"ನಾನು ಇಂಡಸ್ಟ್ರಿಯಿಂದ ದೂರವೇ ಉಳಿಯಬೇಕಾಯ್ತು" ಎಂದ ನಟಿ ಸಂಜನಾ ಗಲ್ರಾನಿ; ಯಾಕೆ ಗೊತ್ತಾ?

By ಅನಿತಾ ಬನಾರಿ

ತಪ್ಪು ಆರೋಪಗಳು ನನ್ನ ಕರಿಯರನ್ನೇ ಹಾಳು ಮಾಡಿತು. ಡ್ರಗ್ಸ್ ಪ್ರಕರಣದಲ್ಲಿ ಬಂಧಿಯಾಗಿ ಕೆಲವು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿ ಇರುವಂತಹ ಆ ಕರಾಳ ದಿನಗಳು ನನ್ನ ಇಡೀ ಜೀವನವನ್ನೇ ತಲೆ ಕೆಳಗೆ ಮಾಡಿದೆ. ಹೇಳಲು ಸುಲಭ ಆದರೆ, ನಿಜವಾಗಿಯೂ ಪಾಸಿಟಿವ್ ಆಗಿ ಜೀವನವನ್ನು ನೋಡುವುದು ಅಷ್ಟು ಸುಲಭದ ಮಾತಲ್ಲ ಎಂದು ಇತ್ತೀಚೆಗೆ ನಟಿ ಸಂಜನಾ ಗಲ್ರಾನಿ ಹೇಳಿಕೊಂಡಿದ್ದರು.

"ಡ್ರಗ್ಸ್ ಪ್ರಕರಣದಲ್ಲಿ ನಾನು ಬಂಧಿಯಾದಾಗ ಸೋಶಿಯಲ್ ಮೀಡಿಯಾ ಸೇರಿದಂತೆ ಎಲ್ಲಾ ರೀತಿಯ ಮಾಧ್ಯಮವೂ ನನ್ನನ್ನು ಆರೋಪಿ ಅಪರಾಧಿ ಎಂಬಂತೆ ಪ್ರತಿಬಿಂಬಿಸಿತು. ಆದರೆ, ಅಲ್ಲಿ ಯಾವುದೇ ರೀತಿಯ ಕುರುಹುಗಳಿಲ್ಲದೆ ಇಡೀ ಕೇಸ್ ಬಿದ್ದು ಹೋಯಿತು. ಅದನ್ನು ಯಾವ ಮಾಧ್ಯಮದವರು ಹೈಲೈಟ್ ಮಾಡಲೇ ಇಲ್ಲ. ಬದಲಾಗಿ ನನ್ನನ್ನು ಆರೋಪಿಯಾಗಿ ಮಾತ್ರ ಚಿತ್ರಿಸುವ ಪ್ರಯತ್ನ ನಡೆಯಿತು. ಈ ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲಾ ರೀತಿಯ ಟೆಸ್ಟ್‌ಗಳು ನೆಗೆಟಿವ್ ಆಗಿಯೇ ಬಂದಿತ್ತು. ತನಿಖೆಯಲ್ಲಿ ಕಳೆದ ಹತ್ತು ವರ್ಷಗಳು ನನ್ನ ಎಲ್ಲಾ ರೀತಿಯ ಮೊಬೈಲ್ ಡೇಟಾ ಹಾಗೂ ಇತರೆ ಮಾಹಿತಿಯನ್ನು ಕಲೆ ಹಾಕಿದ್ದರು. ಎಲ್ಲೂ ನಾನು ಅಪರಾಧಿಯಾಗಿ ಕಂಡು ಬಂದಿಲ್ಲ" ಎಂದು ತಮ್ಮ ಡ್ರಗ್ ಪ್ರಕರಣದ ಕುರಿತು ಸಂಪೂರ್ಣ ಮಾಹಿತಿಯನ್ನು ನಟಿ ಸಂಜನಾ ಗಲ್ರಾನಿ ಹಂಚಿಕೊಂಡಿದ್ದರು.

