ಒಬ್ಬರಲ್ಲ ಇಬ್ಬರಲ್ಲ ಐವರೊಂದಿಗೆ ಅನುಷ್ಕಾ ಶೆಟ್ಟಿ ಸಂಬಂಧ? ಜಯಾಪ್ರದ ಮುಂದೆ ಸ್ವೀಟಿ ಹೇಳಿಕೊಂಡಿದ್ದೇನು?

By ಫಿಲ್ಮಿಬೀಟ್ ಡೆಸ್ಕ್

ತೆಲುಗಿನ ಲೇಡಿ ಸೂಪರ್‌ ಸ್ಟಾರ್ ಅನುಷ್ಕಾ ಶೆಟ್ಟಿ ಮದುವೆ ಬಗ್ಗೆ ಒಂದಲ್ಲ ಒಂದು ಸುದ್ದಿಗಳು ಆಚೆ ಬೀಳುತ್ತಲೇ ಇರುತ್ತವೆ. ವಯಸ್ಸು 40 ದಾಟಿದರೂ ಇನ್ನೂ ಮದುವೆ ಆಗದೇ ಇರುವ ಬಗ್ಗೆ ಅವರ ಅಭಿಮಾನಿಗಳು ಕಾಮೆಂಟ್‌ಗಳನ್ನು ಮಾಡುತ್ತಲೇ ಇರುತ್ತಾರೆ. ಈ ಮಧ್ಯೆ ಆಗಾಗ ಆಕೆಯ ಕೋ ಸ್ಟಾರ್‌ಗಳ ಜೊತೆ ಈ ನಟಿಯ ಹೆಸರನ್ನು ತಳುಕು ಹಾಕಿಕೊಳ್ಳುತ್ತಲೇ ಇರುತ್ತೆ.

ನಟಿ ಅನುಷ್ಕಾ ಶೆಟ್ಟಿ ಮದುವೆ ಆಗಬೇಕು ಅನ್ನೋದು ಅವರ ಅಭಿಮಾನಿಗಳ ಆಸೆ. ಆದರೆ, ಸ್ವೀಟಿನೇ ಯಾಕೋ ಮನಸ್ಸು ಮಾಡುತ್ತಿಲ್ಲ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿರುವ ಕನ್ನಡ ಮೂಲದ ಈ ನಟಿಯ ಮದುವೆ ನೋಡುವುದಕ್ಕೆ ವಿಶ್ವದ ಮೂಲೆ ಮೂಲೆಯಲ್ಲಿ ಇರುವ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಅದರಲ್ಲೂ ಪ್ರಭಾಸ್ ಜೊತೆ ಅನುಷ್ಕಾ ಶೆಟ್ಟಿ ಮದುವೆ ಆಗಬೇಕು ಅಂತ ಆಸೆಯನ್ನೂ ಪಟ್ಟಿದ್ದಾರೆ.

Anushka Shetty commented on her affair with five co stars in front of Jayaprada

ಒಂದಿಷ್ಟು ದಿನ ಅನುಷ್ಕಾ ಶೆಟ್ಟಿಯ ಹೆಸರು ಪ್ರಭಾಸ್ ಜೊತೆ ತಳುಕು ಹಾಕಿಕೊಂಡಿತ್ತು. ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಅಂತ ಸುದ್ದಿ ಹಬ್ಬಿತ್ತು. ಅದೆಷ್ಟು ಬಾರಿ ಡೇಟಿಂಗೂ ಇಲ್ಲ. ಲವ್ ಇಲ್ಲ ಅಮತ ಹೇಳಿದರೂ ಅಭಿಮಾನಿಗಳು ಮಾತ್ರ ನಂಬುವುದಕ್ಕೆ ತಯಾರಿಲ್ಲ. ಹಾಗಂತ ಸ್ಟಾರ್ ನಟರ ಜೊತೆ ಅನುಷ್ಕಾಗೆ ಸಂಬಂಧ ಕಲ್ಪಿಸಿದ್ದು ಇದೇ ಮೊದಲೇನಲ್ಲ. ಪ್ರಭಾಸ್ ಬಿಟ್ಟು ಇನ್ನೂ ನಾಲ್ಕು ಮಂದಿ ಸ್ಟಾರ್ ನಟರೊಂದಿಗೆ ಸಂಬಂಧ ಹೊಂದಿದ್ದಾರೆಂದು ಸುದ್ದಿಯಾಗಿತ್ತು. ಆ ವಿಷಯವನ್ನು ಜಯಪ್ರದಾ ಜೊತೆ ಹೇಳಿಕೊಂಡಿದ್ದರು.

