For Quick Alerts
  ALLOW NOTIFICATIONS  
  For Daily Alerts

  ನಾಗಾರ್ಜುನ ಹಾಗೂ ಟಬು ಅಫೇರ್ ಬಗ್ಗೆ ಅಮಲಾ ಅಕ್ಕಿನೇನಿ ಅಭಿಪ್ರಾಯವೇನಿತ್ತು?

  |

  ಟಾಲಿವುಡ್ ಕಿಂಗ್ ನಾಗಾರ್ಜುನ ಹಾಗೂ ನಟಿ ಟಬು ಒಂದು ಕಾಲದ ಬೆಸ್ಟ್ ಪೇರ್. ಈ ಜೋಡಿಯನ್ನು ತೆರೆಮೇಲೆ ನೋಡಿ ಖುಷಿ ವ್ಯಕ್ತಪಡಿಸಿದ್ದವರಿಗೇನು ಕಮ್ಮಿಯಿಲ್ಲ. ಒಂದರ ಹಿಂದೊಂದು ಸಿನಿಮಾ ಮಾಡುತ್ತಿದ್ದಂತೆ ನಾಗರ್ಜುನ ಹಾಗೂ ಟಬು ಬಗ್ಗೆ ಸುದ್ದಿಯೊಂದು ಹರಿದಾಡಿತ್ತು.

  ನಾಗಾರ್ಜುನ ಅದಾಗಲೇ ಟಾಲಿವುಡ್‌ನಲ್ಲಿ ಸ್ಟಾರ್ ಪಟ್ಟಕ್ಕೇರಿದ್ದರು. ಅಕ್ಕಿನೇನಿ ಕುಟುಂಬದ ಕುಡಿ ಟಾಲಿವುಡ್‌ನಲ್ಲಿ ಗಟ್ಟಿಯಾಗಿ ನೆಲೆಯೂರಿತ್ತು. ಇತ್ತ ಸಿನಿಮಾಗಳು ಕೂಡ ಬ್ಯಾಕ್ ಟು ಬ್ಯಾಕ್ ಹಿಟ್ ಲಿಸ್ಟ್ ಸೇರುತ್ತಲೇ ಇತ್ತು. ಆದರೆ, ಇಬ್ಬರ ನಡುವೆ ಅಫೇರ್ ಇದೆ ಅನ್ನೋ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತ್ತು.

  ದಸರಾ ಬಾಕ್ಸಾಫೀಸ್ ಫೈಟ್: ಯಾವೆಲ್ಲಾ ಸಿನಿಮಾಗಳು ರಿಲೀಸ್ ಆಗ್ತಿದೆ ಗೊತ್ತಾ?ದಸರಾ ಬಾಕ್ಸಾಫೀಸ್ ಫೈಟ್: ಯಾವೆಲ್ಲಾ ಸಿನಿಮಾಗಳು ರಿಲೀಸ್ ಆಗ್ತಿದೆ ಗೊತ್ತಾ?

   'ನಿನ್ನೆ ಪೆಳ್ಳಾಡತಾ'ದಲ್ಲಿ ಜೊತೆಯಾಗಿದ್ದ ನಾಗ್-ಟಬು!

  'ನಿನ್ನೆ ಪೆಳ್ಳಾಡತಾ'ದಲ್ಲಿ ಜೊತೆಯಾಗಿದ್ದ ನಾಗ್-ಟಬು!

