ಸೆಕೆಂಡ್ ಇನ್‌ಕಂಗೆ ವ್ಯವಸ್ಥೆ ಮಾಡಿಕೊಂಡ ನಟಿಯರು: ಸಿನಿಮಾ ಬಿಟ್ಟು ಈ ಸ್ಟಾರ್ ನಟಿಯರ ಸೈಡ್ ಬ್ಯುಸಿನೆಸ್ ಏನೇನಿದೆ ಗೊತ್ತಾ?

ಯಾವತ್ತೂ ಒಂದೇ ಆದಾಯದ ಮೂಲವನ್ನು ನಂಬಿಕೊಂಡು ಕೂರಬಾರದು ಎಂದು ತಿಳಿದವರು ಹೇಳ್ತಾರೆ. ಆ ಬಾಗಿಲು ಯಾವಾಗ ಮುಚ್ಚುತ್ತೋ ಗೊತ್ತಿಲ್ಲ. ಅದಕ್ಕೆ ಮೊದಲೇ ಜಾಗೃತರಾಗಿರಬೇಕು. ಎಲ್ಲಾ ಚೆನ್ನಾಗಿ ಇರುವಾಗಲೇ ಮೇನ್ ಬ್ಯುಸಿನೆಸ್ ಜೊತೆ ಸೈಡ್ ಬ್ಯುಸಿನೆಸ್ ಶುರು ಮಾಡ್ಬೇಕು ಅಂತಾರೆ. ಸ್ಟಾರ್ ನಟ- ನಟಿಯರು ಸಿನಿಮಾಗಳಲ್ಲಿ ನಟಿಸುವುದರ ಜೊತೆ ಜೊತೆಗೆ ಬೇರೆ ಬೇರೆ ಬ್ಯುಸಿನೆಸ್‌ಗಳಲ್ಲಿ ಹಣ ತೊಡಗಿಸಿದ್ದಾರೆ.

ತಮನ್ನಾ, ಕಾಜಲ್ ಅಗರ್‌ವಾಲ್, ಕೀರ್ತಿ ಸುರೇಶ್, ಪ್ರಣೀತಾ ಸುಭಾಷ್ ಹೀಗೆ ಸ್ಟಾರ್ ನಟಿಯರೆಲ್ಲಾ ಬೇರೆ ಬೇರೆ ಕಡೆಗಳಲ್ಲಿ ಹಣ ತೊಡಗಿಸಿದ್ದಾರೆ. ಚಿತ್ರವೊಂದಕ್ಕೆ ಕೋಟಿ ಕೋಟಿ ಸಂಭಾವನೆ ಪಡೆಯುವ ನಟಿಯರು ಅದರಲ್ಲಿ ಒಂದಷ್ಟು ಹಣವನ್ನು ರೆಸ್ಟೋರೆಂಟ್, ಚಿನ್ನಾಭರಣ ಅಂಗಡಿ, ಗಾರ್ಮೆಂಟ್ಸ್ ಅಂತ ಹೂಡಿಕೆ ಮಾಡಿದ್ದಾರೆ. ಬಾಲಿವುಡ್ ನಟಿ ಆಲಿಯಾ ಭಟ್ ಈದ್-ಎ- ಮಮ್ಮ ಎನ್ನುವ ಕಿಡ್ಸ್‌ ಕ್ಲಾತಿಂಗ್ ಬ್ರ್ಯಾಂಡ್ ಹೊಂದಿದ್ದಾರೆ. ತಮ್ಮ ಸ್ನೇಹಿತರ ಮಕ್ಕಳಿಗೆ ಆಗಾಗ ಬಟ್ಟೆಗಳನ್ನು ಉಡುಗೊರೆಯಾಗಿ ನೀಡುತ್ತಿರುತ್ತಾರೆ.

