twitter
    For Quick Alerts
    ALLOW NOTIFICATIONS  
    For Daily Alerts

    ಕೊರೊನಾ ನಂತರ ಅತಿ ಹೆಚ್ಚು ಹಣ ಗಳಿಸಿದ ಚಿತ್ರರಂಗ ಯಾವುದು?

    |

    ಕೊರೊನಾ ವೈರಸ್‌ನಿಂದ ಭಾರತೀಯ ಚಿತ್ರರಂಗ ನಷ್ಟ ಅನುಭವಿಸಿದೆ. ದಕ್ಷಿಣ ಚಿತ್ರರಂಗದ ಸೇರಿದಂತೆ ಎಲ್ಲ ಸಿನಿಮಾ ಕ್ಷೇತ್ರವೂ ಸಾವಿರಾರು ಕೋಟಿ ಕಳೆದುಕೊಂಡಿದೆ. ಶೂಟಿಂಗ್ ಇಲ್ಲ, ಚಿತ್ರಮಂದಿರಲ್ಲಿ ಶೋ ಇಲ್ಲ, ಇನ್ನಿತರ ಯಾವುದೇ ಮೂಲದಿಂದಲೂ ಆದಾಯವಿಲ್ಲದ ಸಿನಿ ಜಗತ್ತು ಒಂದು ವರ್ಷ ಸಂಪೂರ್ಣವಾಗಿ ಕೈಕಟ್ಟಿ ಕೂರುವಂತಾಗಿತ್ತು.

    ಈ ನಡುವೆ ಒಟಿಟಿಯಲ್ಲಿ ಕೆಲವು ಸಿನಿಮಾಗಳನ್ನು ರಿಲೀಸ್ ಆಗಿದೆ. ಹಾಕಿದ ಬಂಡವಾಳ ಬಂದರೆ ಸಾಕು ಎಂಬ ಉದ್ದೇಶದಿಂದ ಕೆಲವು ನಿರ್ಮಾಪಕರು ಒಟಿಟಿಗೆ ಚಿತ್ರಗಳು ಮಾರಾಟ ಮಾಡಿದರು. ಇನ್ನು ಕೆಲವು ನಿರ್ಮಾಪಕರು ಚಿತ್ರಮಂದಿರಕ್ಕೆ ಅವಕಾಶ ಸಿಕ್ಕ ಮೇಲೆ ಬಿಡುಗಡೆ ಮಾಡುತ್ತೇವೆ ಎಂದು ಕಾದು ನಂತರ ಬಂದರು.

    ವಿಜಯ್ 'ಮಾಸ್ಟರ್' ಚಿತ್ರಕ್ಕೆ ಅಮೇಜಾನ್ ಪ್ರೈಮ್ ನೀಡಿದ ಹಣವೆಷ್ಟು? ವಿಜಯ್ 'ಮಾಸ್ಟರ್' ಚಿತ್ರಕ್ಕೆ ಅಮೇಜಾನ್ ಪ್ರೈಮ್ ನೀಡಿದ ಹಣವೆಷ್ಟು?

    ನಿಧಾನವಾಗಿ ಸಹಜಸ್ಥಿತಿಯತ್ತ ಹೆಜ್ಜೆಯಿಡುತ್ತಿರುವ ಚಿತ್ರರಂಗ ಸುಧಾರಿಸಿಕೊಳ್ಳುತ್ತಿದೆ. ದೊಡ್ಡ ದೊಡ್ಡ ಸಿನಿಮಾಗಳು ತೆರೆಗೆ ಬರ್ತಿದೆ. ಮೊದಲಿನಂತೆ ಕಲೆಕ್ಷನ್ ಕಾಣುತ್ತಿದೆ. ಹಾಗಾದ್ರೆ, ಕೊರೊನಾ ನಂತರ ಯಾವ ಉದ್ಯಮ ಹೆಚ್ಚು ಗಣ ಗಳಿಸಿಬಹುದು? ಮುಂದೆ ಓದಿ...

    ಅಮೇಜಾನ್‌ನಲ್ಲಿ 10 ಕೋಟಿ ವೀಕ್ಷಣೆ ಕಂಡ 'ಸೂರರೈ ಪೊಟ್ರು': ಲಾಭ ಎಷ್ಟು?ಅಮೇಜಾನ್‌ನಲ್ಲಿ 10 ಕೋಟಿ ವೀಕ್ಷಣೆ ಕಂಡ 'ಸೂರರೈ ಪೊಟ್ರು': ಲಾಭ ಎಷ್ಟು?

