ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾಗಾಗಿ ಆ ಸೂಪರ್ ಹಿಟ್ ಚಿತ್ರದಿಂದ ನನ್ನನ್ನು ಕಿತ್ತೆಸೆದರು ಎಂದ ಖ್ಯಾತ ನಟಿ

ಚಿತ್ರರಂಗಕ್ಕೆ ಬರಬೇಕು ಎಂದು ಸುಮಾರು ಜನ ಪಡಬಾರದ ಪಾಡು ಪಡುತ್ತಾರೆ.ಆದರೆ,ಅವಕಾಶ ಇವರಿಗೆ ಸಿಗುವುದೇ ಇಲ್ಲ.ಒಮ್ಮೊಮ್ಮೆ ಅವಕಾಶ ಸಿಕ್ಕರು ಸಿಗಬೇಕಿದ್ದ ಹೆಸರು ಸಿಗಲ್ಲ.ಮತ್ತೂ ಕೆಲವೊಮ್ಮೆ ಹೆಸರು ಸಿಕ್ಕರೂ ಅದಕ್ಕೆ ತಕ್ಕಂತೆ ಸಿಗಬೇಕಾದ ಅವಕಾಶ ಸಿಗಲ್ಲ. ಯಾಕೆಂದರೆ ಇಲ್ಲಿ ಯಾರನ್ನೋ ಬೆಳೆಸಲು ಇನ್ಯಾರದ್ದೋ ಅನ್ನ ಕಿತ್ತುಕೊಳ್ಳುವರ ಸಂಖ್ಯೆ ಹೆಚ್ಚಿದೆ. ಅಲೆದಾಡಿಸಿ ಆ ನಂತರ ಕೈ ಎತ್ತುವರ ಸಂತತಿ ಹೆಚ್ಚಿದೆ.

ಇನ್ನು ಅಂದ ಚೆಂದ ಇದ್ದರೆ ಮಾತ್ರ ಚಿತ್ರರಂಗದಲ್ಲಿ ಸಾಲುವುದಿಲ್ಲ. ಅಭಿನಯದ ಕಲೆ ಇದ್ದರೂ ಕೂಡ ಬೆಲೆ ಸಿಗುವುದಿಲ್ಲ. ಬದಲಿಗೆ ತಲೆಯ ಮೇಲೆ ಗಾಡ್ ಫಾದರ್ ಕೈ ಇರಬೇಕು. ಇದಕ್ಕೆ ಪುರಾವೆ ಎನ್ನುವಂತೆ ಅನುಪ್ರಿಯಾ ಗೋಯೆಂಕಾ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಅನುಶ್ಕಾ ಶರ್ಮಾಗೋಸ್ಕರ ಸೂಪರ್ ಸ್ಟಾರ್ ಚಿತ್ರದಿಂದ ನನ್ನನ್ನೂ ತೆಗೆದು ಹಾಕಲಾಯ್ತು ಎಂದು ಹೇಳಿದ್ಧಾರೆ.

anupria-goenka-opens-up-about-losing-sultan-to-anushka-sharma-after-12-auditions

ಹೌದು, ಮಂಚು ಮನೋಜ್ ಅಭಿನಯದ ತೆಲುಗು ಚಿತ್ರ ಪೊಟುಗಾಡು ಮೂಲಕ ಚಿತ್ರರಂಗಕ್ಕೆ ಬಂದವರು ಅನುಪ್ರಿಯಾ ಗೋಯೆಂಕಾ. ಆ ನಂತರ ಹಿಂದಿಯಲ್ಲಿಯೇ ಬ್ಯುಸಿಯಾದ ಉತ್ತರ ಪ್ರದೇಶದ ಈ ಚೆಲುವೆ ಜಾನ್ ಅಬ್ರಾಹಿಂ ಮತ್ತು ವರುಣ್ ಧವನ್ ಅಭಿನಯದ ಡಿಶೂಂ ಚಿತ್ರದಲ್ಲಿ ಕಾಣಿಸಿಕೊಂಡರು. ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಅಭಿನಯದ ಟೈಗರ್ ಜಿಂದಾ ಹೈ ಚಿತ್ರದಲ್ಲಿ ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು. ಪದ್ಮಾವತ್ ಮತ್ತು ವಾರ್ ಅನುಪ್ರಿಯಾ ಅಭಿನಯದ ಇನ್ನೆರಡು ಪ್ರಮುಖ ಚಿತ್ರಗಳು.

