'ಈ' ಉದ್ಯೋಗಕ್ಕೆ ಸೇರಲು ಮುಂದಾಗಿದ್ದ ನಿಖಿಲ್ ಭಾವಿ ಪತ್ನಿ ರೇವತಿ.!

ಸ್ಯಾಂಡಲ್ ವುಡ್ ನ ಯುವರಾಜ ನಿಖಿಲ್ ಕುಮಾರ್ ಸಿಂಗಲ್ ಸ್ಟೇಟಸ್ ಗೆ ಗುಡ್ ಬೈ ಹೇಳಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಇದೀಗ ಎಂಗೇಜ್ ಆಗಿದ್ದಾರೆ.

ಬೆಂಗಳೂರಿನ ವಿಜಯನಗರದ ಶಾಸಕ ಕೃಷ್ಣಪ್ಪ ಅವರ ಸಂಬಂಧಿ ರೇವತಿ ಮಂಜುನಾಥ್ (ಋತು) ಜೊತೆಗೆ ನಿಖಿಲ್ ಕುಮಾರ್ ನಿಶ್ಚಿತಾರ್ಥ ಅದ್ಧೂರಿಯಾಗಿ ನಡೆದಿದೆ. ಅಪ್ಪ-ಅಮ್ಮನ ಇಚ್ಛೆಯಂತೆ ರೇವತಿ ಕೈಬೆರಳಿಗೆ ನಿಖಿಲ್ ಕುಮಾರ್ ವಜ್ರದುಂಗರ ತೊಡಿಸಿ, ಮದುವೆ ಆಗಲು ಸಜ್ಜಾಗಿದ್ದಾರೆ.

''ರೇವತಿ ನನಗೆ ಪರ್ಫೆಕ್ಟ್ ಲೈಫ್ ಪಾರ್ಟ್ನರ್. ಸುಸಂಸ್ಕೃತ ಹೆಣ್ಣು ರೇವತಿ ಸಿಕ್ಕಿದ್ದು ನನ್ನ ಪುಣ್ಯ'' ಅಂತ ಎಂಗೇಜ್ಮೆಂಟ್ ಮಾಡಿಕೊಂಡ ಖುಷಿಯಲ್ಲಿ ನಿಖಿಲ್ ಹೇಳಿದ್ದಾರೆ. ಇತ್ತ ''ಐ ಆಮ್ ಹ್ಯಾಪಿ'' ಅಂತ ಮೀಡಿಯಾ ಮುಂದೆ ರೇವತಿ ನಾಚಿ ನೀರಾಗಿದ್ದಾರೆ.

ಚಿತ್ರರಂಗ ಮತ್ತು ರಾಜಕೀಯ ರಂಗಕ್ಕೂ ರೇವತಿಗೂ ಸಂಬಂಧ ಇಲ್ಲ ಎಂಬ ವಿಚಾರ ನಿಮಗೆಲ್ಲ ಗೊತ್ತೇ ಇದೆ. ಈಗ, ನಿಖಿಲ್ ಭಾವಿ ಪತ್ನಿ ರೇವತಿ ಬಗ್ಗೆ ನಿಮಗ್ಯಾರಿಗೂ ತಿಳಿಯದ ಸತ್ಯ ಸಂಗತಿಯೊಂದನ್ನ ಹೇಳ್ತೀವಿ ಕೇಳಿ...

ಉದ್ಯೋಗಕ್ಕೆ ಸೇರಲು ಮುಂದಾಗಿದ್ದ ರೇವತಿ

ಉದ್ಯೋಗಕ್ಕೆ ಸೇರಲು ಮುಂದಾಗಿದ್ದ ರೇವತಿ

ನಿಖಿಲ್ ಮತ್ತು ರೇವತಿಯ ಮದುವೆ ಮಾತುಕತೆ ನಡೆದಿದ್ದು, ಹೆಣ್ಣು ನೋಡುವ ಶಾಸ್ತ್ರ ಆಗಿದ್ದು ಕಳೆದ ತಿಂಗಳಲ್ಲಿ (ಜನವರಿ). ಈ ಮದುವೆ ಮಾತುಕತೆ ನಡೆಯುವ ಮುನ್ನ ಒಂದು ಉದ್ಯೋಗಕ್ಕೆ ಸೇರಲು ರೇವತಿ ಮುಂದಾಗಿದ್ದರು. ಅದು ಯಾವ ಉದ್ಯೋಗ ಗೊತ್ತೇ.?

ಜ್ಯುವೆಲ್ಲರಿ ಡಿಸೈನಿಂಗ್ ಕಲಿತಿರುವ ರೇವತಿ

ಜ್ಯುವೆಲ್ಲರಿ ಡಿಸೈನಿಂಗ್ ಕಲಿತಿರುವ ರೇವತಿ

ಕಳೆದ ವರ್ಷ (2019) ಜ್ಯುವೆಲ್ಲರಿ ಡಿಸೈನಿಂಗ್ (ಆಭರಣ ವಿನ್ಯಾಸ) ನಲ್ಲಿ ರೇವತಿ ಡಿಪ್ಲೋಮಾ ಕೋರ್ಸ್ ಮಾಡಿದ್ದರು. ಆರು ತಿಂಗಳ ಕಾಲ ಅರ್ವಾ ಅಕಾಡೆಮಿಯಲ್ಲಿ ಜ್ಯುವೆಲ್ಲರಿ ಡಿಸೈನಿಂಗ್ ಮತ್ತು ಜ್ಯುವೆಲ್ಲರಿ ಮೇಕಿಂಗ್ ನಲ್ಲಿ ತರಬೇತಿ ಪಡೆದಿದ್ದರು. ಇದೇ ಫೀಲ್ಡ್ ನಲ್ಲಿ ವೃತ್ತಿ ಆರಂಭಿಸುವ ಇಚ್ಛೆ ರೇವತಿಗೆ ಇತ್ತು.

