ತ್ರಿಶಾ ನಟಿಸಿದ ಏಕೈಕ ಬಾಲಿವುಡ್ ಸಿನಿಮಾ ಫ್ಲಾಪ್; ಆದರೂ ಸೌತ್‌ನಲ್ಲಿ ಈಕೆ ಬಹಳ ಫೇಮಸ್ಸು
ಭಾರತದಲ್ಲಿ ಸಿನಿಮಾ ಎಂದಾಕ್ಷಣ ಸ್ಯಾಂಡಲ್ ವುಡ್, ಮಾಲಿವುಡ್, ಟಾಲಿವುಡ್, ಕಾಲಿವುಡ್ ಇತ್ಯಾದಿ ಪ್ರತಿ ರಾಜ್ಯಕ್ಕೂ ಒಂದೊಂದು ಸಿನಿಮಾ ಇಂಡಸ್ಟ್ರಿ ಹೆಸರುಗಳಿವೆ. ಎಲ್ಲ ರಾಜ್ಯಗಳಲ್ಲಿ ಫೇಮಸ್ ಆದ ನಟ ನಟಿಯರು ಬಾಲಿವುಡ್‌ನಲ್ಲಿ ನಟಿಸಿ ಪಾಪ್ಯುಲರ್ ಆಗಬೇಕು ಅಂತ ಕೊನೆಗೊಂದು ಗುರಿ ಇಟ್ಟುಕೊಳ್ಳುತ್ತಾರೆ. ಅಂತದ್ದರಲ್ಲಿ ಬಾಲಿವುಡ್‌ನಲ್ಲಿ ನಟಿಸಿ ಸೋತು ಮತ್ತೆ ಕಾಲಿವುಡ್‌ಗೆ ತೆರಳಿರುವ ನಟಿ ತ್ರಿಶಾ.
ಹೌದು, ಹೀಗೆ 2010 ರಲ್ಲಿ ಬಾಲಿವುಡ್‌ನಲ್ಲಿ ತ್ರಿಶಾ 'ಕಟ್ಟಾ ಮೀಟಾ' ಎಂಬ ಚಿತ್ರದಲ್ಲಿ ನಟಿಸಿದ್ದರು. ದುರಾದೃಷ್ಟ ಆ ಸಿನಿಮಾ ಅಟ್ಟರ್ ಫ್ಲಾಪ್ ಆಯಿತು. ನಂತರ ಮತ್ತೆ ಕಾಲಿವುಡ್‌ಗೆ ಹಿಂತಿರುಗಿದರು. 1999 ರಲ್ಲಿ ಸಣ್ಣ ಪೋಷಕ ಪಾತ್ರ ಒಂದರಲ್ಲಿ ಕಾಣಿಸಿಕೊಳ್ಳುವ ಮೂಲಕ ನಟನ ಕ್ಷೇತ್ರಕ್ಕೆ ಕಾಲಿಟ್ಟ ನಟಿ ತ್ರಿಷಾ ಕೃಷ್ಣನ್ ಅವರು ನಂತರ ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಯಾಗಿ ಮಿಂಚಿದ್ದಾರೆ.

