twitter
    For Quick Alerts
    ALLOW NOTIFICATIONS  
    For Daily Alerts

    ಯಶಸ್ಸು ಪಡೆಯುವುದು ಹೇಗೆ?, ಬಚ್ಚನ್ ಹೇಳುವ ಈ 6 ಅಂಶಗಳನ್ನು ಪಾಲಿಸಿ

    |

    ಅಂದುಕೊಂಡ ಕೆಲಸ ಮಾಡಬೇಕು, ಜೀವನದಲ್ಲಿ ಯಶಸ್ಸು ಗಳಿಸಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಆದರೆ, ಅದು ಹೇಗೆ?, ಸಕ್ಸಸ್ ಸಿಗಬೇಕು ಅಂದರೆ ಏನು ಮಾಡಬೇಕು?, ಇದು ಅನೇಕರಲ್ಲಿ ಅವಿತುಕೊಂಡ ಪ್ರಶ್ನೆ.

    ನಟ ಅಮಿತಾಭ್ ಬಚ್ಚನ್ ಈ ವಿಷಯದ ಬಗ್ಗೆ ಆಗಾಗ ಸಂದರ್ಶನಗಳಲ್ಲಿ ಮಾತನಾಡಿದ್ದಾರೆ. ಒಬ್ಬ ವ್ಯಕ್ತಿ ಸಕ್ಸಸ್ ಪಡೆಯಬೇಕು ಅಂದರೆ ಏನು ಮಾಡಬೇಕು ಅಂತ ಹೇಳಿದ್ದಾರೆ. ತಮ್ಮ ಮಾತುಗಳ ಮೂಲಕ ಸ್ಫೂರ್ತಿ ನೀಡುತ್ತಾರೆ.

    ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಅಮಿತಾಬ್ ಗೆ ಮಗನಿಂದ ಭಾವನಾತ್ಮಕ ಪತ್ರಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಅಮಿತಾಬ್ ಗೆ ಮಗನಿಂದ ಭಾವನಾತ್ಮಕ ಪತ್ರ

    ಅಮಿತಾಬ್ ಬಚ್ಚನ್ ಇಂದು (ನವೆಂಬರ್ 7) ಚಿತ್ರರಂಗಕ್ಕೆ ಬಂದು 50 ವರ್ಷಗಳನ್ನು ಪೂರೈಸಿದ್ದಾರೆ. ಇದೇ ದಿನ ಅವರ 'ಸಾತ್ ಹಿಂದೂಸ್ತಾನಿ' ಸಿನಿಮಾ ಬಿಡುಗಡೆ ಆಗಿತ್ತು. ಅಂದು ಒಬ್ಬ ಸಾಮಾನ್ಯನಾಗಿ ಚಿತ್ರರಂಗಕ್ಕೆ ಬಂದ ಅಮಿತಾಬ್ ಇಂದು ಭಾರತ ಚಿತ್ರರಂಗದ ಸೂಪರ್ ಸ್ಟಾರ್ ಆಗಿದ್ದಾರೆ. ಹೀಗಿರುವಾಗ, ಇದಕ್ಕಿಂತ ದೊಡ್ಡ ಯಶಸ್ಸು ಇನ್ನೆನಿದೆ.

    ಅಮಿತಾಭ್ ಚಿತ್ರರಂಗಕ್ಕೆ ಬಂದ ಈ ವಿಶೇಷ ದಿನ ಅವರು ನೀಡುವ 6 ಸಕ್ಸಸ್ ಸೂತ್ರಗಳು ಇಲ್ಲಿವೆ. ಚಿತ್ರರಂಗ ಮಾತ್ರವಲ್ಲದೆ, ಇದು ಯಾವುದೇ ವೃತ್ತಿ ಆಗಿದ್ದರೂ, ಅನ್ವಯ ಆಗುತ್ತದೆ.

    ನಿಮ್ಮ ಶ್ರಮವನ್ನು ನಂಬಿ

    ನಿಮ್ಮ ಶ್ರಮವನ್ನು ನಂಬಿ

    ಅಮಿತಾಭ್ ಬಚ್ಚನ್ ಹಾರ್ಡ್ ವರ್ಕ್ ನಂಬುತ್ತಾರೆ. ಬೆಳಗ್ಗೆ ಬೇಗ ಎದ್ದು ಕೆಲಸ ಶುರು ಮಾಡುತ್ತಾರಂತೆ. ಸೂರ್ಯೋದಯ ಹಾಗೂ ಸೂರ್ಯಾಸ್ತದ ನಡುವಿನ ಸಮಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎನ್ನುತ್ತಾರೆ. ಎಷ್ಟೋ ಬಾರಿ ಒಂದೇ ದಿನ ಮೂರು ಬೇರೆ ಬೇರೆ ಸಿನಿಮಾಗಳಲ್ಲಿ ನಟಿಸುತ್ತಿದ್ದರಂತೆ. ನಿಮ್ಮ ಶ್ರಮವನ್ನು ನೀವು ನಂಬಿ ಎಂದು ಬಿಗ್ ಬಿ ಹೇಳುತ್ತಾರೆ.

