80ರ ದಶಕದ ಜನಪ್ರಿಯ ಡ್ಯಾನ್ಸರ್ ಅನುರಾಧ ಈಗ ಎಲ್ಲಿದ್ದಾರೆ? ಏನ್ಮಾಡ್ತಿದ್ದಾರೆ?

By ಫಿಲ್ಮಿಬೀಟ್ ಡೆಸ್ಕ್

ಈಗ ಕಾಲದ ಸಿನಿಮಾಗಳಲ್ಲಿ ಐಟಂ ಡ್ಯಾನ್ಸರ್ ಅನ್ನೋ ಕಲ್ಪನೆಯೇ ಇಲ್ಲ. ಹೀರೋಯಿನ್‌ಗಳೇ ಕೆಲವು ಸಿನಿಮಾಗಳಿಗೆ ಐಟಂ ಡ್ಯಾನ್ಸ್ ಮಾಡಿಬಿಡುತ್ತಾರೆ. ಆದರೆ, 80ರ ದಶಕ ಹಾಕಿರಲಿಲ್ಲ. ಒಂದು ಸಿನಿಮಾದಲ್ಲಿ ಐಟಂ ಸಾಂಗ್ ಇಟ್ಟರೆ, ಅದಕ್ಕೊಬ್ಬರು ಪ್ರತ್ಯೇಕವಾಗಿ ಹೆಜ್ಜೆ ಹಾಕುತ್ತಿದ್ದರು. ಅವರನ್ನು ನೋಡುವುದಕ್ಕಂತಲೇ ಸಿನಿಮಾಗೆ ಬರುತ್ತಿದ್ದ ಕಾಲವಿತ್ತು.

ಇಂತಹ ಕಾಲದಲ್ಲಿ ಸಿಲ್ಮ್ ಸ್ಮಿತಾ, ಡಿಸ್ಕೋ ಶಾಂತಿ, ಜ್ಯೋತಿ ಲಕ್ಷ್ಮಿ ಅಂತಹ ಹೆಸರು ಓಡಾಡುತ್ತಿದ್ದವು. ಹೆಚ್ಚು ಕಡಿಮೆ ಇವರ ಕಾಲದಲ್ಲಿ ದಕ್ಷಿಣ ಭಾರತದ ಬಹುಬೇಡಿಕೆಯ ಐಟಂ ಡ್ಯಾನ್ಸರ್ ಆಗಿ ಗುರುತಿಸಿಕೊಂಡಿದ್ದ ಮತ್ತೊಂದು ಪ್ರತಿಭೆ ಅನುರಾಧ. ಕನ್ನಡದಲ್ಲೂ ಸಾಕಷ್ಟು ಸಿನಿಮಾಗಳಲ್ಲಿ ಐಟಂ ಡ್ಯಾನ್ಸರ್ ಆಗಿ ಹೆಜ್ಜೆ ಹಾಕಿದ್ದಾರೆ.

Anuradha gained attention in the 80s as an item dancer and actress what is she doing now?

ಕನ್ನಡದಲ್ಲಿ ಅಂಬರೀಶ್, ವಿಷ್ಣುವರ್ಧನ್, ಟೈಗರ್ ಪ್ರಭಾಕರ್, ಅನಂತ್‌ನಾಗ್, ಶಂಕರ್‌ನಾಗ್, ಶ್ರೀನಾಥ್ ನಟಿಸಿದ ಸಿನಿಮಾಗಳಲ್ಲಿ ಐಟಂ ಡ್ಯಾನ್ಸರ್ ಆಗಿ ಹೆಜ್ಜೆ ಹಾಕಿದ್ದರು. ಈ ಮೇರು ನಟರು ನಟಿಸಿದ್ದ 80 ದಶಕದ ಸಿನಿಮಾಗಳಲ್ಲಿ ಇವರು ಹೆಜ್ಜೆ ಹಾಕಿದ ಐಟಂ ಸಾಂಗ್‌ಗಳು ಇಂದಿಗೂ ಸಿನಿ ರಸಿಕರಿಗೆ ಮನರಂಜನೆ ನೀಡುತ್ತವೆ. ಇಷ್ಟೊಂದು ಜನಪ್ರಿಯತೆ ಗಿಟ್ಟಿಸಿಕೊಂಡಿದ್ದ ಅನುರಾಧ ಈಗ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಚಿತ್ರರಂಗದಿಂದ ಕೆಲವು ಕಾಲ ದೂರ ಉಳಿದಿದ್ದು ಏಕೆ? ತಿಳಿಯಲು ಮುಂದೆ ಓದಿ..

