Thunivu Review: ಫಸ್ಟ್ ಹಾಫ್‌ ಸ್ಪೀಡ್.. ಸೆಕೆಂಡ್ ಹಾಫ್ ನಿಧಾನ.. ಮಿನಿ ಬಜೆಟ್‌ನಲ್ಲಿ ಶಂ‍ಕರ್ ಸಿನಿಮಾ!

By ಮರಿ ಎಸ್

ಪೊಂಗಲ್ ಸಂಭ್ರಮದಲ್ಲಿ ಮಾಸ್ ಆಕ್ಷನ್ ಎಂಟರ್‌ಟೈನರ್ ಸಿನಿಮಾ ತಮಿಳಿಗರಿಗೆ ಸಿಕ್ಕಿದೆ. ತಮಿಳಿನ ಸೂಪರ್‌ಸ್ಟಾರ್ ಅಜಿತ್ ಕುಮಾರ್ ಅಭಿನಯದ ಸಿನಿಮಾ 'ಥುನಿವು' ಇಂದು(ಜನವರಿ 11) ಬಿಡುಗಡೆಯಾಗಿದೆ.

ಈ ಸಿನಿಮಾದಲ್ಲಿ ಅಜಿತ್ ಕುಆಂರ್ ಟೆರರ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬಿಳಿ ಕೂದಲು, ಗಡ್ಡ ಬಿಟ್ಟು ಅಭಿಮಾನಿಗಳ ಮುಂದೆ ರಂಜಿಸಲು ಬಂದಿದ್ದಾರೆ. ಅಜಿತ್ ಲುಕ್ ಹಾಗೂ ಆಕ್ಷನ್ ಝಲಕ್ ನೋಡಿಯೇ ಫ್ಯಾನ್ಸ್ ಫಿದಾ ಆಗಿದ್ದರು.

'ಥುನಿವು' ನಿರ್ದೇಶಕ ಶಂಕರ್ ಶೈಲಿಯ ಸಿನಿಮಾ ಅನ್ನೋದು 'ಒನ್ ಲೈನ್ ರಿವ್ಯೂ'. ಹೆಚ್ ವಿನೋದ್ ನಿರ್ದೇಶನ, ಬೋನಿ ಕಪೂರ್ ನಿರ್ಮಾಣ ಈ ಸಿನಿಮಾಗಿದೆ. ಇವರೊಂದಿಗೆ ಮಲಯಾಳಂ ನಟಿ ಮಂಜು ವಾರಿಯರ್ ಎಂಟ್ರಿ ಕೂಡ ಸಿನಿಮಾದ ಹೈಲೈಟ್‌ಗಳಲ್ಲೊಂದು. ಹಾಗಿದ್ದರೆ, 'ಥುನಿವು' ಸಿನಿಮಾದ ಪ್ಲಸ್ ಏನು? ಮೈನಸ್ ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

Rating:
3.5/5
Star Cast: Ajith Kumar, Manju Warrier
Director: H Vinoth

ಅಜಿತ್ ಈ ಸಿನಿಮಾ ಖಳನಾಯಕನಾ?

ಅಜಿತ್ ಈ ಸಿನಿಮಾ ಖಳನಾಯಕನಾ?

'ಥುನಿವು' ಸಿನಿಮಾ ಟ್ರೈಲರ್ ನೋಡಿದ ಬಳಿಕ ನಟ ಅಜಿತ್ ಕುಮಾರ್ ತಮ್ಮ ಗ್ಯಾಂಗ್‌ನೊಂದಿಗೆ ಬ್ಯಾಂಕ್ ದರೋಡೆ ಮಾಡುತ್ತಾರೆ ಎಂದು ಅಂದಾಜಿಸಿದ್ದರು. ಸಿನಿಮಾದ ಮೊದಲಾರ್ಧದಲ್ಲಿ ನಿರ್ದೇಶಕರು ಸಿಕ್ಕಾಪಟ್ಟೆ ಟ್ವಿಸ್ಟ್ ಅಂಡ್ ಟರ್ನ್‌ ಕೊಟ್ಟಿದ್ದಾರೆ. ಖಳನಟ ವೀರಾ ಮತ್ತು ಗ್ಯಾಂಗ್ ಬ್ಯಾಂಕ್ ದರೋಡೆ ಮಾಡಲು ನಿರ್ಧಾರ ಮಾಡುತ್ತೆ. ಅದಾಗಲೇ ನಿಗೂಢ ವ್ಯಕ್ತಿಯಾಗಿ ಎಂಟ್ರಿ ಕೊಡುವ ಅಜಿತ್ ಕುಮಾರ್ ಆ ಬ್ಯಾಂಕನ್ನು ಆಗಲೇ ದರೋಡೆ ಮಾಡಿರುತ್ತಾರೆ. ಅಸಲಿಗೆ ಬ್ಯಾಂಕ್ ವಂಚನೆ ವಿರುದ್ಧ ಸಿಡಿದೆದ್ದ ಅಜಿತ್ ಜಾಗೃತಿ ಮೂಡಿಸಲು ಈ ಕೆಲಸಕ್ಕೆ ಕೈ ಹಾಕಿರುತ್ತಾರೆ. ಸಿನಿಮಾ ಮೊದಲಾರ್ಧ ಬುಲೆಟ್ ಸ್ಪೀಡ್‌ನಷ್ಟು ವೇಗದಲ್ಲಿ ಸಾಗುತ್ತೆ. ಇನ್ನು ಸೆಕೆಂಡ್ ಅಜಿತ್ ಈ ಬ್ಯಾಂಕ್ ದರೋಡೆಯಲ್ಲಿ ಭಾಗಿಯಾಗಿದ್ದು ಯಾಕೆ? ಎಂದು ತೋರಿಸಲಾಗುತ್ತೆ.

