Fans Letter: ಕರ್ನಾಟಕ ಚಿತ್ರಮಂದಿರಗಳ ಮಾಲೀಕರಿಗೆ ಸ್ಟಾರ್ ನಟರ ಅಭಿಮಾನಿಗಳ ಮನವಿ

By ಫಿಲ್ಮಿಬೀಟ್ ಡೆಸ್ಕ್

ಶಿವರಾಜ್ ಕುಮಾರ್, ಅಪ್ಪು, ದರ್ಶನ್, ಸುದೀಪ್, ಧ್ರುವ ಸರ್ಜಾ, ಡಾಲಿ ಧನಂಜಯ್, ರಕ್ಷಿತ್ ಶೆಟ್ಟಿ ಇನ್ನಿತರ ಕನ್ನಡದ ಸ್ಟಾರ್ ನಟರ ಅಭಿಮಾನಿಗಳ ಸಂಖ್ಯೆ ಒಟ್ಟು ಮಾಡಿದರೆ ಕೆನಡಾ ದೇಶದ ಜನಸಂಖ್ಯೆ ಮೀರಿಸಬಹುದೋ ಏನೋ?

ನಮ್ಮ ದೇಶದ ರಾಜಕೀಯ ತುಸು ಮಾತ್ರವೂ ಅರ್ಥಮಾಡಿಕೊಂಡಿರುವವರಿಗೆ ಗೊತ್ತಿದೆ, ಇಲ್ಲಿ ಬಹುಮತಕ್ಕೆ ಆದ್ಯತೆ ಎಂಬುದು. ಹಾಗಾಗಿ ಬಹುಸಂಖ್ಯೆಯ ಅಭಿಮಾನಿ ಬಳಗ ಒಕ್ಕೂರಲಾಗಿ ಕರ್ನಾಟಕದ ಚಿತ್ರರಂಗದ ಮಾಲೀಕರುಗಳಿಗೆ ಮನವಿಯನ್ನು ಮಾಡಿದ್ದಾರೆ.

ಅಭಿಮಾನಿಗಳಿಲ್ಲದೆ ಇಡೀಯ ಚಿತ್ರರಂಗವೇ ಇಲ್ಲ. ಚಿತ್ರರಂಗಕ್ಕೆ ಬ್ರೆಡ್-ಬಟರ್ ನೀಡುತ್ತಿರುವವರೇ ಅಭಿಮಾನಿಗಳು, ಹಾಗಿದ್ದ ಮೇಲೆ ಅಭಿಮಾನಿಗಳ ಮನವಿಯನ್ನು ಚಿತ್ರಮಂದಿರಗಳು ಉಪೇಕ್ಷಿಸಲು ಸಾಧ್ಯವೇ? ಹಾಗಿದ್ದರೆ ಈ ಮನವಿಯೇನು? ಏನೇನು ಬೇಡಿಕೆಯನ್ನು ಅಭಿಮಾನಿಗಳು ಚಿತ್ರಮಂದಿರಗಳ ಮಾಲೀಕರ ಮುಂದಿಟ್ಟಿದ್ದಾರೆ ತಿಳಿಯೋಣವೆ?

''ಹಾಸಿಗೆ, ದಿಂಬು ವ್ಯವಸ್ಥೆ ಮಾಡಿಕೊಡಿ''

''ಹಾಸಿಗೆ, ದಿಂಬು ವ್ಯವಸ್ಥೆ ಮಾಡಿಕೊಡಿ''

