'45' ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ 'ಶಿವ'ಪ್ಪನ 11 ಅವತಾರಗಳು; ಅದರ ಹಿನ್ನೆಲೆ ಏನು?

ಅರ್ಜುನ್ ಜನ್ಯಾ ನಿರ್ದೇಶನದ '45' ಸಿನಿಮಾ ಇದೀಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡ್ತಿದೆ. ತೆಲುಗು, ತಮಿಳು ಪ್ರೇಕ್ಷಕರಿಗೆ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಕಳೆದ ವಾರ ಕರ್ನಾಟಕ ಹಾಗೂ ಓವರ್‌ಸೀಸ್‌ನಲ್ಲಿ ಸಿನಿಮಾ ಬಿಡುಗಡೆ ಆಗಿತ್ತು. ಈ ವಾರ ಬೇರೆ ಬೇರೆ ಭಾಷೆಗಳಲ್ಲಿ ಸಿನಿಮಾ ತೆರೆಗೆ ಬಂದಿದೆ.

ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಅದರಲ್ಲೂ ಕ್ಲೈಮ್ಯಾಕ್ಸ್ ಫೈಟ್‌ನಲ್ಲಿ ಶಿವಪ್ಪನ 11 ಅವತಾರಗಳನ್ನು ದರ್ಶನ ಮಾಡಿ ಪ್ರೇಕ್ಷಕರು ಹುಬ್ಬೇರಿಸಿದ್ದಾರೆ. ಶಿವಣ್ಣನನ್ನು ಹೀಗೆ ವಿಭಿನ್ನ ಗೆಟಪ್‌ಗಳಲ್ಲಿ ತೋರಿಸಿ ಅರ್ಜುನ್ ಜನ್ಯಾ ಗೆದ್ದಿದ್ದಾರೆ. ಸಿನಿಮಾ ಬಿಡುಗಡೆ ಆಗುವವರೆಗೆ ಈ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಡಿಸೆಂಬರ್ 24ರಂದು ತೆರೆಮೇಲೆ ಈ ಸರ್‌ಪ್ರೈಸ್ ಪ್ರೇಕ್ಷಕರಿಗೆ ಕಿಕ್ ಕೊಟ್ಟಿತ್ತು. ಶಿವನ 11 ಅವತಾರಗಳು ಬಂದು ರಾಯಪ್ಪ(ಯಮನ)ನ ವಿರುದ್ಧ ಹೋರಾಡುವ ಸನ್ನಿವೇಶ ಅದು.

Arjun Janya s 45 Stuns Audiences with Shivarajkumar s 11 Shiva Avatars in a Powerful Climax

ವಿಜಯ್‌ಗೆ 45 ದಿನ ಕಾಲಾವಕಾಶ ಕೊಟ್ಟಿದ್ದ ರಾಯಪ್ಪನಿಗೆ ಶಿವಪ್ಪನನ್ನು ಕಂಡರೆ ಭಯ. ಶಿವಪ್ಪ ಇರುವಾಗ ತನ್ನ ಮಾತು ಈಡೇರುವುದಿಲ್ಲ ಎಂದು ಗೊತ್ತಿಲ್ಲ. ಶಿವಪ್ಪ ಒಬ್ಬ ಅಲ್ಲ, ಆತನ ಹಿಂದೆ ಸಾಕಷ್ಟು ಜನ ಇದ್ದಾರೆ ಎಂದು ರಾಯಪ್ಪ ಹೇಳುತ್ತಾ ಬಂದಿದ್ದ. ಕೊನೆಗೆ ಅವರೆಲ್ಲಾ ಯಾರು ಎನ್ನುವುದು ಗೊತ್ತಾಗಿತ್ತು. ಶಿವನ ರುದ್ರ ಅವತಾರಗಳು ಸೇರಿ ಒಟ್ಟು 11 ಅವತಾರಗಳನ್ನು ದರ್ಶನ ಮಾಡಿಸಲಾಗಿದೆ.

ಕಪಾಲಿ, ಪಿಂಗಲ, ವಿರುಪಾಕ್ಷ, ಹರ, ಅರ್ಧನಾರೀಶ್ವರ, ಭೀಮ ಹೀಗೆ ಹಲವು ಅವತಾರಗಳಲ್ಲಿ ಶಿವರಾಜ್‌ಕುಮಾರ್ ಕಾಣಿಸಿಕೊಂಡಿದ್ದಾರೆ. ವಿಭಿನ್ನ ಗೆಟಪ್‌ಗಳಲ್ಲಿ ದರ್ಶನ ಕೊಟ್ಟು ಮೋಡಿ ಮಾಡುವ ಶಿವಣ್ಣ ಕೊನೆಗೆ ಪರಶಿವನಾಗಿ ಕಾಣಿಸಿಕೊಳ್ಳುವುದನ್ನು ನೋಡಬಹುದು. ಕೆಲವೆಡೆ ಚಿತ್ರಮಂದಿರಗಳಲ್ಲಿ ಮಹಿಳೆಯರು ಶಿವನಿಗೆ ಆರತಿ ಬೆಳಗಿದ್ದರು. ಇನ್ನು ಈ 11 ಅವತಾರಗಳ ಹಿನ್ನೆಲೆ ಏನು ಎನ್ನುವುದನ್ನು ನೋಡೋಣ.

