ಯುವಕನ ಜೊತೆ ರೀಲ್ಸ್ ರಾಣಿ ಅಶ್ಲೀಲ ಮಾತು; ಆಡಿಯೋ ಲೀಕ್ ಆಗಿ ಭುಗಿಲೆದ್ದ ವಿವಾದ

ಕಳೆದೊಂದು ವಾರದಿಂದ ಸೋಶಿಯಲ್ ಮೀಡಿಯಾದಲ್ಲಿ ಅಲೇಖ್ಯ ಚಿಟ್ಟಿ ಪಿಕಲ್ಸ್ ಹೆಸರು ಭಾರೀ ಸದ್ದು ಮಾಡ್ತಿದೆ. ಟ್ವಿಟ್ಟರ್, ಫೇಸ್ಬುಕ್, ಇನ್‌ಸ್ಟಾಗ್ರಾಂ ಪೇಜ್ ಓಪನ್ ಮಾಡಿದ್ರೆ ಈ ಮೂವರು ಸಹೋದರಿಯರ ಫೋಟೊ, ವೀಡಿಯೋ ಕಣ್ಮುಂದೆ ಬರ್ತಿದೆ. ಇನ್ನು ಅವರನ್ನು ಟ್ರೋಲ್ ಮಾಡುವವರ ಸಂಖ್ಯೆ ಏನು ಕಮ್ಮಿ ಇದೆ. ಆಂಧ್ರ, ತೆಲಂಗಾಣದಲ್ಲಿ ಈ ಅಲೇಖ್ಯ ಚಿಟ್ಟಿ ಪಿಕಲ್ಸ್ ಭಾರೀ ಸುದ್ದಿಯಲ್ಲಿದೆ.

ಅಷ್ಟಕ್ಕೂ ಏನಿದು ಅಲೇಖ್ಯ ಚಿಟ್ಟಿ ಪಿಕಲ್ಸ್ ವಿವಾದ? ಯಾಕೆ ಈ ಮೂವರು ಸಹೋದರಿಯರನ್ನು ಜನ ಇಷ್ಟು ಟ್ರೋಲ್ ಮಾಡುತ್ತಿದ್ದಾರೆ. ಟೀಕಿಸುತ್ತಿದ್ದಾರೆ ಎನ್ನುವುದು ಬಹಳ ಜನರಿಗೆ ಗೊತ್ತಿಲ್ಲ. ಆಂಧ್ರದ ರಾಜಮಂಡ್ರಿ ಮೂಲದ ಮೂವರು ಸಹೋದರಿಯರಾದ ಅಲೇಖ್ಯ, ಸುಮಾ ಮತ್ತು ರಮ್ಯಾ ಕಂಚರ್ಲಾ ತಮ್ಮ ನಾನ್‌ ವೆಜ್ ಉಪ್ಪಿನಕಾಯಿ ಉದ್ಯಮದಿಂದ ಜನಪ್ರಿಯತೆ ಗಳಿಸಿದ್ದಾರೆ. ಆದರೆ ಅವರು ಮಾರುವ ಉಪ್ಪಿನಕಾಯಿದ ದರ ಬಹಳ ಹೆಚ್ಚಿದೆ. ಈ ಬಗ್ಗೆ ಗ್ರಾಹಕರೊಬ್ಬರು ಕೇಳಿದಾಗ ಅಲೇಖ್ಯ ಬಹಳ ಅವಾಚ್ಯ ಪದಗಳನ್ನು ಬಳಸಿ ಪ್ರತಿಕ್ರಿಯಿಸಿದ್ದರು. ಆ ಸಂಭಾಷಣೆ ಆಡಿಯೋ ಲೀಕ್ ಆಗಿದೆ.

