ನನ್ನ ಸುತ್ತಾ ಇದ್ದವರು ಮೋಸ ಮಾಡ್ಬಿಟ್ರು, ಇಲ್ಲ ಅಂದಿದ್ರೆ ಕೋಟಿ ಕೋಟಿ ಆಸ್ತಿ ಇರ್ತಿತ್ತು- ಅರ್ಜುನ್ ಸರ್ಜಾ
ಬಹುಭಾಷಾ ನಟ, ನಿರ್ದೇಶಕ ಅರ್ಜುನ್ ಸರ್ಜಾ 'ಸೀತಾ ಪಯಣಂ' ಚಿತ್ರವನ್ನು ಪ್ರೇಕ್ಷಕರ ಮುಂದೆ ತರ್ತಿದ್ದಾರೆ. ವ್ಯಾಟಂಲೈನ್ಸ್ ಡೇ ಸಂಭ್ರಮದಲ್ಲಿ ಕನ್ನಡ ಹಾಗೂ ತೆಲುಗಿನಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಮಗಳನ್ನು ನಾಯಕಿ ಮಾಡಿ ತಾವೇ ಸಿನಿಮಾ ನಿರ್ಮಿಸಿ ನಿರ್ದೇಶನ ಮಾಡಿದ್ದಾರೆ. ನಿರಂಜನ್ ಹೀರೊ ಆಗಿ ಮಿಂಚಿದ್ದಾರೆ.
ಇತ್ತೀಚೆಗೆ ಆಕ್ಷನ್ ಕಿಂಗ್ ಸಿನಿಮಾ ಮಾಡುವ ಸ್ಪೀಡ್ ತಗ್ಗಿಸಿದ್ದಾರೆ. ಆಗೊಮ್ಮೆ ಈಗೊಮ್ಮೆ ಸಿನಿಮಾಗಳನ್ನು ಪ್ರೇಕ್ಷಕರ ಮುಂದೆ ತರುತ್ತಾರೆ. ತುಮಕೂರಿನ ಮಧುಗಿರಿಯಲ್ಲಿ ಹುಟ್ಟಿ ಬೆಳೆದ ಅರ್ಜುನ್ ಚಿತ್ರರಂಗಕ್ಕೆ ಬರುವುದು ಕಷ್ಟವಾಗಲಿಲ್ಲ. ತಂದೆ ಶಕ್ತಿ ಪ್ರಸಾದ್ ಖಳನಟರಾಗಿ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದರು. ಹಾಗಾಗಿ 'ಸಿಂಹದ ಮರಿ ಸೈನ್ಯ' ಚಿತ್ರದಲ್ಲಿ ಬಾಲನಟನಾಗಿ ಅರ್ಜುನ್ ಬಣ್ಣದ ಲೋಕ ಪ್ರವೇಶಿಸಿದರು.

80-90ರ ದಶಕದಲ್ಲಿ ಭೂಮಿಗೆ ಹೆಚ್ಚಿನ ಬೆಲೆ ಇರಲಿಲ್ಲ. ಆಗ ಜಮೀನು ಖರೀದಿಸಿದವರು ಇವತ್ತು ಕೋಟ್ಯಾಧಿಪತಿಗಳಾಗಿದ್ದಾರೆ. ಕೆಲ ಸಿನಿಮಾ ಕಲಾವಿದರು ಕೂಡ ಆಗ ಸಾಕಷ್ಟು ಆಸ್ತಿ ಮಾಡಿಟ್ಟಿದ್ದರು. ಈಗ ಅದೆಲ್ಲಾ ನೂರಾರು ಕೋಟಿ ಬೆಲೆ ಬಾಳುತ್ತದೆ. 80ರ ದಶಕದಲ್ಲೇ ಅರ್ಜುನ್ ಸರ್ಜಾ ಹೀರೊ ಆಗಿ ಗುರ್ತಿಸಿಕೊಂಡಿದ್ದರು. ಹಾಗಾಗಿ ಒಳ್ಳೆ ಸಂಭಾವನೆ ಕೂಡ ನೋಡಿದ್ದರು. ಆದರೆ ಅದನ್ನು ಒಳ್ಳೆ ರೀತಿಯಲ್ಲಿ ಹೂಡಿಕೆ ಮಾಡಲಿಲ್ಲ. ಅದರಿಂದ ಭಾರೀ ಆಸ್ತಿ ಸಂಪಾದಿಸಲು ಸಾಧ್ಯವಾಗಲಿಲ್ಲ ಎಂದು ಸ್ವತಃ ಅರ್ಜುನ್ ಸರ್ಜಾ ತೆಲುಗು ಸಂದರ್ಶನದಲ್ಲಿ ಹೇಳಿದ್ದಾರೆ.
'ಸೀತಾ ಪಯಣಂ' ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿ ಅರ್ಜುನ್ ಸರ್ಜಾ 'ಗ್ರೇಟ್‌ಆಂಧ್ರ' ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಭಾಗಿ ಆಗಿದ್ದಾರೆ. ಈ ವೇಳೆ ಸಿನಿಮಾ ಸೇರಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಕನ್ನಡದಲ್ಲಿ ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದೆ. ಬಳಿಕ ತಮಿಳು ಚಿತ್ರರಂಗ ಪ್ರವೇಶಿಸಿದೆ. 'ಮಾ ಪಲ್ಲೆಲೊ ಗೋಪಾಲುಡು' ಎಂಬ ಸಿನಿಮಾ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿದ್ದರು. ಆ ಚಿತ್ರಕ್ಕೆ 25 ಸಾವಿರ ರೂಪಾಯಿ ಸಂಭಾವನೆ ಸಿಕ್ಕಿದ್ದಾಗಿ ಆಕ್ಷನ್ ಕಿಂಗ್ ನೆನಪಿಸಿಕೊಂಡಿದ್ದಾರೆ.

