ಈ ಚಳಿಗಾಲದಲ್ಲಿ ದೀಪಿಕಾ ಪಡುಕೋಣೆ ಫೇವರಿಟ್ ಈ ಭೂತಾನ್ ರೆಸಿಪಿ ಟ್ರೈ ಮಾಡಿ: ಸಕತ್ ಸುಲಭ
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ನೋಡಿದರೇ ಅವರು ದೊಡ್ಡ ಫುಡ್ಡಿ ಎಂಬುದು ತಿಳಿಯುತ್ತದೆ. ಸೌತ್ ಇಂಡಿಯನ್ ಫುಡ್ ಬಗ್ಗೆ ಅವರಿಗಿರುವ ಪ್ರೀತಿಯನ್ನು ಹಲವು ಬಾರಿ ಕೇಳಿದ್ದೇವೆ ಮತ್ತು ನೋಡಿದ್ದೇವೆ. ಇತ್ತೀಚೆಗೆ ದೀಪುಕಾ ಪಡುಕೋಣೆ ಹೊಸ ಆಹಾರದ ಬಗ್ಗೆ ಮಾತನಾಡಿದ್ದು, ಸೋಶಿಯಲ್ ಮಿಡಿಯಾದಲ್ಲೇ ಅದರದ್ದೇ ಸುದ್ದಿಯಾಗುತ್ತಿದೆ.
ಹೌದು... ಏಪ್ರಿಲ್ 2023 ರಲ್ಲಿ ನಟಿ ದೀಪಿಕಾ ಪಡುಕೋಣೆ ಭೂತಾನ್‌ಗೆ ಭೇಟಿ ನೀಡಿದರು. ಲ್ಯಾಂಡ್ ಆಫ್ ದಿ ಥಂಡರ್ ಡ್ರ್ಯಾಗನ್‌ನ ಅನೇಕ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಅಲ್ಲಿನ ವಿಶಿಷ್ಟ ಆಹಾರದ ಬಗ್ಗೆಯೂ ತಮ್ಮ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ. ಅದರ ಹೆಸರು ಎಮಾ ದಟ್ಶಿ (Ema Datshi).

ದೀಪಿಕಾ ಸದ್ಯದ ಫೇವರಿಟ್ ಎಮಾ ದಟ್ಶಿ !
ಭೂತಾನ್‌ಗೆ ಭೇಟಿ ನೀಡಿದ ಬಳಿಕ ಈ ವರ್ಷದ ಆರಂಭದಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ದೀಪಿಕಾ ಪಡುಕೋಣೆ ಅವರು ಈ ಭೂತಾನ್‌ನ ಎಮಾ ದಟ್ಶಿ ಬಗ್ಗೆ ತಮ್ಮ ಒಲವನ್ನು ವ್ಯಕ್ತಪಡಿಸಿದ್ದಾರೆ. ಇದು ಬರೀ ಒಂದು ತಿಂಡಿಯಷ್ಟೇ ಅಲ್ಲ. ಇದನ್ನು ಭೂತಾನ್‌ನ ರಾಷ್ಟ್ರೀಯ ಖಾದ್ಯವೆಂದೂ ಕರೆಯಲಾಗುತ್ತದೆ.
ಮೆಣಸಿನಕಾಯಿ ಮತ್ತು ಚೀಸ್‌ನಿಂದ ತಯಾರಿಸಲಾದ ಈ ಗ್ರೇವಿ ತರಹದ ಖಾದ್ಯ ಅನ್ನದ ಜೊತೆಯಲ್ಲಿ, ಚಪಾತಿಗೂ ಸೇರಿಸಿ ತಿನ್ನಬಹುದು. ನಿಮಗೆ ಚೀಸ್ ಇಷ್ಟ, ಮಸಾಲೆ ಬೇಡ ಎನ್ನುವವರಾಗಿದ್ದರೇ ಈ ತಿಂಡಿ ನಿಮಗೆ ಹೇಳಿ ಮಾಡಿಸಿದ್ದು. ಜೊತೆಗೆ ಇದನ್ನು ಮಾಡುವುದು ಕೂಡ ತುಂಬಾ ಸುಲಭ.
ಎಮಾ ದಟ್ಶಿ ಮಾಡುವುದು ಹೇಗೆ?
ಇನ್‌ಸ್ಟಾಗ್ರಾಮ್‌ನಲ್ಲಿ ಹಲವರು ಈ ಎಮಾ ದಟ್ಶಿ ರೆಸುಪಿಯನ್ನು ತಮ್ಮದೆ ಆದ ವಿಧಾನದಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಅತಿ ಸುಲಭವಾದ ವಿಧಾನ ಇಲ್ಲಿದೆ.