ಸದ್ಯ ಅನುಪ್ರಿಯಾ ಗೋಯೆಂಕಾ ಅವರಿಗೆ ವೆಬ್ ಲೋಕದಲ್ಲಿ ಉತ್ತಮವಾದ ಪಾತ್ರಗಳು ಸಿಗುತ್ತಿವೆ. ಅಭಯ್, ಕ್ರಿಮಿನಲ್ ಜಸ್ಟಿಸ್ , ಅಸುರ್, ಆಶ್ರಮ್ ಹೀಗೆ ಅನೇಕ ವೆಬ್ ಸರಣಿಗಳನ್ನು ಅನುಪ್ರಿಯಾ ಮಾಡಿದ್ದಾರೆ. ತಮ್ಮದೇ ಸ್ಥಾನ ಮಾನ ಕೂಡ ಸಂಪಾದಿಸಿದ್ದಾರೆ. ಇಂಥಾ ಅನುಪ್ರಿಯಾ ಗೋಯೆಂಕಾ ಸುಲ್ತಾನ್ ಚಿತ್ರದಿಂದ ತಮ್ಮನ್ನು ತೆಗೆದು ಹಾಕಿರುವ ವಿಚಾರವನ್ನು ಈಗ ಹಂಚಿಕೊಂಡಿದ್ದಾರೆ.

ಈ ಕುರಿತು ಸಿದ್ಧಾರ್ಥ್ ಕಣ್ಣನ್‌ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅನುಪ್ರಿಯಾ ಗೋಯೆಂಕಾ, ಅನುಷ್ಕಾ ಶರ್ಮಾ ಅವರಿಗಿಂತ ಮೊದಲು ಸುಲ್ತಾನ್ ಚಿತ್ರಕ್ಕೆ ನಾನು ನಾಯಕಿಯಾಗಿ ಆಯ್ಕೆಯಾಗಿದ್ದೆ ಎಂದು ಹೇಳಿದ್ದಾರೆ. ಸುಲ್ತಾನ್ ಚಿತ್ರ ಮಾಡುವ ಸಮಯದಲ್ಲಿ ಅವರು ಆರಂಭದಲ್ಲಿ ಹೊಸ ಮುಖದ ಹುಡುಕಾಟವನ್ನು ನಡೆಸಿದ್ದರು, ಹೀಗಾಗಿ ನಾನು ಆ ಚಿತ್ರಕ್ಕೆ ಆಡಿಷನ್ ನೀಡಿದ್ದೇ ಎಂದಿರುವ ಅನುಪ್ರಿಯಾ ಆ ಚಿತ್ರಕ್ಕೆ ನಾನು ಆಯ್ಕೆ ಕೂಡ ಆಗಿದ್ದೇ ಎಂದು ಹೇಳಿದ್ದಾರೆ.

ಆದರೆ, ಸುಲ್ತಾನ್ ಗೆ ನಾಯಕಿಯಾಗಲು ಅಂದಾಜು ಹನ್ನೆರಡು ಹಂತಗಳಿದ್ದವು, ಉದಾಹರಣೆಗೆ ಮೊದಲು ನಾನು ಹೇಗೆ ಅಭಿನಯಿಸುತ್ತೇನೆ ಎಂದು ಅವರು ನೋಡಿದ್ದರು, ಆ ನಂತರ ನನಗೆ ಡ್ಯಾನ್ಸ್ ಬರುತ್ತಾ ಇಲ್ವಾ ಎಂದು ಪರೀಕ್ಷೆಯನ್ನು ಮಾಡಿದ್ದರು, ಆ ನಂತರ ಕಥೆಯ ಕುರಿತು ಚರ್ಚೆಗಳು ನಡೆದಿದ್ದವು ಎಂದು ಹೇಳಿರುವ ಅನುಪ್ರಿಯಾ ಸರಿ ಸುಮಾರು ಒಂದು ತಿಂಗಳು ನಾನು ಆ ಚಿತ್ರಕ್ಕೆ ನನ್ನ ಸಮಯವನ್ನು ಮುಡಿಪಾಗಿಟ್ಟು ತುಂಬಾ ಪರಿಶ್ರಮ ಹಾಕಿ ಕೆಲಸ ಮಾಡಿದ್ದೇ ಎಂದು ಹೇಳಿದ್ದಾರೆ.