ಚಿತ್ರಮಂದಿರಗಳ ಮಾಲೀಕರಿಗೆ ಅಭಿಮಾನಿಗಳ ಮೊದಲ ಬೇಡಿಕೆ ಎಂದರೆ, ಚಿತ್ರಮಂದಿರದ ಹೊರಗೆ ಹಾಸಿಗೆ, ದಿಂಬು, ಬೆಡ್‌ಶೀಟ್ ವ್ಯವಸ್ಥೆ ಮಾಡಿಸಬೇಕೆಂಬುದು. ತಮ್ಮ ನೆಚ್ಚಿನ ನಟನ ಸಿನಿಮಾ ಬಿಡುಗಡೆ ಅಗುವ ಹಿಂದಿನ ದಿನ ರಾತ್ರಿಯೇ ಟಿಕೆಟ್‌ಗಾಗಿ ಚಿತ್ರಮಂದಿರದ ಮುಂದೆ ಸಾಲು ಗಟ್ಟಿ ನಿಂತಿರುತ್ತಾರಲ್ಲ, ಅವರ ಆರೋಗ್ಯದ ಗತಿ ಏನಾಗಬೇಡ? ನಿದ್ದೆಗೆಟ್ಟು ಟಿಕೆಟ್ ಪಡೆದು ನೆಮ್ಮದಿಯಾಗಿ ಸಿನಿಮಾ ನೋಡಲು ಸಾಧ್ಯವೇ? ಅದರ ಬದಲು ಚಿತ್ರಮಂದಿರಗಳೇ ಹಾಸಿಗೆ, ದಿಂಬು ವ್ಯವಸ್ಥೆ ಮಾಡಿಬಿಟ್ಟರೆ, ಅಭಿಮಾನಿಗಳಿಗೂ ಆರಾಮ. ಚಿತ್ರಮಂದಿರದವರಿಗೂ ಆರಾಮ.

''ಡ್ಯಾನ್ಸ್ ಮಾಡುವಾಗ ಕಾಲ್ತುಳಿತ ಆಗುತ್ತೆ ರೀ''

''ಡ್ಯಾನ್ಸ್ ಮಾಡುವಾಗ ಕಾಲ್ತುಳಿತ ಆಗುತ್ತೆ ರೀ''

ಚಿತ್ರಮಂದಿರದ ಒಳಗೆ ಡ್ಯಾನ್ಸ್ ಫ್ಲೋರ್ ಬೇಕೇ ಬೇಕು. ಸಿನಿಮಾ ಶುರುವಾಗಿ ಹೀರೋ ಇಂಟ್ರೊಡಕ್ಷನ್ ಹಾಡು ತೆರೆ ಮೇಲೆ ಮೂಡಿದಾಗ ಅಭಿಮಾನಿಗಳು ಪರದೆಯ ಮುಂದೆ ಬಂದು ಡ್ಯಾನ್ಸ್ ಮಾಡುವುದು ತೀರ ಸಾಮಾನ್ಯ. ಈಗಿನ ಚಿತ್ರಮಂದಿರಗಳಲ್ಲಿ ಪರದೆಯ ಮುಂದೆ ಕಡಿಮೆ ಜಾಗವಿದ್ದು, ಪಾಪ ಅಭಿಮಾನಿಗಳು ಒಬ್ಬರ ಮೇಲೊಬ್ಬರು ಬಿದ್ದು ಡ್ಯಾನ್ಸ್ ಮಾಡಬೇಕಾದ ಸ್ಥಿತಿ ಇದೆ. ಹಾಗಾಗಿ ಚಿತ್ರಮಂದಿರಗಳ ಮಾಲೀಕರು ಅಭಿಮಾನಿಗಳಿಗಾಗಿಯೇ ಪ್ರತ್ಯೇಕ ಡ್ಯಾನ್ಸ್ ಫ್ಲೋರ್ ಮಾಡಿದರೆ ಅಭಿಮಾನಿಗಳು ಸುರಕ್ಷಿತವಾಗಿ, ಪರಸ್ಪರರ ಕಾಲು ತುಳಿದುಕೊಳ್ಳದೆ ತಮ್ಮ ಅಪೂರ್ವ 'ನೃತ್ಯ ಪ್ರತಿಭೆ' ಪ್ರದರ್ಶಿಸಲು ಅವಕಾಶವಾಗುತ್ತದೆ.

