twitter
    For Quick Alerts
    ALLOW NOTIFICATIONS  
    For Daily Alerts

    'ತಲೆಯಲ್ಲಿ ಅರ್ಧ ಕೂದಲಿರಲಿಲ್ಲ, ನಟನಾಗಬೇಕೆಂಬ ಆಸೆ ನನ್ನನ್ನು ಬಿಡಲಿಲ್ಲ'

    |

    ''ನಿನ್ನ ತಲೆಯಲ್ಲಿ ಅರ್ಧ ಕೂದಲಿಲ್ಲ, ನೀನ್ಯಾಕೆ ನಿರ್ದೇಶಕನೂ, ಸಹಾಯಕ ನಿರ್ದೇಶಕನೂ, ಬರಹಗಾರನೂ ಆಗಬಾರದು'' ಎಂದು ಪ್ರಶ್ನಿಸಿದ್ದವರ ಮಧ್ಯೆ ಲೆಜೆಂಡ್ ನಟ ಎನಿಸಿಕೊಂಡ ಹೆಗ್ಗಳಿಕೆ ಬಾಲಿವುಡ್ ನಟ ಅನುಪಮ್ ಖೇರ್ ಅವರದ್ದು.

    ಅನುಪಮ್ ಖೇರ್ ಚಿತ್ರರಂಗಕ್ಕೂ ಬರುವ ಸಮಯದಲ್ಲೇ ತಲೆಯಲ್ಲಿ ಅರ್ಧ ಕೂದಲು ಇರಲಿಲ್ಲ. ನೋಡಲು ಬಹಳ ಸಣ್ಣಗಿದ್ದರು. ತಕ್ಷಣ ನೋಡಿದ್ರೆ ಇವರೊಬ್ಬ ನಟನಾಗಲು ಯಾವ ದೃಷ್ಟಿಕೋನದಿಂದಲೂ ಸಾಧ್ಯವಿಲ್ಲ ಎಂಬ ಅಭಿಪ್ರಾಯ ಮೂಡದೆ ಇರದು. ಆದರೂ ಅನುಪಮ್ ಖೇರ್ ಅವರಿಗೆ ತಾನೊಬ್ಬ ನಟ ಆಗಲೇಬೇಕು ಎಂಬ ಆಸೆ, ಕನಸು ಬಿಡಲಿಲ್ಲ. ಸತತ ಪ್ರಯತ್ನ, ನಿರಂತರ ಶ್ರಮದಿಂದ ಸಾಧಿಸಿದರು. ಇತ್ತೀಚಿಗಷ್ಟೆ ಮಾಧ್ಯಮವೊಂದರ ಜೊತೆ ಮಾತಾಡಿದ ಖೇರ್ ''ನಾನು ಎದುರಿಸಿದ ಕಷ್ಟದ ದಿನಗಳನ್ನು ಬೇರೆ ಯಾರೂ ನೋಡುವುದು ಬೇಡ ಎಂದು ಎಂದು ನೆನಪು ಮೆಲುಕು ಹಾಕಿದ್ದಾರೆ. ಮುಂದೆ ಓದಿ....

    ಹೊಸಬರಲ್ಲಿ ನನ್ನನ್ನು ನೋಡುತ್ತೇನೆ

    ಹೊಸಬರಲ್ಲಿ ನನ್ನನ್ನು ನೋಡುತ್ತೇನೆ

    ನಟ ಅನುಪಮ್ ಖೇರ್ ಕಳೆದ ಮೂರು ದಶಕಗಳಿಂದ ಚಿತ್ರೋದ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಇಂದಿಗೂ ಅನೇಕ ಯುವಕರು ಅವರ ಕೆಲಸಕ್ಕೆ ಅಭಿಮಾನಿಗಳು. ಹೊಸಬರ ಜೊತೆ ಕೆಲಸ ಮಾಡುವ ಕುರಿತು ಮಾತನಾಡಿದ ಅನುಪಮ್ ಖೇರ್ ''ಹೊಸಬರಲ್ಲಿ ನಾನು ಯಾವಾಗಲೂ ನನ್ನನ್ನು ನೋಡುತ್ತೇನೆ. ಹಾಗಾಗಿ, ಅವರನ್ನು ನಾನು ಅರ್ಥ ಮಾಡಿಕೊಳ್ಳಲು ಸಾಧ್ಯ. ನಾನು ಸದಾ ಅವರಿಗೆ ಸಹಾನುಭೂತಿಯಿಂದಿರಲು ಪ್ರಯತ್ನಿಸುತ್ತೇನೆ'' ಎಂದಿದ್ದಾರೆ.