ಫಸ್ಟ್ ಹಾಫ್ ಸೂಪರ್ ಸ್ಪೀಡ್

ಫಸ್ಟ್ ಹಾಫ್ ಸೂಪರ್ ಸ್ಪೀಡ್

ವಿಜಯ್ 'ವಾರಿಸು' ಸಿನಿಮಾಗಿಂತ 'ಥುನಿವು' ಚಿಕ್ಕ ಸಿನಿಮಾ. ಹೀಗಾಗಿ ಸಿನಿಮಾ ವೇಗವಾಗಿ ಸಾಗಲೇ ಬೇಕಿತ್ತು. ಹೀಗಾಗಿ ಸಂಕಲನಾಕಾರ ವಿಜಯ್ ವೆಲುಕ್ತಿ ಹಿಂದೆ ಮುಂದೆ ನೋಡದೆ ಅನಗತ್ಯ ದೃಶ್ಯಗಳಿಗೆ ಕತ್ತರಿ ಹಾಕಿದ್ದಾರೆ. ಫಸ್ಟ್ ಹಾಫ್ ಬ್ಯಾಂಕ್‌ನಲ್ಲಿ ನಡೆಯುವ ದೃಶ್ಯಗಳು ಥ್ರಿಲ್ ಕೊಡುತ್ತೆ. ದರೋಡೆಯನ್ನು ನಿಯಂತ್ರಿಸಲು ಸಮುದ್ರಜನಿ ಹರಸಾಹಸ ಪಡುವ ದೃಶ್ಯಗಳು ಕಿಕ್ ಕೊಡುತ್ತವೆ.

ಸ್ಮಾಲ್ ಬಜೆಟ್‌ನ ಶಂಕರ್ ಸಿನಮಾ

ಸ್ಮಾಲ್ ಬಜೆಟ್‌ನ ಶಂಕರ್ ಸಿನಮಾ

ಶಂಕರ್ ಸಿನಿಮಾಗಳು ಮಾಸ್ ಎಂಟರ್‌ಟೈನರ್ ಜೊತೆಗೆ ಹೇಗೆ ಸಂದೇಶವನ್ನು ನೀಡುತ್ತಾರೋ ಹಾಗೆಯೇ ಹೆಚ್ ವಿನೋದ್ ಕೂಡ ಪ್ರಯತ್ನ ಪಟ್ಟಿದ್ದಾರೆ. 'ಥುನಿವು' ಸಿನಿಮಾದ ಸೆಕೆಂಡ್‌ ಹಾಫ್‌ನಲ್ಲಿ ಬ್ಯಾಂಕ್‌ಗಳು ಮಾಡುವ ವಂಚನೆಯಿಂದ ಯುವಕರು ಹಾಗೂ ಸಾಮಾನ್ಯ ಜನರು ಹೇಗೆ ಸಂಕಷ್ಟಕ್ಕೆ ಸಿಕ್ಕಿಕೊಳ್ಳುತ್ತಾರೆ ಎಂಬುದನ್ನು ತೋರಿಸಿದ್ದಾರೆ. ಹೀಗಾಗಿ ಇದು ಮಿನಿ ಬಜೆಟ್‌ನಲ್ಲಿ ನಿರ್ಮಾಣಗೊಂಡಿರುವ ಶಂಕರ್ ಮಾದರಿಯ ಸಿನಿಮಾವೆಂದು ಹೇಳಬಹುದು.