''ಚಿತ್ರಮಂದಿರದ ಬಳಿ ಮೈಕ್ ವ್ಯವಸ್ಥೆ ಆಗಬೇಕು''

''ಚಿತ್ರಮಂದಿರದ ಬಳಿ ಮೈಕ್ ವ್ಯವಸ್ಥೆ ಆಗಬೇಕು''

ಚಿತ್ರಮಂದಿರದಲ್ಲಿ ಮೈಕೊಂದರ ವ್ಯವಸ್ಥೆ ಮಾಡುವುದು ಸಹ ಚಿತ್ರಮಂದಿರದವರ ಜವಾಬ್ದಾರಿ. ಅಭಿಮಾನಿಗಳು ಸಿನಿಮಾ ಮಂದಿರಕ್ಕೆ ಬರುವ ಮುನ್ನಾ, ಬಂದ ಮೇಲೆ ತಮ್ಮ ಮೆಚ್ಚಿನ ನಟನ ಹೆಸರು ಕೂಗಿ ಘೋಷಣೆ ಕೂಗುವುದು ಸರ್ವೇ ಸಾಮಾನ್ಯ. ಚಿತ್ರಮಂದಿರದಲ್ಲಿ ಮೈಕೊಂದರ ವ್ಯವಸ್ಥೆ ಮಾಡಿಬಿಟ್ಟರೆ, ಮೈಕು ಹಿಡಿದಾತ ನಟನ ಹೆಸರು ಕೂಗಿದರೆ ಉಳಿದವರು ಜೈ ಎನ್ನುತ್ತಾರೆ. ಮೈಕ್‌ನಿಂದಾಗಿ ಘೋಷಣೆಯ ಅನುರಣನ ನೂರ್ಮಡಿಯಾಗಿ ಮನೆಯಲ್ಲಿ ಕೂತ ಅಭಿಮಾನಿಗೂ ರೋಮಾಂಚನವಾಗಿ ಚಿತ್ರಮಂದಿರಕ್ಕೆ ಓಡೋಡಿ ಬರುತ್ತಾನೆ ಎಂಬುದು ಅಭಿಮಾನಿಗಳ ವಾದ.

''ಬೆಳ್ಳಂಬೆಳಿಗ್ಗೆ ಎಲ್ಲಿಂದ ತರೋಣ ಸ್ವಾಮಿ ಅದನ್ನೆಲ್ಲಾ''

''ಬೆಳ್ಳಂಬೆಳಿಗ್ಗೆ ಎಲ್ಲಿಂದ ತರೋಣ ಸ್ವಾಮಿ ಅದನ್ನೆಲ್ಲಾ''

ಚಿತ್ರಮಂದಿರದ ಹೊರಗೆ ಹೂವು, ಕಾಯಿ, ಕರ್ಪೂರ, ಬೂದಗುಂಬಳಕಾಯಿ, ಹಾಲು, ಮೊಸರಿನ ಅಂಗಡಿಗಳು ಕಡ್ಡಾಯವಾಗಿ ಇರಬೇಕು. ಅಭಿಮಾನಿಗಳು ಸಿನಿಮಾ ನೋಡುವ ಮೊದಲು ತಮ್ಮ ಮೆಚ್ಚಿನ ನಟನ ಕಟೌಟ್‌ಗೆ ಹಾರ ಹಾಕಿ, ಕಾಯಿ ಹೊಡೆದು, ಹಾಲು, ಮೊಸರಿನ ಅಭಿಷೇಕ ಮಾಡಿ ಕುಂಬಳಕಾಯಿ ಹೊಡೆದ ಮೇಲಷ್ಟೆ ಚಿತ್ರಮಂದಿರ ಪ್ರವೇಶಿಸುವುದು. ಬೆಳ್ಳಂಬೆಳಿಗ್ಗೆ ದೂರ ದೂರದಿಂದ ಸಿನಿಮಾ ಮಂದಿರದ ಬಳಿ ಬಂದ ಅಭಿಮಾನಿಗಳು ಇದನ್ನೆಲ್ಲ ಎಲ್ಲಿಂದ ಖರೀದಿಸಿ ತರಬೇಕು ಪಾಪ. ಹಾಗಾಗಿ ಈ ಅಂಗಡಿಗಳು ಚಿತ್ರಮಂದಿರದ ಎದುರಿದ್ದರೆ ಅಥವಾ ಚಿತ್ರಮಂದಿರಗಳೇ ಈ ಅಂಗಡಿಗಳನ್ನೂ ಇಟ್ಟರೆ ಅಭಿಮಾನಿಗಳಿಗೆ ಮಹಾನುಕೂಲವಾಗುತ್ತದೆ.