ಎಮಾ ದಟ್ಶಿ ಮಾಡಲು ಬೇಕಾದ ಪದಾರ್ಥಗಳು:
1 ಈರುಳ್ಳಿ, 4 ಹಸಿ ಮೆಣಸಿನಕಾಯಿಗಳು, 2 ಜಲಪೆನೊ ಮೆಣಸಿನಕಾಯಿ, 1/2 ಟೊಮೆಟೊ, 4 ಬೆಳ್ಳುಳ್ಳಿ, 3 ಟೀ ಚಮಚ ಎಣ್ಣೆ, 1/2 ಕಪ್ ನೀರು, 4 ಚೀಸ್ ತುಂಡುಗಳು ಮತ್ತು ರುಚಿಗೆ ತಕ್ಕಂತೆ ಉಪ್ಪು
ಎಮಾ ದಟ್ಶಿ ಮಾಡುವ ವಿಧಾನ:
ಮೊದಲು ಕೆಂಪು ಮೆಣಸಿನಕಾಯಿ ಮತ್ತು ಹಸಿ ಮೆಣಸಿನಕಾಯಿಯನ್ನು ಉದ್ದವಾಗಿ ಕತ್ತರಿಸಿಕೊಳ್ಳಿ ಒಂದು ಬಿಸಿ ಪ್ಯಾನ್‌ನಲ್ಲಿ, ಕತ್ತರಿಸಿದ ಈರುಳ್ಳಿ ಕತ್ತರಿಸಿದ ಮೆಣಸಿನಕಾಯಿಗಳು, ಜಲಪೆನೊ, ಬೆಳ್ಳುಳ್ಳಿ ಮತ್ತು ಟೊಮೆಟೊವನ್ನು ಹಾಕಿ ಮಿಶ್ರ ಮಾಡಿ. ನಂತರ ನೀರು, ಎಣ್ಣೆ ಮತ್ತು ರುಚಿಗೆ ಉಪ್ಪು ಸೇರಿಸಿ ಪ್ಯಾನ್ ಅನ್ನು ಒಂದು ಮುಚ್ಚಳದಿಂದ ಮುಚ್ಚಿ ಸುಮಾರು ಐದು ನಿಮಿಷಗಳ ಕಾಲ ಎಲ್ಲವನ್ನು ಬೇಯಿಸಿ.
ಇದರ ನಂತರ, ಅದಕ್ಕೆ ಚೀಸ್ ಸೇರಿಸಿ ಮತ್ತು ಪಾತ್ರೆಯನ್ನು ಮುಚ್ಚಿ ಐದು ನಿಮಿಷಗಳ ಕಾಲ ಬೇಯಿಸಿ. ಚೀಸ್ ಕರಗಿದ ನಂತರ, ಎಲ್ಲಾ ಪದಾರ್ಥಗಳನ್ನು ಮಿಕ್ಸ್ ಮಾಡಿ ನಂತರ ಅದನ್ನು ಸೂಪ್ ಬೌಲ್‌ಗೆ ಹಾಕಿ ಬಡಿಸಿ. ಅನ್ನದ ಜೊತೆಗೆ ಇದನ್ನು ತಿನ್ನಲು ತುಂಬಾ ರುಚಿ ಎಂದು ದೀಪಿಕಾ ಪಡುಕೋಣೆ ಹೇಳುತ್ತಾರೆ.
ಭೂತಾನ್ ಆಹಾರದಲ್ಲಿ ಎಮಾ ದಟ್ಶಿ ಅತ್ಯಂತ ಪ್ರಸಿದ್ಧವಾದದ್ದು. ಭೂತಾನ್‌ನ ರಾಷ್ಟ್ರೀಯ ಭಾಷೆಯಾದ ಜೋಂಗ್‌ಖಾ ಭಾಷೆಯಲ್ಲಿ, ಎಮಾ ಎಂದರೆ ಮೆಣಸಿನಕಾಯಿ ಮತ್ತು ದಟ್ಶಿ ಎಂದರೆ ಚೀಸ್. ಸಾಂಪ್ರದಾಯಿಕವಾಗಿ, ಈ ಖಾದ್ಯದಲ್ಲಿ ಬಳಸುವ ಚೀಸ್ ಅನ್ನು ಹಸುವಿನ ಅಥವಾ ಯಾಕ್ನ ಹಾಲಿನ ಮೊಸರಿನಿಂದ ಮನೆಯಲ್ಲಿ ತಯಾರಿಸಲಾಗುತ್ತದೆ.


Click it and Unblock the Notifications