    'ನಾವು ವಿಫಲರಾಗಿದ್ದೇವೆ': ಅಸಹಾಯಕತೆಯಿಂದ ಬೇಸರ ವ್ಯಕ್ತಪಡಿಸಿದ ಸೋನು ಸೂದ್'ನಾವು ವಿಫಲರಾಗಿದ್ದೇವೆ': ಅಸಹಾಯಕತೆಯಿಂದ ಬೇಸರ ವ್ಯಕ್ತಪಡಿಸಿದ ಸೋನು ಸೂದ್

    ನಾನು ಎದುರಿಸಿದ ಕಷ್ಟ ಅವರಿಗೆ ಬೇಡ

    ನಾನು ಎದುರಿಸಿದ ಕಷ್ಟ ಅವರಿಗೆ ಬೇಡ

    1981ರ ಸಮಯದಲ್ಲಿ ನಟನಾಗಬೇಕೆಂಬ ಕನಸಿನಿಂದ ಮುಂಬೈಗೆ ಬಂದಿದ್ದ ನಟ ಅನುಪಮ್ ಖೇರ್ ಎಲ್ಲಾ ರೀತಿಯ ಕಷ್ಟ ಎದುರಿಸಿದ್ದಾರೆ. ಏಕಾಂಗಿಯಾಗಿ ನಡೆದು ಬಂದಿದ್ದಾರೆ. ನಟನೆಯಲ್ಲಿ ಚಿನ್ನದ ಪದಕ ಪಡೆದಿದ್ದರು ನಟನೆಗೆ ಅವಕಾಶ ಕೇಳಲು ಮುಜುಗರ ಪಡುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ.. ಎಷ್ಟೋ ಸಲ ರೈಲ್ವೆ ಫ್ಲಾಟ್‌ಫಾರ್ಮ್‌ನಲ್ಲಿ ಮಲಗಿದ್ದರು. ಊಟನೂ ಸಿಗದೇ ಹಸಿವಿನಿಂದ ಇದ್ದರು. ಅಂತಹ ದಿನಗಳು ಬೇರೆಯವರಿಗೆ ಬರುವುದು ಬೇಡ ಎಂದು ಎಂದು ಕೇಳಿಕೊಂಡಿದ್ದಾರೆ.

    ನೀನು ನಟನಾಗುವುದು ಬೇಡ

    ನೀನು ನಟನಾಗುವುದು ಬೇಡ

    ''ನನ್ನನ್ನು ನೋಡಿ ಬಹಳಷ್ಟು ಮಂದಿ ನೀನು ನಟನಾಗುವುದು ಬೇಡ, ಅದರ ಬದಲು ನಿರ್ದೇಶಕ, ಸಹಾಯಕ ನಿರ್ದೇಶಕ ಅಥವಾ ಬರಹಗಾರನೂ ಆಗಬಹುದು'' ಎಂದು ಹೇಳಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಅದರಲ್ಲಿಯೇ ಸಾಧಿಸಿ ತೋರಿಸಿದ್ದಾರೆ. 'ಈಗ ಯುವ ಪ್ರತಿಭೆಗಳಿಗೆ ಹಲವು ಮಾರ್ಗಗಳಿವೆ. ಟಿವಿ ಕಾರ್ಯಕ್ರಮಗಳಿವೆ, ಕಾಸ್ಟಿಂಗ್ ಕಚೇರಿಗಳಿವೆ, ಕಾಸ್ಟಿಂಗ್ ನಿರ್ದೇಶಕರಿದ್ದಾರೆ. ನಮಗೆ ಯಾವ ಆಯ್ಕೆಗಳು ಇರಲಿಲ್ಲ' ಎಂದು ಹಳೆಯದನ್ನು ನೆನಪಿಸಿದ್ದಾರೆ ಖೇರ್.

    ಮಲಯಾಳಂ ಸಿನಿಮಾವನ್ನು ಹೊಗಳಿ ಬಾಲಿವುಡ್‌ನ ಕಾಲೆಳೆದ ನಟಮಲಯಾಳಂ ಸಿನಿಮಾವನ್ನು ಹೊಗಳಿ ಬಾಲಿವುಡ್‌ನ ಕಾಲೆಳೆದ ನಟ

    ಕೇಂದ್ರದಿಂದ ಅತ್ಯುನ್ನತ ಸ್ಥಾನಮಾನ

    ಕೇಂದ್ರದಿಂದ ಅತ್ಯುನ್ನತ ಸ್ಥಾನಮಾನ

    ಮೂರು ದಶಕಗಳಿಂದ ಚಿತ್ರರಂಗದಲ್ಲಿ ತೊಡಗಿಕೊಂಡಿರುವ ಅನುಪಮ್ ಖೇರ್ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದುವರೆಗೂ ಎರಡು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಏಂಟು ಸಲ ಫಿಲಂ ಫೇರ್ ಪ್ರಶಸ್ತಿ ಪಡೆದಿದ್ದಾರೆ. ಕೇಂದ್ರ ಸೆನ್ಸಾರ್ ಮಂಡಳಿ ಹಾಗೂ ರಾಷ್ಟ್ರೀಯ ನಾಟಕ ಶಾಲೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ, ಭಾರತೀಯ ಟಿವಿ ಮತ್ತು ಚಲನಚಿತ್ರ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. ಅನುಪಮ್ ಖೇರ್ ಸಾಧನೆಗೆ ಪದ್ಮಶ್ರೀ ಮತ್ತು ಪದ್ಮ ಭೂಷಣ್ ಪ್ರಶಸ್ತಿ ಲಭಿಸಿದೆ.

    English summary
    Bollywood senior actor Anupam Kher Recalls Sleeping On Railway Platform at 1980's.
    Wednesday, April 21, 2021, 14:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X