ಹೊಸ ವರ್ಷ 'ಕಾಂತಾರ-1', 'ಟಾಕ್ಸಿಕ್' ಟಿಕೆಟ್ ದರ ಹೆಚ್ಚಾಗುತ್ತಾ?
ಅಲ್ಲು ಅರ್ಜುನ್ ನಟನೆಯ 'ಪುಷ್ಪ'-2 ಗೆಲುವಿನ ನಾಗಾಲೋಟ ಮುಂದುವರೆದಿದೆ. ಶೀಘ್ರದಲ್ಲೇ 2000 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡುತ್ತದೆ ಎಂದು ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ. 56 ದಿನ ಪೂರೈಸುವರೆಗೆ ಸಿನಿಮಾ ಓಟಿಟಿಗೆ ಬರಲ್ಲ ಎಂದು ಚಿತ್ರತಂಡ ಹೇಳಿದೆ.
ಗಣನೀಯವಾಗಿ ಟಿಕೆಟ್ ದರ ಹೆಚ್ಚಿಸಿ 'ಪುಷ್ಪ'-2 ಕಲೆಕ್ಷನ್ ಹೆಚ್ಚುವಂತೆ ಆಗಿತ್ತು. ಸೀಕ್ವೆಲ್ ಲಾಭ ಪಡೆದ ನಿರ್ಮಾಪಕರು ಬೇಡಿಕೆ ನೋಡಿ ಟಿಕೆಟ್ ದರ ಹೆಚ್ಚಿಸಿದ್ದರು. ಪ್ರೇಕ್ಷಕರು ಕೂಡ ಹಿಂದು ಮುಂದು ನೋಡದೇ ಐದು ಹತ್ತು ಪಟ್ಟು ಹೆಚ್ಚಿಗೆ ಹಣ ತೆತ್ತು ಸಿನಿಮಾ ನೋಡಿದ್ದಾರೆ. ಮುಂದೆ ದೊಡ್ಡ ದೊಡ್ಡ ಸಿನಿಮಾಗಳು ಇದೇ ರೀತಿ ಟಿಕೆಟ್ ದರ ಹೆಚ್ಚಿಸುತ್ತಾರಾ? ಎನ್ನುವ ಆತಂಕ ಶುರುವಾಗಿದೆ.

ಯಾವುದೇ ಒಂದು ಸಿನಿಮಾ ಸಕ್ಸಸ್ ಫಾರ್ಮುಲಾವನ್ನು ಬೇರೆ ಚಿತ್ರತಂಡಗಳು ಬಳಸಿಕೊಳ್ಳುತ್ತಾರೆ. ಚಿತ್ರಕ್ಕೆ ಇರುವ ಡಿಮ್ಯಾಂಡ್ ನೋಡಿ ಅದನ್ನು ಎಕ್‌ಕ್ಯಾಶ್ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಾರೆ. 'ಪುಷ್ಪ'-2 ನಿರ್ಮಾಪಕರು ಟಿಕೆಟ್ ದರ ಹೆಚ್ಚಿಸಿ ಭರ್ಜರಿ ಲಾಭ ಮಾಡಿಕೊಂಡಿದ್ದಾರೆ. ಮುಂದೆ ಬರುವ ಪ್ಯಾನ್ ಇಂಡಿಯಾ ಸಿನಿಮಾಗಳು ಕತೆ ಏನು ಎನ್ನುವ ಚರ್ಚೆ ನಡೀತಿದೆ.
'ಪುಷ್ಪ'-2 ಟಿಕೆಟ್ 500 ರೂ., 600 ರೂ., 1000 ರೂ., 1500 ರೂ., 2000 ರೂ.ಗೆ ಮಾರಾಟವಾಗಿದೆ. ಮುಂಬೈ ಚಿತ್ರಮಂದಿರವೊಂದರಲ್ಲಿ 3000 ರೂ.ಗೂ ಟಿಕೆಟ್ ಬುಕ್ ಆಗಿತ್ತು. ಅದೇ ಕಾರಣಕ್ಕೆ ಬಹಳ ಬೇಗ ಸಿನಿಮಾ 1000 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಮುಂದೆ 'ವಾರ್-2', 'ಟಾಕ್ಸಿಕ್', 'ಕಾಂತಾರ'-1 ರೀತಿಯ ಸಿನಿಮಾಗಳು ಬರ್ತಿವೆ. ಈ ಚಿತ್ರತಂಡಗಳು ಇದೇ ತಂತ್ರ ಅನುಸರಿಸುತ್ತಾರಾ? ಎನ್ನುವ ಚರ್ಚೆ ಶುರುವಾಗಿದೆ.
