For Quick Alerts
  ALLOW NOTIFICATIONS  
  For Daily Alerts

  ಐಶ್ವರ್ಯಾ ರೈ ಪಡೆದ ಮೊದಲ ಸಂಬಳ ಎಷ್ಟು?

  |

  ಮಾಜಿ ವಿಶ್ವ ಸುಂದರಿ ಐಶ್ವರ್ಯಾ ಈಗಲೂ ಅಪ್ರತಿಮ ಅಂದಗಾತಿ. ಕೆಲವು ದಿನಗಳ ಹಿಂದಷ್ಟೆ ಕಾನ್ ಫೆಸ್ಟಿವಲ್‌ನಲ್ಲಿ ರೆಡ್ ಕಾರ್ಪೆಟ್‌ ಮೇಲೆ ಚಂದದ ಉಡುಗೆ ಉಟ್ಟು ನಡೆದ ಐಶ್ವರ್ಯಾ ರೈ ಮಿಂಚು ಹರಿಸಿದ್ದಾರೆ.

  ಸಾಮಾನ್ಯ ಕುಟುಂಬದಿಂದ ಬಂದ ಐಶ್ವರ್ಯಾ ರೈ ವಿಶ್ವ ಸುಂದರಿಯಾಗಿ ಬಳಿಕ ಭಾರತದ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿರುವುದು ಸಾಮಾನ್ಯ ಸಂಗತಿಯಲ್ಲ. ಒಂದು ಸಮಯದಲ್ಲಿ ನಾಯಕ ನಟರಿಗಿಂತಲೂ ಹೆಚ್ಚಿಗೆ ಸಂಭಾವನೆಯನ್ನು ಐಶ್ವರ್ಯಾ ರೈ ಪಡೆಯುತ್ತಿದ್ದರು.

  ಬಾಲಿವುಡ್‌ನ ಅತ್ಯಂತ ದುಬಾರಿ ನಟಿಯರಲ್ಲಿ ಒಬ್ಬರಾಗಿರುವ ಐಶ್ವರ್ಯಾ ರೈ, ಸಿನಿಮಾ ಒಂದಕ್ಕೆ ಕೋಟ್ಯಂತರ ರುಪಾಯಿ ಸಂಭಾವನೆ ಪಡೆಯುತ್ತಾರೆ. ಆದರೆ ಆರಂಭದ ದಿನಗಳಲ್ಲಿ ಐಶ್ವರ್ಯಾ ರೈಗೆ ಸಿಕ್ಕ ಸಂಭಾವನೆ ಎಷ್ಟು? ಸಿನಿಮಾಕ್ಕೆ ಬರುವ ಮುಂಚೆ ಕರ್ನಾಟಕ ಮೂಲದ ಐಶ್ವರ್ಯಾ ರೈ ಏನು ಮಾಡುತ್ತಿದ್ದರು? ಇಲ್ಲಿದೆ ಮಾಹಿತಿ...

  (Image courtesy: SGBSR Maharashtra Twitter)

  ಮಂಗಳೂರಿನಲ್ಲಿ ಜನಿಸಿದ ಐಶ್ವರ್ಯಾ ರೈ

  ಮಂಗಳೂರಿನಲ್ಲಿ ಜನಿಸಿದ ಐಶ್ವರ್ಯಾ ರೈ

  ಮಂಗಳೂರಿನ ಭಂಟ್ ಕುಟುಂಬದಲ್ಲಿ ಜನಿಸಿದ ಐಶ್ವರ್ಯಾ ರೈ ಓದಿದ್ದೆಲ್ಲ ಮುಂಬೈನಲ್ಲಿಯೇ. ಬಹಳ ಕಡಿಮೆ ವಯಸ್ಸಿನಲ್ಲೇ ಐಶ್ವರ್ಯಾ ರೈ ಮಾಡೆಲಿಂಗ್ ಆರಂಭಿಸಿದರು. ಮುದ್ದು ಮುಖದ ಐಶ್ವರ್ಯಾ ರೈ ಕಡಿಮೆ ವಯಸ್ಸಿನಲ್ಲಿಯೇ ಬಹುಬೇಡಿಕೆಯ ಮಾಡೆಲ್ ಆಗಿಬಿಟ್ಟರು. ಆಗಲೇ ಅವರು ಸೌಂದರ್ಯ ಸ್ಪರ್ಧೆಗಳಿಗೆ ಹೋಗುವ ನಿರ್ಣಯ ಮಾಡಿದ್ದು.

