ಕ್ಯಾನ್ಸರ್? ಡಿವೋರ್ಸ್.. ಡಿಪ್ರೆಷನ್‌.. ನನ್ನ ಜೀವ್ನ, ನನ್ ಇಷ್ಟ, 2ನೇ ಮದ್ವೆ ಯಾವಾಗ ಅಂದ್ರೆ?: ಪ್ರೇಮಾ

'ವೆಡ್ಡಿಂಗ್‌ ಗಿಫ್ಟ್' ಸಿನಿಮಾ ಮೂಲಕ ನಟಿ ಪ್ರೇಮಾ ಬಹಳ ದಿನಗಳ ನಂತರ ಚಿತ್ರರಂಗಕ್ಕೆ ವಾಪಸ್ ಆಗಿದ್ದಾರೆ. ಇತ್ತೀಚೆಗೆ ನಟಿಯ 2ನೇ ಮದುವೆ ಬಗ್ಗೆ ಗುಸುಗುಸು ಕೇಳಿಬಂದಿತ್ತು. ಆದರೆ ಇದೆಲ್ಲಾ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದರು. ಇದೀಗ ತೆಲುಗು ಸಂದರ್ಶವೊಂದರಲ್ಲಿ ತಮ್ಮ ವೈಯಕ್ತಿಕ ಜೀವನ ಹಾಗೂ ಸಿನಿಜರ್ನಿ ಬಗ್ಗೆ ಪ್ರೇಮಾ ಮಾತನಾಡಿದ್ದಾರೆ. ವದಂತಿಗಳನ್ನು ಹಬ್ಬಿಸಿದವರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

2006ರಲ್ಲಿ ನಟಿ ಪ್ರೇಮಾ ಕೊಡಗಿನ ಜೀವನ್ ಅಪ್ಪಚ್ಚು ಎಂಬುವವರನ್ನು ಮದುವೆ ಆಗಿದ್ದರು. ನಂತರ ಕೆಲ ಭಿನ್ನಾಭಿಪ್ರಾಯಗಳಿಂದ ಡಿವೋರ್ಸ್ ಪಡೆದು ದೂರಾಗಿದ್ದರು. "ಪರ್ಸನಲ್ ಬೇರೆ, ಪ್ರೊಫೆಷನಲ್ ಲೈಫ್ ಬೇರೆ. ನಾನು ಎರಡನ್ನು ಒಟ್ಟು ಮಾಡಿ ನೋಡಲ್ಲ. ನನಗೆ ಇಷ್ಟವಾಗದಿದ್ದರೆ ನೇರವಾಗಿ ನಿರ್ಧಾರ ತೆಗೆದುಕೊಳ್ಳುತ್ತೇನೆ. ಇನ್ನು ನನ್ನ ಜೀವನ. ಇದು ನನ್ನ ಒಂದೇ ಒಂದು ಜೀವನ. ಪೋಷಕರ ಜೊತೆ ಚರ್ಚಿಸಿದೆ. ಅವರು ಕೂಡ ಒಪ್ಪಿಕೊಂಡರು. ನಾನು ಈ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದೆ"

Actress Prema opens up on her divorce with Jeevan Appacchu and cancer rumors

"ನನಗೆ ನನ್ನ ಜೀವನ ಬೇಕು. ಆತ್ಮಹತ್ಯೆ ಮಾಡಿಕೊಳ್ಳುವವರಿಗೆಲ್ಲಾ ನಾನು ಹೇಳ್ತೀನಿ, ಹೀಗೆ ಮಾಡಬಾರದು ಅಂತ. ನಾನು ಆ ನಿರ್ಧಾರ ತೆಗೆದುಕೊಳ್ಳಲಿಲ್ಲ. ಆದರೆ ನಾನು ಅದನ್ನು ಸವಾಲಾಗಿ ಸ್ವೀಕರಿಸಿದೆ. ಅಂತಹ ಸಂದರ್ಭಗಳು ಬರುತ್ತವೆ. ನೀವು ಅದನ್ನು ಹೇಗೆ ಎದುರಿಸುತ್ತೀರಾ ಎನ್ನುವುದು ಮುಖ್ಯ. ನಾವು ಸವಾಲುಗಳನ್ನು ಎದುರಿಸಬೇಕು. ನಿನಗೆ ಇಷ್ಟವಿಲ್ಲದಿದ್ದರೆ ಪ್ರಪಂಚ ದೊಡ್ಡದಾಗಿದೆ. ಕೆಲಸ ಮಾಡು. ಆ ಸಮಸ್ಯೆಯಿಂದ ಹೊರ ಬನ್ನಿ. ಇದೇ ಜೀವನ ಅಲ್ಲ"

