ಅಂದು ಕೇವಲ 1500ರೂಪಾಯಿ ಸಂಭಾವನೆ ಪಡೆಯುತ್ತಿದ್ದ ಈ ಚೆಲುವೆ ಇಂದು 776 ಕೋಟಿ ಆಸ್ತಿಯ ಒಡತಿ..!

ಮಣಿರತ್ನಂ ಅವರ ಇರುವರ್ ಚಿತ್ರದ ಮೂಲಕ ಬಣ್ಣದ ಪ್ರಪಂಚಕ್ಕೆ ಬಂದವರು ಐಶ್ವರ್ಯ ರೈ. ಆ ನಂತರ ಐಶ್ವರ್ಯ ಹಿಂದೆ ತಿರುಗಿ ನೋಡಲಿಲ್ಲ. ಅತ್ಯಲ್ಫ ಅವಧಿಯಲ್ಲಿಯೇ ಕಾಲಿವುಡ್ ಮತ್ತು ಬಾಲಿವುಡ್‌ ನಲ್ಲಿ ಬಹುಬೇಡಿಕೆಯ ನಾಯಕಿಯಾಗಿ ಐಶ್ವರ್ಯ ಹೊರ ಹೊಮ್ಮಿದರು. ನೇಮು, ಫೇಮನ್ನು ಗಳಿಸಿದರು. ಹಿಂದಿ ಉದ್ಯಮವನ್ನು ಅಕ್ಷರಶಃ ಆಳಿದರು.

ಇಂಥಾ ಐಶ್ವರ್ಯ ರೈ ಅವರ ದಾಂಪತ್ಯ ಬದುಕು ಸದ್ಯಕ್ಕೆ ಚರ್ಚೆಯಲ್ಲಿದೆ. ಐಶ್ವರ್ಯ ಮತ್ತು ಅಭಿಷೇಕ್ ಬಚ್ಚನ್ ಯಾವ ಕ್ಷಣದಲ್ಲಾದರೂ ದೂರವಾಗಬಹುದು ಎಂಬ ಆತಂಕ ಇವರ ಅಭಿಮಾನಿಗಳನ್ನು ಕಾಡುತ್ತಿದೆ. ಇದರ ನಡುವೆ ಐಶ್ವರ್ಯ ರೈ ಇರುವರ್ ಚಿತ್ರಕ್ಕೂ ಮುನ್ನ ಪಡೆದ ಸಂಭಾವನೆಯ ರಸೀದಿ ಸದ್ಯಕ್ಕೆ ವೈರಲ್ ಆಗಿದೆ.

Aishwarya Rai Bachchan s 1992 Modelling Salary Receipt Goes Viral

ಹೌದು, ಅಸಲಿಗೆ ಐಶ್ವರ್ಯ ರೈ ವಿಶ್ವ ಸುಂದರಿಯ ಕಿರೀಟವನ್ನು ಮುಡಿಗೇರಿಸಿಕೊಳ್ಳುವ ಮುನ್ನ, ಬಟ್ಟೆ ಬ್ರ್ಯಾಂಡ್‌ಗಳಿಗೆ ಮಾಡೆಲ್ ಆಗಿ ಕೆಲಸ ಮಾಡುತ್ತಿದ್ದರು. ಚೂಡಿದಾರ, ಸೆಲ್ವಾರ್ ಕಮೀಜ್ ಮಾದರಿಯ ಉಡುಪುಗಳನ್ನು ಧರಿಸಿ ಕ್ಯಾಮರಾಗೆ ಫೋಸ್ ನೀಡುತ್ತಿದ್ದರು. ಈ ಕೆಲಸಕ್ಕೆ ಐಶ್ವರ್ಯ ರೈಗೆ ಆಗ ಸಿಕ್ತಿದ್ದಿದ್ದು ಕೇವಲ 1500 ರೂಪಾಯಿ ಮಾತ್ರ ಅಂದರೆ ನೀವು ನಂಬ್ಲೇಬೇಕು. ಯಾಕೆಂದರೆ ಇದು ನಿಜಾ. ಇದಕ್ಕೆ ಸಾಕ್ಷಿ ಎನ್ನುವಂತೆ ಐಶ್ವರ್ಯ ರೈಗೆ ಆ ಕಾಲದಲ್ಲಿ ನೀಡಿದ್ದ ರಶೀದಿ ಚೀಟಿ ಸಾಮಾಜಿಕ ಜಾಲತಾಣದಲ್ಲಿ ಸದ್ಯಕ್ಕೆ ವೈರಲ್ ಆಗಿದೆ.

ಮ್ಯಾಗಜೀನ್‌ಗಾಗಿ ಕೃಪಾ ಕ್ರಿಯೇಷನ್ಸ್ ಎಂಬ ಸಂಸ್ಥೆಗೆ ಆಗ ಮಾಡೆಲ್ ಆಗಿದ್ದ ಐಶ್ವರ್ಯ ರೈ, ಮೇ 23-1992ರಲ್ಲಿ 1500 ರೂಪಾಯಿಯನ್ನು ಪಡೆದು ಈ ರಶೀದಿಯ ಮೇಲೆ ಸಹಿಯನ್ನು ಹಾಕಿದ್ದರು. ಹೀಗೆ ಅವತ್ತು ಮಾಡೆಲ್ ಆಗಿ ಕೆಲಸ ಮಾಡಿದ್ದ ಐಶ್ವರ್ಯ ಆ ನಂತರ 1994ರಲ್ಲಿ ವಿಶ್ವ ಸುಂದರಿ ಸ್ಫರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಇತಿಹಾಸವನ್ನು ಸೃಷ್ಟಿಸಿದರು.