    ಕೆಲಸವನ್ನು ಪ್ರೀತಿಸಿ, ಅನುಭವಿಸಿ

    ಕೆಲಸವನ್ನು ಪ್ರೀತಿಸಿ, ಅನುಭವಿಸಿ

    ''ನಾನು ಯಾವುದೇ ಟೆಕ್ನಿಕ್ ಬಳಸುವುದಿಲ್ಲ. ನಾನು ನಟನೆಯನ್ನು ಕಲಿತಿಲ್ಲ. ಆದರೆ, ನಾನು ನಟಿಸುವಾಗ ಖುಷಿಯಿಂದ ಕೆಲಸ ಮಾಡುತ್ತೇನೆ.'' ಇದು ಅಮಿತಾಬ್ ಹೇಳುವ ಮಾತು. ನೀವು ಮಾಡುವ ಕೆಲಸವನ್ನು ಪ್ರೀತಿಸಬೇಕು, ಅದನ್ನು ಅನುಭವಿಸಬೇಕು. ಆಗ ಮಾತ್ರ ಆ ಕೆಲಸ ನಿಮಗೆ ನಿಜವಾದ ಯಶಸ್ಸು ನೀಡುತ್ತದೆ. ಮಾಡುವ ಕೆಲಸದಲ್ಲಿ 100ರಷ್ಟು ಡೆಡಿಕೇಶನ್ ಇರಬೇಕು.

    ಸ್ಯಾಂಡಲ್ ವುಡ್ ಪರದೆ ಮೇಲೆ ಮಿಂಚಿ ಹೋದ ಬಾಲಿವುಡ್ ನಟರಿವರುಸ್ಯಾಂಡಲ್ ವುಡ್ ಪರದೆ ಮೇಲೆ ಮಿಂಚಿ ಹೋದ ಬಾಲಿವುಡ್ ನಟರಿವರು

    ಶಿಸ್ತು, ಸಮಯ ಪ್ರಜ್ಞೆ ಮುಖ್ಯ

    ಶಿಸ್ತು, ಸಮಯ ಪ್ರಜ್ಞೆ ಮುಖ್ಯ

    ನಟನೆ ಮಾತ್ರವಲ್ಲದೆ, ಯಾವುದು ವೃತ್ತಿಯಾದರೂ ಶಿಸ್ತು, ಸಮಯ ಪ್ರಜ್ಞೆ ಬಹಳ ಮುಖ್ಯ. ಅದನ್ನು ಸರಿಯಾಗಿ ಮಾಡಬೇಕು ಎಂದು ಅಮಿತಾಬ್ ಹೇಳುತ್ತಾರೆ. ಬಚ್ಚನ್ ಒಮ್ಮೆ ಒಂದು ಕಾರ್ಯಕ್ರಮಕ್ಕೆ ಹೋಗುವಾಗ ಟ್ರಾಫಿಕ್ ಜಾಮ್ ನಿಂದ ತಡ ಆಗುತ್ತಿತ್ತು. ಆಗ ಅವರು ಕಾರ್ ಇಳಿದು ನಡೆದುಕೊಂಡು ಹೋಗಿ ಸರಿಯಾದ ಸಮಯಕ್ಕೆ ಅಲ್ಲಿ ಇದ್ದರು. ಇದೇ ರೀತಿ ಸರಿಯಾದ ಸಮಯಕ್ಕೆ ಚಿತ್ರೀಕರಣ ಸೆಟ್ ಗೆ ಬರುವುದು ಖಾಯಂ. ಸಮಯಕ್ಕೆ ಗೌರವಸ, ಪಾತ್ರದ ತಯಾರಿಗೆ ಬೇಕಾಗುವ ಶಿಸ್ತು. ಈ ಎರಡು ವಿಷಯಗಳಲ್ಲಿ ಅಮಿತಾಬ್ ಕಟ್ಟುನಿಟ್ಟಾಗಿ ಇರುತ್ತಾರೆ.