ಏಪ್ರಿಲ್ 10ಕ್ಕೆ ಪ್ರಭಾಸ್ ನಟನೆಯ 'ದಿ ರಾಜಾಸಾಬ್' ಸಿನಿಮಾ ತೆರೆಗೆ ಬರಲಿದೆ. ಮುಂದೆ ಬರಲಿರುವ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾ ಇದು. ಯಶ್ ನಟನೆಯ 'ಟಾಕ್ಸಿಕ್' ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ. ಮುಂದಿನ ವರ್ಷವೇ ಸಿನಿಮಾ ತೆರೆಗಪ್ಪಳಿಸುತ್ತಾ? ಕಾದು ನೋಡಬೇಕಿದೆ. ಅಕ್ಟೋಬರ್ 2ಕ್ಕೆ ಕನ್ನಡದ 'ಕಾಂತಾರ-1' ಸಿನಿಮಾ ತೆರೆಗೆ ಬರಬೇಕಿದೆ.
'ಪುಷ್ಪ' ಚಿತ್ರಕ್ಕಿಂತ 'ಕಾಂತಾರ' ಸಿನಿಮಾ ದೊಡ್ಡದಾಗಿ ಹಿಟ್ ಆಗಿತ್ತು. ದೇಶ ವಿದೇಶಗಳಲ್ಲಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಹಾಗಾಗಿ ಪ್ರೀಕ್ವೆಲ್ ನೋಡಲು ಪರಭಾಷಿಕರು ಕಾಯುತ್ತಿದ್ದಾರೆ. ರಿಷಬ್ ಶೆಟ್ಟಿ ಈ ಬಾರಿ ದೊಡ್ಡದಾಗಿ ಏನೋ pದ್ದಾರೆ. ಹಾಗಾಗಿ ಸಜಜವಾಗಿಯೇ ಡಿಮ್ಯಾಂಡ್ ಹೆಚ್ಚಲಿದೆ. ಅದಕ್ಕೆ ತಕ್ಕಂತೆ ಹೊಂಬಾಳೆ ಸಂಸ್ಥೆ ಟಿಕೆಟ್ ದರ ಹೆಚ್ಚಿಸುತ್ತಾ ಎಂದು ನೋಡಬೇಕಿದೆ.
'ಟಾಕ್ಸಿಕ್' ಚಿತ್ರವನ್ನು ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ತೆರೆಗೆ ತರಲಾಗುತ್ತಿದೆ. ಹಾಗಾಗಿ ಸಹಜವಾಗಿಯೇ ಬಜೆಟ್ 300 ಕೋಟಿ ದಾಟುವ ಅಂದಾಜಿದೆ. ಹಾಗಾಗಿ ಭಾರೀ ಬಂಡವಾಳ ಹಾಕುವುದರಿಂದ ಅದನ್ನು ಮರಳಿ ಪಡೆಯುವ ಪ್ರಯತ್ನ ನಡೆಯುತ್ತದೆ. ಹಾಗಾಗಿ ಟಿಕೆಟ್ ದರ ಹೆಚ್ಚಿಸುತ್ತಾರಾ? ಎನ್ನುವ ಕುತೂಹಲ ಮೂಡಿದೆ.
ಟಿಕೆಟ್ ದರ ಹೆಚ್ಚಾದರೆ ಸಹಜವಾಗಿಯೇ ಪ್ರೇಕ್ಷಕರ ಸಿನಿಮಾ ನೋಡುವ ಆಸಕ್ತಿ ಕುಗ್ಗುತ್ತದೆ. ಒಂದು ದೊಡ್ಡ ಸಿನಿಮಾ ನೋಡಿದರೆ ಬಳಿಕ ಬೇರೆ ಸಿನಿಮಾ ನೋಡಲು ಹಿಂದೇಟು ಹಾಕುತ್ತಿದ್ದಾರೆ. ಇತ್ತೀಚೆಗೆ ಸಣ್ಣ ಸಿನಿಮಾಗಳನ್ನು ನೋಡಲು ಇದೇ ಕಾರಣಕ್ಕೆ ಹಿಂದು ಮುಂದು ನೋಡುತ್ತಿದ್ದಾರೆ. ಓಟಿಟಿಯಲ್ಲಿ ನೋಡೋನ ಬಿಡು ಎನ್ನುತ್ತಿದ್ದಾರೆ. ಒಟ್ಟಾರೆ 2025ರಲ್ಲಿ ಸಿನಿಮಾಗಳ ಟಿಕೆಟ್ ದರ ವಿಚಾರ ಭಾರೀ ಚರ್ಚೆ ಹುಟ್ಟಾಕುವ ಸಾಧ್ಯತೆಯಿದೆ.


Click it and Unblock the Notifications











