'ಅಣ್ಣಯ್ಯ' ಸಿನ್ಮಾ ಶೂಟಿಂಗ್ ಮಾಡ್ದೆ ಅಷ್ಟೇ, ಇವತ್ತಿಗೂ ಹೆಂಗಿದೆ ಅಂತ ನೋಡಿಲ್ಲ"; ಮಧೂ

ಬಾಲಿವುಡ್ ನಟಿ ಮಧೂ ಶಾ ದಕ್ಷಿಣದ ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ಮಣಿರತ್ನಂ ನಿರ್ದೇಶನದ ರೋಜಾ ಚಿತ್ರವನ್ನು ಸಿನಿರಸಿಕರು ಮರೆಯುವುದುಂಟೆ. ಒಂದ್ಕಾಲದಲ್ಲಿ ಬಿಂದಾಸ್ ಪಾತ್ರಗಳಲ್ಲಿ ನಟಿಸಿದ ಮುಂಬೈ ಚೆಲುವೆ ಈಗ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

90ರ ದಶಕದಲ್ಲೇ ಮಧೂ ಕನ್ನಡದ 'ಅಣ್ಣಯ್ಯ' ಚಿತ್ರದಲ್ಲಿ ನಟಿಸಿದ್ದರು. ರವಿಚಂದ್ರನ್ ಮಡದಿ ಪಾತ್ರದಲ್ಲಿ ಮಿಂಚಿ ಸೈ ಎನಿಸಿಕೊಂಡಿದ್ದರು. 'ಅಣ್ಣಯ್ಯ' ಬಳಿಕ 'ರನ್ನ' ಚಿತ್ರದಲ್ಲಿ ಸುದೀಪ್ ಅತ್ತೆಯ ಪಾತ್ರದಲ್ಲಿ ನಟಿಸುವ ಮೂಲಕ ಚಂದನವನಕ್ಕೆ ಕಂಬ್ಯಾಕ್ ಮಾಡಿದ್ದರು. 'ನಾನು ಮತ್ತು ವರಲಕ್ಷ್ಮಿ', 'ಪ್ರೀಮಿಯರ್ ಪದ್ಮಿಣಿ', 'ಸೀತಾರಾಮ ಕಲ್ಯಾಣ', 'ರೇಮೊ' ಸೇರಿ ಒಂದಷ್ಟು ಸಿನಿಮಾಗಳಲ್ಲಿ ಆಕೆ ಬಣ್ಣ ಹಚ್ಚಿದ್ದಾರೆ.

Actress Madhoo Shah admitted that she never watched Annayya even though she starred in it

ಡಿ. ರಾಜೇಂದ್ರ ಸಿಂಗ್‌ ಬಾಬು ನಿರ್ದೇಶನದಲ್ಲಿ 1993ರಲ್ಲಿ 'ಅಣ್ಣಯ್ಯ' ಸಿನಿಮಾ ಮೂಡಿ ಬಂದಿತ್ತು. ಚಿತ್ರದಲ್ಲಿ ಮಲತಾಯಿ ಹೇಳಿದ್ದೇ ವೇದವಾಕ್ಯ, ತನ್ನ ತಾಯಿ ಮಾಡೋದೆಲ್ಲಾ ಸರಿ ಎಂದು ನಂಬಿ ಆಸ್ತಿಗಾಗಿ ಆಕೆ ಮಾಡುವ ಕುತಂತ್ರ ಅರಿಯದ ಮುಗ್ಧ ಅಣ್ಣಯ್ಯ ಪಾತ್ರದಲ್ಲಿ ರವಿಚಂದ್ರನ್ ನಟಿಸಿದ್ದರು. ಆತನನ್ನು ಮದುವೆಯಾಗಿ ಮನೆ ಸೇರುವ ಸರಸ್ವತಿ ಅತ್ತೆಯ ನಿಜಬಣ್ಣ ಬಯಲು ಮಾಡುವ ಕಥೆ ಚಿತ್ರದಲ್ಲಿದೆ.