  ನಾಗಾರ್ಜುನ ಟಾಲಿವುಡ್‌ನ ಜನಪ್ರಿಯ ಹೀರೊ. ನಟ ಅನ್ನೋದರ ಜೊತೆಗೆ ನಿರ್ಮಾಪಕರಾಗಿಯೂ, ಬ್ಯುಸಿನೆಸ್ ಮ್ಯಾನ್ ಆಗಿಯೂ ಗುರುತಿಸಿಕೊಂಡಿದ್ದಾರೆ. ನಾಗಾರ್ಜುನ ಹಾಗೂ ಟಬು ಇಬ್ಬರೂ 1996ರಲ್ಲಿ 'ನಿನ್ನೆ ಪೆಳ್ಳಾಡತಾ' ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು. ಇಬ್ಬರ ಕೆಮಿಸ್ಟ್ರಿ ಪ್ರೇಕ್ಷಕರಿಗೆ ತುಂಬಾನೇ ಇಷ್ಟ ಆಗಿತ್ತು. ಸಿನಿಮಾದಲ್ಲಿ ತುಂಬಾನೇ ಅನ್ಯೋನ್ಯವಾಗಿ ಕಾಣಿಸಿಕೊಂಡ ಜೋಡಿಗೆ ಬಹುಪರಾಕ್ ಸಿಕ್ಕಿತ್ತು. ಇಲ್ಲಿಂದ ಅಭಿಮಾನಿಗಳು ನಾಗಾರ್ಜುನ ಹಾಗೂ ಟಬು ಇಬ್ಬರೂ ಹೆಚ್ಚು ಸಿನಿಮಾಗಳಲ್ಲಿ ನಟಿಸಬೇಕು ಅಂತ ಬಯಸಿದ್ದರು.

   ಮದುವೆ ಬಳಿಕವೂ ಚಿಗುರಿತ್ತು ಪ್ರೀತಿ!

  ಮದುವೆ ಬಳಿಕವೂ ಚಿಗುರಿತ್ತು ಪ್ರೀತಿ!

  ಟಬು ಜೊತೆ ನಟಿಸುವಾಗ ನಾಗಾರ್ಜುನಗೆ ಮದುವೆ ಆಗಿತ್ತು. ಆ ವೇಳೆ ಇಬ್ಬರೂ ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಹೀಗಿದ್ದರೂ, ಇಬ್ಬರಲ್ಲೂ ಪ್ರೀತಿ ಹುಟ್ಟಿತ್ತು ಅನ್ನೋ ಮಾತು ಕೇಳಿ ಬಂದಿತ್ತು. ನಾಗಾರ್ಜುನ ಹಾಗೂ ಟಬು ಇಬ್ಬರೂ 10 ವರ್ಷ ಕಾಲ ಒಟ್ಟಿಗೆ ಇದ್ದರು ಅನ್ನೋ ಮಾತು ಕೇಳಿ ಬಂದಿತ್ತು. ನಾಗಾರ್ಜುನ ನಟಿ ಟಬು ಜೊತೆ ಪ್ರೀತಿಯಲ್ಲಿ ಬಿದ್ದಿದ್ದರೂ, ಮದುವೆ ಮುರಿದುಕೊಳ್ಳಲು ಇಷ್ಟ ಪಟ್ಟಿರಲಿಲ್ಲ. ಇದನ್ನು ಅರಿತ ಟಬು ಟಾಲಿವುಡ್ ಕಿಂಗ್ ನಾಗಾರ್ಜುನರಿಂದ ಹೊರ ಉಳಿದಿದ್ದರು ಅನ್ನೋ ಮಾತು ಕೇಳಿ ಬಂದಿತ್ತು. ಇವರಿಬ್ಬರ ಅಫೇರ್ ಬಗ್ಗೆ ಸಾಕಷ್ಟು ಸದ್ದು ಮಾಡಿತ್ತು. ಈ ಸಂಬಂಧದ ಬಗ್ಗೆ ನಾಗಾರ್ಜುನ ಪತ್ನಿ ಅಮಲಾ ಈ ಹಿಂದೆ ಹೇಳಿಕೆಯನ್ನು ನೀಡಿದ್ದರು.

  'ಕಿಚ್ಚ ತೆಲುಗಿನವರು' ಎಂದಿದ್ದೇಕೆ ನಾಗಾರ್ಜುನ? 'ಸುದೀಪ್ ಕನ್ನಡದವರಲ್ವಾ?'ಕಿಚ್ಚ ತೆಲುಗಿನವರು' ಎಂದಿದ್ದೇಕೆ ನಾಗಾರ್ಜುನ? 'ಸುದೀಪ್ ಕನ್ನಡದವರಲ್ವಾ?