ತಾಂತ್ರಿಕ ದೋಷಗಳಿವೆ

ತಾಂತ್ರಿಕ ದೋಷಗಳಿವೆ

'ಥುನಿವು' ಸಿನಿಮಾ ಪ್ರೇಕ್ಷಕರಿಗೆ ಇಷ್ಟ ಆಗುತ್ತವೆ. ಆದರೆ, ಮೇಕಿಂಗ್‌ನಲ್ಲಿ ಇನ್ನೂ ಪರ್ಫೆಕ್ಟ್ ಆಗಬಹುದಿತ್ತು. ಈ ಸಿನಿಮಾದ ಕೆಲವು ದೃಶ್ಯಗಳಲ್ಲಿ ಸಿಜಿಯಲ್ಲಿ ದೋಷಗಳು ಕಾಣಿಸುತ್ತವೆ. ಅಲ್ಲದೆ ಕೆಲವು ಪಾತ್ರಗಳ ಹಿನ್ನೆಲೆಯನ್ನು ಪ್ರೇಕ್ಷಕರಿಗೆ ವಿವರಿಸಲು ಹಿಂದೆ ಬಿದ್ದಿದ್ದಾರೆ ಅನ್ನೋದು ಇಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತೆ.

ಅಜಿತ್ ಒನ್‌ ಮ್ಯಾನ್ ಶೋ

ಅಜಿತ್ ಒನ್‌ ಮ್ಯಾನ್ ಶೋ

ಇಡೀ ಸಿನಿಮಾವನ್ನು ನಟ ಅಜಿತ್ ಕುಮಾರ್ ಹೆಗಲ ಮೇಲೆ ಹೊತ್ತುಕೊಂಡು ಸಾಗಿದ್ದಾರೆ. ಅವರ ಫ್ಯಾನ್ಸ್ ಇಷ್ಟು ದಿನ ಹೇಗೆ ನೋಡಬೇಕು ಅಂತ ಇಷ್ಟ ಪಟ್ಟಿದ್ದರೋ ಹಾಗೇ ನೋಡಿ ಖುಷಿ ಪಟ್ಟಿದ್ದಾರೆ. ಅಜಿತ್ ಅಭಿಮಾನಿಗಳಿಗೆ ಈ ಸಿನಿಮಾ ವಿಜ್ಯೂವಲ್ ಟ್ರೀಟ್. ನಾಯಕಿಯಾಗಿ ಮಿಂಚಿರೋ ಮಂಜು ವಾರಿಯರ್ ಮಾಸ್ ದೃಶ್ಯಗಳಲ್ಲಿ ಮಿಂಚಿದ್ದಾರೆ. ಅದರಲ್ಲೂ ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ಬೆಚ್ಚಿಬೀಳಿಸುತ್ತಾರೆ. ಸಂಗೀತ ನಿರ್ದೇಶಕ ಗಿಬ್ರಾನ್ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಸಿನಿಮಾದ ಹೈಲೈಟ್.

ಸಿನಿಮಾದ ಮೈನಸ್ ಏನು?

ಸಿನಿಮಾದ ಮೈನಸ್ ಏನು?

ಈ ಸಿನಿಮಾ ಹಣಕ್ಕೆ ಸಂಬಂಧಿಸಿದ ಕಥೆ. ಈ ಚಿತ್ರದ ಮೇಕಿಂಗ್ ಹಾಗೂ ಸೆಟ್ಟುಗಳಿಗೆ ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡಲಾಗಿದೆ. ಅಲ್ಲದೆ ಕೆಲವು ದೃಶ್ಯಗಳಲ್ಲಿ ಹೊಂದಾಣಿಕೆ ಮಾಡಿಕೊಂಡಿರೋದು ಸ್ಪಷ್ಟವಾಗಿ ಗೋಚರವಾಗುತ್ತೆ. ಹೆಲಿಕಾಪ್ಟರ್ ಸ್ಫೋಟ, ಬಾಂಬ್ ಬ್ಲಾಸ್ ಆಗುವ ದೃಶ್ಯಗಳ ಸಿಜಿ ವರ್ಕ್ ಕೆಟ್ಟದಾಗಿದೆ. ಫಸ್ಟ್ ಹಾಫ್ ಸ್ಪಿಡ್ ಆಗಿದ್ದರೂ, ಸೆಕೆಂಡ್ ಹಾಫ್ ನಿಧಾನವಾಗಿದೆ. ಇದು ಸಿನಿಮಾದ ವೀಕ್ ಪಾಯಿಂಟ್. ಆದರೆ, ಈ ಸಿನಿಮಾವನ್ನು ಅಜಿತ್ ಅಭಿಮಾನಿಗಳಷ್ಟೇ ಅಲ್ಲದೆ ಎಲ್ಲರೂ ಒಮ್ಮೆ ಆರಾಮಾಗಿ ನೋಡಲು ಅಡ್ಡಿಯಿಲ್ಲ.

More from Filmibeat

English summary
Ajith Kumar Starrer Thunivu Tamil Movie Review In Kannada, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X