'KGF' ಅಮ್ಮ ನನ್ನಷ್ಟು ಸ್ಟ್ರಾಂಗ್ ಅಲ್ಲ.. ಪ್ರಶಾಂತ್ ನೀಲ್‌ಗೆ ಕೇಳಿ ಹೇಳ್ತಾರೆ"; ಪುಷ್ಪಾ

ನಟ ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುತ್ತದೆ. ತಮ್ಮ ನೇರಾನೇರಾ ಮಾತುಗಳಿಂದ ಅವರು ಗಮನ ಸೆಳೆಯುತ್ತಿದ್ದಾರೆ. ತಮ್ಮನ್ನು ಟ್ರೋಲ್ ಮಾಡುವವರ ಬಗ್ಗೆ ಕೂಡ ಖಡಕ್ ಆಗಿಯೇ ತಿರುಗೇಟು ನೀಡುತ್ತಿದ್ದಾರೆ.

ಸಾಮಾನ್ಯ ಬಸ್ ಡ್ರೈವರ್ ಮಗ ಯಶ್ ಇವತ್ತು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಪ್ಯಾನ್ ವರ್ಲ್ಡ್ ಸಿನಿಮಾಗಳಲ್ಲಿ ನಟಿಸೋದು ಮಾತ್ರವಲ್ಲ, ನೂರಾರು ಕೋಟಿ ಹಣ ಹಾಕಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಮೊದಲಿನಿಂದಲೂ ಯಶ್ ಅಂದುಕೊಂಡಿದ್ದನ್ನು ಸಾಧಿಸುತ್ತಾ ಬರ್ತಿದ್ದಾರೆ. 'KGF' ರಾಕಿಭಾಯ್ ಪಾತ್ರದಂತೆ ಯಶ್ ನಿಜ ಜೀವನದಲ್ಲಿ ಬಹಳ ಮಹತ್ವಾಕಾಂಕ್ಷಿ. ಅಂದುಕೊಂಡಿದ್ದನ್ನು ಮಾಡುವವರೆಗೂ ಬಿಡುವ ಜಾಯಮಾನದವರಲ್ಲ.

am Stronger Than KGF s Mom Yash s Mother Pushpa Arun Kumar s Bold Reply Goes Viral

10 ವರ್ಷಗಳ ಹಿಂದೆಯೇ ಯಶ್ ತಮ್ಮ ಮುಂದಿನ ಗುರಿ ಏನು ಎಂದು ಆಪ್ತರು ಎದುರು ಹೇಳುತ್ತಿದ್ದರಂತೆ. ಆದರೆ ಕೆಲವರು ನಕ್ಕಿದ್ದೂ ಇದೆ. ಏನೇನೊ ಮಾತಾಡ್ತಾನೆ, ಅಪ್ಪಿತಪ್ಪಿ ಖಿನ್ನತೆಗೆ ಜಾರಿಬಿಡ್ತಾನೆ ಎಂದುಕೊಂಡವರು ಇದ್ದಾರೆ. ಆದರೆ ಯಶ್ ಮಾತ್ರ ಹೇಳಿದಂತೆ ಸಾಧಿಸಿ ತೋರಿಸಿದ್ದಾರೆ. ಪರಭಾಷಿಕರು ಮತ್ತೆ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವಂತೆ ಮಾಡಿದ್ದಾರೆ.

ಯಶ್ ಸಾಧನೆಯ ಹಿಂದೆ ಕೆಲವರ ಪರಿಶ್ರಮ ಇದೆ. ಅದರಲ್ಲಿ ತಾಯಿ ಪುಷ್ಪಾ ಅವರ ಬೆಂಬಲವೂ ಕೂಡ ಬಹಳ ಇದೆ. ಇದನ್ನು ಸ್ವತಃ ಅವರೇ ಹೇಳಿದ್ದಾರೆ. ಫಸ್ಟ್ ಡೇ ಫಸ್ಟ್ ಶೋ ಕನ್ನಡ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. 'ಕೊತ್ತಲವಾಡಿ' ಸಿನಿಮಾ ರಿಲೀಸ್ ಬಳಿಕ ನನ್ನ ಕಾನ್ಫಿಡೆನ್ಸ್ ಡಬಲ್ ಆಗಿದೆ ಎಂದಿದ್ದಾರೆ. ನಿಮ್ಮ ಧೈರ್ಯ ನೋಡಿದರೆ ಯಶ್ ಅವ್ರು ಸಾಧನೆಗೆ ನೀವೇ ಸ್ಫೂರ್ತಿ ಎನ್ನುವುದು ಗೊತ್ತಾಗುತ್ತದೆ, 'KGF' ಚಿತ್ರದಲ್ಲಿ ರಾಕಿ ತಾಯಿ ಶಾಂತಮ್ಮ ರೀತಿ ನೀವು ಇರುವುದಕ್ಕೆ ಯಶ್ ಅವರು ಇಷ್ಟೆಲ್ಲಾ ಸಾಧನೆ ಮಾಡುತ್ತಿದ್ದಾರೆ ಎನ್ನುವ ಮಾತಿಗೆ ಪುಷ್ಪಾ ಅವರು ಉತ್ತರಿಸಿದ್ದಾರೆ.