ಕನ್ನಡದಲ್ಲಿ ಬಿ. ಪುಟ್ಟಸ್ವಾಮಯ್ಯ ಬರೆದ ಅರ್ಧಾಂಗಿ ಕಾದಂಬರಿ ಆಧರಿಸಿ 'ಮಲ್ಲಮ್ಮನ ಪವಾಡ' ಸಿನಿಮಾ ಬಂದಿತ್ತು. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಚಿತ್ರದಲ್ಲಿ ರಾಜ್‌ಕುಮಾರ್ ಹೀರೊ ಆಗಿ ನಟಿಸಿದ್ದರು. ಇದೇ ಚಿತ್ರದಿಂದ ಪ್ರೇರಣೆಗೊಂಡು 'ಎಂಗ ಚಿನ್ನ ರಾಸ' ಎಂಬ ಚಿತ್ರ ಬಂದಿತ್ತು. ಅದನ್ನು ಹಿಂದಿಯಲ್ಲಿ 'ಬೇಟಾ' ಹೆಸರಿನಲ್ಲಿ ಅನಿಲ್ ಕಪೂರ್ ರೀಮೆಕ್ ಮಾಡಿದ್ದರು. ಬಳಿಕ ಅದೇ ಕಥೆ ಕನ್ನಡದಲ್ಲಿ 'ಅಣ್ಣಯ್ಯ' ಸಿನಿಮಾ ಆಗಿ ಬಂದಿತ್ತು.

ತಮಿಳಿನ ಸಿನಿಉಳಗಂ ಯೂಟ್ಯೂಬ್ ಚಾನಲ್‌ನಲ್ಲಿ ಖ್ಯಾತ ನಟಿ ಸುಹಾಸಿನಿ ಮಣಿರತ್ನಂ ಸಿನಿಮಾ ತಾರೆಯರ ಸಂದರ್ಶನಗಳನ್ನು ಮಾಡುತ್ತಾರೆ. ಇತ್ತೀಚೆಗೆ ನಟಿ ಮಧೂ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಈ ವೇಳೆ ತಮ್ಮ ವೈಯಕ್ತಿಕ ಜೀವನ, ಸಿನಿಮಾ ಸೇರಿ ಸಾಕಷ್ಟು ಸಂಗತಿಗಳನ್ನು ಮಧೂ ಹಂಚಿಕೊಂಡಿದ್ದಾರೆ. 'ಅಣ್ಣಯ್ಯ' ಚಿತ್ರದಲ್ಲಿ ನಟಿಸಿರುವ ಬಗ್ಗೆಯೂ ಮಾತು ಬಂದಿದೆ.

ತಂದೆ ಚಿತ್ರ ನಿರ್ಮಾಪಕರಾಗಿದ್ದ ಕಾರಣ ಚಿತ್ರರಂಗದ ಒಡನಾಟ ಇತ್ತು. ಆದರೂ ನನ್ನ ಜೀವನದಲ್ಲಿ ನಾನೇ ಮುಂದೆ ಬರ್ತೀನಿ. ಯಾರೂ ಕರೆದು ಅವಕಾಶ ಕೊಡುವುದು ಬೇಡ ಎಂದು ನಿರ್ಧರಿಸಿದ್ದೆ. ಆದರೆ ಈಗ ಸಿನಿಮಾ ಬಗ್ಗೆ ಬಹಳ ಗೌರವ ಇದೆ ಎಂದು ಮಧೂ ಹೇಳಿದ್ದಾರೆ. ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ನಾನು ಯಾವುದೇ ಯಶಸ್ಸುನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಆಗ ನನಗೆ ಬಹಳ ಸ್ನೇಹಿತರಿದ್ದರು. ಸದಾ ಪಾರ್ಟಿ ಮಾಡುತ್ತಿದ್ದೆ. ಸಿನಿಮಾ ಚಿತ್ರೀಕರಣಕ್ಕೆ ಹೋಗಿ ಬಂದು ಮರೆತುಬಿಡುತ್ತಿದ್ದೆ ಎಂದು ಆಕೆ ನೆನಪಿಸಿಕೊಂಡಿದ್ದಾರೆ.