   ಅಮಲಾ ಹೇಳಿದ್ದೇನು?

  ಅಮಲಾ ಹೇಳಿದ್ದೇನು?

  ಹಲವು ವರ್ಷಗಳಿಂದ ನಾಗಾರ್ಜುನ ಹಾಗೂ ಟಬು ಅಫೇರ್ ಬಗ್ಗೆ ಸುದ್ದಿ ಹಬ್ಬುತ್ತಲೇ ಇತ್ತು. ಇದೇ ವಿಚಾರವಾಗಿ ನಾಗಾರ್ಜುನ ಪತ್ನಿ ಅಮಲಾ ಅಕ್ಕಿನೇನಿ ಮನಬಿಚ್ಚಿ ಮಾತಾಡಿದ್ದರು. " ಟಬು ನನ್ನ ಬೆಸ್ಟ್ ಫ್ರೆಂಡ್. ತನ್ನ ಪತಿ ಮೇಲೆ ಇಟ್ಟಿರುವ ನಂಬಿಕೆಯನ್ನು ಯಾರೂ ಒಡೆಯಲು ಸಾಧ್ಯವಿಲ್ಲ. ಈ ಅಫೇರ್ ವಿಷಯದ ಬಗ್ಗೆ ನಾನಾಗಲಿ ಅಥವಾ ನನ್ನ ಪತಿಯಾಗಲಿ ಎಂದಿಗೂ ಚರ್ಚೆ ಮಾಡಿಲ್ಲ. ನನ್ನ ಮನೆ ಪವಿತ್ರವಾಗಿ ದೇವಾಲಯದಂತಿದೆ. ಸಿನಿಮಾರಂಗಕ್ಕೆ ಸಂಬಂಧಿಸಿದ ಅಹಿತಕರ ಘಟನೆಗಳನ್ನು ಮನೆವರೆಗೂ ತರೋದು ಇಷ್ಟವಿಲ್ಲ.' ಎಂದು ಖಡಕ್ ಆಗಿ ಹೇಳಿದ್ದರು.

   ಟಬು ಹೇಳಿದ್ದೇನು?

  ಟಬು ಹೇಳಿದ್ದೇನು?

  ಈ ಹಿಂದೆ ನೀಡಿದ ಸಂದರ್ಶನದಲ್ಲಿ ನಾಗಾರ್ಜುನ ಜೊತೆಗಿನ ಅಫೇರ್ ಬಗ್ಗೆ ಮಾತಾಡಿದ್ದರು. "ನನ್ನ ಹಾಗೂ ನಾಗಾರ್ಜುನ ಅವರ ಸಂಬಂಧವನ್ನು ಬಣ್ಣಿಸಲು ಸಾಧ್ಯವಿಲ್ಲ. ಇದು ಸಂಬಂಧ ಯಾರಿಗೂ ಅರ್ಥ ಆಗುವುದಿಲ್ಲ. ನಾವು ಇಂದಿಗೂ ಒಳ್ಳೆ ಸ್ನೇಹಿತರು. ನಾಗಾರ್ಜುನ ಜೊತೆ ನಾನು ಆರಾಮಾಗಿ ಮಾತಾಡಬಹುದು" ಎಂದು ಟಬು ಹೇಳಿಕೊಂಡಿದ್ದರು. ಹೀಗಾಗಿ ನಾಗಾರ್ಜುನ ಹಾಗೂ ಟಬು ಇಬ್ಬರದ್ದು ಸ್ನೇಹನಾ? ಪ್ರೀತಿನಾ? ಅನ್ನೋದು ಇನ್ನೂ ರಹಸ್ಯವಾಗಿಯೇ ಉಳಿದಿದೆ.

  "ಮದುವೆ ಆಗದೇ ಗರ್ಭ ಧರಿಸಬಹುದು": ಟಬು ಬೋಲ್ಡ್‌ ಕಾಮೆಂಟ್ಸ್

  English summary
  Amala Akkineni Open Up About Husband Nagarjuna And Tabu Rumored Affair, Know More.
  Wednesday, September 21, 2022, 19:27
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X