Alekhya Chitti Pickles controversy why Kancharla sisters Face Backlash Over Viral Audio

ಅಲೇಖ್ಯ ಪದಗಳಿಂದ ರೋಸಿ ಹೋಗಿದ್ದ ಗ್ರಾಹಕ ಆ ಆಡಿಯೋವನ್ನು ಲೀಕ್ ಮಾಡಿದ್ದರು. ಮೊದಲೇ ಅಲೇಖ್ಯ ಚಿಟ್ಟಿ ಪಿಕಲ್ಸ್ ದರದ ಬಗ್ಗೆ ಅಸಮಾಧಾನಗೊಂಡಿದ್ದವರು ಈ ಆಡಿಯೋ ಕ್ಲಿಪ್ ಸಿಗುತ್ತಿದ್ದಂತೆ ಟ್ರೋಲ್ ಮಾಡಲು ಆರಂಭಿಸಿದ್ದಾರೆ. ಗ್ರಾಹಕರ ಜೊತೆ ಈ ಹಿಂದೆ ಅಲೇಖ್ಯ ಚಿಟ್ಟಿ ಪಿಕಲ್ಸ್ ವಾಟ್ಸಪ್‌ ಚಾನಲ್‌ನಲ್ಲಿ ಮಾತನಾಡಿದ ಪದಗಳು, ಮೆಸೇಜ್‌ಗಳನ್ನು ವೈರಲ್ ಮಾಡಿ ಟೀಕಿಸುತ್ತಿದ್ದಾರೆ. ತೆಲುಗು ಹಾಸ್ಯ ನಟ ಪ್ರಿಯದರ್ಶಿ ಕೂಡ ವ್ಯಂಗ್ಯವಾಗಿ ರೀಲ್ಸ್ ಮಾಡಿ ಟ್ರೋಲ್ ಮಾಡಿದ್ದಾರೆ.

ತಾನು ಆ ರೀತಿ ಗ್ರಾಹಕನ ಜೊತೆ ಮಾತನಾಡಬಾರದಿತ್ತು. ನನ್ನಿಂದ ತಪ್ಪಾಗಿದೆ ಎಂದು ಅಲೇಖ್ಯ ಕ್ಷಮೆ ಕೋರಿ ವೀಡಿಯೋ ಬಿಡುಗಡೆ ಮಾಡಿದ್ದಾರೆ. ಆಕೆಯ ಸಹೋದರಿಯರು ಈ ಬಗ್ಗೆ ಪ್ರತಿಕ್ರಯಿಸಿ ಕ್ಷಮಿಸುವಂತೆ ಕೇಳಿಕೊಂಡಿದ್ದಾರೆ. ಆದರೆ ಟೀಕೆ, ಟ್ರೋಲ್ ಮಾತ್ರ ನಿಲ್ಲುತ್ತಿಲ್ಲ. ಅಲೇಖ್ಯ ಚಿಟ್ಟಿ ಪಿಕಲ್ಸ್ ಅನ್ನು ಬಹಿಷ್ಕರಿಸುವಂತೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಅದರ ಬೆನ್ನಲ್ಲೇ ಅಲೇಖ್ಯ ಸಿಸ್ಟರ್ಸ್ ತಮ್ಮ ವೆಬ್‌ಸೈಟ್ ಡಿಲೀಟ್ ಮಾಡಿ, ತಮ್ಮ ವಾಟ್ಸಾಪ್ ಚಾನಲ್ ಅನ್ನು ನಿಷ್ಕ್ರಿಯಗೊಳಿಸಿದ್ದಾರೆ.

ನಿಮ್ಮ ಕಂಪನಿ ಉಪ್ಪಿನ ಕಾಯಿ ದರ ಬಹಳ ಅತಿಯಾಯ್ತು ಎಂದು ಗ್ರಾಹಕ ಕೇಳಿದ್ದಕ್ಕೆ ಅಲೇಖ್ಯ ಚಿಟ್ಟಿ ಪಿಕಲ್ಸ್ ಕಡೆಯಿಂದ ಪ್ರತಿಕ್ರಿಯಿಸಿ ಆಡಿಯೋ ಮೆಸೇಜ್ ಕಳುಹಿಸಿದ್ದಾರೆ. "ಇದನ್ನೇ ಕಾಸ್ಟ್ಲಿ ಅಂದ್ರೆ, ಜೀವನದಲ್ಲಿ ನೀನು ಸಾಧಿಸುತ್ತೀಯಾ? "ನೀನು ನಿನ್ನ ಹೆಂಡತಿ ಮತ್ತು ಲವರ್‌ಗೆ ಚಿನ್ನ ಹೇಗೆ ಕೊಡುಸ್ತೀಯಾ? ನಿನ್ನ ಕರಿಯರ್ ಕಡೆ ಫೋಕಸ್ ಮಾಡು" ಅಂತೆಲ್ಲಾ ಕೆಟ್ಟದಾಗಿ ಆಡಿಯೋದಲ್ಲಿ ಮಾತನಾಡಿರುವುದು ಗೊತ್ತಾಗುತ್ತಿದೆ.