ಅನುರಾಧ ಅವರ ಮೊದಲ ಹೆಸರು ಸುಲೋಚನಾ ದೇವಿ. ಇವರದ್ದು ಸಿನಿಮಾ ಕುಟುಂಬವೇ. ಹಾಗಾಗಿ ಇವರಿಗೆ ಚಿತ್ರರಂಗವೇನು ಹೊಸದಾಗಿರಲಿಲ್ಲ. ತಂದೆ ಕೃಷ್ಣಕುಮಾರ್ ತಮಿಳು, ಹಿಂದಿ, ಮರಾಠಿ ಸಿನಿಮಾಗಳಲ್ಲಿ ನೃತ್ಯ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಇನ್ನು ತಾಯಿ ಸರೋಜಾ ದೇವಿ ಕೂಡ ಚಿತ್ರರಂಗದಲ್ಲಿ ಹೇರ್ ಸ್ಟೈಲಿಸ್ಟ್ ಆಗಿ ಗುರುತಿಸಿಕೊಂಡಿದ್ದರು.

ತನ್ನ 13ನೇ ವಯಸ್ಸಿಗೆ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದರು. ನಿರ್ದೇಶಕ ಕೆ.ಜಿ ಜಾರ್ಜ್ ಇವರನ್ನು ಗುರುತಿಸಿ ಚಿತ್ರರಂಗಕ್ಕೆ ಕರೆತಂದಿದ್ದರು. ಅವರೇ ಸುಲೋಚನಾ ದೇವಿ ಅಂತಿದ್ದ ಇವರ ಹೆಸರನ್ನು ಅನುರಾಧ ಅಂತ ಬದಲಾಯಿಸಿದ್ದರು. ಆರಂಭದಲ್ಲಿ ನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಅನುರಾಧ ಐಟಂ ಸಾಂಗ್‌ಗಳ ಕಡೆಗೆ ವಾಲಿದ್ದರು. ಸುಮಾರು 30 ಹೆಚ್ಚು ಸಿನಿಮಾಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೆ, 700ಕ್ಕೂ ಅಧಿಕ ಸಿನಿಮಾಗಳಿಗೆ ಐಟಂ ಡ್ಯಾನ್ಸರ್ ಆಗಿ ಕಾಣಿಸಿಕೊಂಡಿದ್ದರು.

Anuradha gained attention in the 80s as an item dancer and actress what is she doing now?

80ರ ದಶಕದಲ್ಲಿ ಅನುರಾಧಗೆ ಸಿಕ್ಕಾಪಟ್ಟೆ ಬೇಡಿಕೆ ಇತ್ತು. ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಹೆಚ್ಚಾಗಿ ಅವಕಾಶಗಳು ಸಿಕ್ಕಿವೆ. ಹಾಗೇ ಕನ್ನಡ, ತೆಲುಗು ಭಾಷೆಯ ಸಿನಿಮಾಗಳಲ್ಲೂ ಐಟಂ ಡ್ಯಾನ್ಸರ್ ಆಗಿ ಹೆಜ್ಜೆ ಹಾಕಿ ಮನರಂಜಿಸಿದ್ದಾರೆ. ಹಿಂದಿಯಲ್ಲೂ ನಾಲ್ಕು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೇ ಒಂದು ಒರಿಯಾ ಭಾಷೆಯ ಸಿನಿಮಾ ಕಂಡಿದ್ದೂ ಇದೆ. 2001ರಲ್ಲಿ ತೆರೆಕಂಡಿದ್ದ 'ಸಿಟಿಜನ್' ಸಿನಿಮಾದ ನಾಯಕಿ ನಗ್ಮಾಗೆ ಧ್ವನಿಯನ್ನೂ ನೀಡಿದ್ದರು.