Arjun Janya s 45 Stuns Audiences with Shivarajkumar s 11 Shiva Avatars in a Powerful Climax

1. ಕಪಾಲ

ಸ್ಕಂದ ಪುರಾಣದ ಪ್ರಕಾರ, ಶಿವನು ಬ್ರಹ್ಮನ ಐದು ತಲೆಗಳಲ್ಲಿ ಒಂದನ್ನು ಕತ್ತರಿಸಿ ಹಿಡಿದುಕೊಂಡಿರುತ್ತಾನೆ. 'ಕಪಾಲ' ಅಂದರೆ ತಲೆಬುರುಡೆ ಎನ್ನುವ ಅರ್ಥ ಇದೆ. ಹಾಗಾಗಿ ಕಪಾಲಿ ಎಂದರೆ ತಲೆಬುರುಡೆಯನ್ನು ಕೈಯಲ್ಲಿ ಹಿಡಿದಿರುವವ ಎಂದರ್ಥ.

2. ಪಿಂಗಲ

ಪಿಂಗಲ ರುದ್ರನು ಶಾಂತ, ಗಂಭೀರ ಮತ್ತು ಆಳವಾದ ಧ್ಯಾನದ ರೂಪ. ಆಧ್ಯಾತ್ಮಿಕ ಶಿಸ್ತು ಮತ್ತು ತ್ಯಾಗದಿಂದ ಆತ್ಮವನ್ನು ಶುದ್ಧೀಕರಿಸುವ ಒಳಗಿನ ಬೆಂಕಿಯನ್ನು ಪ್ರತಿನಿಧಿಸು ಅವತಾರ ಇದು.

3. ಭೀಮ

ಶಿವನ ಅವತಾರಗಳಲ್ಲಿ ಭೀಮನ ಅವತಾರ ಕೂಡ ಒಂದು. ಶಿವನ ಭಯಾನಕ ಮತ್ತು ಶಕ್ತಿಶಾಲಿ ರೂಪವಾಗಿದ್ದು ದುಷ್ಟರನ್ನು ಸಂಹರಿಸಿ ಸದಾಚಾರ ರಕ್ಷಿಸುವ ಅವತಾರ. ಮಹಾಭಾರತದ ಭೀಮನನ್ನು ವಾಯುಪುತ್ರ ಎನ್ನಲಾಗುತ್ತದೆ. ಕೆಲವೊಮ್ಮೆ ಶಿವನ ಅವತಾರ ಎಂದು ಪರಿಗಣಿಸಲಾಗಿದೆ.

4. ತ್ರಯಂಬಕಂ

ಮೂರು ಕಣ್ಣುಗಳನ್ನು ಹೊಂದಿರುವವನು ಎನ್ನುವುದಕ್ಕೆ 'ತ್ರಯಂಬಕಂ' ಎನ್ನಲಾಗುತ್ತದೆ. ಶಿವನ ಹಲವು ಅವತಾರಗಳಲ್ಲಿ ಇದು ಒಂದು. ಶಿವ ಜಗತ್ತಿನ 3 ಲೋಕಗಳನ್ನು ಆಳುವವನು ಮತ್ತು ರಕ್ಷಕ ಎನ್ನುವುದನ್ನು ಇದು ಸೂಚಿಸುತ್ತದೆ.

5. ಅರ್ಧ ನಾರೀಶ್ವರ

ಶಿವ ಮತ್ತು ಪಾರ್ವತಿಯರ ಸಂಯೋಜಿತ ಅರ್ಧ-ಪುರುಷ, ಅರ್ಧ-ಸ್ತ್ರೀ ರೂಪವೇ ಅರ್ಧ ನಾರೀಶ್ವರ. ಸ್ತ್ರೀ-ಪುರುಷ ಅವಿನಾಭಾವ ಸಂಬಂಧ, ಸಮಾನತೆ ಮತ್ತು ಸೃಷ್ಟಿಯ ಮೂಲತತ್ವವನ್ನು ಇದು ಪ್ರತಿನಿಧಿಸುತ್ತದೆ.

6. ವೀರಭದ್ರ

ಶಿವನ ಜಟೆಯಿಂದ ವೀರಭದ್ರನು ಜನಿಸಿದನು ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ದಕ್ಷನ ಯಜ್ಞವನ್ನು ಧ್ವಂಸಗೊಳಿಸಿ, ದಕ್ಷನ ತಲೆಯನ್ನು ವೀರಭಧ್ರ ಕತ್ತರಿಸಿದನು. ವೀರಶೈವರು ಸೇರಿ ಕೆಲವರ ಕುಲದೈವ ಈ ವೀರಭದ್ರ.

ಇನ್ನುಳಿದಂತೆ ಅಹಿರ್ಬುದನ್ಯ, ಹರ, ವಿಲೋಹಿತ ಹೀಗೆ ಶಿವನ ಹಲವು ಅವತಾರಗಳನ್ನು '45' ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ತೋರಿಸಲಾಗಿದೆ.

More from Filmibeat

Read more about: shivarajkumar arjun janya
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X