    ಸೂರ್ಯ 'ಸೂರರೈ ಪೊಟ್ರು'

    ಸೂರ್ಯ 'ಸೂರರೈ ಪೊಟ್ರು'

    ಚಿತ್ರಮಂದಿರಗಳಿಗೆ ಅವಕಾಶ ಸಿಗುವವರೆಗೂ ಕಾಯದ 'ಸೂರರೈ ಪೊಟ್ರು' ಸಿನಿಮಾ ಅಮೇಜಾನ್ ಪ್ರೈಮ್‌ನಲ್ಲಿ ತೆರೆಕಂಡಿತ್ತು. 45 ಕೋಟಿ ನೀಡಿ ಅಮೇಜಾನ್ ಖರೀದಿಸಿತ್ತು ಹಾಗೂ 15 ಕೋಟಿಗೆ ಸ್ಯಾಟ್‌ಲೈಟ್ ಹಕ್ಕು ಸೇಲ್ ಆಗಿತ್ತು. ಸಿನಿಮಾಗೆ ಒಳ್ಳೆಯ ರೆಸ್‌ಪಾನ್ಸ್ ಸಿಕ್ಕಿತ್ತು. ಆದರೆ, ನಿರ್ಮಾಪಕ ಹಾಕಿದ ಬಂಡವಾಳವನ್ನು ಸೇಫ್ ಮಾಡಿಕೊಂಡರು.

    200 ಕೋಟಿಯ ಮಾಸ್ಟರ್

    200 ಕೋಟಿಯ ಮಾಸ್ಟರ್

    ತಮಿಳು ನಟ ವಿಜಯ್ ಅಭಿನಯಿಸಿದ್ದ 'ಮಾಸ್ಟರ್' ಸಿನಿಮಾ ಚಿತ್ರಮಂದಿರಲ್ಲಿ ರಿಲೀಸ್ ಆಗಿತ್ತು. ಶೇಕಡಾ 50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ಇದ್ದ ಸಮಯದಲ್ಲಿ ತೆರೆಕಂಡರೂ ಭರ್ಜರಿ ಬಿಸಿನೆಸ್ ಮಾಡಿದೆ. ಬಾಕ್ಸ್ ಆಫೀಸ್‌ನಲ್ಲಿ ಮಾಸ್ಟರ್ ಸಿನಿಮಾ 300 ಕೋಟಿ ಬಾಚಿಕೊಂಡಿತ್ತು. ಜೊತೆಗೆ 36 ಕೋಟಿ ರೂಪಾಯಿಗೆ ಅಮೇಜಾನ್ ಪ್ರೈಂ ಖರೀದಿ ಮಾಡಿತ್ತು.

    ಟಾಲಿವುಡ್ ಇಂಡಸ್ಟ್ರಿ ಕಥೆ ಏನು?

    ಟಾಲಿವುಡ್ ಇಂಡಸ್ಟ್ರಿ ಕಥೆ ಏನು?

    ತೆಲುಗು ನಟ ನಾನಿ ಅಭಿನಯದ 'ವಿ' ಸಿನಿಮಾ ಅಮೇಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರಕ್ಕೆ ಅಮೇಜಾನ್ ಸಂಸ್ಥೆ 30 ಕೋಟಿ ಹಣ ನೀಡಿ ಖರೀದಿ ಮಾಡಿತ್ತು ಎಂದು ವರದಿಯಾಗಿದೆ. ರವಿತೇಜ ನಟನೆಯಲ್ಲಿ ಬಂದ 'ಕ್ರ್ಯಾಕ್' ಸಿನಿಮಾ 50 ಕೋಟಿಗೂ ಅಧಿಕ ಹಣ ಗಳಿಕೆ ಮಾಡಿದೆಯಂತೆ. 'ಉಪ್ಪೇನಾ' ಸಿನಿಮಾನೂ ಭರ್ಜರಿ ಬಿಸಿನೆಸ್ ಮಾಡಿದೆ ಎನ್ನಲಾಗಿದೆ. ವೈಷ್ಣವ್ ತೇಜ, ವಿಜಯ್ ಸೇತುಪತಿ ಅಭಿನಯದ 'ಉಪ್ಪೇನಾ' ಸಿನಿಮಾನೂ 50 ಕೋಟಿಗೂ ಹೆಚ್ಚು ಗಳಿಕೆ ಕಂಡಿದೆ.

