21 ವರ್ಷಗಳ ಹಿಂದೆ 'ಆಕಾಶ್' ಕ್ರೇಜ್ ಹೇಗಿತ್ತು? 3 ವಾರಕ್ಕೆ ಸಿನಿಮಾ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟಾಗಿತ್ತು ಗೊತ್ತಾ?

ಹೊಸ ವರ್ಷದ ಸಂಭ್ರಮದಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದರು. ಈ ಬಾರಿ ಅಪ್ಪು ಹುಟ್ಟುಹಬ್ಬಕ್ಕೆ 'ಆಕಾಶ್' ಸಿನಿಮಾ ರೀ-ರಿಲೀಸ್ ಮಾಡುವುದಾಗಿ ಘೋಷಿಸಿದ್ದಾರೆ. 21 ವರ್ಷಗಳ ಹಿಂದೆ ತೆರೆಗೆ ಬಂದಿದ್ದ ರೊಮ್ಯಾಂಟಿಕ್ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು.

ಡಾ. ರಾಜ್‌ಕುಮಾರ್ ಸಂಸ್ಥೆ ಅಲ್ಲಿಯವರೆಗೆ ನಿರ್ಮಿಸಿದ್ದ ಎಲ್ಲಾ ಸಿನಿಮಾಗಳ ದಾಖಲೆಯನ್ನು 'ಆಕಾಶ್' ಅಳಿಸಿ ಹಾಕಿತ್ತು. ಅಷ್ಟರಮಟ್ಟಿಗೆ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಅಂದು ಸಿನಿಮಾ ಕಲೆಕ್ಷನ್ ಬಗ್ಗೆ ಸ್ವತಃ ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್ ಅಚ್ಚರಿ ವ್ಯಕ್ತಪಡಿಸಿದ್ದರು. ಪುನೀತ್- ರಮ್ಯಾ ಜೋಡಿ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಮಹೇಶ್ ಬಾಬು ನಿರ್ದೇಶನದ ಸಿನಿಮಾ 2005ರ ಏಪ್ರಿಲ್ 19ರಂದು ತೆರೆಗೆ ಬಂದಿತ್ತು.

Akash Re-Release Creates Buzz Puneeth Rajkumar s Classic That Collected 2 Crore in 3 Weeks Returns in 4K

ಸಿನಿಮಾ ತೆರೆಕಂಡು 3 ವಾರಗಳ ಬಳಿಕ ಸುದ್ದಿಗೋಷ್ಠಿ ನಡೆಸಿ ರಾಘಣ್ಣ ಹಾಗೂ ಪುನೀತ್ ಸಿನಿಮಾ ಗೆಲುವಿನ ಸಂಭ್ರಮ ಹಂಚಿಕೊಂಡಿದ್ದರು. 'ಆಕಾಶ್' ಸಿನಿಮಾ ನೋಡುತ್ತಿದ್ದರೆ ಡಾ. ರಾಜ್‌ಕುಮಾರ್ ಸಿನಿಮಾ ನೋಡಿದ ಅನುಭವ ಆಗುತ್ತದೆ ಎಂದು ಪ್ರೇಕ್ಷಕರು ಹೇಳುತ್ತಿದ್ದಾರೆ. ಇದೇ ಚಿತ್ರದ ಗೆಲುವಿನ ಕಾರಣ. ಮೊದಲ ವಾರದಿಂದಲೇ ಮಹಿಳಾ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬಿದ್ದಿರುವುದು ವಿಶೇಷ ಎಂದಿದ್ದರು. ಅಂದು ಸಿನಿಮಾ ಕಲೆಕ್ಷನ್ ಬಗ್ಗೆ ರಾಘವೇಂದ್ರ ರಾಜ್‌ಕುಮಾರ್ ಮಾತುಗಳನ್ನು ಕನ್ನಡಪ್ರಭ ಪತ್ರಿಕೆ ವರದಿ ಮಾಡಿತ್ತು. ಇದೀಗ ಸಿನಿಮಾ ರೀ-ರಿಲೀಸ್ ಸುದ್ದಿ ಬರುತ್ತಿದ್ದಂತೆ ಅಭಿಮಾನಿಗಳು ಆ ವರದಿ ಪೇಪರ್ ಕಟ್ಟಿಂಗ್ ಅನ್ನು ವೈರಲ್ ಮಾಡುತ್ತಿದ್ದಾರೆ.

'ಆಕಾಶ್' ಬಾಕ್ಸಾಫೀಸ್

ಮೊದಲ 3 ವಾರಕ್ಕೆ 'ಆಕಾಶ್' ಸಿನಿಮಾ ಬರೋಬ್ಬರಿ 2 ಕೋಟಿ ರೂ. ಕಲೆಕ್ಷನ್ ಮಾಡಿದ್ದಾಗಿ ವರದಿಯಾಗಿತ್ತು. ಅವತ್ತಿನ ಕಾಲಕ್ಕೆ ಅಂದಿನ ಟಿಕೆಟ್ ದರಕ್ಕೆ ಇದು ದೊಡ್ಡ ಮೊತ್ತವೇ ಸರಿ. ಬರೀ ಬಿಕೆಟಿ(ಬೆಂಗಳೂರು, ಕೋಲಾರ, ತುಮಕೂರು) ಏರಿಯಾದಲ್ಲಿ 3 ವಾರಕ್ಕೆ 1 ಕೋಟಿ ರೂ.ವರೆಗೆ ಕಲೆಕ್ಷನ್ ಆಗಿತ್ತು. ಹುಬ್ಬಳ್ಳಿಯಲ್ಲಿ 3 ವಾರಕ್ಕೆ ಇಪ್ಪತ್ತೆರಡು ಲಕ್ಷ ರೂ. ಕಲೆಕ್ಷನ್ ಆಗಿದ್ದಾಗಿ ರಾಘಣ್ಣ ಮಾಹಿತಿ ಕೊಟ್ಟಿದ್ದರು.