Actress Prema opens up on her divorce with Jeevan Appacchu and cancer rumors

"ಮದುವೆ ಒಂದೇ ಜೀವನ ಅಲ್ಲ. ಅದು ಬಿಟ್ಟು ಜೀವನ ಇದೆ. ನಿನಗೆ ಶಕ್ತಿಯಿದೆ. ನಾನೇ ವೈಯಕ್ತಿಕವಾಗಿ ಕೋರ್ಟ್‌ಗೆ ಹೋಗಿದ್ದೆ. ನಾನು ನಿರ್ಧಾರ ತೆಗೆದುಕೊಂಡೆ ಅಲ್ವಾ? ನಾನೇ ಹೋಗ್ತೀನಿ ಎಂದೆ. ಅಪ್ಪ, ಅಮ್ಮ ಬರ್ತೀನಿ ಅಂದರು. ನಾನು ಬೇಡ ಅಂದೆ. ಕೋರ್ಟ್‌ಗೆ ಹೋಗ್ತೀನಿ, ಅದನ್ನು ಮುಗಿಸಿ ನನ್ನ ಕೆಲಸಗಳಿಗೆ ವಾಸಪ್ ಆಗಿದ್ದೆ. ನಾನು ಮೊದಲು ತುಂಬಾ ಎಮೋಷನಲ್ ಆಗಿದ್ದೆ. ನಂತರ ಧೈರ್ಯ ಬಂತು."

ಎರಡನೇ ಮದುವೆ ಬಗ್ಗೆ ಎದುರಾದ ಪ್ರಶ್ನೆಗೆ "ಅದು ನನ್ನ ವೈಯಕ್ತಿಕ ನಿರ್ಧಾರ. ಮದುವೆ ಆಗಬೇಕು ಎನ್ನುವುದನ್ನು ನಾನು ನಿರ್ಧರಿಸಬೇಕು. ಹೌದು ಜೀವನದಲ್ಲಿ ಮದುವೆ ಇರಬೇಕು. ಒಂದು ವೇಳೆ ಒಳ್ಳೆ ಹುಡುಗ ಸಿಕ್ಕರೆ ಕಂಡಿತ ಮದುವೆ ಆಗುತ್ತೇನೆ. ಅದರಲ್ಲಿ ತಪ್ಪೇನಿದೆ. 70 ವರ್ಷ ವಯಸ್ಸಿನಲ್ಲೂ ಮದುವೆ ಆಗುತ್ತಾರೆ. ತಪ್ಪೇನಿದೆ. ಇದು ನನ್ನ ಜೀವನ. ನನ್ನ ಜೀವನ ಹೇಗಿರಬೇಕು ಎನ್ನುವುದು ನನಗೆ ಗೊತ್ತು." ಎಂದಿದ್ದಾರೆ.

ಕೆಲ ವರ್ಷಗಳ ಹಿಂದೆ ನಟಿ ಪ್ರೇಮಾ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಅದಕ್ಕೆ ಈಗ ಸ್ಪಷ್ಟನೆ ನೀಡಿದ್ದಾರೆ. "ನಿಜ ಹೇಳಬೇಕು ನಾನು ಅಂದರೆ ಡಿಪ್ರೆಷನ್‌ಗೆ ಹೋಗಿದ್ದೆ. ನಾನು ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನಲ್ಲಿ ಕೆಲ ದಿನಗಳ ಕಾಲ ಇದ್ದೆ. ಅಲ್ಲಿ ನನ್ನ ಸ್ನೇಹಿತರು ಇದ್ದಾರೆ. ಆ ಸಮಯದಲ್ಲಿ ಇಲ್ಲಿ ಅಂತಹ ವದಂತಿಗಳನ್ನು ಸೃಷ್ಟಿಸಿ ಹಬ್ಬಿಸಿದರು. ನಾನು ಕ್ಯಾನ್ಸರ್ ಚಿಕಿತ್ಸೆಗೆ ವಿದೇಶಕ್ಕೆ ಹೋಗಿದ್ದೇನೆ ಅಂತೆಲ್ಲಾ ಹೇಳಿದರು. ದೇವ ದಯೆಯಿಂದ ಯಾವುದೇ ಸಮಸ್ಯೆ ಇಲ್ಲ, ಕ್ಯಾನ್ಸರ್‌ ಎನ್ನುವ ಸುಳ್ಳು ವದಂತಿ ಹಬ್ಬಿಸಿದರು ಅಷ್ಟೇ" ಎಂದು ಪ್ರೇಮಾ ವಿವರಿಸಿದ್ದಾರೆ.

1995ರಲ್ಲಿ ಬಂದ 'ಸವ್ಯಸಾಚಿ' ಸಿನಿಮಾ ಮೂಲಕ ಪ್ರೇಮಾ ಚಿತ್ರರಂಗ ಪ್ರವೇಶಿಸಿದರು. ಅದೇ ವರ್ಷ ಉಪೇಂದ್ರ ನಿರ್ದೇಶನದ 'ಓಂ' ಚಿತ್ರದಲ್ಲಿ ಶಿವಣ್ಣನಿಗೆ ಜೋಡಿಯಾಗಿ ಮೋಡಿ ಮಾಡಿದರು. ರಾಜ್ಯಪ್ರಶಸ್ತಿ ಪಡೆದುಕೊಂಡರು. ಮುಂದೆ 'ನಮ್ಮೂರ ಮಂದಾರ ಹೂವೆ', 'ತುತ್ತಾ ಮುತ್ತಾ', 'ಯಜಮಾನ', 'ಕನಸುಗಾರ', 'ಆಪ್ತಮಿತ್ರ' ಸೇರಿದಂತೆ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದರು. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳಿನ ಹಿಟ್ ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದರು.

More from Filmibeat

English summary
Actress Prema opens up on her divorce with Jeevan Appacchu and cancer rumors. She acted in Kannada, Telugu and few Tamil language films. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X