ಸೆಲ್ಫಿ ತೆಗೆದುಕೊಳ್ಳುವುದು ಎಷ್ಟು ಕಷ್ಟ ಗೊತ್ತೆ?

ಸೆಲ್ಫಿ ತೆಗೆದುಕೊಳ್ಳುವುದು ಎಷ್ಟು ಕಷ್ಟ ಗೊತ್ತೆ?

ಸೆಲ್ಫಿ ಸ್ಟ್ಯಾಂಡ್ ಒಂದು ಬೇಕೇ ಬೇಕು ಸ್ವಾಮಿ, ನಾವು ನಮ್ಮ ಮೆಚ್ಚಿನ ಅಭಿಮಾನಿಯ ಮೊತ್ತ ಮೊದಲ ಶೋ ನೋಡುತ್ತಿದ್ದೇವೆ ಎಂಬುದನ್ನು ಜಗತ್ತಿಗೆ ಸಾರಿ ಹೇಳುವುದು ಬೇಡವೆ. ಚಿತ್ರಮಂದಿರದ ಒಳಗೆ ಸೀಟಿನಲ್ಲಿ ಕುಳಿತು ಮೊಬೈಲ್ ತೆಗೆದು ಸ್ಕ್ರೀನ್‌ ಮೇಲೆ ಮೂಡುವ ನಟ ಹಾಗೂ ನಾವು ಒಂದೇ ಫ್ರೇಮ್‌ನಲ್ಲಿ ಬರುವಂತೆ ಸೆಲ್ಫಿ ಸೆರೆ ಹಿಡಿಯುವುದು ಎಷ್ಟು ಕಷ್ಟ ಗೊತ್ತೆ? ಹಾಗಾಗಿ ಚಿತ್ರಮಂದಿರದ ಒಳಗೆ ಒಂದು ಸೆಲ್ಫಿ ಸ್ಟ್ಯಾಂಡ್ ಮಾಡಿಸಿ. ತೆರೆಯ ಮೇಲೆ ಹೀರೋ ಎಂಟ್ರಿ ಕೊಡುತ್ತಿರುವ ದೃಶ್ಯ ಮೂಡುತ್ತಿದ್ದಂತೆ ಪ್ರೊಜೆಕ್ಟರ್ ಅನ್ನು ನಿಲ್ಲಿಸಿ ತೆರೆಯ ಮೇಲೆ ಹೀರೋ ಚಿತ್ರವನ್ನು ಪಾಸ್ ಮಾಡಿ ಎಲ್ಲ ಅಭಿಮಾನಿಗಳಿಗೂ ಪರದೆಯ ಮೇಲೆ ಮೂಡಿರುವ ತಮ್ಮ ಮೆಚ್ಚಿನ ನಟನೊಟ್ಟಿಗೆ ಸೆಲ್ಫಿ ತೆಗೆಸಿಕೊಳ್ಳಲು ಅವಕಾಶ ಕೊಡಬೇಕು ಎಂಬುದು ಅಭಿಮಾನಿಗಳ ಒಕ್ಕೂರಲ ಆಗ್ರಹ.

