'ಜೇಮ್ಸ್' ಸಿನಿಮಾ ಬಗ್ಗೆ ಟ್ವೀಟ್ ಮಾಡಿ ಡಿಲೀಟ್ ಮಾಡಿದ್ದೇಕೆ ನಾಯಕಿ ಪ್ರಿಯಾ ಆನಂದ್?
ಈ ಕ್ಷಣಕ್ಕೂ ಪುನೀತ್ ರಾಜ್‌ಕುಮಾರ್ ಅಗಲಿಕೆಯ ಸುದ್ದಿಯಲ್ಲಿ ಅಭಿಮಾನಿಗಳು ಜೀರ್ಣಿಸಿಕೊಳ್ಳಲು ಸಾಧ್ಯವಾಗ್ತಿಲ್ಲ. ಪ್ರತಿ ದಿನ ಅಭಿಮಾನಿಗಳು ನೆಚ್ಚಿನ ನಟನನ್ನು ನೆನಪಿಸಿಕೊಳ್ಳುತ್ತಲೇ ಇದ್ದಾರೆ. ಅಪ್ಪು ಅಗಲಿಕೆ ಬಳಿಕ ಅವರು ನಟಿಸಿದ್ದ 3 ಸಿನಿಮಾಗಳು ಬಿಡುಗಡೆ ಆಗಿತ್ತು. ಅದರಲ್ಲಿ 'ಜೇಮ್ಸ್' ಕೂಡ ಒಂದು.
ಪುನೀತ್ ರಾಜ್‌ಕುಮಾರ್ ಹೀರೊ ಆಗಿ ನಟಿಸಿದ್ದ ಕೊನೆಯ ಸಿನಿಮಾ ಇದು. ಬಹದ್ದೂರ್ ಚೇತನ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಅಪ್ಪು ಕೊನೆಯ ಸಿನಿಮಾ ಎನ್ನುವ ಕಾರಣಕ್ಕೆ ಅಭಿಮಾನಿಗಳು ಮುಗಿಬಿದ್ದು ನೋಡಿದ್ದರು. ದಾಖಲೆಯ ಓಪನಿಂಗ್ ಪಡೆದುಕೊಂಡಿದ್ದ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಅಪ್ಪು ನಿಧನರಾದ 5 ತಿಂಗಳ ಬಳಿಕ 'ಜೇಮ್ಸ್' ಸಿನಿಮಾ ಬಿಡುಗಡೆ ಆಗಿತ್ತು. ಹಬ್ಬದ ರೀತಿ ಅಭಿಮಾನಿಗಳು ಸಿನಿಮಾವನ್ನು ಸ್ವಾಗತಿಸಿ ನೋಡಿ ಸಂಭ್ರಮಿಸಿದ್ದರು.

ಚೆನ್ನೈ ನಟಿ ಪ್ರಿಯಾ ಆನಂದ್ ತಮಿಳು, ತೆಲುಗು ಸಿನಿಮಾಗಳಲ್ಲಿ ಹೆಚ್ಚು ನಟಿಸಿದ್ದಾರೆ. 'ರಾಜಕುಮಾರ' ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಜೋಡಿಯಾಗಿದ್ದರು. ಬಳಿಕ ಜೇಮ್ಸ್' ಚಿತ್ರದಲ್ಲಿ ಸಹ ನಾಯಕಿಯಾಗಿ ಮಿಂಚಿದ್ದರು. ಇಬ್ಬರ ಕಾಂಬಿನೇಷನ್ ಅಭಿಮಾನಿಗಳಿಗೆ ಇಷ್ಟವಾಗಿತ್ತು. ಸದ್ಯ 'ಬಲರಾಮನ ದಿನಗಳು' ಚಿತ್ರದಲ್ಲಿ ವಿನೋದ್ ಪ್ರಭಾಕರ್ ಜೊತೆ ಪ್ರಿಯಾ ಆನಂದ್ ನಟಿಸುತ್ತಿದ್ದಾರೆ. ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಕೆ. ಎಂ ಚೈತನ್ಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ವಿನೋದ್ ಪ್ರಭಾಕರ್ ನಟನೆಯ 25ನೇ ಸಿನಿಮಾ ಎನ್ನುವುದು ವಿಶೇಷ.
3 ವರ್ಷಗಳ ಬಳಿಕ ಪ್ರಿಯಾ ಆನಂದ್ 'ಜೇಮ್ಸ್' ಸಿನಿಮಾ ನೆನಪಿಸಿಕೊಂಡಿದ್ದಾರೆ. ಸಿನಿಮಾ ಬಗ್ಗೆ ಟ್ವೀಟ್ ಮಾಡಿದ್ದಾರೆ. ಆದರೆ ಬಳಿಕ ಅದನ್ನು ಡಿಲೀಟ್ ಮಾಡಿದ್ದಾರೆ. ಅಷ್ಟಕ್ಕೂ ಪ್ರಿಯಾ ಆನಂದ್ ಮಾಡಿದ್ದ ಟ್ವೀಟ್ ಏನು? ಡಿಲೀಟ್ ಮಾಡಿದ್ದೇಕೆ ಎಂದು ಪುನೀತ್ ಅಭಿಮಾನಿಗಳು ಚರ್ಚಿಸುತ್ತಿದ್ದಾರೆ.
