Meghana Raj: "ನಾನು ಮೊದ್ಲು ರಾಯನ್ ಸರ್ಜಾಗೆ ಹೇಳಿಕೊಟ್ಟಿದ್ದು ತಮಿಳು ಡೈಲಾಗ್": ಮೇಘನಾ ರಾಜ್
ಪತಿ ಚಿರಂಜೀವಿ ಸರ್ಜಾ ಅಗಲಿಕೆಯ ನಂತರ ನಟಿ ಮೇಘನಾ ರಾಜ್ ಮತ್ತೆ ಚಿತ್ರರಂಗಕ್ಕೆ ವಾಪಸ್ ಆಗುತ್ತಿದ್ದಾರೆ. ಆಕೆಯ ಕಂಬ್ಯಾಕ್ ಸಿನಿಮಾ 'ತತ್ಸಮ ತದ್ಭವ' ರಿಲೀಸ್‌ಗೆ ರೆಡಿಯಾಗಿದೆ. ಪುತ್ರ ರಾಯನ್ ಸರ್ಜಾ ಲಾಲನೆ ಪಾಲನೆ ಜೊತೆ ಜೊತೆಗೆ ಸಿನಿಮಾ ಕೆಲಸಗಳಲ್ಲಿ ಮೇಘನಾ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ವಿಶಾಲ್ ಆತ್ರೇಯಾ ನಿರ್ದೇಶನದ ಈ ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವನ್ನು ಪನ್ನಗಾ ಭರಣ, ಅನಿಲ್ ಹಾಗೂ ಚೇತನ್ ನಿರ್ಮಿಸಿದ್ದಾರೆ. ಪ್ರಜ್ವಲ್ ದೇವರಾಜ್ ಪೊಲೀಸ್ ಆಫೀಸರ್ ಆಗಿ ಮುಖ್ಯವಾದ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ಸಿನಿಮಾ ಟ್ರೈಲರ್ ರಿಲೀಸ್ ಆಗಿ ಸಖತ್ ಸದ್ದು ಮಾಡ್ತಿದೆ. ಇತ್ತೀಚೆಗೆ ಸಾಕಷ್ಟು ಸಂದರ್ಶನಗಳಲ್ಲಿ ನಟಿ ಮೇಘನಾ ರಾಜ್ ಮಾತನಾಡಿದ್ದಾರೆ. ಇದೀಗ ತಮಿಳು ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿರುವ ಮೇಘನಾ ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.

ಪತಿ ಚಿರು ಸರ್ಜಾ, ಪುತ್ರ ರಾಯನ್ ಹಾಗೂ 'ತತ್ಸಮ ತದ್ಬವ' ಸಿನಿಮಾ ಕುರಿತು ಮೇಘನಾ ರಾಜ್ ಮಾತನಾಡಿದ್ದಾರೆ. ಮಾತೃತ್ವವನ್ನು ಹೇಗೆ ಆಸ್ವಾದಿಸುತ್ತಿದ್ದೀರಾ ಎನ್ನುವ ಪ್ರಶ್ನೆಗೆ "ರಾಯನ್ ಬಹಳ ನಾಟಿ, ಈಗಷ್ಟೆ ಅವನು ಶಾಲೆಗೆ ಹೋಗಲು ಆರಂಭಿಸಿದ್ದಾನೆ. ಈಗಾಗಲೇ ಶಾಲೆಯಿಂದ ಕಂಪ್ಲೇಟ್ ಬರುತ್ತಿದೆ. ಬಹಳ ನಾಟಿ. ಒಂದು ಕಡೆ ಕೂರಲ್ಲ. ರೈಮ್ಸ್ ಹೇಳಿಕೊಂಡು ಓಡಾಡುತ್ತಿರುತ್ತಾನೆ" ಎಂದು ಹೇಳುತ್ತಿರುತ್ತಾರೆ.
"ಈಗ ರಾಯನ್ ಡೈಲಾಗ್ಸ್ ಹೇಳಲು ಆರಂಭಿಸಿದ್ದಾನೆ. ಇದನ್ನು ಹೇಗೆ ತೆಗೆದುಕೊಳ್ಳುತ್ತಾರೆ ಗೊತ್ತಿಲ್ಲ. ರಾಯನ್‌ಗೆ ಮೊದಲು ಹೇಳಿಕೊಟ್ಟಿದ್ದು ರಜನಿಕಾಂತ್ ಸರ್ ಡೈಲಾಗ್. ನಾನು ಕನ್ನಡತಿಯಾಗಿ ವೀಕ್ಷಕರು ಇದನ್ನು ಹೇಗೆ ಸ್ವೀಕರಿಸುತ್ತಾರೋ ಗೊತ್ತಿಲ್ಲ. ಚಿರು ಸರ್ಜಾ, ರಜನಿಕಾಂತ್ ಅವರ ದೊಡ್ಡ ಅಭಿಮಾನಿ ಆಗಿದ್ದರು. ಮನೆಯೊಳಗೆ ರಜನಿಕಾಂತ್ ಸರ್ ಪೋಸ್ಟರ್‌ಗಳನ್ನು ಅಂಟಿಸಿಕೊಂಡಿದ್ದರು. ರಾಯನ್ ಮೊದಲಿಗೆ 2 ಡೈಲಾಗ್ಸ್ ಹೇಳಿದ. ಒಂದು ರಜನಿಕಾಂತ್ ಡೈಲಾಗ್, ಮತ್ತೊಂದು ಧ್ರುವ ನಟನೆಯ 'ಮಾರ್ಟಿನ್' ಸಿನಿಮಾ ಡೈಲಾಗ್".