Aishwarya Rai Bachchan s 1992 Modelling Salary Receipt Goes Viral

ಇವತ್ತು ಐಶ್ವರ್ಯ ರೈ ಹೆಸರಿಗೆ ಚಿನ್ನದ ಬೆಲೆ ಇದೆ. ಮದುವೆಯಾಗಿ ಮಗುವಾದರೂ ಕೂಡ ಐಶ್ವರ್ಯ ರೈ ಬೇಡಿಕೆ ಕುಂದಿಲ್ಲ. ಇದಕ್ಕೆ ಪೂರಕವಾಗಿ ಚಿತ್ರವೊಂದಕ್ಕೆ ಐಶ್ವರ್ಯ ರೈ 12 ಕೋಟಿ ಸಂಭಾವನೆ ಪಡೆಯುತ್ತಾರೆ ಅನ್ನುವ ಸುದ್ದಿ ಇದೆ. ಒಂದು ಜಾಹೀರಾತಿನ ಮೂಲಕ 07 ಕೋಟಿಯನ್ನು ಗಳಿಸುತ್ತಾರೆ ಎನ್ನುವ ಮಾತು ಕೂಡ ಮುಂಬೈನಲ್ಲಿ ಕೇಳಿ ಬರುತ್ತಿದೆ. ಇನ್ನೂ ಮುಂಬೈನಲ್ಲಿ 21 ಕೋಟಿ ವೆಚ್ಚದ ಐಶಾರಾಮಿ ಮನೆಯ ಒಡತಿ ಕೂಡ ಆಗಿರುವ ಐಶ್ವರ್ಯ ರೈ ಬಳಿ 776 ಕೋಟಿ ಆಸ್ತಿ ಇದೆ ಎನ್ನುವ ವರದಿಯನ್ನು ಡಿಎನ್‌ಎ ವೆಬ್ ಸೈಟ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಅಂದ್ಹಾಗೇ ಐಶ್ವರ್ಯ ರೈ ಮಿಸ್ ಇಂಡಿಯಾ ಸ್ಫರ್ಧೆಯಲ್ಲಿ ಕೂಡ ಭಾಗವಹಿಸಿದ್ದರು. ಆದರೆ, ಆ ಗರಿ ಸುಶ್ಮಿತಾ ಸೇನ್ ಅವರ ಪಾಲಾಗಿತ್ತು.ಎರಡನೇ ಸ್ಥಾನಕ್ಕೆ ಐಶ್ವರ್ಯ ತೃಪ್ತಿ ಪಡಬೇಕಾಯಿತು. ಇನ್ನೂ.. ಮಿಸ್ ಇಂಡಿಯಾದಲ್ಲಿ ಭಾಗಿಯಾಗುವ ಮುನ್ನವೇ ಐಶ್ವರ್ಯ ರೈ ಅವರಿಗೆ ಚಿತ್ರರಂಗ ಕೈ ಬೀಸಿ ಕರೆದಿತ್ತು. ಅವತ್ತು ಮಿಸ್ ಇಂಡಿಯಾ ಸ್ಫರ್ಧೆಯಿಂದ ಐಶ್ವರ್ಯ ಹಿಂದೆ ಸರಿದಿದ್ದರೆ ಅಮೀರ್ ಖಾನ್ ಅಭಿನಯದ ರಾಜಾ ಹಿಂದೂಸ್ತಾನಿ ಚಿತ್ರಕ್ಕೆ ಕರಿಶ್ಮಾ ಕಪೂರ್ ಬದಲು ಐಶ್ವರ್ಯ ರೈ ನಾಯಕಿಯಾಗಬೇಕಿತ್ತು. ರಾಜಾ ಹಿಂದೂಸ್ತಾನಿ ಐಶ್ವರ್ಯ ರೈ ಅಭಿನಯದ ಮೊದಲ ಚಿತ್ರವಾಗಬೇಕಿತ್ತು. ಈ ಹಿಂದೆ ಸಂದರ್ಶನವೊಂದರಲ್ಲಿ ಖುದ್ದು ಐಶ್ವರ್ಯ ರೈ ಈ ಮಾತುಗಳನ್ನು ಹೇಳಿದ್ದರು.

ಸದ್ಯ ಐಶ್ವರ್ಯ ರೈ ಅವರ ಈ ಹಳೆಯ ಸಂಭಾವನೆಯ ರಶೀದಿ ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ಸದ್ದು ಮಾಡುತ್ತಿದೆ. ಎಲ್ಲರ ಗಮನವನ್ನು ಸೆಳೆಯುತ್ತಿದೆ. 1500 ರೂಪಾಯಿಯಿಂದ ಬಾಲಿವುಡ್‌ನ ಸ್ಟಾರ್ ಹೀರೋಯಿನ್ ಆಗುವುದು ಸುಲಭದ ಮಾತಲ್ಲ ಅನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X