1995ರಲ್ಲಿ 25 ಸಾವಿರ ಸಂಭಾವನೆ ಬಹಳ ದೊಡ್ಡ ಮೊತ್ತ. ಅದಕ್ಕೂ ಮುನ್ನ ತಮಿಳು ಸಿನಿಮಾಗಳಿಗೆ 15 ಸಾವಿರ ಸಂಭಾವನೆ ಕೊಡುತ್ತಿದ್ದರು. ಅಷ್ಟು ಒಳ್ಳೆ ಸಂಭಾವನೆ ಸಿಗುತ್ತಿದ್ದರೂ ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡಲಿಲ್ಲ ಎಂದು ಅರ್ಜುನ್ ಬೇಸರ ವ್ಯಕ್ತಪಡಿಸಿದ್ದಾರೆ. ನಾನು ಹೆಸರುಗಳನ್ನು ಹೇಳಲು ಇಷ್ಟಪಡಲ್ಲ. ಆದರೆ ನನ್ನ ಸುತ್ತ ಇದ್ದ ಸಾಕಷ್ಟು ಜನ ನನಗೆ ಮೋಸ ಮಾಡಿಬಿಟ್ಟರು. ನನಗೆ ಏನೂ ಗೊತ್ತಿಲ್ಲದ ವಯಸ್ಸಿನಲ್ಲಿ ಏನಾಗುತ್ತಿದೆ ಎನ್ನುವುದು ಗೊತ್ತಾಗಲಿಲ್ಲ ಎಂದು ಅರ್ಜುನ್ ಸರ್ಜಾ ವಿವರಿಸಿದ್ದಾರೆ.
ಣ ಎಲ್ಲಾ ಏನಾಯ್ತು, ಯಾರು ನನ್ನನ್ನು ಮಿಸ್ ಯೂಸ್ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದು ತಿಳಿಯಲಿಲ್ಲ. ಆಗ ನಾನು ಸರಿಯಾಗಿ ಹಣ ಹೂಡಿಕೆ ಮಾಡಿದ್ದರೆ ಈಗ ಎಷ್ಟು ಆಸ್ತಿ ಇರ್ತಿತ್ತೋ ಗೊತ್ತಿಲ್ಲ. ಆಗ ನಾನು ಸರಿಯಾಗಿ ಆಸ್ತಿ ಮಾಡಲಿಲ್ಲ. ಹಿರಿಯ ನಟ ಶೋಭನ್ ಬಾಬು ಸೇರಿದಂತೆ ಕೆಲವರು ಬಹಳ ಬುದ್ಧಿವಂತರು ಇದ್ದರು. ನಮಗೆ ಅಷ್ಟು ಅರಿವು ಇರಲಿಲ್ಲ. ನಟ ಶೋಭನ್ ಬಾಬು ನನ್ನನ್ನು ಪಕ್ಕದಲ್ಲಿ ಕೂರಿಸಿಕೊಂಡು ಕಿವಿಮಾತು ಹೇಳಿದ್ದರು. ಹಣ ಇದ್ದರೆ ಖರ್ಚು ಆಗಿಬಿಡುತ್ತೆ, ಹೂಡಿಕೆ ಮಾಡು ಅಂದ್ರು.. ನನಗೆ ಆಗ ಅದೆಲ್ಲ ತಲೆಗೆ ಹತ್ತಲಿಲ್ಲ ಎಂದು ಅರ್ಜುನ್ ಸರ್ಜಾ ಹೇಳಿದ್ದಾರೆ.
ಆರಂಭದಲ್ಲಿ ಒಂದಷ್ಟು ಹೂಡಿಕೆ ಮಾಡಿದ್ದೆ. ಬಳಿಕ ಸಾಕಷ್ಟು ಅವಕಾಶಗಳು, ಪ್ರಾಪರ್ಟಿ ನನ್ನ ಅರಸಿ ಬಂದವು, ನಾನೇ ಬೇಡ ಬೇಡ ಎಂದುಬಿಟ್ಟೆ. ಆಗ ಅಲ್ಪ ಸ್ವಲ್ಪ ತೆಗೆದುಕೊಂಡ ಪ್ರಾಪರ್ಟಿ ಈಗ ಒಳ್ಳೆ ಆಸ್ತಿಯಾಗಿದೆ ಎಂದು ಅರ್ಜುನ್ ಸರ್ಜಾ ವಿವರಿಸಿದ್ದಾರೆ.


Click it and Unblock the Notifications