Alia Bhatt To Tamanna Bhatia: These top heroines Have Successful Side Business

ಮುಂಬೈ ಬೆಡಗಿ ತಮನ್ನಾ ಕನ್ನಡ ಸಿನಿರಸಿಕರಿಗೂ ಚಿರಪರಿಚಿತ. 'ಜಾಗ್ವಾರ್' ಹಾಗೂ 'KGF' ಸಿನಿಮಾಗಳಲ್ಲಿ ಬಿಂದಾಸ್ ಆಗಿ ಕುಣಿದು ರಂಗೇರಿಸಿದ್ದರು. ಮಿಲ್ಕಿ ಬ್ಯೂಟಿ ಹವಾ ಕೊಂಚ ಕಮ್ಮಿ ಆಗಿದೆ. ಅಂದಹಾಗೆ ತಮನ್ನಾ 2015ರಲ್ಲಿ ಚಿನ್ನಾಭರಣ ವ್ಯಾಪಾರ ಆರಂಭಿಸಿದರು. ತಂದೆ ಸಂತೋಷ್ ಬಾಟಿಯಾ ಜೊತೆ ಸೇರಿ 'ವೈಟ್ ಅಂಡ್ ಗೋಲ್ಡ್' ಹೆಸರಿನ ಆನ್‌ಲೈನ್ ಜ್ಯುವೆಲರ್ ಲೈವ್ ವೆಂಚರ್ ಆರಂಭಿಸಿದ್ದಾರೆ.

2 ವರ್ಷಗಳ ಹಿಂದೆ ಉದ್ಯಮಿ ಗೌತಮ್ ಕಿಚ್ಲು ಕೈ ಹಿಡಿದ ನಟಿ ಕಾಜಲ್ ಅಗರ್‌ವಾಲ್ ಕೂಡ ಸೈಡ್ ಬ್ಯುಸಿನೆಸ್ ಇಟ್ಟುಕೊಂಡಿದ್ದಾರೆ. ಮಗಧೀರನ ರಾಣಿ ಬಳಿ ಮರ್ಸಲಾ ಹೆಸರಿನ ಜ್ಯುವೆಲ್ಲರಿ ಬ್ರ್ಯಾಂಡ್ ಇದೆ. ಇದರಲ್ಲಿ ಕಾಜಲ್ ಸಹೋದರಿ ನಿಶಾ ಅಗರ್‌ವಾಲ್ ಕೂಡ ಪಾರ್ಟ್ನರ್ ಆಗಿದ್ದಾರೆ. ಮದುವೆ ಆಗಿ ಒಂದು ಮಗುವಿನ ತಾಯಿ ಆಗಿರುವ ಕಾಜಲ್ ಮತ್ತೆ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. 'ಇಂಡಿಯನ್ -2' ಹಾಗೂ ಬಾಲಕೃಷ್ಣ ನಟನೆಯ 108ನೇ ಸಿನಿಮಾದಲ್ಲಿ ನಾಯಕಿಯಾಗಿ ನಟಿಸ್ತಿದ್ದಾರೆ.

'ಮಹಾನಟಿ' ಸಿನಿಮಾದಲ್ಲಿ ನಟಿಸಿ ನಟಿ ಕೀರ್ತಿ ಸುರೇಶ್ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಈ ಚೆನ್ನೈ ಚೆಲುವೆ 'ಭೂಮಿತ್ರ' ಎನ್ನುವ ಸ್ಕಿನ್ ಕೇರ್ ಬ್ರ್ಯಾಂಡ್ ಹೊಂದಿದ್ದಾರೆ. ಸಂಪೂರ್ಣವಾಗಿ ಪ್ರಕೃತಿ ಚಿಕಿತ್ಸೆ ನೀಡಲಾಗುತ್ತಿದೆ. ಸಿನಿಮಾ ಬಿಟ್ಟು ಹೀಗೆ ಬೇರೆ ಮಾರ್ಗದಲ್ಲಿಯೂ ಆದಾಯ ಗಳಿಸುತ್ತಿದ್ದಾರೆ. ಕೀರ್ತಿ ಸುರೇಶ್ ನಟನೆಯ ತೆಲುಗಿನ 'ದಸರಾ' ಸಿನಿಮಾ ಈ ವಾರ ವಿಶ್ವದಾದ್ಯಂತ ತೆರೆಗೆ ಬರ್ತಿದೆ. ಚಿತ್ರದಲ್ಲಿ ನಾನಿ ಜೋಡಿಯಾಗಿ ಕೀರ್ತಿ ನಟಿಸಿದ್ದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬರ್ತಿದೆ.

Alia Bhatt To Tamanna Bhatia: These top heroines Have Successful Side Business

ಬಹುಭಾಷಾ ನಟಿ ಶ್ರಿಯಾ ಶರಣ್ ಕೂಡ ಸೆಕೆಂಡ್ ಇನ್‌ಕಮ್‌ಗೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಶ್ರೀ ಸ್ಪಂದನಾ ಸ್ಪಾ ಸೆಂಟರ್‌ ಆರಂಭಿಸಿ ಶ್ರಿಯಾ ಒಳ್ಳೆ ಆದಾಯ ಗಳಿಸುತ್ತಿದ್ದಾರೆ. ಒಂದ್ಕಾಲದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದ ಶ್ರಿಯಾ ಇತ್ತೀಚೆಗೆ ನಟಿಸೋದು ಕಮ್ಮಿ ಮಾಡಿದ್ದಾರೆ. ಮದುವೆ, ಮಗು ಅಂತೆಲ್ಲಾ ಚಿತ್ರರಂಗದಿಂದ ದೂರಾಗಿದ್ದ ನಟಿ ಮತ್ತೆ ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ 'ಕಬ್ಜ' ಚಿತ್ರದಲ್ಲಿ ರಾಣಿ ಮಧುಮತಿ ಆಗಿ ಶ್ರಿಯಾ ಮಿಂಚಿದ್ದರು.

