Don't Miss!
- News
ಬೆಂಗಳೂರಿನಲ್ಲಿ ಇಂದು ಬುಧವಾರ ಭಾರೀ ಮಳೆ: ಆರೆಂಜ್ ಅಲರ್ಟ್ ಘೋಷಣೆ
- Lifestyle
ಪ್ಲಾಸ್ಟಿಕ್ ಸರ್ಜರಿ ಕುರಿತ 10 ಆಸಕ್ತಿಕರ ಸಂಗತಿಗಳು
- Sports
ಟಿ20 ಕ್ರಿಕೆಟ್ನಲ್ಲಿ 250 ವಿಕೆಟ್ ಪಡೆದ ಬುಮ್ರಾ: ಈ ಸಾಧನೆ ಮಾಡಿದ ಭಾರತದ ಮೊದಲ ವೇಗದ ಬೌಲರ್
- Finance
ಮೇ 17ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Automobiles
ಹೊಸ ಕಿಯಾ ಇವಿ6 ಎಲೆಕ್ಟ್ರಿಕ್ ಕಾರು ಮಾಹಿತಿ ಬಹಿರಂಗ: 528 ಕಿ.ಮೀ ರೇಂಜ್, ಅಲ್ಟ್ರಾ-ಫಾಸ್ಟ್ ಚಾರ್ಜಿಂಗ್
- Technology
ಅಪೆಕ್ಸ್ ಲೆಜೆಂಡ್ಸ್ ಮೊಬೈಲ್ ಗೇಮ್ ಬಿಡುಗಡೆ! ಡೌನ್ಲೋಡ್ ಮಾಡುವುದು ಹೇಗೆ?
- Education
Oil India Recruitment 2022 : 16 ನರ್ಸಿಂಗ್ ಟ್ಯೂಟರ್ ಮತ್ತು ಇತರೆ ಹುದ್ದೆಗಳಿಗೆ ನೇರ ಸಂದರ್ಶನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮೂರ್ಛೆ ಹೋಗಿದ್ದ ಮಹಿಳೆಯರು: ಕನ್ನಡದ ಮೊದಲ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ಇದು.!
ಕನ್ನಡದ ಮೊದಲ ವಾಕ್ಚಿತ್ರ ಯಾವುದು.? ಈ ಪ್ರಶ್ನೆ ಕೇಳಿದ ಕೂಡಲೆ ಕನ್ನಡ ಸಿನಿ ಪ್ರಿಯರು ಥಟ್ ಅಂತ ಕೊಡುವ ಉತ್ತರ 'ಸತಿ ಸುಲೋಚನ'.!
ಕನ್ನಡದಲ್ಲಿ ಬಿಡುಗಡೆಯಾದ ಮೊಟ್ಟ ಮೊದಲ ವಾಕ್ಚಿತ್ರ 'ಸತಿ ಸುಲೋಚನ' ಎಂಬುದೇನೋ ಸತ್ಯ. ಆದ್ರೆ, ಕನ್ನಡದಲ್ಲಿ ತಯಾರಾದ ಪ್ರಪ್ರಥಮ ವಾಕ್ಚಿತ್ರ 'ಭಕ್ತ ಧ್ರುವ'.
1934, ಮಾರ್ಚ್ 3 ರಂದು ವಾಕ್ಚಿತ್ರ 'ಸತಿ ಸುಲೋಚನ' ಬಿಡುಗಡೆ ಆಯ್ತು. ಮೊದಲು ಬಿಡುಗಡೆಯಾದ ಕಾರಣಕ್ಕೆ 'ಸತಿ ಸುಲೋಚನ' ಕನ್ನಡದ ಮೊದಲ ವಾಕ್ಚಿತ್ರ ಎಂಬ ಖ್ಯಾತಿ ಪಡೆದಿದೆ.
ಆದ್ರೆ, ಒಂದು ತಿಂಗಳ ಅಂತರದಲ್ಲಿ.. ಅಂದ್ರೆ, 1934, ಏಪ್ರಿಲ್ 1 ರಂದು ತೆರೆಕಂಡ 'ಭಕ್ತ ಧ್ರುವ' ಚಿತ್ರ 'ಸತಿ ಸುಲೋಚನ' ಚಿತ್ರಕ್ಕೂ ಮೊದಲೇ ತಯಾರಿ ಆರಂಭಿಸಿತ್ತು. ಹೀಗಾಗಿ, ಕನ್ನಡದ ಮೊದಲ ವಾಕ್ಚಿತ್ರ ಎಂಬ ಪಟ್ಟವನ್ನು 'ಭಕ್ತ ಧ್ರುವ' ಚಿತ್ರಕ್ಕೆ ಕೊಡುವವರೂ ಇದ್ದಾರೆ.
ಕನ್ನಡದಲ್ಲಿ ತಯಾರಾದ ಪ್ರಪ್ರಥಮ ವಾಕ್ಚಿತ್ರ 'ಭಕ್ತ ಧ್ರುವ' ಚಿತ್ರವನ್ನ ಚಿತ್ರಮಂದಿರದಲ್ಲಿ ನೋಡಿ ಕೆಲ ಪ್ರೇಕ್ಷಕರು ಓಡಿ ಹೋಗಿದ್ದರು ಅನ್ನೋದು ನಿಮಗೆ ಗೊತ್ತಾ.? ಆ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ, ಓದಿರಿ...