am Stronger Than KGF s Mom Yash s Mother Pushpa Arun Kumar s Bold Reply Goes Viral

"ಪ್ರಶಾಂತ್ ನೀಲ್ ಅವ್ರನ್ನ ಕೇಳಿ ನನ್ನನ್ನ 'KGF' ಅಮ್ಮ ಅಂತ್ಲೇ ಕರೆಯೋದಂತೆ. ಕೆಲವರು ಹೇಳ್ತಿರ್ತಾರೆ. ಆ ಸಿನ್ಮಾ ಅಮ್ಮ ಏನೇನು ಅಲ್ಲ ಬಿಡಿ, ನನ್ನಷ್ಟು ಸ್ಟ್ರಾಂಗ್ ಆಗಿರೋದಕ್ಕೆ ಸಾಧ್ಯವೇ ಇಲ್ಲ, ಅವ್ರು ಒಂದು ಸಾಲು ಚಿತ್ರದಲ್ಲಿ ಹೇಳಿದ್ದಾರೆ. ನಾನು 25 ವರ್ಷ ಯಶ್‌ಗೆ ಹೇಳ್ತಾ ಬಂದೆ, ನೀನು ದೊಡ್ಡದಾಗಿ ಬೆಳೀಬೇಕು ಅಂತ. ನೀನು ಬೇರೆ ಭಾಷೆಗೆ ಹೋಗಬೇಕು, ಇಲ್ಲಿನ ಪ್ರತಿಭೆಗಳನ್ನು ಅಲ್ಲಿಗೆ ಕರ್ಕೊಂಡ್‌ ಹೋಗ್ಬೇಕು ಅಂತಿದ್ದೆ. ನಾನು ಹೇಳಿದ್ದನ್ನು ಅವ್ನು ಮಾಡ್ತಿದ್ದಾನೆ. ಮನೆಯಲ್ಲಿ ಸದಾ ಪಾಸಿಟಿವ್ ಆಗಿರ್ಬೇಕು, ಆಗಲ್ಲ ಎನ್ನುವ ಪದ ಪಕ್ಕಕ್ಕಿಟ್ಟುಬಿಡಬೇಕು, ಎಲ್ಲವೂ ಸಾಧ್ಯ" ಎಂದಿದ್ದಾರೆ.

ಇನ್ನು ಯಶ್ ನಟನೆಯ ಸಿನಿಮಾ ನಿರ್ಮಾಣ ಮಾಡ್ತೀರಾ? ಎನ್ನುವ ಪ್ರಶ್ನೆಗೆ 2000 ಕೋಟಿ ರೂ. ಸಾಲ ಕೊಟ್ಟರೆ ಮಾಡ್ತೀನಿ ಎಂದು ಸಂದರ್ಶನವೊಂದರಲ್ಲಿ ಪುಷ್ಪಾ ಅವರು ಹೇಳಿದ್ದರು. ಅದನ್ನು ಕೆಲವರು ಟ್ರೋಲ್ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿ ತಿರುಗೇಟು ಕೊಟ್ಟಿದ್ದಾರೆ. "2000 ಕೋಟಿ ರೂ. ಬಜೆಟ್ ಅಂತೆ, ಹಾಗೆ ಹೀಗೆ ಅಂತ ನೆಗೆಟಿವ್ ಹಾಕಿದ್ರು, ನೀವು ದಡ್ಡರಾ? 2000 ಕೋಟಿ ಯಶ್ ಚಿತ್ರಕ್ಕೆ ಹೇಳಿದ್ದು. ಪೃಥ್ವಿ ಅಂಬರ್ ಚಿತ್ರಕ್ಕೆ ಹಾಕ್ತೀನಿ ಅಂದ್ನಾ? ಅದನ್ನು ಸರಿಯಾಗಿ ಅರ್ಥ ಮಾಡ್ಕೊಳ್ಳಿ, ನನ್ನ ದುಡ್ಡು ನನ್ನ ಸಿನ್ಮಾ, ನಾನು ಟ್ಯಾಕ್ಸ್ ಕೊಟ್ತೀನಿ. ನಿಮಗ್ಯಾಕೆ ಅದೆಲ್ಲಾ? ನನ್ನ ದುಡ್ಡು ಹೋಗಲ್ಲ, ಬಂದೇ ಬರುತ್ತೆ" ಎಂದು ಖಡಕ್ ಕೌಂಟರ್ ಕೊಟ್ಟಿದ್ದಾರೆ.

More from Filmibeat

English summary
"Pushpa Arun Kumar on Critics: ‘I Raised a Star, Now Let Me Dream Bigger’"
Read more about: yash sandalwood kgf
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X