ಹಾಗಾಗಿಯೇ 2010ರಲ್ಲಿ ನಿರ್ದೇಶಕ ಪ್ರಿಯದರ್ಶನ್ ಅವರ ನಿರ್ದೇಶನದಲ್ಲಿ ಮೂಡಿ ಬಂದ ಅಕ್ಷಯ್ ಕುಮಾರ್ ನಾಯಕ ನಟನಾಗಿ ನಟಿಸಿದ 'ಕಟ್ಟಾ ಮೀಟಾ' ಎಂಬ ಸಿನಿಮಾದಲ್ಲಿ ನಾಯಕ ನಟಿಯಾಗಿ ತ್ರಿಶಾ ಕೃಷ್ಣನ್ ಬಣ್ಣ ಹಚ್ಚಿದ್ದರು. ಇದು ಅವರ ಮೊದಲ ಬಾಲಿವುಡ್ ಸಿನಿಮಾ. ಸದ್ಯಕ್ಕೆ ಇದೇ ಅವರ ಕೊನೆಯ ಬಾಲಿವುಡ್ ಸಿನಿಮಾ ಕೂಡ ಆಗಿದೆ.
ಪ್ರೇಕ್ಷಕರ ಈ ಸಿನಿಮಾ ಮೇಲೆ ಬಹಳ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಸಿನಿಮಾ ಫ್ಲಾಪ್ ಆಗಿ ನಿರಾಸೆ ಮೂಡಿಸಿದ್ದರು. ಈ ಚಿತ್ರದಿಂದ ನಿರ್ಮಾಪಕರಿಗೆ ಭಾರಿ ನಷ್ಟ ಆಗಿತ್ತು. ಜೊತೆಗೆ ಇದು ನಟಿ ತ್ರಿಶಾ ಕೃಷ್ಣನ್ ಅವರ ಆತ್ಮವಿಶ್ವಾಸವನ್ನು ಕಮ್ಮಿ ಮಾಡಿತು ಎನ್ನಬಹುದು. ಹೀಗಾಗಿ ಅವರು ಈ ಸಿನಿಮಾದ ನಂತರ ಬಾಲಿವುಡ್‌ನ ಮತ್ಯಾವ ಚಿತ್ರದಲ್ಲೂ ಕಾಣಿಸಿಕೊಳ್ಳಲಿಲ್ಲ. ತಮ್ಮ ತಾಯಿ ನಾಡಾದ ತಮಿಳುನಾಡಿಗೆ ಮರಳಿ ಕಾಲಿವುಡ್‌ನಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡರು.

ತಮಿಳು ಚಿತ್ರರಂಗದಲ್ಲಿ ಸದ್ಯ ತ್ರಿಶಾ ಟಾಪ್ ನಟಿ. ಒಂದು ಸಿನಿಮಾಗೆ ಕನಿಷ್ಠ 10 ಕೋಟಿ ರೂಪಾಯಿ ಸಂಭಾವನೆಯನ್ನು ಪಡೆಯುತ್ತಾರೆ ಎನ್ನುವ ಮಾಹಿತಿ ಇದೆ. ಇತ್ತೀಚೆಗಷ್ಟೇ ದಳಪತಿ ವಿಜಯ್ ನಟಿಸಿದ 'ಲಿಯೋ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಲೋಕೇಶ್ ಕನಕರಾಜ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಆದರೆ, ಈ ಸಿನಿಮಾ ದೊಡ್ಡ ಮಟ್ಟಕ್ಕೆ ಸದ್ದು ಮಾಡಲಿಲ್ಲ.
ಪ್ರಸ್ತುತ 'ವಿದಾ ಮುಯಾರ್ಚಿ', 'ರಾಮ್', 'ಥಗ್ ಲೈಫ್', 'ವಿಶ್ವಂಭರ' ನಂತಹ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದೆಷ್ಟೋ ಬಾರಿ ನಾವು ದೊಡ್ಡ ಆಸೆ ಕನಸುಗಳನ್ನು ಇಟ್ಟುಕೊಳ್ಳುತ್ತೇವೆ, ಅದು ಈಡೇರದೇ ಇದ್ದಾಗ ಸಹಜವಾಗಿ ಆತ್ಮವಿಶ್ವಾಸ ಕುಂದುತ್ತದೆ. ಆದರೆ, ಮತ್ತೆ ನಮ್ಮ ಗುರಿಯತ್ತ ನಡೆಯುವ ಮನೋಸ್ಥೈರ್ಯವಿದ್ದರೆ ಯಶಸ್ಸು ಖಂಡಿತಾ ಸಾಧ್ಯ ಎಂಬುದಕ್ಕೆ ನಟಿ ತ್ರಿಶಾ ಕೃಷ್ಣನ್ ವೃತ್ತಿ ಬದುಕೇ ಸಾಕ್ಷಿ.


Click it and Unblock the Notifications