ನಟಿ ರಕುಲ್ ಪ್ರೀತ್ ಸಿಂಗ್ ಸೈಡ್ ಬ್ಯುಸಿನೆಸ್ ಆಗಿ ಟ್ರೈನಿಂಗ್ ಜಿಮ್ ಫ್ರಾಂಚೈಸಿ ಪಡೆದು ನಡೆಸುತ್ತಿದ್ದಾರೆ. ಹೈದರಾಬಾದ್‌ನಲ್ಲಿ 2, ವಿಶಾಖಪಟ್ನಂನಲ್ಲಿ ಒಂದು ಜಿಮ್ ನಡೆಸುತ್ತಿದ್ದಾರೆ. ಸಿನಿಮಾ ನಟಿ ಆಗದೇ ಇದ್ದಿದ್ದರೇ ಜಿಮ್ ಟ್ರೈನರ್ ಆಗಿ ಇದ್ದುಬಿಡುತ್ತಿದ್ದೆ ಎಂದು ಹಿಂದೆ ಒಮ್ಮೆ ರಕುಲ್ ಹೇಳಿಕೊಂಡಿದ್ದರು. ಇನ್ನು ಗೋವಾ ಬ್ಯೂಟಿ ಇಲಿಯಾನ ಕೂಡ ಸೈಡ್ ಬ್ಯುಸಿನೆಸ್‌ನಿಂದ ಒಳ್ಳೆ ಆದಾಯ ಗಳಿಸುತ್ತಿದ್ದಾರೆ. ಗೋವಾದಲ್ಲಿ ಆಕೆಯ ಬೇಕರಿಗಳು, ರೆಸ್ಟೋರೆಂಟ್‌ಗಳು ಇದೆಯಂತೆ.

ಬೆಂಗಳೂರು ಬೆಡಗಿ ಪ್ರಣೀತಾ ಸುಭಾಷ್ ತೆಲುಗು ಚಿತ್ರರಂಗದಲ್ಲಿ ಕೊಂಚಮಟ್ಟಿಗೆ ಸದ್ದು ಮಾಡಿದ್ದರು. ಸದ್ಯ ಮದುವೆ, ಮಗು ಎಂದು ಬ್ಯುಸಿಯಾಗಿರುವ ನಟಿ ಬೆಂಗಳೂರಿನಲ್ಲಿ ಬೂಟ್ ಲೆಗ್ಗರ್ ಹೆಸರಿನ ರೆಸ್ಟೋರೆಂಟ್ ನಡೆಸುತ್ತಿದ್ದಾರೆ. ಇನ್ನು ನಟಿ ತಾಪ್ನಿ ಪನ್ನು 'ದಿ ವೆಡ್ಡಿಂಗ್ ಫ್ಯಾಕ್ಟರಿ' ಹೆಸರಿನ ಈವೆಂಟ್ ಮ್ಯಾನೇಜ್‌ಮೆಂಟ್ ಕಂಪೆನಿ ನಡೆಸುತ್ತಿದ್ದಾರೆ. ತಮ್ಮ ಸ್ನೇಹಿತೆ ಹಾಗೂ ಸಹೋದರಿಯನ್ನು ಈ ಬ್ಯುಸಿನೆಸ್‌ನಲ್ಲಿ ಜೊತೆಗೆ ಸೇರಿಸಿಕೊಂಡಿರುವ ತಾಪ್ಸಿ ವಿಶೇಷವಾಗಿ ಸೆಲೆಬ್ರೆಟಿಗಳ ಮದುವೆ ಜವಾಬ್ದಾರಿ ಒಪ್ಪಿಕೊಳ್ಳುತ್ತಿರುತ್ತಾರೆ.

More from Filmibeat

English summary
Alia Bhatt To Tamanna Bhatia: These top heroines who Have Successful Side Business. There are Few actresses who runs their side business for permanent and extra income. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X