರೀಮಂತ ನಟ ನಾಗಾರ್ಜುನ

  ತೆಲುಗು ಚಿತ್ರರಂಗದ ಶ್ರೀಮಂತ ನಟ ನಾಗಾರ್ಜುನ. ಮಾ ಟಿವಿಯಲ್ಲಿ ಬಹಳ ದೊಡ್ಡ ಮಟ್ಟದ ಪಾಲುದಾರಿಕೆ ಹೊಂದಿದ್ದಾರೆ ನಾಗಾರ್ಜುನ. ಜೊತೆಗೆ ಹಲವು ರೆಸ್ಟೊರೆಂಟ್-ಬಾರ್‌ಗಳನ್ನು ಸಹ ನಾಗಾರ್ಜುನ ಹೊಂದಿದ್ದಾರೆ. ಎನ್-ಗ್ರಿಲ್, ಎನ್ ಕನ್ವೆನ್ಷನ್ ಸೆಂಟರ್, ಎನ್ ಏಷಿಯನ್ ಇನ್ನೂ ಹಲವು ಬಾರ್-ರೆಸ್ಟೊರೆಂಟ್‌ಗಳು ನಾಗಾರ್ಜುನ ಹೆಸರಲ್ಲಿವೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಅನ್ನಪೂರ್ಣೇಶ್ವರಿ ಸ್ಟುಡಿಯೋದ ಮಾಲೀಕರು ನಾಗಾರ್ಜುನ.

  ಹಲವೆಡೆ ಹಣ ಹೂಡಿರುವ ಅಲ್ಲು ಅರ್ಜುನ್

  ಹಲವೆಡೆ ಹಣ ಹೂಡಿರುವ ಅಲ್ಲು ಅರ್ಜುನ್

  ನಟ ಅಲ್ಲು ಅರ್ಜುನ್ ನಟನೆ ಜೊತೆಗೆ ಹಲವು ಉದ್ಯಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸ್ವಂತ ಪ್ರೊಡಕ್ಷನ್ ಹೌಸ್ ಹೊಂದಿರುವ ಅಲ್ಲು ಅರ್ಜುನ್, ಕೆಲವು ಫ್ಯಾಷನ್ ಬ್ರ್ಯಾಂಡ್‌ಗಳ ಮೇಲೆ ಬಂಡವಾಳ ಹೂಡಿದ್ದಾರೆ. ಎಂ ಕಿಚನ್ಸ್‌ನಲ್ಲಿ ಬಂಡವಾಳ ಹೂಡಿರುವ ಅಲ್ಲು ಅರ್ಜುನ್, ಬಫ್ಪೆಲೊ ವಿಂಗ್ಸ್ ಮತ್ತು 800 ಹೆಸರಿನ ಕ್ಲಬ್ ಮತ್ತು ರೆಸ್ಟೊರೆಂಟ್ ಚೈನ್‌ನ ಮಾಲೀಕರಾಗಿದ್ದಾರೆ. ಜೊತೆಗೆ ಜಪಾನೀಸ್ ರೆಸ್ಟೊರೆಂಟ್, ನೈಟ್ ಕ್ಲಬ್, ಡಾನ್ಸ್ ಫ್ರೋರ್‌ಗಳನ್ನೂ ಸಹ ಅಲ್ಲು ಅರ್ಜುನ್ ಹೊಂದಿದ್ದಾರೆ. ಇದೀಗ 'ಆಹಾ' ಒಟಿಟಿಯ ಮೇಲೆಯೂ ತಂದೆಯ ಜೊತೆ ಸೇರಿ ಪಾಲುದಾರಿಕೆಯಲ್ಲಿ ಹಣ ಹೂಡಿದ್ದಾರೆ.

  ಇವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆ ಮಾಲಕಿ ತಾಪ್ಸಿ

  ಇವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆ ಮಾಲಕಿ ತಾಪ್ಸಿ

  ನಟಿ ತಾಪ್ಸಿ ಪನ್ನು ಮಧ್ಯಮ ವರ್ಗದ ಕುಟುಬದಿಂದ ಬಂದು ನಟಿಯಾದವರು. ಬಾಲಿವುಡ್‌ನಲ್ಲಿ ಸಾಕಷ್ಟು ಬೇಡಿಕೆ ನಟಿಯಾಗಿರುವ ತಾಪ್ಸಿ 'ವೆಡ್ಡಿಂಗ್ ಫ್ಯಾಕ್ಟರಿ' ಹೆಸರಿನ ಇವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆ ನಡೆಸುತ್ತಾರೆ. ಈ ಸಂಸ್ಥೆಯ ಕೆಲಸಗಳನ್ನು ತಾಪ್ಸಿಯ ಸಹೋದರಿ ಶಗುನ್ ಪನ್ನು ಮತ್ತು ಗೆಳೆಯ ಫರಾ ಪರವೇಶ್ ನಡೆಸುತ್ತಾರೆ. ಕೆಲವು ಫ್ಲ್ಯಾಟ್‌ಗಳನ್ನು ಸಹ ಖರೀದಿಸಿದ್ದಾರೆ ತಾಪ್ಸಿ ಪನ್ನು. ಇದೀಗ ಸ್ವಂತ ಪ್ರೊಡಕ್ಷನ್ ಹೌಸ್ ನಿರ್ಮಾಣದ ಯೋಜನೆ ಹಾಕಿಕೊಂಡಿದ್ದಾರೆ.

  ಚಿನ್ನದ ಉದ್ಯಮ ನಡೆಸುವ ತಮನ್ನಾ ಭಾಟಿಯಾ

  ಚಿನ್ನದ ಉದ್ಯಮ ನಡೆಸುವ ತಮನ್ನಾ ಭಾಟಿಯಾ

  ನಟಿ ತಮನ್ನಾ ಭಾಟಿಯಾ ಬಹಳ ದೊಡ್ಡ ಉದ್ಯಮದಲ್ಲಿಯೇ ತಮ್ಮನ್ನು ತೊಡಿಗಿಸಿಕೊಂಡಿದ್ದಾರೆ. ತಮನ್ನಾ ಭಾಟಿಯಾರದ್ದು ಉದ್ಯಮದ ಹಿನ್ನೆಲೆ ಇರುವ ಕುಟುಂಬವೇ ಆದ್ದರಿಂದ ತಮನ್ನಾ ಸಹ ಉದ್ಯಮದ ಕಡೆಗೆ ಸೆಳೆತ ಹೊಂದಿದ್ದು, 'ವೈಟ್‌ ಆಂಡ್ ಗೋಲ್ಡ್' ಹೆಸರಿನ ಆನ್‌ಲೈನ್ ಚಿನ್ನ ವ್ಯಾಪಾರ ಉದ್ಯಮವನ್ನು ತಮನ್ನಾ ಪ್ರಾರಂಭ ಮಾಡಿದ್ದಾರೆ. ತಮನ್ನಾರ ತಂದೆಯೂ ಸಹ ಚಿನ್ನ ವ್ಯಾಪಾರದ ಉದ್ಯಮ ಹೊಂದಿದ್ದಾರೆ.

  English summary
  Here is the list of some south India actors who invested in business and running their own companies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X