ಆರೋಗ್ಯ ಸಮಸ್ಯೆ ಬಗ್ಗೆ ಮಾತನಾಡುತ್ತಾ ಕಣ್ಣೀರಿಟ್ಟ 'ಆಕಾಶ್' ಚಿತ್ರನಟಿ ಆಶಿತಾ

'ಬಾ ಬಾ ಬಾರೋ ರಸಿಕ', 'ತವರಿನ ಸಿರಿ', 'ಆಕಾಶ್' ಸಿನಿಮಾಗಳಲ್ಲಿ ನಟಿಸಿಸ ಆಶಿತಾ ಬಳಿಕ ಚಿತ್ರರಂಗದಿಂದ ದೂರಾಗಿದ್ದರು. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ತಮ್ಮದೇ ಯೂಟ್ಯೂಬ್ ಚಾನಲ್‌ನಲ್ಲಿ ತಮ್ಮ ದೈನಂದಿನ ಚಟುವಟಿಕೆಗಳ ಬಗ್ಗೆ ವ್ಲಾಗ್ ವೀಡಿಯೋ ಮಾಡುತ್ತಿರುತ್ತಾರೆ.

ಇತ್ತೀಚೆಗೆ ವೀಡಿಯೋ ಮಾಡುತ್ತಾ ತಮ್ಮ ಆರೋಗ್ಯ ಸಮಸ್ಯೆಯ ಬಗ್ಗೆ ಆಶಿತಾ ಮಾತನಾಡಿದ್ದಾರೆ. ಫುಡ್ ಪಾಯ್ಸನ್ ಆಗಿ ಬಹಳ ಸಮಸ್ಯೆ ಆಗಿತ್ತು. ಅದೇ ವೇಳೆ ಪೀರಿಯಡ್ಸ್ ಆಗಿ ಆ ನೋವು ಸೇರಿ ಬಹಳ ಸಂಕಟಪಟ್ಟೆ. ಆ ಸಮಯದಲ್ಲಿ ಆ ದೇವರೇ ಕೈ ಹಿಡಿದ. ದೇವರಿದ್ದಾನೆ. ಆತನನ್ನು ಯಾವುದೇ ಸಮಯದಲ್ಲಿ ದೂಷಿಸಬೇಡಿ. ನಮ್ಮ ಕಷ್ಟಕ್ಕೆ ಖಂಡಿತ ದೇವರು ಬೆಂಬಲಕ್ಕೆ ನಿಲ್ಲುತ್ತಾನೆ ಎಂದು ಆಶಿತಾ ವೀಡಿಯೋದಲ್ಲಿ ಮಾತನಾಡಿದ್ದಾರೆ. ಈ ವೇಳೆ ಗದ್ಗರಿತರಾಗಿ ಕಣ್ಣೀರು ಹಾಕಿದ್ದಾರೆ.

Actress Ashitha breaks down in tears talking on her health issue

"ಫುಡ್ ಪಾಯ್ಸನ್ ಆಗಿ ಕ್ಲಿನಿಕ್‌ಗೆ ಹೋಗಿದ್ದೆ. ಬಳಿಕ ಮನೆಗೆ ಬಂದುಬಿಟ್ಟು. ನಾನು ಆ ತಪ್ಪು ಮಾಡಬಾರದಿತ್ತು. ಅದೇ ಸಮಯದಲ್ಲಿ ಪೀರಿಯಡ್ಸ್ ನೋವು ಶುರುವಾಗಿತ್ತು. ಎರಡೂ ಸೇರಿ ಬಹಳ ಕಷ್ಟವಾಯಿತು. ನಾನು ಒಬ್ಬೊಂಟಿಯಾಗಿ ಇದ್ದೆ. ಆ ಸಮಯದಲ್ಲಿ ಯಾರಾದರೂ ಸಹಾಯಕ್ಕೆ ಬೇಕಿತ್ತು. ನನ್ನ ಸ್ನೇಹಿತರೊಬ್ಬರಿಗೆ ತಿಳಿಸಿದೆ. ಅವರು ಮನೆಗೆ ಬಂದರು. ಅವರ ಕೆಲಸ, ಕಾರ್ಯ ಬಿಟ್ಟು ಬಂದರು" ಎಂದು ಆ ದಿನವನ್ನು ಆಶಿತಾ ನೆನಪಿಸಿಕೊಂಡಿದ್ದಾರೆ.

ಮಾತು ಮುಂದುವರೆಸಿರುವ ನಟಿ ಆಶಿತಾ "ದೇವರಲ್ಲಿ ನನಗೆ ಬಹಳ ನಂಬಿಕೆ ಇದೆ. ಕ್ರೈಸ್ತ ಧರ್ಮದವಳಾಗಿ ಯೇಸುಕ್ರಿಸ್ತನನ್ನು ಆರಾಧಿಸುತ್ತೀನಿ. ಯೇಸು ಯಾವತ್ತೂ ನನ್ನ ಕೈ ಬಿಟ್ಟಿಲ್ಲ ಎಂದು ಮಾತನಾಡುತ್ತಲೇ ಆಶಿಕಾ ಗದ್ಗರಿತರಾಗಿದ್ದಾರೆ. ಕೆಲವೊಮ್ಮೆ ನಾವೇ ಎಲ್ಲ ನೋಡಿಕೊಳ್ಳುತ್ತೇವೆ, ಸರಿಹೋಗುತ್ತದೆ ಎನ್ನುತ್ತೇವೆ. ಆದರೆ ಭಗವಂತನಲ್ಲಿ ನಂಬಿಕೆ ಇಲ್ಲದಿದ್ದರೆ ಜೀವನದಲ್ಲಿ ಏನೂ ಸಾಧ್ಯವಿಲ್ಲ. ನನಗೆ ಅಳು ಬರುತ್ತಿರುವುದು ದುಃಖದಿಂದ ಅಲ್ಲ. ದೇವರು ನನ್ನ ಕೈಬಿಟ್ಟಿಲ್ಲ ಎನ್ನುವ ಭರವಸೆ ನನ್ನಲ್ಲಿ ಮೂಡಿದೆ" ಎಂದು ಕಣ್ಣೀರಾದ್ದಾರೆ.

