ಸರೋಜಾ ದೇವಿ ಮನೆ ಬಾತ್ ರೂಮ್‌ನಲ್ಲಿ ಬೆಳ್ಳಿ ಬಕೆಟ್, ಮಗ್..; 70ರ ದಶಕದಲ್ಲಿ ಸಂಭಾವನೆ ಎಷ್ಟಿತ್ತು?
ಬಹುಭಾಷಾ ನಟಿ ಬಿ. ಸರೋಜಾ ದೇವಿ ತಮ್ಮ ಸಿನಿಮಾಗಳ ಮೂಲಕ ಸಿನಿರಸಿಕರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಸಂಪಾದಿಸಿದ್ದಾರೆ. 50ರ ದಶಕದಲ್ಲೇ ಚಿತ್ರರಂಗ ಪ್ರವೇಶಿಸಿದ ಅವರು ಬಹುಬೇಡಿಕೆಯ ನಟಿಯಾಗಿ ಗುರ್ತಿಸಿಕೊಂಡಿದ್ದರು. ಕನ್ನಡದ ಮೊದಲ ಲೇಡಿ ಸೂಪರ್ ಸ್ಟಾರ್ ಆಗಿದ್ದರು. ಅವರ ಬಳಿಕ ಅಂದಾಜು 500 ಕೋಟಿ ರೂ. ಆಸ್ತಿಪಾಸ್ತಿ ಇರುವುದಾಗಿ ಅಂದಾಜಿಸಲಾಗುತ್ತದೆ.
70 ವರ್ಷಗಳ ಹಿಂದೆಯೇ ಚಿತ್ರರಂಗದಲ್ಲಿ ಬಿ. ಸರೋಜಾ ದೇವಿ ನೇಮು, ಫೇಮು ಗಳಿಸಿದ್ದರು. ಬಹಳ ಬೇಗ ಸ್ಟಾರ್ ಎನಿಸಿಕೊಂಡುಬಿಟ್ಟರು. ಡಾ. ರಾಜ್‌ಕುಮಾರ್, ಎಂಜಿಆರ್, ಎನ್‌ಟಿಆರ್ ರೀತಿಯ ದಿಗ್ಗಜ ನಟರ ಜೊತೆ ನಟಿಸುತ್ತಿದ್ದರು. ನಟಿಸಿದ ಸಿನಿಮಾಗಳೆಲ್ಲಾ ಹಿಟ್. ಹಾಗಾಗಿ ಸಹಜವಾಗಿಯೇ ಬೇಡಿಕೆ ಹೆಚ್ಚಾಗಿತ್ತು. ದಿನದ 20 ಗಂಟೆಗಳ ಕಾಲ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದರು. ಸತತ 29 ವರ್ಷಗಳ ಕಾಲ ನಾಯಕಿಯಾಗಿಯೇ ಬೆಳ್ಳಿ ಪರೆದೆಯಲ್ಲಿ ಮೆರೆದರು.

50-60ರ ದಶಕದಲ್ಲೇ ಅತಿಹೆಚ್ಚು ಸಂಭಾವನೆ ಪಡೆಯುವ ನಟಿಸಿ ಎನಿಸಿಕೊಂಡಿದ್ದರು. ಬಿ. ಸರೋಜಾ ದೇವಿ ಅವರ ಕ್ರೇಜ್, ಐಷಾರಾಮಿ ಜೀವನದ ಬಗ್ಗೆ ಹಿರಿಯ ನಟಿ ಜಯಮಾಲಾ ನೆನಪು ಮಾಡಿಕೊಂಡಿದ್ದಾರೆ. ಒಮ್ಮೆ ಸರೋಜಾ ದೇವಿ ಅವರ ಮನೆಗೆ ಹೋದಾಗ ಬಾತ್‌ರೂಮ್‌ನಲ್ಲಿದ್ದ ಬೆಳ್ಳಿ ಮಗ್, ಬಕೆಟ್ ನೋಡಿದ್ದಾಗಿ ನೆನಪಿಸಿಕೊಂಡಿದ್ದಾರೆ. ರಿಪಬ್ಲಿಕ್ ಕನ್ನಡ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ನಟಿ ಜಯಮಾಲಾ ಈ ಬಗ್ಗೆ ಮಾತನಾಡಿದ್ದಾರೆ.
"70ರ ದಶಕದಲ್ಲೇ ಸರೋಜಾ ದೇವಿ ಅವರನ್ನು 6 ಲಕ್ಷದ ನಾಯಕಿ ಎಂದು ಕರೆಯುತ್ತಿದ್ದರು. ಅವತ್ತಿನ ಕಾಲಕ್ಕೆ 6 ಲಕ್ಷ ಎಂದರೆ ದೊಡ್ಡ ಮೊತ್ತ. ನಾನು ಚಿತ್ರರಂಗಕ್ಕೆ 1973ರಲ್ಲಿ ಬಂದಿದ್ದರು. ಆಗ ಚಿನ್ನದ ಬೆಲೆ 10 ಗ್ರಾಂಗೆ 250 ರೂಪಾಯಿ. ಬೆಂಗಳೂರಿನಲ್ಲಿ 30*40 ಸೈಟ್ 3 ಸಾವಿರ, 60*40 ಸೈಟ್ 6 ಸಾವಿರ ರೂಪಾಯಿ ಇತ್ತು. ಇನ್ನು 60ರ ದಶಕದಲ್ಲಿ ಸೈಟ್ ಬೆಲೆ ಎಷ್ಟಿರಬಹುದು ಲೆಕ್ಕಹಾಕಿ. ಆಗಲೇ ಒಳ್ಳೆ ಆಸ್ತಿ ಮಾಡಿದ್ದರು" ಎಂದು ನಟಿ ಜಯಮಾಲಾ ಹೇಳಿದ್ದಾರೆ.

