ಮದುವೆ ಬಳಿಕ ಸೋನಲ್ ದಿಢೀರ್ ದಪ್ಪ ಆಗಿದ್ಯಾಕೆ? ಆಕೆ ಕೊಟ್ಟ ಕಾರಣ ಏನು?

By ಫಿಲ್ಮಿಬೀಟ್ ಡೆಸ್ಕ್

ಕನ್ನಡ ನಟಿ ಸೋನಲ್ ಮಂಥೆರೋ ಹಾಗೂ ನಿರ್ದೇಶಕ ತರುಣ್ ಸುಧೀರ್ ಪರಸ್ಪರ ಪ್ರೀತಿಸಿ ಮದುವೆ ಆಗಿರುವುದು ಗೊತ್ತೇಯಿದೆ. ಆಗಸ್ಟ್ 9ರಂದು ಬೆಂಗಳೂರಿನಲ್ಲೇ ಜೋಡಿಯ ಮದುವೆ ಅದ್ಧೂರಿಯಾಗಿ ನೆರವೇರಿತ್ತು. ಮದುವೆ ಬಳಿಕ ಜೋಡಿ ಹೋದಲ್ಲಿ ಬಂದಲ್ಲಿ ಮಾಧ್ಯಮಗಳ ಕಣ್ಣಿಗೆ ಬಿದ್ದರು. ಇತ್ತೀಚೆಗೆ ಹನಿಮೂನ್‌ಗಾಗಿ ಮಾಲ್ಡೀವ್ಸ್‌ಗೆ ಹೋಗಿ ಬಂದಿದ್ದಾರೆ.

ತರುಣ್ ಸುಧೀರ್ ನಿರ್ದೇಶನದ 'ರಾಬರ್ಟ್' ಚಿತ್ರದಲ್ಲಿ ಸೋನಲ್ ನಟಿಸಿದ್ದರು. ಚಿತ್ರದಲ್ಲಿ ವಿನೋದ್ ಪ್ರಭಾಕರ್ ಜೋಡಿ ತನು ಎನ್ನುವ ಸಣ್ಣ ಪಾತ್ರದಲ್ಲಿ ಗಮನ ಸೆಳೆದರು. ಅದೇ ಸಮಯದಲ್ಲಿ ಇಬ್ಬರ ಪರಿಚಯವಾಗಿತ್ತು. ಚಿತ್ರೀಕರಣದ ವೇಳೆ ತರುಣ್ ಹಾಗೂ ಸೋನಲ್ ಅವರನ್ನು ದರ್ಶನ್ ತಮಾಷೆಯಾಗಿ ರೇಗಿಸುತ್ತಿದ್ದರಂತೆ. ಆ ಸಿನಿಮಾ ಮುಗಿದು ಬಹಳ ದಿನಗಳ ಬಳಿಕ ಮತ್ತೆ ಇಬ್ಬರೂ ಮಾತನಾಡಲು ಆರಂಭಿಸಿ ಬಳಿಕ ಅದು ಪ್ರೀತಿಗೆ ತಿರುಗಿತ್ತು.

actress Sonal Monteiro Reveals why Gaining Weight after her wedding

ಬೆಂಗಳೂರಿನ ಕೆಂಗೇರಿ ಬಳಿಯ ಪೂರ್ಣಿಮಾ ಪ್ಯಾಲೇಸ್ ಕಲ್ಯಾಣಮಂಟಪದಲ್ಲಿ ಆಗಸ್ಟ್ 10, 11ರಂದು ಸೋನಲ್ ಮೊಂಥೆರೋ, ತರುಣ್ ಸುಧೀರ್ ಮದುವೆ ನಡೆದಿತ್ತು. ಹಿಂದೂ ಹಾಗೂ ಕ್ರಿಶ್ಚಿಯನ್ ಎರಡೂ ಸಂಪ್ರದಾಯದಂತೆ ಮದುವೆ ನಡೆದಿತ್ತು. ಇನ್ನು ಚಿತ್ರಮಂದಿರದಲ್ಲಿ ಸ್ಪೆಷಲ್ ಫೋಟೊಶೂಟ್ ಮಾಡಿಸಿ ತರುಣ್- ಸೋನಲ್ ತಮ್ಮ ಮದುವೆ ವಿಚಾರವನ್ನು ಹಂಚಿಕೊಂಡಿದ್ದರು. ಬಳಿಕ ಇಬ್ಬರೂ ಸುದ್ದಿಗೋಷ್ಠಿ ನಡೆಸಿ ತಮ್ಮ ಪ್ರೀತಿ, ಮದುವೆ ವಿಚಾರ ಬಹಿರಂಗಪಡಿಸಿದ್ದರು.

ಎರಡು ದಿನ ಅದ್ಧೂರಿಯಾಗಿ ನಡೆದ ತರುಣ್- ಸೋನಲ್ ಮದುವೆಗೆ ಚಿತ್ರರಂಗದ ತಾರೆಯರು, ಆಪ್ತರು ಭಾಗಿ ಆಗಿದ್ದರು. ಮದುವೆ ಬಳಿಕ ಜೋಡಿ ಸಾಕಷ್ಟು ಸಂದರ್ಶನಗಳಲ್ಲಿ ಭಾಗಿ ಆಗಿತ್ತು. ತಮ್ಮಿಬ್ಬರ ಪ್ರೀತಿ ಬಗ್ಗೆ ಸಾಕಷ್ಟು ಸಂಗತಿಗಳನ್ನು ಬಿಚ್ಚಿಟ್ಟಿದ್ದರು. ಮದುವೆ ಬಳಿಕ ಸೋನಲ್ ದಪ್ಪ ಆಗಿರುವುದು ಗೊತ್ತಾಗುತ್ತಿದೆ. ಇದೇ ವಿಚಾರದ ಬಗ್ಗೆ ಕೆಲ ದಿನಗಳ ಹಿಂದೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಸೋನಲ್ ಉತ್ತರ ನೀಡಿದ್ದರು. ಆ ವೀಡಿಯೋ ವೈರಲ್ ಆಗುತ್ತಲೇ ಇದೆ.