    ಕಷ್ಟಗಳನ್ನು ಇಷ್ಟಪಡಲು ಶುರು ಮಾಡಿ

    ಕಷ್ಟಗಳನ್ನು ಇಷ್ಟಪಡಲು ಶುರು ಮಾಡಿ

    ಅಮಿತಾಬ್ ಹೇಳುವ ಹಾಗೆ, ಸಾಧನೆಯ ಹಾದಿಯಲ್ಲಿ ಕಷ್ಟಗಳು ಎಲ್ಲರಿಗೂ ಬರುತ್ತದೆ. ತಿರಸ್ಕಾರಗಳು ಹೆಚ್ಚೆ ಇರುತ್ತದೆ. ಆದರೆ, ಅವನ್ನು ಖುಷಿಯಿಂದ ಸ್ವೀಕಾರ ಮಾಡಿ, ಕಷ್ಟಗಳನ್ನು ಇಷ್ಟಪಡುವುದನ್ನು ಕಲಿಯಬೇಕು. ಪ್ರತಿ ದಿನ ಬೆಳಗ್ಗೆಯೂ ಒಂದು ಹೋರಾಟ ಮಾಡಲು ಏಳಬೇಕು. ಹಿಂದೆ ಆದ ತಪ್ಪುಗಳಿಂದ ಪಾಠಗಳನ್ನ ಕಲಿಯುತ್ತಾ ಹೋಗಬೇಕು.

    ಅಮಿತಾಭ್ ಬಚ್ಚನ್ ಗೆ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಅಮಿತಾಭ್ ಬಚ್ಚನ್ ಗೆ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

    ಇತರರ ಕೆಲಸಕ್ಕೆ ಪ್ರಶಂಸೆ ನೀಡಿ

    ಇತರರ ಕೆಲಸಕ್ಕೆ ಪ್ರಶಂಸೆ ನೀಡಿ

    ಇನ್ನೊಬ್ಬರ ಕೆಲಸ ಇಷ್ಟ ಆದ್ರೆ, ಅವರಿಗೆ ಪ್ರಶಂಸೆ ನೀಡಿ. ಒಂದೇ ಒಂದು ಒಳ್ಳೆಯ ಮಾತು ಆ ವ್ಯಕ್ತಿಗೆ ದೊಡ್ಡ ಬದಲಾವಣೆಗೆ ಕಾರಣ ಆಗಬಹುದು. ಜೊತೆಗೆ ನಿಮಗೆ ನೀವೇ ಸ್ಫೂರ್ತಿ ಪಡೆಯಿರಿ. ಟೀಮ್ ವರ್ಕ್ ನಲ್ಲಿ ನಂಬಿಕೆ ಇದ್ದರೆ, ಮಾಡಿ. ಒಂದು ತಂಡವಾಗಿ ಕೆಲಸ ಮಾಡುವಾಗ, ಮೊದಲು ನಿಮ್ಮ ಕಡೆಯಿಂದ ಎಷ್ಟು ಸಾಧ್ಯವೋ ಅಷ್ಟು ಶ್ರಮ ಹಾಕಿ. ನಿಮ್ಮ ವೀಕ್ನೆಸ್ ಒಪ್ಪಿಕೊಳ್ಳಿ.

    ಸಕ್ಸಸ್ ಗೆ ಶಾರ್ಟ್ ಕಟ್ ಇಲ್ಲ

    ಸಕ್ಸಸ್ ಗೆ ಶಾರ್ಟ್ ಕಟ್ ಇಲ್ಲ

    ಸಕ್ಸಸ್ ಗೆ ಶಾರ್ಟ್ ಕಟ್ ಇಲ್ಲ ಎನ್ನುವುದು ಬಿಗ್ ಬಿ ನಂಬುವ ಮಾತು. ಪ್ರತಿದಿನ ಪ್ರಯತ್ನ ಇರಬೇಕು, ಒಂದೊಂದೆ ಮೆಟ್ಟಿಲು ಏರಬೇಕು. ಸುಲಭವಾಗಿ ಸಿಗುವ ಯಶಸ್ಸು ಹೆಚ್ಚು ದಿನ ಉಳಿಯುವುದಿಲ್ಲ. ಬರುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಗುರುವಿನ ಮಾರ್ಗದರ್ಶನ, ಅನುಭವ ನಿಮ್ಮ ಯಶಸ್ಸಿಗೆ ತುಂಬ ಸಹಾಯ ಆಗುತ್ತದೆ.

    ಅಮಿತಾಭ್ ಬಚ್ಚನ್ ಅಂದು ಹೇಳಿದ್ದ ಮಾತನ್ನ ಚಿರಂಜೀವಿ ಕೇಳಲೇ ಇಲ್ಲಅಮಿತಾಭ್ ಬಚ್ಚನ್ ಅಂದು ಹೇಳಿದ್ದ ಮಾತನ್ನ ಚಿರಂಜೀವಿ ಕೇಳಲೇ ಇಲ್ಲ

    English summary
    Actor Amitabh Bachchan 6 tips to become successful.
    Thursday, November 7, 2019, 17:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X