ದೇವನಹಳ್ಳಿಯಲ್ಲಿ ಇದ್ದ ತಮ್ಮ ಜಮೀನಿನಲ್ಲಿ ಮನೆ ಕಟ್ಟಿಸಲು ಜಯಮಾಲಾ ಅವರು ಪ್ಲ್ಯಾನ್ ಮಾಡಿದ್ದರಂತೆ. ಆಗ ಬಿ. ಸರೋಜಾ ದೇವಿ ಅವರ ಪತಿ ಶ್ರೀಹರ್ಷ ಅವರ ಬಳಿ ಪ್ಲ್ಯಾನ್ ಮಾಡಿಕೊಡುವಂತೆ ಕೇಳಿದ್ದರಂತೆ. ಆ ಬಗ್ಗೆ ಮಾತನಾಡಲು ಬಿ. ಸರೋಜಾ ದೇವಿ ಮನೆಗೆ ಹೋಗಿದ್ದನ್ನು ನಟಿ ಜಯಮಾಲಾ ಮೆಲುಕು ಹಾಕಿದ್ದಾರೆ. ಅಂದು ಅವರ ಮನೆ ವೈಭೋಗ ನೋಡಿ ಬೆರಗಾಗಿದ್ದಾಗಿ ವಿವರಿಸಿದ್ದಾರೆ.
ಜಯಮಾಲಾ ಮಾತು ಮುಂದುವರೆಸಿ "ಬಿ. ಸರೋಜಾ ದೇವಿ ಅವರ ಪತಿ ಶ್ರೀಹರ್ಷ ಬಹಳ ಒಳ್ಳೆಯವರು. ಅವರ ಮನೆಯ ಬಾತ್‌ರೂಂಗೆ ಹೋಗಿದ್ದೆ. ಅಲ್ಲಿ ನೋಡಿದರೆ ಬಕೆಟ್, ಮಗ್ ಎಲ್ಲವೂ ಬೆಳ್ಳಿಯದ್ದಾಗಿತ್ತು. ಆಗ ಬೆಳ್ಳಿಗೆ ಅಂತಹ ಬೆಲೆ ಏನು ಇರಲಿಲ್ಲ. ಹೂದಾನಿ ಸೇರಿದಂತೆ ಸಾಕಷ್ಟು ವಸ್ತುಗಳು ಬೆಳ್ಳಿಯದೇ ಆಗಿತ್ತು. ಸಿನಿಮಾದಿಂದ ದುಡಿದ ಹಣದಿಂದಲೇ ಇಷ್ಟೆಲ್ಲಾ ಆಸ್ತಿ ಸಂಪಾದಿಸಿದ್ದರು. ಬಹಳ ಜಾಣ್ಮೆಯ ಹೆಣ್ಣುಮಗಳು" ಎಂದು ತಿಳಿಸಿದ್ದಾರೆ.
ರಾಮನಗರ ಬಳಿ ಬಿ. ಸರೋಜಾ ದೇವಿ ಅವರು ಸಂಪಾದಿಸಿರುವ 70 ಎಕರೆ ಜಮೀನು ಇದೆ. ಒಂದು ಎಕರೆ ಕಮ್ಮಿ ಅಂದು 3 ಕೋಟಿ ರೂ. ಬೆಲೆ ಬಾಳುತ್ತದೆ. ಸಾಕಷ್ಟು ಚಿನ್ನ, ಬೆಳ್ಳಿ ಆಭರಣಗಳಿತ್ತು. ತಮ್ಮ ಬಳಿ ಇದ್ದ ಚಿನ್ನವನ್ನು ಕಂಡವರ ಮಕ್ಕಳಿಗೆ ಹಾಕಿ ಬಿ. ಸರೋಜಾ ದೇವಿ ಖುಷಿ ಪಡುತ್ತಿದ್ದರು. ಅಂದಾಜು 500 ಕೋಟಿ ರೂ. ಆಸ್ತಿ ಅವರ ಬಳಿ ಇರಬಹುದು. ಅವರ ತಾಯಿ ರುದ್ರಮ್ಮ ಅವರಿಗೆ ಹಣಕಾಸಿನ ವಿಚಾರದ ಬಗ್ಗೆ ಬಹಳ ಲೆಕ್ಕಾಚಾರ ಇತ್ತು. ಅಂದು ಮಗಳು ದುಡಿದ ಹಣವನ್ನು ಹೂಡಿಕೆ ಮಾಡಿದ್ದರು ಎಂದು ಹಿರಿಯ ಪತ್ರಕರ್ತ ಕೆ ಜೆ ಕುಮಾರ್ ಹೇಳಿದ್ದಾರೆ.


Click it and Unblock the Notifications