ಕಿಶೋರ್ ಪತ್ತಿಕೊಂಡ ನಿರ್ದೇಶನದ ಆಕ್ಷನ್ ಥ್ರಿಲ್ಲರ್ 'ಜೇಮ್ಸ್' ಸಿನಿಮಾ ಸೂಪರ್ ಹಿಟ್ ಆಗಿತ್ತು. ಸಿನಿರಸಿಕರಿಗೆ ಹಬ್ಬದೂಟ ಉಣಬಡಿಸಿತ್ತು. ಅಪ್ಪು ಚಿತ್ರದಲ್ಲಿ ನಟಿಸಿದ್ರು ಡಬ್ ಮಾಡುವ ಮುನ್ನ ಅಗಲಿದ್ದರು. ಹಾಗಾಗಿ ಅವರ ಪಾತ್ರಕ್ಕೆ ಶಿವಣ್ಣ ಡಬ್ ಮಾಡಿದ್ದರು. 50 ದಿನಗಳ ಕಾಲ ಅದೇ ರೀತಿ ಸಿನಿಮಾ ಪ್ರದರ್ಶನ ಕಂಡಿತ್ತು. ಬಳಿಕ ತಂತ್ರಜ್ಞಾನದ ಸಹಾಯದಿಂದ ಪುನೀತ್ ರಾಜ್‌ಕುಮಾರ್ ಅವರ ಧ್ವನಿಯನ್ನೇ ಪಾತ್ರಕ್ಕೆ ನೀಡಲಾಗಿತ್ತು.
ದೊಡ್ಡ ಪರದೆಯಲ್ಲಿ ಅಭಿಮಾನಿಗಳು ಹೀರೊ ಆಗಿ ಕಣ್ತುಂಬಿಕೊಂಡಿದ್ದ ಕೊನೆಯ ಸಿನಿಮಾ ಇದು. ಆ ಬಳಿಕ ಪುನೀತ್ ಕಾಣಿಸಿಕೊಂಡಿದ್ದ ಡಾಕ್ಯು ಸಿನಿಮಾ 'ಗಂಧದಗುಡಿ' ಸಿನಿಮಾ ತೆರೆಗೆ ಬಂದಿತ್ತು. ಕೊನೆಯದಾಗಿ ವಿಶೇಷ ಪಾತ್ರದಲ್ಲಿ ಮಿಂಚಿದ್ದ 'ಲಕ್ಕಿಮ್ಯಾನ್' ಸಿನಿಮಾ ಕೂಡ ಪ್ರೇಕ್ಷಕರನ್ನು ರಂಜಿಸಿತ್ತು. ಇದೀಗ ಅಪ್ಪು ನಟನೆಯ ಸೂಪರ್ ಹಿಟ್ ಸಿನಿಮಾಗಳನ್ನು ಹೊಸ ತಂತ್ರಜ್ಞಾನದಲ್ಲಿ ರೀ-ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. 'ಜಾಕಿ' ಹಾಗೂ 'ಅಪ್ಪು' ಸಿನಿಮಾಗಳನ್ನು ಇದೇ ರೀತಿ ಮತ್ತೆ ತೆರೆಗೆ ತರಲಾಗಿತ್ತು.
ಮುಂದಿನ ವರ್ಷ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ 'ಪರಮಾತ್ಮ' ಸಿನಿಮಾ ಮರುಬಿಡುಗಡೆ ಮಾಡುವ ಬಗ್ಗೆ ಚರ್ಚೆ ಶುರುವಾಗಿದೆ. ಯೋಗರಾಜ್ ಭಟ್ ನಿರ್ದೇಶನದ ಈ ಚಿತ್ರದಲ್ಲಿ ಅಪ್ಪು ಜೋಡಿಯಾಗಿ ದೀಪಾ ಸನ್ನಿಧಿ ನಟಿಸಿದ್ದರು. ಬಾಕ್ಸಾಫೀಸ್‌ನಲ್ಲಿ ಸಿನಿಮಾ ಸದ್ದು ಮಾಡದಿದ್ದರೂ ಪ್ರೇಕ್ಷಕರ ಮನಗೆದ್ದಿತ್ತು. ಮತ್ತೆ ತೆರೆಮೇಲೆ 'ಪರಮಾತ್ಮ'ನನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.


Click it and Unblock the Notifications