Actress Sanjana Galrani said that I had to stay away from the industry do you know why

"ಆದರೆ ಈ ಪ್ರಕರಣದಿಂದ ನಾನು ಒಮ್ಮೆ ಟಿವಿಯಲ್ಲಿ ಕಾಣಿಸಿಕೊಂಡಾಗಿನಿಂದ ಹಲವಾರು ಘಟನೆಗಳು ನನ್ನನ್ನು ಅವಮಾನಕ್ಕೀಡು ಮಾಡಿದೆ. ಒಂದಲ್ಲ ಒಂದು ರೀತಿಯಲ್ಲಿ ನಾನು ಜನರಿಂದ ಅಪಹಾಸ್ಯಕ್ಕೆ ಒಳಗಾಗಿದ್ದೇನೆ. ನನ್ನ ಮೇಲೆ ಯಾವುದೇ ರೀತಿಯ ಆರೋಪಗಳು ಸಾಬೀತು ಆಗದಿದ್ದರೂ, ಜನರು ನನ್ನನ್ನು ಕೆಟ್ಟ ರೀತಿಯಲ್ಲಿ ನೋಡಿದ್ದಾರೆ. ಅಂದಿನಿಂದ ಇಂದಿನವರೆಗೂ ಜೀವನ ಬಹಳ ಕಷ್ಟದಿಂದ ಸಾಗಿದೆ. ಎಷ್ಟೋ ಬಾರಿ ಜೀವನವೇ ಬೇಡ ಎಂಬ ನಿರ್ಧಾರಕ್ಕೂ ಬಂದಿದ್ದೆ. ಇಂತಹ ಕೆಟ್ಟ ಸಂದರ್ಭಗಳಲ್ಲಿ ಸ್ನೇಹಿತರು ಎಂದಿಗೂ ನಮ್ಮ ಒಳ್ಳೆಯ ಕಾಲಕ್ಕೆ ಹೊರತು ಕೆಟ್ಟ ಕಾಲಕ್ಕೆ ಅಲ್ಲ ಎಂಬ ಅರಿವು ನನಗಾಗಿತ್ತು" ಎಂದು ತಮ್ಮ ಜೀವನದ ಕೆಲ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

"ಎಷ್ಟೇ ಕಾಂಟಾಕ್ಟ್‌ಗಳಿದ್ದರೂ ನನ್ನ ಕಷ್ಟ ಕಾಲದಲ್ಲಿ ಯಾವುದು ನನಗೆ ಸಹಾಯ ಮಾಡಲಿಲ್ಲ. ನನ್ನ ತಂದೆ ತಾಯಿಯವರು ಕೂಡ ಹಿರಿಯ ನಾಗರಿಕರು. ಅವರನ್ನು ನೋಡಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ. ನಾನು ನಿರಪರಾಧಿ ಎಂದು ಸಾಬೀತಾದರೂ ಸಹ ಇಂದಿಗೂ ನನಗೆ ಸರಿಯಾದ ಮಾನ್ಯತೆ ಸಿಕ್ಕಿಲ್ಲ. ಇಂದಿಗೂ ನಾನು ಇಂಡಸ್ಟ್ರಿ ಹಾಗೂ ನನ್ನ ನಟನಾ ಕೆರಿಯರ್‌ನಿಂದ ದೂರವೇ ಉಳಿಯುವಂತಾಗಿದೆ. ಈ ಬಗ್ಗೆ ನನಗೆ ಬಹಳ ಬೇಸರವಿದೆ. ನನ್ನ ಪತಿಯಾದ ಡಾಕ್ಟರ್ ಅಜೀಶ್ ಪಾಷಾ ಸದಾ ನನ್ನೊಂದಿಗೆ ಸಹಕಾರ ನೀಡಿ ಗಟ್ಟಿಯಾಗಿ ನಿಂತರು. ಇತರ ಕೆಲವೇ ಕೆಲವು ಹಿತೈಷಿಗಳು ನನ್ನ ಬೆನ್ನೆಲುಬಾಗಿ ನಿಂತಿದ್ದರಿಂದ ಇಂದು ನಾನು ಈ ಎಲ್ಲ ಕಹಿ ಘಟನೆಗಳಿಂದ ಚೇತರಿಸಿಕೊಳ್ಳಲು ಸಾಧ್ಯವಾಗಿದೆ" ಎಂದು ನಟಿ ಸಂಜನಾ ಗಲ್ರಾನಿ ಹೇಳಿಕೊಂಡಿದ್ದಾರೆ.

