ಇರೋದು ಒಂದೇ ಜೀವ್ನ, 7 ಕೋಟಿ ಸುರಿದು ಮದ್ವೆ ಮಾಡ್ದೆ, ಅಯ್ಯೋ ಅಂತ ಕೂರೋಕ್ಕಾಗುತ್ತಾ?; ಅನು ಪ್ರಭಾಕರ್

ಹಿರಿಯ ನಟಿ ಜಯಂತಿ ಪುತ್ರ ಕೃಷ್ಣಕುಮಾರ್ ಜೊತೆ ಮದುವೆ ಆಗಿದ್ದ ನಟಿ ಅನು ಪ್ರಭಾಕರ್ ಬಳಿಕ ವಿಚ್ಛೇದ ಪಡೆದಿದ್ದರು. ಕೆಲ ಭಿನ್ನಾಭಿಪ್ರಾಯಗಳಿಂದ ದಂಪತಿ ದೂರಾಗಿದ್ದರು. ಬಳಿ ನಟ ರಘು ಮುಖರ್ಜಿ ಜೊತೆ ಅನು ಪ್ರಭಾಕರ್ ಎರಡನೇ ಮದುವೆ ಆಗಿರುವುದು ಗೊತ್ತೇಯಿದೆ.

ಮದುವೆ ಹಾಗೂ ಡಿವೋರ್ಸ್ ಬಗ್ಗೆ ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ನಟಿ ಅನು ಪ್ರಭಾಕರ್ ಮಾತನಾಡಿದ್ದಾರೆ. "ನಾನು ಆ ನಿರ್ಧಾರಗಳನ್ನು ತೆಗೆದುಕೊಂಡೆ. ಅಷ್ಟು ಸ್ವತಂತ್ರ ನನಗೆ ನಮ್ಮ ಪೋಷಕರು ಕೊಟ್ಟಿದ್ದಾರೆ. ಅದೆಲ್ಲಾ ಡೆಸ್ಟಿನಿ. ಅನು ಜೀವನ ಹೀಗೆ ಎಂದು ದೇವರು ನಿರ್ಧರಿಸಿದಂತೆ ನಡೆದುಕೊಂಡು ಹೋಗುತ್ತೇನೆ"

Anu Prabhakar opens up about her divorce to first husband and second marriage

"ಮದುವೆ ಬಗ್ಗೆ ದಿಢೀರ್ ನಿರ್ಧಾರ. ಆಮೇಲೆ ಏನೇನೋ ಆಯಿತು. ಆ ಸಮಯದಲ್ಲಿ ನಾನು ಸಿನಿಮಾಗಳಲ್ಲಿ ನಟಿಸುತ್ತಲೇ ಇದ್ದೆ. ಆ ವರ್ಷವೇ ನಾನು ಜಾಸ್ತಿ ಸಿನಿಮಾಗಳಲ್ಲಿ ನಟಿಸಿದೆ. ನಿಜ ಜೀವನದಲ್ಲಿ ಏನೇನು ನಡೆಯುತ್ತಿತ್ತೋ ಅದರ ಜೊತೆ ಜೊತೆಗೆ ಸಿನಿಮಾಗಳಲ್ಲಿ ನಟಿಸುತ್ತಾ ಹೋದೆ."

"ನಾನು ಆಗೋದೆಲ್ಲಾ ಒಳ್ಳೆಯದ್ದಕ್ಕೆ ಎಂದು ನಂಬುತ್ತೇನೆ. ಯಾವುದೂ ಶಾಶ್ವತ ಅಲ್ಲ, ಎಲ್ಲಾ ಬದಲಾಗುತ್ತದೆ. ಎಲ್ಲರೂ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ತಾರೆ. ದಾಂಪತ್ಯ ಜೀವನ ಚೆನ್ನಾಗಿಲ್ಲಾ ಎಂದಾಗ ದೂರ ಆಗುವುದೇ ಸರಿ ಎನ್ನುವ ನಿರ್ಧಾರಕ್ಕೆ ಬರ್ತಾರೆ. ಆದರೆ ಯೋಚಿಸಿ ನಿರ್ಧಾರ ತೆಗೆದುಕೊಂಡಾಗ ಜೊತೆಗಿರುವವರು ಬೆಂಬಲ ಕೊಡಿ" ಎಂದು ಮನವಿ ಮಾಡಿದ್ದಾರೆ.

"ಎಷ್ಟೋ ವಿಷಯಗಳನ್ನು ಹುಡುಗಿ ಹೇಳಿಕೊಳ್ಳದಿರಬಹುದು. ಅಥವಾ ಹುಡು ಹೇಳಿಕೊಳ್ಳದಿರಬಹುದು. ಮದುವೆಯಿಂದ ಅವನೇ ಕಷ್ಟಪಡುತ್ತಿದ್ದಾನೋ ಏನೋ, ಆ ಹುಡುಗಿ ಕಡೆಯಿಂದಲೇ ಟಾರ್ಚರ್ ಇರಬಹುದೇನೋ, ನೀವು ಹೇಳೋಕೆ ಆಗೋಲ್ಲ. ಹುಡುಗಿ ಮದುವೆ ಆದಾಗ ಒಬ್ಬ ಹುಡುಗನನ್ನು ಮಾತ್ರವಲ್ಲ ಇಡೀ ಕುಟುಂಬವನ್ನು ಎಂದು ಹೇಳುತ್ತಾರೆ. ಅದನ್ನು ನಾನು ಒಪ್ಪುತ್ತೇನೆ. ಆದರೂ ಮದುವೆ ಆಗುವುದು ಹುಡುಗ-ಹುಡುಗಿಗೆ ತಾನೇ. ಏನೋ ಸಮಸ್ಯೆ ಆಗುತ್ತಿದೆ ಎಂದಾಗ ಅಡ್ಜೆಸ್ಟ್ ಮಾಡ್ಕೋ ಎಂದು ಹುಡುಗಿಗೆ ಹೇಳೊಕೆ ಆಗೋಲ್ಲ"