actress Sonal Monteiro Reveals why Gaining Weight after her wedding

ಸಾಮಾನ್ಯವಾಗಿ ಮದುವೆಯಾದ ಹೊಸತರಲ್ಲಿ ನವ ವಧು- ವರರ ದೇಹದ ತೂಕ ಹೆಚ್ಚಾಗುತ್ತದೆ. ಅದಕ್ಕೆ ನಾನಾ ಕಾರಣಗಳಿರುತ್ತದೆ. ಮುಖ್ಯವಾಗಿ ಮದುವೆ ಜಂಜಾಟದಲ್ಲಿ ಓಡಾಡುತ್ತಾ ಬಹಳ ಖುಷಿಯಾಗಿ ಇರುತ್ತಾರೆ. ಡಯೆಟ್ ಮರೆತು ಊಟ ಸೇವಿಸುತ್ತಾರೆ. ಆ ಸಮಯದಲ್ಲಿ ಭರ್ಜರಿ ಊಟೋಪಚಾರ ನಡೆಯುವುದರಿಂದ ಸಹಜವಾಗಿಯೇ ತಿಂದು ದಪ್ಪ ಆಗುತ್ತಾರೆ. ಎಷ್ಟು ಕೆಜಿ ದಪ್ಪ ಆಗಿದ್ದೀರಾ ಈಗ ಎನ್ನುವ ಪ್ರಶ್ನೆಯನ್ನು ಸೋನಲ್ ಮುಂದಿಟ್ಟಾಗ ಆಕೆ ಉತ್ತರಿಸಿದ್ದು ಹೀಗೆ.

ಮದುವೆ ಸಮಯದಲ್ಲಿ ಯಾವುದೇ ಡಯೆಟ್ ಮಾಡಲಿಲ್ಲ. ಹಾಗಾಗಿ ಕೊಂಚ ದಪ್ಪ ಆಗಿದ್ದೀನಿ. ಮತ್ತೊಂದು ವಿಚಾರ ಏನು ಅಂದ್ರೆ, ಹಸ್ಬೆಂಡ್ ಖುಷಿಯಾಗಿ ಇಟ್ಟಾಗ ದಪ್ಪ ಆಗುತ್ತಾರಂತೆ. ಅದಕ್ಕೆ ನಾನು ದಪ್ಪ ಆಗಿರೋದು, ನಾನು ಬಹಳ ಖುಷಿಯಾಗಿದ್ದೀನಿ ಎಂದು ಸೋನಲ್ ಹೇಳಿ ನಕ್ಕಿರುವ ವೀಡಿಯೋ ಹರಿದಾಡುತ್ತಿದೆ.

'ಚೌಕ' ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದ ತರುಣ್ ಸುಧೀರ್ ಬಳಿಕ 'ರಾಬರ್ಟ್' ಹಾಗೂ 'ಕಾಟೇರ' ಚಿತ್ರಗಳ ಮೂಲಕ ಹ್ಯಾಟ್ರಿಕ್ ಬಾರಿಸಿದ್ದಾರೆ. ದರ್ಶನ್ ಜೊತೆ 'ಸಿಂಧೂರ ಲಕ್ಷ್ಮಣ' ಸಿನಿಮಾ ಮಾಡುವ ತಯಾರಿಯಲ್ಲಿದ್ದಾರೆ. ಅದಕ್ಕೂ ಮುನ್ನ ಬೇರೆ ಸಿನಿಮಾ ಮಾಡುವ ನಿರೀಕ್ಷೆಯಿದೆ. ತರುಣ್ ನಟಿಸಿದ್ದ 'ನವಗ್ರಹ' ಸಿನಿಮಾ ನವೆಂಬರ್ 8ಕ್ಕೆ ರೀ-ರಿಲೀಸ್ ಆಗಲಿದೆ. ಇನ್ನು ತುಳು ಚಿತ್ರಗಳ ಮೂಲಕ ಚಿತ್ರರಂಗಕ್ಕೆ ಬಂದ ಸೋನಲ್ ಬಳಿಕ ಸ್ಯಾಂಡಲ್‌ವುಡ್ ಪ್ರವೇಶಿಸಿದರು.

'ಪಂಚತಂತ್ರ', 'ಡೆಮೋಪೀಸ್', 'ಗರಡಿ', 'ಬನಾರಸ್' ಚಿತ್ರಗಳಲ್ಲಿ ಸೋನಲ್ ಬಣ್ಣ ಹಚ್ಚಿದ್ದಾರೆ. ಆಕೆ ನಟಿಸಿರುವ 'ಬುದ್ಧಿವಂತ'-2 ಸಿನಿಮಾ ತೆರೆಗೆ ಬರಬೇಕಿದೆ. 'ಮಾರ್ಗರೇಟ್ ಲವರ್ ಆಫ್ ರಾಮಾಚಾರಿ' ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಸದ್ಯ ನಟನೆಯಿಂದ ಕೊಂಚ ಬಿಡುವು ಮಾಡಿಕೊಂಡು ಫ್ಯಾಮಿಲಿ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ಮತ್ತೆ ಯಾವಾಗ ಹೊಸ ಸಿನಿಮಾ ಒಪ್ಪಿಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.

More from Filmibeat

English summary
Sonal Monteiro talks about Weight gain after wedding with tharun Sudhir, video goes viral;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X