"ಎನ್ ವಳೀ ತನೀ ವಳಿ' ರಾಯನ್ ಮೊದಲು ಹೇಳಿದ ಡೈಲಾಗ್. ಮತ್ತೊಂದು 'ಹೋ ಇಟ್ಸ್ ಮಾರ್ಟಿನ್' ಡೈಲಾಗ್. ರಜನಿಕಾಂತ್ ಡೈಲಾಗ್ ಮೊದಲು ರಾಯನ್ ಹೇಳಿದ್ದು" ಎಂದು ಮೇಘನಾ ರಾಜ್ ವಿವರಿಸಿದ್ದಾರೆ.
ಇನ್ನು ತಮ್ಮದೇ ಸ್ವಂತ ಯೂಟ್ಯೂಬ್ ಚಾನಲ್ ಯಾಕೆ ಆರಂಭಿಸಿದ್ದು ಎನ್ನುವ ವಿಚಾರದ ಬಗ್ಗೆಯೂ ಮೇಘನಾ ಮಾತನಾಡಿದ್ದಾರೆ. "ಆ ಘಟನೆ ಬಳಿಕ ಎಲ್ಲರೂ ನನ್ನ ಜೀವನದ ಬಗ್ಗೆ ಬಹಳ ತಿಳಿದುಕೊಂಡಿರುವಂತೆ ತೋರಿಸಿಕೊಂಡರು. ಯೂಟ್ಯೂಬ್ ತೆಗೆದರೆ ಸಾಕು ಏನೇನೋ ಸುಳ್ಳು ಸುಳ್ಳು ವದಂತಿ ಕಣ್ಣಿಗೆ ರಾಚುತ್ತಿತ್ತು. ಅದು ನಮ್ಮ ಕುಟುಂಬಕ್ಕೆ ಬಹಳ ನೋವು ತಂದಿತ್ತು. ನಿವೇ ಬೇರೆ, ಥಂಬ್‌ನಿಲ್ ಬೇರೆ. ನಾನು ಸೆಲೆಬ್ರೆಟಿ ಅರ್ಥ ಮಾಡಿಕೊಳ್ಳುತ್ತೇನೆ. ನಮ್ಮ ಅಪ್ಪ ಅಮ್ಮ ಚಿತ್ರಂಗದವರೇ ಆದರೂ ಅವರಿಗೆ ಅರ್ಥವಾಗುತ್ತಿರಲಿಲ್ಲ. ಎಲ್ಲ ನಂಬುತ್ತಿದ್ದರು. ಅದರಿಂದ ನೋವಾಗುತ್ತಿತ್ತು. ಹಾಗಾಗಿ ನಾನೇ ಒಂದು ಯೂಟ್ಯೂಬ್ ಚಾನರ್ ಆರಂಭಿಸಿ ನನ್ನ ಬಗ್ಗೆ ಮಾತನಾಡುತ್ತೀನಿ. ಯಾರು ಮಾತನಾಡಬೇಡಿ ಎಂದು ಈ ನಿರ್ಧಾರಕ್ಕೆ ಬಂದೆ ಎಂದಿದ್ದಾರೆ"
"ಆ ಘಟನೆ ಬಳಿಕ ನಾನು ಮತ್ತೆ ಸಿನಿಮಾಗಳಲ್ಲಿ ನಟಿಸೋದು ಬೇಡ ಎಂದುಕೊಂಡಿದ್ದೆ. ನನ್ನ ಸಂಪೂರ್ಣ ಸಮಯ ರಾಯನ್‌ಗೆ ಕೊಡಬೇಕು ಎಂದುಕೊಂಡಿದ್ದೆ. ಆದರೆ ವಿಧಿ ಲೆಕ್ಕಾಚಾರ ಬೇರೆ ಇತ್ತು. ನನ್ನ ಸುತ್ತ ಇದ್ದವರು ಅದು ಚೆನ್ನಾಗಿ ಗೊತ್ತಿತ್ತು. ನಾನು ಮನೆಯಲ್ಲಿ ಸುಮ್ಮನೆ ಕೂತ್ಕೊಂಡು ಇರಲ್ಲ ಅಂತ. ಆಕೆ ಕ್ಯಾಮರಾ ಮುಂದೆ ಇರಬೇಕು. ಇಲ್ಲ ಅಂದರೆ ಆಕೆ ಹುಚ್ಚಿ ಆಗಿಬಿಡುತ್ತಾನೆ ಎನಿಸಿತ್ತು. ಹಾಗಾಗಿ ಮತ್ತೆ ಸಿನಿಮಾದಲ್ಲಿ ನಟಿಸುವ ನಿರ್ಧಾರ ತೆಗೆದುಕೊಳ್ಳುವಂತಾಯಿತು" ಎಂದಿದ್ದಾರೆ.


Click it and Unblock the Notifications