"ಹಗಲಿನ ಸಮಯದಲ್ಲಿ ಸಿನಿಮಾಗಳಲ್ಲಿ ನಟಿಸುತ್ತಿದ್ದೆ. ಸಂಜೆ ಫ್ರೆಂಡ್ಸ್ ಜೊತೆ ಪಾರ್ಟಿ. ಯಾವುದೇ ಯೋಚನೆ ನನಗೆ ಇರುತ್ತಿರಲಿಲ್ಲ. ಕೆಲವರು 'ರೋಜಾ' ಸಿನಿಮಾ ಹೇಗೆ ಆಯ್ಕೆ ಮಾಡಿಕೊಂಡ್ರಿ, 'ಜಂಟಲ್‌ಮನ್' ಸಿನಿಮಾ ಒಪ್ಪಿದ್ದೇಗೆ ಎಂದು ಕೇಳುತ್ತಾರೆ. ನನಗೆ ಗೊತ್ತಿಲ್ಲ, ಎಲ್ಲಾ ತಾನಾಗಿಯೇ ನಡೆಯಿತು. ನಾನು ಚಿತ್ರೀಕರಣ ಮಾಡಿ ಸುಮ್ಮುನಾಗುತ್ತೇನೆ. ಅಪ್ಪಿ ತಪ್ಪಿ ಡಬ್ಬಿಂಗ್ ಮಾಡುವಾಗ ಸಿನಿಮಾ ನೋಡುತ್ತೇನೆ ಅಷ್ಟೇ ಎಂದು ಮಧೂ ತಿಳಿಸಿದ್ದಾರೆ.

"ಕನ್ನಡದಲ್ಲಿ ನಾನು 'ಅಣ್ಣಯ್ಯ' ಚಿತ್ರದಲ್ಲಿ ನಟಿಸಿದ್ದೆ. ಯಾರೋ ಹೇಳುತ್ತಿದ್ದರೂ ಮೇಡಂ ಬಹಳ ಒಳ್ಳೆ ಸಿನ್ಮಾ, ಚೆನ್ನಾಗಿ ನಟಿಸಿದ್ದೀರಾ? ಅಂತ. ನಾನು 'ಅಣ್ಣಯ್ಯ' ಸಿನ್ಮಾ ಇವತ್ತಿನವರೆಗೆ ನೋಡ್ಲೇಯಿಲ್ಲ. ಬಿಡುಗಡೆ ಬಳಿಕ ಕೂಡ ನೋಡ್ಲಿಲ್ಲ, ಯಾಕಂದರೆ ನಾನು ಕನ್ನಡದಲ್ಲಿ ಡಬ್ಬಿಂಗ್ ಮಾಡ್ಲಿಲ್ಲ. ಹಾಗಾಗಿ ಡಬ್ಬಿಂಗ್ ವೇಳೆ ಕೂಡ ಸಿನಿಮಾ ವೀಕ್ಷಿಸಿಲ್ಲ. ಚಿತ್ರೀಕರಣ ಮಾಡಿ ಬಂದಿದ್ದು ಅಷ್ಟೇ ನನಗೆ ಗೊತ್ತು. ಕೆಲವರು ಆ ಸಿನಿಮಾ ದೊಡ್ಡ ಹಿಟ್ ಎನ್ನುತ್ತಾರೆ. ಹೌದಾ ಓಕೆ? ಎಂದು ನಕ್ಕು ಸುಮ್ಮನಾಗುತ್ತೇನೆ, ಅಷ್ಟೇ?" ಎಂದು ಮಧೂ ವಿವರಿಸಿದ್ದಾರೆ.

More from Filmibeat

Read more about: ravichandran sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X