ಇನ್ನು ಮೊದ ಮೊದಲು ನಾನು ಬೆವರು ಸುರಿಸುತ್ತಿರುವುದು ಸುಲ್ತಾನ್ ಚಿತ್ರಕ್ಕೆ ಎಂದು ನನಗೆ ಗೊತ್ತಿರಲಿಲ್ಲ, ಯಾಕೆಂದರೆ ಚಿತ್ರದ ನಿರ್ಮಾಣ ಸಂಸ್ಥೆಯಾದ ಯಶ್ ರಾಜ್ ಪ್ರೊಡಕ್ಷನ್ಸ್‌ನವರು ಆಡಿಷನ್ ಸಮಯದಲ್ಲಿ ಚಿತ್ರದ ಸನ್ನಿವೇಶಗಳನ್ನೊಂದಿರುವ ಸ್ಕ್ರಿಪ್ಟ್‌ಗಳನ್ನು ನೀಡುವುದಿಲ್ಲ ಬದಲಿಗೆ ಬೇರೆಯದ್ದೇ ಆದ ಸನ್ನಿವೇಶಗಳಲ್ಲಿ ಅಭಿನಯಿಸುವಂತೆ ಹೇಳುತ್ತಾರೆ ಎಂದಿರುವ ಅನುಪ್ರಿಯಾ ಚಿತ್ರದ ನಿರ್ದೇಶಕ ಅಲಿ ಅಬ್ಬಾಸ್ ಜಾಫರ್ ಮಾತು ಮಾತಿಗೂ ಮಿಸ್ಟರ್ ಖಾನ್ ಎಂದು ಉಲ್ಲೇಖಿಸುತ್ತಿದ್ದರು, ಆಗ ನಾನು ಸುಲ್ತಾನ್ ಚಿತ್ರಕ್ಕೆ ಆಡಿಷನ್ ನೀಡುತ್ತಿದ್ದೇನೆ ಎನ್ನುವ ವಿಚಾರದ ಅರಿವು ನನಗಾಯ್ತು ಎಂದು ಹೇಳಿದ್ದಾರೆ.

ಎಲ್ಲ ಹಂತದ ಆಡಿಷನ್‌ಗಳಲ್ಲಿ ಕೂಡ ನಾನು ಪಾಸಾಗಿದ್ದೇ, ನಿರ್ಮಾಪಕ ಆದಿತ್ಯ ಚೋಪ್ರಾ ಕೂಡ ನಾನು ಅಭಿನಯಿಸಿದ್ದ ದೃಶ್ಯವನ್ನು ನೋಡಿ ಪ್ರಭಾವಿತರಾಗಿದ್ದರು ಎಂದಿರುವ ಅನುಪ್ರಿಯಾ ಸುಲ್ತಾನ್ ಚಿತ್ರ ನಾನೇ ನಾಯಕಿ ಎಂದು ನಾನು ಹಿರಿ ಹಿರಿ ಹಿಗ್ಗಿದ್ದೆ ಆದರೆ ಆ ನಂತರ ಆಗಿದ್ದೇ ಬೇರೆ ಎಂದು ಹೇಳಿದ್ದಾರೆ.

ನಾನು ಕೃಷ್ಣ ಸುಂದರಿ ಎಲ್ಲಕ್ಕಿಂತ ಮುಖ್ಯವಾಗಿ ಎಲ್ಲವೂ ಇದ್ದ ನನ್ನ ಬಳಿ ನೀಳಕಾಯದ ಕಾಲುಗಳಿರಲಿಲ್ಲ ಎಂದಿರುವ ಅನುಪ್ರಿಯಾ ಆ ನಂತರ ನನ್ನನ್ನೂ ತೆಗೆದು ಹಾಕಿ ಅನುಷ್ಕಾ ಶರ್ಮಾ ಅವರನ್ನು ಆ ಪಾತ್ರಕ್ಕೆ ಆಯ್ಕೆ ಮಾಡಿಕೊಂಡರು ಎಂದು ಹೇಳಿದ್ದಾರೆ. ಇಷ್ಟೆಲ್ಲ ಶ್ರಮ ಹಾಕಿದ ಮೇಲೆಯೂ ನಾನು ಆಯ್ಕೆಯಾಗಿಲ್ಲ ಎನ್ನುವ ವಿಚಾರ ನನಗೆ ಗೊತ್ತಾದ ಮೇಲೆ ನಾನು ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ್ದೇ ಎಂದು ಕೂಡ ಅನುಪ್ರಿಯಾ ಗೋಯೆಂಕಾ ಆ ದಿನಗಳನ್ನು ನೆನೆದಿದ್ದಾರೆ. ನಾಯಕಿಯಾಗಬೇಕು ಅಂದರೆ ಕೇವಲ ಅಂದ ಚೆಂದ ಇದ್ದರೆ ಮಾತ್ರ ಸಾಲಲ್ಲ, ಅಭಿನಯ ಗೊತ್ತಿದ್ದರೆ ಅಷ್ಟೇ ಇಲ್ಲಿ ಅವಕಾಶ ಸಿಗಲ್ಲ, ಕೆಲವೊಮ್ಮೆ ನಿಮ್ಮ ಕಾಲು ಕೂಡ ಸುಂದರವಾಗಿರಬೇಕು ಎಂದು ಹೇಳಿದ್ದಾರೆ. ನಿಮ್ಮ ಉಡುಗೆ ತೊಡುಗೆ ಹಾವ ಭಾವ ಕೂಡ ಪ್ರಮುಖ ಪಾತ್ರಗಳನ್ನು ವಹಿಸುತ್ತಾವೇ ಎಂದು ಹೇಳಿದ್ದಾರೆ.

More from Filmibeat

Read more about: actress filmibeat news audition
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X