"ಇತ್ತೀಚೆಗೆ ನನಗೆ ಒಳ್ಳೊಳ್ಳೆ ಕಾರ್ಯಕ್ರಮಗಳಿಂದ ಆಫರ್ ಬರುತ್ತಿರುವುದರ ಬಗ್ಗೆ ಬಹಳ ಸಂತೋಷವಿದೆ. ಬಹಳ ಸಪೋರ್ಟಿವ್ ಅತ್ತೆ, ಮಾವ ಹಾಗೂ ನನ್ನ ಪುಟಾಣಿ ಕಂದಮ್ಮನಿಂದ ಎಲ್ಲಾ ಕೆಲಸಗಳು ಬಹಳ ಸುಲಭವಾಗಿ ಸಾಗಿದೆ. ನನ್ನ ಮಗ ನನಗೆ ಸರಿಯಾದ ಸಮಯದಲ್ಲಿ ಹುಟ್ಟಿದ್ದರಿಂದ ಎಲ್ಲಾ ಸಹಾಯವಾಯಿತು. ಆದರೂ ಎಷ್ಟೋ ಬಾರಿ ಗೂಗಲ್ ಹಾಗೂ ಇತರೆ ಸರ್ಚ್ ಇಂಜಿನ್ನಲ್ಲಿ ನನ್ನನ್ನು ಡ್ರಗ್ ವಿಚಾರವಾಗಿ ತೋರಿಸುವುದು ನನಗೆ ಬೇಸರವಿದೆ. ಲಾಕ್‌ಡೌನ್ ಸಮಯದಲ್ಲಿ ನಾವು 3 ಲಕ್ಷಕ್ಕೂ ಅಧಿಕ ಅನಾಥರಿಗೆ ಅನ್ನದಾನ ಮಾಡಿದ್ದೇವೆ. ಈ ರೀತಿಯ ಸೇವಾ ಕಾರ್ಯಗಳಲ್ಲಿ ನನ್ನನ್ನು ನಾನು ತೊಡಗಿಸಿಕೊಂಡಿದ್ದು ನನಗೆ ನನ್ನೆಲ್ಲ ಕಷ್ಟಗಳಿಂದ ಹೊರಬರಲು ಬಹಳ ಸಹಾಯವಾಯಿತು" ಎಂದಿದ್ದಾರೆ.

Actress Sanjana Galrani said that I had to stay away from the industry do you know why

"ಇಡೀ ಡ್ರಗ್ ಪ್ರಕರಣದಲ್ಲಿ ನಾನೊಬ್ಬ ಬಲಿಪಶು ಆದೆ. ನನ್ನ ಲಾಯರ್ ಆದ ಹಂಶದ್‌ಪಾಷಾ ಅವರ ಸಹಾಯಕ್ಕೆ ನಾನು ಸದಾ ಋಣಿ. ಇದೀಗ ನನಗೆ ತೆಲುಗು ಓಟಿಟಿ ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಒಂದಷ್ಟು ಒಳ್ಳೊಳ್ಳೆಯ ಆಫರ್‌ಗಳು ಬರುತ್ತಿವೆ. ಮತ್ತೆ ನಟನೆಯಲ್ಲಿ ಸಕ್ರಿಯವಾಗಿ ನನ್ನನ್ನು ನಾನು ತೊಡಗಿಸಿಕೊಳ್ಳುವ ಪ್ರಯತ್ನದಲ್ಲಿದ್ದೇನೆ" ಎಂದಿದ್ದಾರೆ ನಟಿ ಸಂಜನ ಗಲ್ರಾನಿ.

ಅಂದಹಾಗೆ ಇತ್ತೀಚೆಗೆ ಹೊರ ಬಿದ್ದಿರುವ ಮಾಹಿತಿ ಪ್ರಕಾರ ನಟಿ ಸಂಜನಾ ಗಲ್ ರಾಣಿ ಅವರು ಡ್ರಗ್ ಪ್ರಕರಣದಲ್ಲಿ ನಿರಪರಾಧಿ ಎಂದು ಸಾಬೀತಾಗಿದೆ. ಸರಿಯಾದ ಸಾಕ್ಷಿ ಹಾಗೂ ಪುರಾವೆಗಳು ಸಿಗದ ಕಾರಣ ಈಕೆಯನ್ನು ನ್ಯಾಯಾಲಯ ನಿರ್ದೋಷಿ ಎಂದು ಪ್ರಕಟಿಸಿದೆ. ಸಂಜನಾ ಗಲ್ರಾನಿ ಅವರ ಕೂದಲು ಸೇರಿದಂತೆ ಇತರೆ ಹಲವಾರು ಮಾಹಿತಿಗಳನ್ನು ಸ್ಯಾಂಪಲ್ ಆಗಿ ಪಡೆದ ನ್ಯಾಯಾಲಯ ಹೀಗೆ ನಿರ್ದೋಷಿ ಎಂಬ ತೀರ್ಪನ್ನು ನೀಡಿದೆ.

More from Filmibeat

English summary
Do you know what Sanjana said when she talked about the drug case:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X