80ರ ದಶಕದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿ ಕಮ್ ಡ್ಯಾನ್ಸರ್ ಸಿನಿಮಾರಂಗದಿಂದ ದೂರ ಉಳಿದು ಬಿಟ್ಟರು. ಅದಕ್ಕೊಂದು ಬಲವಾದ ಕಾರಣವಿತ್ತು. ತನ್ನ ವೃತ್ತಿ ಬದುಕಿನ ಉತ್ತುಂಗದಲ್ಲಿ ಇರುವಾಗಲೇ 1987ರಲ್ಲಿ ಡ್ಯಾನ್ಸ್ ಮಾಸ್ಟರ್ ಸತೀಶ್ ಕುಮಾರ್ ಅವರನ್ನು ವಿವಾಹವಾಗಿದ್ದರು. ಇವರಿಗೆ ಅಭಿನಯಶ್ರೀ ಹಾಗೂ ಕಾಲಿಚರಣ್ ಅನ್ನೋ ಇಬ್ಬರು ಮಕ್ಕಳು ಇದ್ದಾರೆ. 1996ರಲ್ಲಿ ಪತಿ ಸತೀಶ್ ಕುಮಾರ್‌ಗೆ ಬೈಕ್ ಅಪಘಾತವಾಗಿ ನೆನಪಿನ ಶಕ್ತಿಯನ್ನು ಕಳೆದುಕೊಂಡಿದ್ದರು. ಹೀಗಾಗಿ ಅನಿವಾರ್ಯವಾಗಿ ಪತಿ ಹಾಗೂ ಮಕ್ಕಳನ್ನು ನೋಡಿಕೊಳ್ಳುವ ನಿಟ್ಟಿನಲ್ಲಿ ಚಿತ್ರರಂಗದಿಂದ ದೂರ ಉಳಿಯಬೇಕಾಯ್ತು.

2007ರಲ್ಲಿ ಪತಿ ಸತೀಶ್ ಕುಮಾರ್‌ ಹೃದಯಾಘಾತದಿಂದ ನಿಧನರಾದ ಬಳಿಕ ಮತ್ತೆ ಕೆಲಸ ಹುಡುಕುವ ಪ್ರಯತ್ನ ಮಾಡಿದ್ದರು. ಆದರೆ, ಅಷ್ಟೋತ್ತಿಗಾಗಲೇ ಚಿತ್ರರಂಗ ಬದಲಾಗಿತ್ತು. ಸಿನಿಮಾ ನೋಡುವ ಜನರ ಅಭಿರುಚಿ ಬದಲಾಗಿತ್ತು. ಹೀಗಾಗಿ ಕಿರುತೆರೆಯತ್ತ ಮುಖ ಮಾಡಿದ್ದರು. ತಮಿಳಿನ ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು. ಮಗಳು ಅಭಿನಯಶ್ರೀ ಕೂಡ ನಟಿ ಕಮ್ ಕೊರಿಯೋಗ್ರಾಫರ್. ಸದ್ಯ ಚೆನ್ನೈನಲ್ಲಿ ಮಕ್ಕಳೊಂದಿಗೆ ಅನುರಾಧ ನೆಲೆಸಿದ್ದಾರೆ.

More from Filmibeat

English summary
Where is 80's famous item dancer and actress Anuradha?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X