ಅನುಷ್ಕಾ ಶೆಟ್ಟಿ ಸೌಂದರ್ಯಕ್ಕೆ ಮರುಳಾಗದವರೇ ಇಲ್ಲ. ಅವರ ನಟನೆಯನ್ನು ನೋಡಿ ಇಷ್ಟ ಪಡುವವರು ಎಷ್ಟು ಮಂದಿ ಇದ್ದಾರೋ ಹಾಗೇ ಅವರ ಸೌಂದರ್ಯಕ್ಕೆ ಮರುಳಾದವರೂ ಕೂಡ ಅಷ್ಟೇ ಮಂದಿ ಇದ್ದಾರೆ. ಒಂದು ಕಾಲದಲ್ಲಿ ಟಾಲಿವುಡ್‌ನ ಬಹುಬೇಡಿಕೆಯ ನಟಿಯಾಗಿದ್ದ ಅನುಷ್ಕಾ ಶೆಟ್ಟಿ ಟಾಲಿವುಡ್‌ನ ಹಲವು ನಟರೊಂದಿಗೆ ನಟಿಸಿದ್ದರು. ಆ ವೇಳೆ ಕೆಲವು ನಟರೊಂದಿಗೆ ಅನುಷ್ಕಾ ಹೆಸರು ತಳುಕು ಹಾಕಿಕೊಂಡಿತ್ತು. ಅದರಲ್ಲಿ ಐವರ ಹೆಸರನ್ನು ಅವರೇ ಸಂದರ್ಶನದ ವೇಳೆ ಹೇಳಿಕೊಂಡಿದ್ದರು. ಅದೇ ಈಗ ಟಾಲಿವುಡ್ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.

ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿ ಟಾಲಿವುಡ್‌ನ 'ಸೂಪರ್' ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಟಾಲಿವುಡ್ ಮನ್ಮಥ ನಾಗಾರ್ಜುನ ಜೊತೆ ನಟಿಸಿದ್ದರು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಜೋರಾಗಿಯೇ ಸದ್ದು ಮಾಡಿತ್ತು. ಇಲ್ಲಿಂದ ಮತ್ತೆಂದು ಅನುಷ್ಕಾ ಶೆಟ್ಟಿ ಹಿಂತಿರುಗಿ ನೋಡುವ ಪ್ರಮೇಯವೇ ಬಂದಿಲ್ಲ. ಟಾಲಿವುಡ್‌ನ ಸ್ಟಾರ್ ನಟರೊಂದಿಗೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ಈ ವೇಳೆ ನಾಗಾರ್ಜುನ ಜೊತೆಗೂ ಅನುಷ್ಕಾ ಶೆಟ್ಟಿ ಹೆಸರು ತಳುಕು ಹಾಕಿಕೊಂಡಿದ್ದರು.

Anushka Shetty commented on her affair with five co stars in front of Jayaprada

ನಾಗಾರ್ಜುನ ಜೊತೆಗೆ ಇನ್ನೂ ಯಾರೊಂದಿಗೆ ಹೆಸರು ತಳುಕು ಹಾಕಿಕೊಂಡಿದೆ ಅನ್ನೋದನ್ನು ಹಿಂದೊಮ್ಮೆ ಹೇಳಿದ್ದರು. 'ಜಯಪ್ರದಂ ಟಾಕ್ ಶೋ' ನಿಮ್ಮ ಜೀವನದಲ್ಲಿ ನೀವು ಎದುರಿಸಿದ ಗಾಸಿಪ್ ಯಾವುದು ಎಂದು ಕೇಳಿದ್ದರು. ಆ ವೇಳೆ ಅನುಷ್ಕಾ ಶೆಟ್ಟಿ ತನ್ನನ್ನು ಐದು ನಟರೊಂದಿಗೆ ಮದುವೆ ಮಾಡಿಸಿದ್ದರು ಎಂದು ಹೇಳಿದ್ದರು. ಆ ವೇಳೆ ಯಾರೊಂದಿಗೆ ತಮ್ಮ ಹೆಸರು ತಳುಕು ಹಾಕಿಕೊಂಡಿದೆ ಅನ್ನೋದನ್ನು ರಿವೀಲ್ ಮಾಡಿದ್ದರು.

ಪ್ರಭಾಸ್ ಜೊತೆಗೆ ಟಾಲಿವುಡ್ ನಟರಾದ ಸುಮಂತ್, ಗೋಪಿಚಂದ್, ಪ್ರಭಾಸ್, ಸೆಂಥಿಲ್ ಹಾಗೂ ನಾಗಾರ್ಜುನ ಅವರ ಜೊತೆ ನಾನು ಡೇಟಿಂಗ್‌ ಮಾಡುತ್ತಿದ್ದೇನೆ ಎಂಬ ಸುದ್ದಿಯನ್ನು ಹಬ್ಬಿಸಿದ್ದರು ಎಂದು ಅನುಷ್ಕಾ ಶೆಟ್ಟಿ ಹೇಳಿದ್ದರು. ನಾಗಾರ್ಜುನ, ಪ್ರಭಾಸ್ ಅಷ್ಟೇ ಅಲ್ಲದೇ, ತಮ್ಮ ವೃತ್ತಿಜೀವನದ ಆರಂಭದಲ್ಲಿ ಸುಮಂತ್ ಹಾಗೂ ಗೋಪಿಚಂದ್ ಜೊತೆಗೂ ನಟಿಸಿದ್ದರು.

More from Filmibeat

English summary
Anushka Shetty commented on her affair with five co stars in front of Jayaprada
Read more about: anushka shetty affairs jayaprada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X