  ಮಾಡೆಲಿಂಗ್ ಮಾಡುತ್ತಿದ್ದ ಐಶ್ವರ್ಯಾ ರೈ

  ಮಾಡೆಲಿಂಗ್ ಮಾಡುತ್ತಿದ್ದ ಐಶ್ವರ್ಯಾ ರೈ

  ಆರಂಭದ ದಿನಗಳಲ್ಲಿ (1990-91) ಐಶ್ವರ್ಯಾ ರೈ ಕೆಲವು ಬಟ್ಟೆ ಬ್ರ್ಯಾಂಡ್‌ಗಳಿಗೆ ಮಾಡೆಲ್ ಆಗಿ ಕೆಲಸ ಮಾಡಿದ್ದರು. ಇತ್ತೀಚೆಗೆ ಮಾಡೆಲಿಂಗ್ ಸಂಸ್ಥೆ ಎಸ್‌ಜಿಬಿಎಸ್‌ಆರ್ ಟ್ವೀಟ್ ಒಂದನ್ನು ಮಾಡಿದ್ದು, ಅದರಲ್ಲಿ ನಟಿ ಐಶ್ವರ್ಯಾ ರೈ ಬಣ್ಣ ಬಣ್ಣದ ಉಡುಗೆ ತೊಟ್ಟು ಮಾಡೆಲಿಂಗ್ ಮಾಡಿರುವ ಚಿತ್ರಗಳನ್ನು ಹಂಚಿಕೊಂಡಿದೆ. ಜೊತೆಗೆ ಆಗ ಐಶ್ವರ್ಯಾ ರೈಗೆ ಸಂಸ್ಥೆ ನೀಡಿದ ಹಣದ ಮೊತ್ತವನ್ನು ನಮೂದಿಸಿರುವ ದಾಖಲೆಯ ಚಿತ್ರವನ್ನೂ ಹಂಚಿಕೊಂಡಿದೆ.

  ಐಶ್ವರ್ಯಾ ರೈ ಮೊದಲು ಗಳಿಸಿದ ಸಂಭಾವನೆ ಎಷ್ಟು?

  ಐಶ್ವರ್ಯಾ ರೈ ಮೊದಲು ಗಳಿಸಿದ ಸಂಭಾವನೆ ಎಷ್ಟು?

  ಚೂಡಿದಾರ, ಸೆಲ್ವಾರ್ ಕಮೀಜ್ ಮಾದರಿಯ ಉಡುಪುಗಳನ್ನು ಧರಿಸಿ ಮಾಡೆಲಿಂಗ್ ಮಾಡಿದ್ದ ಐಶ್ವರ್ಯಾ ರೈಗೆ ಆಗ 1500 ರುಪಾಯಿ ಸಂಭಾವನೆಯನ್ನು ಮಾಡೆಲಿಂಗ್ ಸಂಸ್ಥೆ ನೀಡಿತ್ತು. ಇದಕ್ಕೆ ಸಂಬಂಧಿಸಿದ ದಾಖಲೆಯನ್ನು ಸಂಸ್ಥೆಯು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಮಾಡೆಲಿಂಗ್ ಸಂಸ್ಥೆ ಸ್ಥಾಪನೆಯಾಗಿ 30 ವರ್ಷಗಳಾದ ಕಾರಣ ಐಶ್ವರ್ಯಾ ರೈ ಅವರ ಹಳೆಯ ಫೊಟೊಗಳ ಜೊತೆಗೆ ತಮ್ಮ ಸಂಸ್ಥೆಯ ಪರವಾಗಿ ಮಾಡೆಲಿಂಗ್ ಮಾಡಿದ ಇನ್ನೂ ಕೆಲವರ ಚಿತ್ರಗಳನ್ನು ಹಂಚಿಕೊಂಡಿದೆ. ಅದರಲ್ಲಿ ಕೆಲವು ನಟಿಯರ ಚಿತ್ರಗಳೂ ಇವೆ.

  ಹಲವು ನಟಿಯರ ಮಾಡೆಲಿಂಗ್ ದಿನದ ಚಿತ್ರಗಳಿವೆ

  ಹಲವು ನಟಿಯರ ಮಾಡೆಲಿಂಗ್ ದಿನದ ಚಿತ್ರಗಳಿವೆ

  ಐಶ್ವರ್ಯಾ ರೈ ಮಾತ್ರವೇ ಅಲ್ಲದೆ ನಟಿ ಸೊನಾಲಿ ಬೇಂದ್ರೆ ಸಹ ಅದೇ ಉಡುಪಿನ ಬ್ರ್ಯಾಂಡ್‌ಗೆ ಮಾಡೆಲಿಂಗ್ ಮಾಡಿದ್ದಾರೆ. ಐಶ್ವರ್ಯಾ ರೈ ಹಾಗೂ ಸೊನಾಲಿ ಬೇಂದ್ರೆ ಇಬ್ಬರೂ ಒಟ್ಟಿಗೆ ವಿಧ ವಿಧದ ಜೂಡಿದಾರ್ ಉಡುಪುಗಳನ್ನು ಧರಿಸಿ ಕ್ಯಾಮೆರಾಕ್ಕೆ ಫೋಸು ನೀಡಿರುವ ಚಿತ್ರಗಳನ್ನು ಸಂಸ್ಥೆಯು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದೆ. ಇವರಿಬ್ಬರು ಮಾತ್ರವಲ್ಲ ನಿಕ್ಕಿ ಅನೇಜಾ, ತೇಜಸ್ವಿನಿ ಕೊಲ್ಹಾಪುರ್ ಇನ್ನೂ ಹಲವರು ತಮ್ಮ ಆರಂಭದ ದಿನದಲ್ಲಿ ಮಾಡೆಲಿಂಗ್ ಮಾಡಿರುವ ಚಿತ್ರಗಳನ್ನು ಸಂಸ್ಥೆ ಹಂಚಿಕೊಂಡಿದೆ.

  English summary
  Aishwarya Rai has been given 1500 rs as remuneration in her modeling days. Modeling company posted her modeling day puctures with the reciept of 1500 rs which given to Aishwarya Rai.
  Thursday, May 26, 2022, 10:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X