"ಇರುವುದು ಒಂದೇ ಜೀವ, ಜೀವನ. ಆ ಹುಡುಗಿ ಜೀವವೇ ಹೋಗಿಬಿಟ್ಟರೆ ಏನು ಮಾಡುವುದು ಹೇಳಿ? ಅಯ್ಯೋ ನಾನು 7 ಕೋಟಿ ಕೊಟ್ಟು ಮದುವೆ ಮಾಡಿದೆ. ಈ ತರ ಆಯಿತು ಅಂತೆಲ್ಲಾ ಮಾತನಾಡುತ್ತಾರೆ. ವರದಕ್ಷಿಣೆ ಕೊಟ್ಟು ಮದುವೆ ಮಾಡಿದವರು. ಆಪ್ತರು ಹುಡುಗಿಗೆ ಬೆಂಬಲವಾಗಿ ನಿಲ್ಲುವುದು ಮುಖ್ಯ. ಕೆಲವೊಮ್ಮೆ ಕೆಲವರು ಹೇಳಿಕೊಳ್ಳೋಕೆ ಹೆದರಿಕೊಳ್ಳುತ್ತಾರೆ"

ಇನ್ನು ಮಕ್ಕಳು ಮಾಡಿಕೊಂಡರೆ ಎಲ್ಲವೂ ಸರಿ ಹೋಗುತ್ತದೆ ಎಂದು ಕೆಲವರು ಹೇಳುತ್ತಾರಲ್ಲ ಎನ್ನುವ ಮಾತಿಗೆ ಅನು ಪ್ರಭಾಕರ್ ಉತ್ತರಿಸಿದ್ದಾರೆ. ನನ್ನಮ್ಮ ಸೂಪರ್ ಸ್ಟಾರ್ ಶೋನಲ್ಲಿ ಪ್ರದರ್ಶಿಸಿದ ಸ್ಕಿಟ್ ಬಗ್ಗೆ ಪ್ರಸ್ತಾಪಿಸಿ ವಿವರಿಸಿದ್ದಾರೆ. "ನನ್ನ ಗರ್ಭ ನನ್ನ ಇಷ್ಟ. ಭಾರತದಲ್ಲಿ ಯಾವಾಗ ಗುಡ್ ನ್ಯೂಸ್ ಅಂತ ಕೇಳುವವರೇ ಜಾಸ್ತಿ. ಹಂಗೇ ಇದ್ರೂ ಕಾಮೆಂಟ್ ಮಾಡ್ತಾರೆ. ಒಂದು ಮಗು ಇದ್ರೆ, ಒಂದೇನಾ ಅಂತಾರೆ, ಮೂರು ಮಕ್ಕಳಾದ್ರೆ ಮೂರಾ? ಅಂತಾರೆ. ಎಲ್ಲದಕ್ಕೂ ಉತ್ತರಿಸಲು ಸಾಧ್ಯವಿಲ್ಲ" ಎಂದಿದ್ದಾರೆ.

Anu Prabhakar opens up about her divorce to first husband and second marriage

ಕೆಲವೊಮ್ಮೆ ಪದೇ ಪದೆ ಮಿಸ್‌ ಕ್ಯಾರೇಜ್ ಆಗಿ ಹುಡುಗಿ ಮಾನಸಿಕವಾಗಿ ದೈಹಿಕವಾಗಿ ನೋವು ಅನುಭವಿಸುತ್ತಿರುತ್ತಾಳೆ. ಅಂತಹ ಸಮಯದಲ್ಲಿ ಯಾವಾಗ ಗುಡ್ ನ್ಯೂಸ್ ಎಂದು ಕೇಳಿ ಮತ್ತಷ್ಟು ನೋವು ಕೊಡುವುದು ಸರೀನಾ? ಎಂದು ಅನು ಪ್ರಭಾಕರ್ ಪ್ರಶ್ನಿಸಿದ್ದಾರೆ.

ಯಾವುದೋ ಶೋನಲ್ಲಿ ನಾನು, ರಘು ಮುಖರ್ಜಿ ಭೇಟಿ ಆಗಿದ್ದೆವು. ಬಳಿಕ ಸಂಪರ್ಕ ಇರಲಿಲ್ಲ. ಬಹಳ ವರ್ಷಗಳ ಬಳಿಕ ಯಾವುದೋ ಸಿನಿಮಾ ಕಾರ್ಯಕ್ರಮದಲ್ಲಿ ಮತ್ತೆ ಭೇಟಿ ಆಗಿ ಮಾತನಾಡಲು ಆರಂಭಿಸಿದೆವು. ಮತ್ತೆ ಸ್ನೇಹ ಶುರುವಾಯಿತು. ಅದು ಮದುವೆವೆರೆಗೂ ಮುಂದುವರೆಯಿತು" ಎಂದು ಅನು ಪ್ರಭಾಕರ್ ಹೇಳಿದ್ದಾರೆ.

More from Filmibeat

English summary
Anu Prabhakar reacts on Divorce, Ups & Downs of life;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X