ನಮಗೆ ಸಾಕಷ್ಟು ಜನ ವಾಟ್ಸಪ್‌ನಲ್ಲಿ ಕೆಟ್ಟ ಕೆಟ್ಟ ಮೆಸೇಜ್ ಮಾಡುತ್ತಾರೆ. ಸಾಕಷ್ಟು ನಂಬರ್‌ಗಳನ್ನು ಬ್ಲಾಕ್‌ ಮಾಡುತ್ತೇವೆ. ಆದರೂ ಕೆಲವರು ಹೊಸ ಹೊಸ ನಂಬರ್‌ ಬಳಸಿ ಮೆಸೇಜ್ ಕಳುಹಿಸುತ್ತಾರೆ. ಅದರಿಂದ ರೋಸಿ ಹೋಗಿ ಕೆಲವರಿಗೆ ಹೀಗೆ ತಿರುಗೇಟು ಕೊಟ್ಟಿದ್ದೇವೆ. ಹಿಂದೆ ಯಾರಿಗೋ ಪ್ರತಿಕ್ರಿಯಿಸ್ದ ಆಡಿಯೋವನ್ನು ಗೊತ್ತಿಲ್ಲ, ನಿಮಗೆ ಕಳುಹಿಸಿಬಿಟ್ಟಿದ್ದೀವಿ ಎಂದು ಅಲೇಖ್ಯ ಆ ಗ್ರಾಹಕನಿಗೆ ಸ್ಪಷ್ಟನೆ ನೀಡಿದ್ದಾರೆ. ಎಲ್ಲರ ಕ್ಷಮೆ ಕೂಡ ಕೇಳಿದ್ದಾರೆ. ಆದರೆ ಅಷ್ಟರಲ್ಲಿ ಆಡಿಯೋ ವೈರಲ್ ಆಗಿ ಯಡವಟ್ಟಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುತ್ತಾ ಸಹೋದರಿಯರು ಫೇಮಸ್ ಆಗಿದ್ದರು. ಬಳಿಕ ಉಪ್ಪಿನಕಾಯಿ ವ್ಯಾಪಾರ ಆರಂಭಿಸಿ ಗೆದ್ದಿದ್ದರು. ಅಷ್ಟರಲ್ಲೇ ಅಸಭ್ಯ ಸಂಭಾಷಣೆಯ ಆಡಿಯೋ ಬಂದು ಇಷ್ಟೆಲ್ಲಾ ರಾದ್ಧಾಂತವಾಗಿದೆ. ಕ್ಷಮೆ ಕೇಳಿದ್ದಾಯಿತು ಇನ್ನಾದರೂ ಈ ವಿವಾದವನ್ನು ಬಿಟ್ಟುಬಿಡಿ. ಪ್ರಪಂಚದಲ್ಲಿ ಇದಕ್ಕಿಂತ ಗಂಭೀರ ವಿಚಾರಗಳು ಸಾಕಷ್ಟಿವೆ ಅದರ ಬಗ್ಗೆ ಮಾತನಾಡಿ ಎಂದು ಸಾಕಷ್ಟು ಜನ ಕಾಮೆಂಟ್ ಮಾಡುತ್ತಿದ್ದಾರೆ. ಮತ್ತೆ ಅಲೇಖ್ಯ ಚಿಟ್ಟಿ ಪಿಕಲ್ಸ್ ವ್ಯಾಪಾರ ಆರಂಭವಾಗುತ್ತಾ? ಟ್ರೋಲ್ಸ್ ನಿಲ್ಲುತ್ತಾ? ಕಾದು ನೋಡಬೇಕಿದೆ.

More from Filmibeat

English summary
Alekhya Chitti Pickles, Kancharla sisters are facing heavy trolling after a leaked audio of Alekhya using vulgar language went viral.
Read more about: social media telugu tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X