    'ಪೊಗರು' ಅಬ್ಬರ

    'ಪೊಗರು' ಅಬ್ಬರ

    ಮಂಸೋರೆ ನಿರ್ದೇಶನದಲ್ಲಿ ತಯಾರಾಗಿದ್ದ 'ಆಕ್ಟ್ 1978' ಸಿನಿಮಾ ಕೊರೊನಾ ನಂತರ ತೆರೆಕಂಡ ಮೊದಲ ಕನ್ನಡ ಸಿನಿಮಾ. 50 ದಿನಗಳ ಕಾಲ ಯಶಸ್ವಿ ಪ್ರದರ್ಶನ ಕಂಡಿದೆ. ಅನಿಶ್ ನಟನೆಯ 'ರಾಮಾರ್ಜುನ' ಸಿನಿಮಾನೂ ಒಳ್ಳೆಯ ರೆಸ್‌ಪಾನ್ಸ್ ಪಡೆದಿಕೊಂಡಿತ್ತು. 'ಇನ್ಸ್‌ಪೆಕ್ಟರ್ ವಿಕ್ರಂ' ಚಿತ್ರಕ್ಕೂ ಭರ್ಜರಿ ಪ್ರತಿಕ್ರಿಯೆ ಸಿಕ್ತು. ಧ್ರುವ ಸರ್ಜಾ 'ಪೊಗರು' ಸಿನಿಮಾ 6 ದಿನಗಳಲ್ಲಿ 45 ಕೋಟಿ ಹಣ ಗಳಿಸಿದೆ ಎಂದು ನಿರ್ಮಾಪಕರು ಘೋಷಿಸಿದರು. ತೆಲುಗು, ತಮಿಳಿನಲ್ಲೂ ಪೊಗರು ಬಿಡುಗಡೆಯಾಗಿತ್ತು.

    ಬಾಲಿವುಡ್ ಇಂಡಸ್ಟ್ರಿ

    ಬಾಲಿವುಡ್ ಇಂಡಸ್ಟ್ರಿ

    ಬಾಲಿವುಡ್‌ನಲ್ಲಿ ಕೊರೊನಾ ನಂತರ ಯಾವುದೇ ದೊಡ್ಡ ಸಿನಿಮಾ ಅಥವಾ ಸ್ಟಾರ್ ನಟರ ಚಿತ್ರಗಳು ತೆರೆಕಂಡಿಲ್ಲ. ಈ ನಡುವೆಯೂ ಕೆಲವು ಚಿತ್ರಗಳು ಒಟಿಟಿಯಲ್ಲಿ ಬಿಡುಗಡೆಯಾದವು. ವರುಣ್ ಧವನ್ ನಟನೆಯ 'ಕೂಲಿ ನಂ 1', ಭೂಮಿ ಪಡ್ನೆಕರ್ ಅಭಿನಯದ 'ದುರ್ಗಮತಿ', ಅಕ್ಷಯ್ ಕುಮಾರ್ ಅವರ 'ಲಕ್ಷ್ಮಿ', ಸುಶಾಂತ್ ಸಿಂಗ್ ಕೊನೆಯ ಸಿನಿಮಾ 'ದಿಲ್ ಬೇಚಾರಾ' ಹಾಗೂ ಅಮಿತಾಭ್ ಬಚ್ಚನ್ ನಟಿಸಿದ್ದ 'ಗುಲಾಬೋ ಸಿತಾಬೋ' ಸಿನಿಮಾಗಳು ಕೊರೊನಾ ನಂತರ ಗಮನ ಸೆಳೆದವು. ಈ ಚಿತ್ರಗಳು ಒಟಿಟಿಯಲ್ಲಿ ತೆರೆಕಂಡ ಹಿನ್ನೆಲೆ ಗಳಿಕೆ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ನಿರೀಕ್ಷೆಯಂತೆ ಯಾವ ಚಿತ್ರವೂ ಸಕ್ಸಸ್ ಕಂಡಿಲ್ಲ.

    ದೃಶ್ಯಂ 2 ಸಿನಿಮಾ ಮೋಡಿ

    ದೃಶ್ಯಂ 2 ಸಿನಿಮಾ ಮೋಡಿ

    ಮೋಹನ್ ಲಾಲ್ ನಟನೆಯಲ್ಲಿ ಮೂಡಿಬಂದ 'ದೃಶ್ಯಂ 2 'ಸಿನಿಮಾ ಅಮೇಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿತ್ತು. 25 ಕೋಟಿ ನೀಡಿ ಅಮೇಜಾನ್ ಸಂಸ್ಥೆ 'ದೃಶ್ಯಂ 2' ಖರೀದಿ ಮಾಡಿದೆ. 15 ಕೋಟಿಗೆ ಸ್ಯಾಟ್‌ಲೈಟ್ ಹಕ್ಕು ಸೇಲ್ ಆಗಿದೆ ಎಂಬ ಮಾಹಿತಿ ಇದೆ.

    English summary
    After Coronavirus Which film Industry has collect more money in box office?.
    Wednesday, March 3, 2021, 17:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X