ಭಕ್ತಿ ಪ್ರಧಾನ ಚಿತ್ರ
'ಭಕ್ತ ಧ್ರುವ'.. ಶೀರ್ಷಿಕೆ ಹೇಳುವಂತೆ ಇದೊಂದು ಭಕ್ತಿ ಪ್ರಧಾನ ಚಿತ್ರ. 1933 ರಲ್ಲಿ ವಿಧಿವಶರಾದ ಕರ್ನಾಟಕದ ರಂಗಭೂಮಿ ದಿಗ್ಗಜ ಎ.ವಿ.ವರದಾಚಾರ್ ರವರಿಗೆ ಗೌರವ ಸಲ್ಲಿಸುವ ಸಲುವಾಗಿ, ಅವರ ಹೆಸರಿನಲ್ಲಿ ನೆನಪಿನ ಮಂದಿರ ನಿರ್ಮಿಸಲು ಹಣ ಗಳಿಕೆಗೆಂದು ತಯಾರಿಸಿದ ಚಿತ್ರ 'ಭಕ್ತ ಧ್ರುವ'.
ಕನ್ನಡದ
ಮೊದಲ
ವಾಕ್ಚಿತ್ರದ
ನಟಿ
ಎಸ್
ಕೆ
ಪದ್ಮಾದೇವಿ
ನಿಧನ

ಚಿತ್ರದ ತಾರಾಬಳಗ
ವಿಷ್ಣುವಿನ ಮೇಲೆ ಅಪಾರ ಭಕ್ತಿ ಹೊಂದಿರುವ ಬಾಲಕ ಧ್ರುವನ ಕಥೆ ಹೊಂದಿರುವ ಚಿತ್ರ ಇದಾಗಿದ್ದು, ಪರ್ಶ್ವನಾಥ್ ಆಲ್ತೇಕರ್ ನಿರ್ದೇಶನ ಮಾಡಿದ್ದರು. ಹನ್ನೆರಡು ರೀಲುಗಳ (142 ನಿಮಿಷ) ಈ ಚಿತ್ರದಲ್ಲಿ ಎ.ವಿ.ವರದಾಚಾರ್ ಮೊಮ್ಮಗ ಮಾಸ್ಟರ್ ಮುತ್ತು 'ಧ್ರುವ'ನ ಪಾತ್ರ ನಿರ್ವಹಿಸಿದ್ದರು. ಟಿ.ದ್ವಾರಕನಾಥ್, ಎಸ್.ಕೆ.ಪದ್ಮಾದೇವಿ, ದೇವುಡು ನರಸಿಂಹ ಶಾಸ್ತ್ರಿ 'ಭಕ್ತ ಧ್ರುವ' ಚಿತ್ರದಲ್ಲಿ ನಟಿಸಿದ್ದರು.

ಸೆಲೆಕ್ಟ್ ಸಿನಿಮಾ ಹಾಲ್ ನಲ್ಲಿ ಪ್ರದರ್ಶನ
'ಭಕ್ತ ಧ್ರುವ' ತಯಾರಾಗಿದ್ದು ಮುಂಬೈನ ಅಜಂತಾ ಸ್ಟುಡಿಯೋದಲ್ಲಿ. ಕನ್ನಡದಲ್ಲಿ ತಯಾರಾದ ಈ ಮೊದಲ ವಾಕ್ಚಿತ್ರ ಬೆಂಗಳೂರಿನ ಕೆಂಪೇಗೌಡ ರಸ್ತೆಯ 'ಸೆಲೆಕ್ಟ್ ಸಿನಿಮಾ' ಹಾಲ್ ನಲ್ಲಿ ಪ್ರದರ್ಶನ ಕಂಡಿತು.

ಮೂರ್ಛೆ ಹೋದ ಮಹಿಳೆಯರು
'ಭಕ್ತ ಧ್ರುವ' ಚಿತ್ರದಲ್ಲಿ ಧ್ರುವನ ತಪಸ್ಸಿನ ಕಾಲದ ಒಂದು ಸನ್ನಿವೇಶ ಇದೆ. ಈ ಸೀನ್ ನಲ್ಲಿ ಸಿಂಹದ ಗರ್ಜನೆ ಕೇಳಿ ಬಂದಾಗ, ಚಿತ್ರಮಂದಿರದಲ್ಲಿದ್ದ ಮಹಿಳೆಯರು ಮೂರ್ಛೆಗೊಂಡಿದ್ದರು. ವಾಕ್ಚಿತ್ರದಲ್ಲಿನ ಪ್ರಾಣಿಗಳ ಶಬ್ಧದಿಂದಾಗಿ ಎಷ್ಟೋ ಪ್ರೇಕ್ಷಕರು ಚಿತ್ರಮಂದಿರದಿಂದ ಓಡಿಹೋಗಿದ್ದರು.

ಕಳೆದ ವರ್ಷ ನಿಧನರಾದ ಎಸ್.ಕೆ.ಪದ್ಮಾದೇವಿ
'ಭಕ್ತ ಧ್ರುವ' ಚಿತ್ರದ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದ ನಟಿ ಎಸ್.ಕೆ.ಪದ್ಮಾದೇವಿ ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಇಹಲೋಕ ತ್ಯಜಿಸಿದರು. ಅವರಿಗೆ 95 ವರ್ಷ ವಯಸ್ಸಾಗಿತ್ತು.