ವಿತರಕರು ಖುಷ್

ನನಗೆ ಟಿಕೆಟ್ ಸಿಗಲಿಲ್ಲ ಅಷ್ಟರಮಟ್ಟಿಗೆ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ ಎಂದು ರಾಘಣ್ಣ ಸಂತಸ ಹಂಚಿಕೊಂಡಿದ್ದರು. ಸಿನಿಮಾ ರೈಟ್ಸ್ ಕೊಂಡುಕೊಂಡಿದ್ದ ವಿತರಕರು ತಾವಾಗಿಯೇ ಫೋನ್ ಮಾಡಿ ಸಂತಸ ಖುಷಿ ವ್ಯಕ್ತಪಡಿಸುತ್ತಿದ್ದಾರೆ. 'ಅಪ್ಪು' ಚಿತ್ರದ ಬಳಿಕ 'ಆಕಾಶ್' ಚಿತ್ರಕ್ಕೆ ಈ ಪಾಟಿ ರೆಸ್ಪಾನ್ಸ್ ಸಿಕ್ತಿದೆ ಎಂದಿದ್ದರು.

ಸಕ್ಸಸ್ ಸೀಕ್ರೆಟ್

ಅಣ್ಣ-ತಂಗಿ ಬಾಂಧವ್ಯದ ಕಥೆ ಚಿತ್ರದಲ್ಲಿದೆ. ಇಬ್ಬರೂ ತಬ್ಬಲಿಗಳು. ಆದರೆ ಆ ವಿಚಾರದಲ್ಲಿ ಹೆಚ್ಚಿನ ಸೆಂಟಿಮೆಂಟ್ ಅಂಶಗಳು ಇರಲಿಲ್ಲ. ಬದಲಿಗೆ ಬೇರೆ ಬೇರೆ ವಿಚಾರಗಳನ್ನು ಹೇಳಿದ್ದೇವೆ. ಅದು ಪ್ರೇಕ್ಷಕರಿಗೆ ಇಷ್ಟವಾಗಿದೆ ಎಂದು ರಾಘಣ್ಣ ಚಿತ್ರದ ಸಕ್ಸಸ್ ಸೀಕ್ರೆಟ್ ಬಗ್ಗೆ ಮಾತನಾಡಿದ್ದರು.

ಮಹೇಶ್ ಬಾಬು ನಿರ್ದೇಶನ

ಜನಾಧರ್ನ್ ಮಹರ್ಷಿ ಬರೆದ ಕಥೆಗೆ ಚಿತ್ರಕಥೆ ಬರೆದು ಮಹೇಶ್ ಬಾಬು ಆಕ್ಷನ್ ಕಟ್ ಹೇಳಿದ್ದರು. ಎಂ. ಎಸ್ ರಮೇಶ್ ಸಂಭಾಷಣೆ ಬರೆದಿದ್ದರು. ಸಹ ನಿರ್ದೇಶಕರಾಗಿದ್ದ ಮಹೇಶ್ ಬಾಬು ಅವರಿಗೆ ಆಕ್ಷನ್ ಕಟ್ ಹೇಳಲು ಪುನೀತ್ ಅವಕಾಶ ಕೊಟ್ಟಿದ್ದರು. ಆರಂಭದಲ್ಲಿ ರಾಘಣ್ಣನಿಗೆ ಭರವಸೆ ಇರಲಿಲ್ಲವಂತೆ. ಆದರೆ ಅಪ್ಪು ನಂಬಿಕೆ ಇಟ್ಟು ಅವಕಾಶ ಕೊಟ್ಟಿದ್ದರು. ಮಹೇಶ್ ಬಾಬು ಅದನ್ನು ಉಳಿಸಿಕೊಂಡಿದ್ದಾರೆ ಎಂದು ರಾಘಣ್ಣ ಹೇಳಿದ್ದರು.

ರೀ-ರಿಲೀಸ್

21 ವರ್ಷಗಳ ಬಳಿಕ 'ಆಕಾಶ್' ಸಿನಿಮಾ ರೀ-ರಿಲೀಸ್ ಆಗ್ತಿದೆ. 4k ರೀ-ಮಾರ್ಸ್ಟರ್ಸ್ ವರ್ಷನ್‌ನಲ್ಲಿ ಮಾರ್ಚ್ 13ರಂದು ಸಿನಿಮಾ ತೆರೆಗೆ ಬರ್ತಿದೆ. ಆರ್‌. ಪಿ ಪಟ್ನಾಯಕ್ ಸಂಗೀತದಲ್ಲಿ ಎಲ್ಲಾ ಹಾಡುಗಳು ಹಿಟ್ ಆಗಿತ್ತು. ಇವತ್ತಿಗೂ ಜನ ಹಾಡುಗಳನ್ನು ಗುನುಗುತ್ತಾರೆ. ಪುನೀತ್ ಹುಟ್ಟುಹಬ್ಬಕ್ಕೂ ಮುನ್ನ ಚಿತ್ರಮಂದಿರಗಳಲ್ಲಿ 'ಆಕಾಶ್' ಸಂಭ್ರಮ ಆರಂಭವಾಗಲಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X