Recommended Video

KGF 2 ತಂಡದ ಮೇಲೆ ಕನ್ನಡಪರ ಸಂಘಟನೆಗಳ ಅಸಮಾಧಾನ ಯಾಕೆ ಗೊತ್ತಾ? | Yash
ನಮ್ಮ ಕೊನೆಯ ಮನವಿ ಇದು

ನಮ್ಮ ಕೊನೆಯ ಮನವಿ ಇದು

ಇನ್ನು ಕೊನೆಯ ಮನವಿ ಎಂದರೆ, ನಿಮ್ಮ ಕೈ ಮುಗಿಯುತ್ತೇವೆ ಸ್ವಾಮಿ ಇಂಟರ್ವೆಲ್‌ನಲ್ಲಿ ಆ 'ನಾನು ಮುಕೇಶನ' ಜಾಹೀರಾತು ನಿಲ್ಲಿಸಿ. ನೆಚ್ಚಿನ ನಟನ ಆಕ್ಷನ್, ಡ್ಯಾನ್ಸ್, ರೊಮ್ಯಾನ್ಸ್ ನೋಡಿ ಖುಷಿಯಾಗಿ ಇಂಟರ್ವೆಲ್‌ನಲ್ಲಿ ಹೋಗಿ ಚಿಪ್ಸು, ಪಾಪ್‌ಕಾರ್ನ್ ತೆಗೆದುಕೊಂಡು ಬಂದು ಸಿನಿಮಾದ ಎರಡನೇ ಅರ್ಧದ ಬಗ್ಗೆ ನಿರೀಕ್ಷೆಯಿಂದ ಕಾಯುತ್ತಾ ಪಾಪ್‌ ಕಾರ್ನ್ ಬಾಯಿಗೆ ಹಾಕಿಕೊಂಡಿರುತ್ತೇವೆ ಅಷ್ಟರಲ್ಲೇ ಮುಕೇಶ ಪ್ರತ್ಯಕ್ಷವಾಗುತ್ತಾನೆ. ಜೊತೆಗೆ ಅವನ ಅಕ್ಕ-ತಂಗಿಯರೂ ಪ್ರತ್ಯಕ್ಷವಾಗುತ್ತಾರೆ. ಆ ರಕ್ತ, ಹರಿದ ಬಾಯಿ, ಗಂಟಲಿನ ದೃಶ್ಯಗಳನ್ನು ನೋಡಿ ಬಾಯಿಗೆ ಹಾಕಿಕೊಂಡ ಪಾಪ್‌ಕಾರ್ನ್ ಗಂಟಲಲ್ಲಿ ಸಿಕ್ಕಿಹಾಕಿಕೊಂಡು ಬಿಡುತ್ತದೆ. ಆ ಎರಡು ಬಳೆ ಮಾರಿದವನ ಕತೆಯನ್ನಂತೂ ವರ್ಷಗಳಿಂದಲೂ ನೋಡಿ ನೋಡಿ ಸಾಕಾಗಿ ಹೋಗಿದೆ. ಅಲ್ಲ ಸ್ವಾಮಿ ನಮ್ಮ ಹೀರೋ ಕತ್ತಿ ತೆಗೆದು ಬೀಸಿ ಎದುರಾಳಿಯ ರುಂಡ ತೆಗೆದರೆ ಅದನ್ನು ತೋರಿಸುವುದಿಲ್ಲ, ಹಿಂಸೆ ಎನ್ನುತ್ತೀರ? ಮುಕೇಶನ ಜಾಹೀರಾತಿನ ಮೂಲಕ ನೀವು ನಮಗೆ ನೀಡುತ್ತಿರುವುದು ಹಿಂಸೆಯಲ್ಲವೇ ಮತ್ತೆ? ದಯವಿಟ್ಟು ಆ ಜಾಹಿರಾತು ನಿಲ್ಲಿಸಿ ಪುಣ್ಯ ಕಟ್ಟಿಕೊಳ್ಳಿ. ಜೈ ಕನ್ನಡ ಚಿತ್ರರಂಗ, ಜೈ ಕನ್ನಡದ ನಟ-ನಟಿಯರು.

*ಏಪ್ರಿಲ್ 1ರ ಫೂಲ್ಸ್ ಡೇ ವಿಶೇಷವಾಗಿ ಬರೆದ ಲೇಖನ. ಇದು ಸತ್ಯ ಲೇಖನವಲ್ಲ.

More from Filmibeat

English summary
April Fools day special: a lefter to Karnataka theater owners by movie fans. Here is what they want from theaters.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X