"ನನ್ನ ಫ್ರೆಂಡ್ ಬಂದು ವೈದ್ಯರ ಸಲಹೆ ಮೇರೆಗೆ ಒಂದು ಮಾತ್ರೆ ತಂದುಕೊಟ್ಟರು. ಅದು ಕುಡಿದ ಮೇಲೆ ವಾಂತಿ ಆಯಿತು. ಆ ನೋವು ಅಷ್ಟಮಟ್ಟಿಗಿತ್ತು. ಬಳಿಕ ಕೊಂಚ ಸಮಾಧಾನ ಆಯಿತು. ಬಳಿಕ ಮತ್ತೊಂದು ಮಾತ್ರೆ ನುಂಗಿ ಮಲಗಿಬಿಟ್ಟೆ. ಅಲ್ಲಿವರೆಗೂ ಫ್ರೆಂಡ್ ನನ್ನ ಜೊತೆಗಿದ್ದರು. ನಾವು ಒಬ್ಬೊಂಟಿಯಾಗಿ ಇದ್ದಾಗ ದೇವರು ನಮ್ಮ ಕೈ ಬಿಡಲ್ಲ. ಅದು ನನಗೆ ಮತ್ತೊಮ್ಮೆ ಅರಿವಿಗೆ ಬಂತು" ಎಂದು ಆಶಿತಾ ತಿಳಿಸಿದ್ದಾರೆ.

ನನ್ನ ಮನಸ್ಸಿನ ದುಃಖ ಹಂಚಿಕೊಳ್ಳಬೇಕು ಎಂದು ಈ ವಿಚಾರವನ್ನು ನಿಮ್ಮ ಜೊತೆ ಹೇಳಿಕೊಂಡೆ. ನಾನು ಒಬ್ಬಳೇ ಇರುವುದು ಬೇಸರ ಇಲ್ಲ, ನೀವೆಲ್ಲಾ ಇದ್ದೀರಾ. ಈಗ ಹುಷಾರಾಗಿದ್ದೀನಿ. ವಯಸ್ಸು 40 ದಾಟಿರುವುದರಿಂದ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಅದನ್ನು ನಿಮ್ಮ ಜೊತೆ ಹೇಳಬೇಕು ಎನಿಸಿ ಮಾತನಾಡುತ್ತಿದ್ದೇನೆ. ದೇವರನ್ನು ದೂಷಿಸಬೇಡಿ. ಯಾವುದೋ ರೂಪದಲ್ಲಿ ನಮಗೆ ಸಹಾಯಕ್ಕೆ ಬರುತ್ತಾನೆ.

ವಿಜ್ಞಾನ ಎಷ್ಟೇ ಮುಂದುವರೆದಿದಬಹುದು. ಆದರೆ ಅದನ್ನೆಲ್ಲಾ ಮೀರಿ ದೇವರು ಇದ್ದಾನೆ. ವಿಜ್ಞಾನದಲ್ಲಿ ಸಿಗದ ಪ್ರಶ್ನೆಗಳಿಗೆಲ್ಲಾ ದೇವರಲ್ಲಿ ಉತ್ತರ ಸಿಗುತ್ತದೆ ಎಂದು ಆಶಿತಾ ಹೇಳಿದ್ದಾರೆ. ಆರೋಗ್ಯ ಜೀವನದಲ್ಲಿ ಬಹಳ ಮುಖ್ಯ. ಇವತ್ತು ಹಣದ ಹಿಂದೆ ಹೋಗಬಹುದು. ಆದರೆ ಕೊನೆ ಆರೋಗ್ಯವೇ ಮುಖ್ಯ ಎನಿಸುತ್ತದೆ. ಏನಾದರೂ ಆರೋಗ್ಯ ಸಮಸ್ಯೆ ಎದುರಾದಾಗ ಇದು ಅರಿವಿಗೆ ಬರುತ್ತದೆ ಎಂದು ಆಶಿತಾ ವಿವರಿಸಿದ್ದಾರೆ.

ಆರೇಳು ವರ್ಷಗಳ ಕಾಲ ಪ್ರೀತಿಸಿ ಉದ್ಯಮಿ ಒಬ್ಬರನ್ನು ಆಶಿತಾ ಮದುವೆ ಆಗಿದ್ದರು. ಆದರೆ ಬಳಿಕ ಕೆಲ ಭಿನ್ನಾಭಿಪ್ರಾಯಗಳಿಂದ ಡಿವೋರ್ಸ್ ಪಡೆದು ದೂರಾಗಿದ್ದರು. ಸದ್ಯ ಒಬ್ಬೊಂಟಿಯಾಗಿ ಆಕೆ ಜೀವನ ನಡೆಸುತ್ತಿದ್ದಾರೆ.

More from Filmibeat

English summary
Actress Ashitha Emotional about Her Health and god grace;
Read more about: sandalwood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X