ಅಷ್ಟರಲ್ಲಿ ಮದುವೆ ಮಾತುಕತೆ ಆಯ್ತು.!

ಅಷ್ಟರಲ್ಲಿ ಮದುವೆ ಮಾತುಕತೆ ಆಯ್ತು.!

ಆರ್ಕಿಟೆಕ್ಚರ್ ಓದಿರುವ ರೇವತಿಗೆ ಜ್ಯುವೆಲ್ಲರಿ ಡಿಸೈನಿಂಗ್ ಮತ್ತು ಮೇಕಿಂಗ್ ಬಗ್ಗೆ ಆಸಕ್ತಿ ಇತ್ತು. ಹೀಗಾಗಿ, ತರಬೇತಿಗೆಂದು ಬೆಂಗಳೂರಿನ ಸದಾಶಿವನಗರದಲ್ಲಿರುವ ಅರ್ವಾ ಅಕಾಡೆಮಿಗೆ ಸೇರಿದ್ದರು. ಕಳೆದ ನವೆಂಬರ್ ನಲ್ಲಿ ಆಭರಣ ವಿನ್ಯಾಸದ ಕೋರ್ಸ್ ಮುಗಿಸಿದ ರೇವತಿಗೆ ಉದ್ಯೋಗಾವಕಾಶವಿತ್ತು. ಅಷ್ಟರಲ್ಲಿ, ರೇವತಿ-ನಿಖಿಲ್ ಕಲ್ಯಾಣದ ಮಾತುಕತೆ ನಡೆದಿದೆ.

'ಕ್ರಿಯೇಟಿವ್' ರೇವತಿ

'ಕ್ರಿಯೇಟಿವ್' ರೇವತಿ

''ರೇವತಿ ತುಂಬಾ ಕ್ರಿಯೇಟಿವ್. ತುಂಬಾ ಚೆನ್ನಾಗಿ ಆಭರಣ ವಿನ್ಯಾಸ ಮಾಡುತ್ತಿದ್ದರು. ಯಾವಾಗಲೂ ಪಂಕ್ಚುವಲ್ ಆಗಿ ಕ್ಲಾಸ್ ಗೆ ಬರುತ್ತಿದ್ದರು'' ಅಂತ 'ಫಿಲ್ಮಿಬೀಟ್ ಕನ್ನಡ'ಕ್ಕೆ ತಿಳಿಸಿದ್ದಾರೆ ಅರ್ವಾ ಅಕಾಡೆಮಿಯ ಮುಖ್ಯಸ್ಥೆ ಪ್ರಜ್ಞಾ ಹೆಬ್ಬಾಲೆ.

ನಿಖಿಲ್ ಸಪೋರ್ಟ್ ಸಿಕ್ಕರೆ..

ನಿಖಿಲ್ ಸಪೋರ್ಟ್ ಸಿಕ್ಕರೆ..

ಆರ್ಕಿಟೆಕ್ಟ್ ಆಗಿರುವ ರೇವತಿ, ಆಭರಣ ವಿನ್ಯಾಸದಲ್ಲೂ ಪರಿಣಿತಿ ಪಡೆದಿದ್ದಾರೆ. ವಿದ್ಯಾವಂತೆ ಮತ್ತು ಪ್ರತಿಭಾವಂತೆ ಆಗಿರುವ ರೇವತಿಗೆ ನಿಖಿಲ್ ಕುಮಾರ್ ಸಪೋರ್ಟ್ ಸಿಕ್ಕಿದರೆ, ಕನ್ನಡ ಚಿತ್ರರಂಗಕ್ಕೆ ನೂತನ ಆಭರಣ ವಿನ್ಯಾಸಕಿ ಸಿಕ್ಕಿದ ಹಾಗೆ.! ಇಷ್ಟ ಪಟ್ಟು ಕಲಿತ ರೇವತಿಯ ಕನಸು ಈಡೇರಿದ ಹಾಗೆ.!

ಯಾರೀ ರೇವತಿ.?

ಯಾರೀ ರೇವತಿ.?

ಬೆಂಗಳೂರಿನ ವಿಜಯನಗರದ ಕಾಂಗ್ರೆಸ್ ಶಾಸಕ ಕೃಷ್ಣಪ್ಪ ಅವರ ಹಿರಿಯ ಸಹೋದರನ ಮೊಮ್ಮಗಳು ಈ ರೇವತಿ. ಮಂಜುನಾಥ್ ಮತ್ತು ಶ್ರೀದೇವಿ ದಂಪತಿಯ ಪುತ್ರಿ ರೇವತಿ. ಅಂದ್ಹಾಗೆ ರೇವತಿಗೆ 'ಋತು' ಎಂಬ ಮತ್ತೊಂದು ಹೆಸರಿದೆ.

More from Filmibeat

English summary
Revathi Manjunath has done a Jewellery Designing Course before getting engaged to Kannada Actor, Politician Nikhil Kumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X