ಈ ಸಂಬಂಧ ಬೇಡ ಎಂದು 'ಶಂಕರ್ ನಾಗ್‌'ಗೆ ಅವತ್ತು 'ಅರುಂಧತಿ ನಾಗ್' ಹೇಳಿದ್ದೇಕೆ..?

ಶಂಕರ್ ನಾಗ್ ದೈಹಿಕವಾಗಿ ಮರೆಯಾಗಿ ಮೂವತ್ತು ನಾಲ್ಕು ವರ್ಷ ಕಳೆದು ಹೋಗಿದ್ದರೂ ಅವರು ಜೀವಂತವಾಗಿರುವ ಥರಹೇವಾರಿ ರೀತಿಯನ್ನು ನೋಡಿದರೆ ಅಚ್ಚರಿಯಾಗುತ್ತದೆ. ಅಭಿಮಾನ ಇಮ್ಮಡಿಸುತ್ತದೆ. ಅಷ್ಟಕ್ಕೂ ಅವರ ನೆನಪಿಗೊಂದು ನೆಪವೇ ಬೇಕಿಲ್ಲ. ಆ ರೀತಿ ಕ್ರಿಯಾಶೀಲರಾಗಿ ಎಲ್ಲದರತ್ತಲೂ ಮಿಡಿಯುತ್ತಾ ಜೀವಿಸಿದ ಶಂಕರ್ ನಾಗ್ ಕನ್ನಡ ಚಿತ್ರರಂಗದ ಅಜರಾಮರ ನಕ್ಷತ್ರ.

ಶಂಕರಣ್ಣ ಅವರ ಆಲೋಚನೆ, ವೃತ್ತಿ ಮತ್ತು ಕನಸುಗಾರಿಕೆಗೆ ಯಾವುದೇ ಪರಿಧಿರಲಿಲ್ಲ. ಇರುವಾಗಲೇ ಸತ್ತಂತೆ ಬದುಕುವವರ ನಡುವೆ ಸತ್ತೂ ಬದುಕಿರುವ ಶಂಕರ್ ನಾಗ್ ಜೀವಿಸಿದ ಜೀವನ್ಮುಖಿ ಶೈಲಿಯೇ ಅವರ ಪ್ರಭಾವವನ್ನು ದಶಕಗಳಾಚೆಗೂ ದಾಟಿಸಿಕೊಂಡು ಬಂದಿದೆ. ಶಂಕರ್ ನಾಗ್ ಬದುಕಿದ್ದು ಕೇವಲ ಮೂವತ್ತೂಚಿಲ್ಲರೆ ವರ್ಷ ಮಾತ್ರ. ಆದರೆ ಆ ಅಲ್ಪ ಅವಧಿಯಲ್ಲಿಯೇ ಅವರು ಮಾಡಿದ ಸಾಧನೆ ಮಾತ್ರ ಅಗಾಧ.

An old video of Arundathi Nag has resurfaced sharing her love story with Shankar Nag

ಇಂಥಾ ಶಂಕರ್ ನಾಗ್ ಅವರನ್ನು ಮೊದಲ ಸಲ ನೋಡಿದಾಗ್ಲೇ ಅರುಂಧತಿ ನಾಗ್ ಪ್ರೀತಿಯಲ್ಲಿ ಬಿದ್ದಿದ್ದರು. ಹೌದು. ಆಗಿನ್ನೂ ಶಂಕರ್ ನಾಗ್ ಅವರಿಗೆ ಹತ್ತೊಂಬತ್ತು ವರ್ಷವಾಗಿದ್ದರೆ ಅರುಂಧತಿ ಅವರಿಗೆ ಹದಿನೇಳರ ಹರೆಯ. ಬೇರೆ ಬೇರೆ ಕಾಲೇಜ್‌ನಲ್ಲಿ ಓದುತ್ತಿದ್ದ ಈ ಇಬ್ಬರನ್ನೂ ಇಂಡಿಯನ್ ನ್ಯಾಷನಲ್ ಥಿಯೇಟರ್ ಒಂದು ಮಾಡಿತು. ಹೌದು, ಅಸಲಿಗೆ ಯುನಿವರ್ಸಿಟಿ ಕಾಂಪಿಟೇಶನ್‌ನಲ್ಲಿ ಅತ್ಯುತ್ತಮ ನಟ ಮತ್ತು ನಟಿ ಪಡೆದ ವಿದ್ಯಾರ್ಥಿಗಳನ್ನು ಗುಡ್ಡೆ ಹಾಕಿಕೊಂಡು ಇಂಡಿಯನ್ ನ್ಯಾಷನಲ್ ಥಿಯೇಟರ್ ಗುಜರಾತಿನಲ್ಲಿ ಒಂದು ನಾಟಕವನ್ನು ಮಾಡಿತ್ತು. ಈ ಸಂದರ್ಭದಲ್ಲಿಯೇ ಶಂಕರ್ ನಾಗ್ ಅವರನ್ನು ಮಾತನಾಡಿಸಿದ ಅರುಂಧತಿ ಅವರಿಗೆ ಶಂಕರ್ ನಾಗ್ ಮೇಲೆ ಪ್ರೇಮಾಂಕುರವಾಗಿತ್ತು.

ಅಲ್ಲಿಂದ ಆರು ವರ್ಷಗಳ ಕಾಲ ಪ್ರೀತಿಸಿದ ಈ ಜೋಡಿ ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡರು. ಜೊತೆಯಲ್ಲಿ ಕಾಲ ಕಳೆದರು. ಇನ್ನೂ ಇದೇ ಸಮಯದಲ್ಲಿ ಇದ್ಯಾಕೋ ಸರಿ ಬರ್ತಿಲ್ಲ ಈ ಸಂಬಂಧ ಬೇಡ ಎಂದು ಕೂಡ ಅರುಂಧತಿ ನಾಗ್ ಶಂಕರ್ ನಾಗ್ ಅವರಿಗೆ ಹೇಳಿದ್ದರು ಕೂಡ. ಆದರೆ, 1980ರಲ್ಲಿ ಇಬ್ಬರು ಮದುವೆಯಾದರು.

an-old-video-of-arundathi-nag-has-resurfaced-sharing-her-love-story-with-shankar-nag

ಇನ್ನೂ ಶಂಕರ್ ನಾಗ್ ಅವರು ಬಹುತೇಕ ಸಿನಿಮಾದಲ್ಲಿ ಒರಟು ಸ್ವಭಾವದ ನಾಯಕನ ಪಾತ್ರಗಳನ್ನು ನಿರ್ವಹಿಸಿದ್ದರು. ಆದರೆ ನಿಜ ಜೀವನದಲ್ಲಿ ಶಂಕರ್ ವ್ಯಕ್ತಿತ್ವ ಇದಕ್ಕೆ ತದ್ವಿರುದ್ದವಾಗಿತ್ತು. ತುಂಬಾ ಮೃದು ಸ್ವಭಾವದವರಾಗಿದ್ದ ಶಂಕರ್ ನಾಗ್ ಅಷ್ಟೇ ಪ್ರಬುದ್ಧರೂ ಆಗಿದ್ದರು. ತುಂಬಾನೇ ಸಿಂಪಲ್ ಆಗಿದ್ದರು. ಶಂಕರ್ ನಾಗ್ ಜೊತೆ ಅರುಂಧತಿ ನಾಗ್ ಪ್ರೀತಿಯಲ್ಲಿ ಬೀಳಲು ಇದು ಕೂಡ ಒಂದು ಕಾರಣವಾಗಿತ್ತು.

ಇನ್ನೂ ಶಂಕರ್ ನಾಗ್ ಜೊತೆ ಅರುಂಧತಿ ನಾಗ್ ಒಟ್ಟು 17 ವರ್ಷ ಜೊತೆಯಲ್ಲಿದ್ದರು. ವಿಶೇಷ ಅಂದರೆ ಈ 17 ವರ್ಷದಲ್ಲಿ ಅರುಂಧತಿ ನಾಗ್ ಮತ್ತು ಶಂಕರ್ ನಾಗ್ ಒಂದು ದಿನವೂ ಕೂಡ ಜಗಳ ಮಾಡಿಕೊಂಡಿಲ್ಲ. ಇವರ ಸಂಸಾರದಲ್ಲಿ ಅಷ್ಟರ ಮಟ್ಟಿಗೆ ಅನ್ಯೋನ್ಯತೆ ಇತ್ತು. ಪ್ರೀತಿ ಇತ್ತು. ಆದರೆ.. ಈ ಪ್ರೀತಿಗೆ ಅದ್ಯಾರ ಕಣ್ಣು ಬಿತ್ತೋ, 1990ರಲ್ಲಿ ಅರುಂಧತಿ ನಾಗ್ ಶಂಕರ್ ನಾಗ್ ಅವರನ್ನು ಕಳೆದುಕೊಂಡರು.

ಅಂದ್ಹಾಗೇ ಈ ವಿಚಾರಗಳನ್ನು ಹಿಂದೊಮ್ಮೆ ಅರುಂಧತಿ ನಾಗ್ ಅವರು ಸುವರ್ಣ ವಾಹಿನಿಯ ಜೊತೆ ಹಂಚಿಕೊಂಡಿದ್ದರು. ಶಂಕರ್ ನಾಗ್ ಅವರ ಜೊತೆ ಇರುವ ನೆನಪುಗಳನ್ನು ಹಂಚಿಕೊಂಡಿದ್ದರು. ಅರುಂಧತಿ ನಾಗ್ ಅಂದು ಹಂಚಿಕೊಂಡ ಈ ಮನದ ಮಾತು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X