Year Ender 2025 ; ಆರ್ಯನ್ ಖಾನ್ To ರವೀನಾ ಟಂಡನ್ ಮಗಳು ; ನವಯುಗದ ನವತಾರೆಯರ ಕಲರವ - ಹೇಗಿತ್ತು ಸ್ಟಾರ್ ಮಕ್ಕಳ ಹವಾ ?

ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗೋದು ಹೇಗೆ ಕಾಮನ್ನೋ ಅದೇ ತರ ಸಿನಿಮಾರಂಗದಲ್ಲಿ ಸ್ಟಾರ್ ಗಳ ಮಕ್ಕಳು ಸ್ಟಾರ್ ಗಳಾಗೋದು ಕೂಡ ಕಾಮನ್ನೇ. ಆದರೆ, ಹೀಗೆ ಚಿತ್ರರಂಗಕ್ಕೆ ಬರುವ ಎಲ್ಲರಿಗೆ ಇಲ್ಲಿ ಗೆಲುವು ಸಿಗುವುದಿಲ್ಲ. ತೀರಾ ಅಪರೂಪಕ್ಕೆ ಎಂಬಂತೆ ಅಲ್ಲೊಬ್ಬರು.. ಇಲ್ಲೊಬ್ಬರು.. ಮಾತ್ರ ಗೆಲ್ಲುತ್ತಾರೆ. ಮಿಕ್ಕಂತೆ ಕೆಲವರು ಎಡವುತ್ತಾರೆ. ಮತ್ತೆ ಮತ್ತೆ ಪ್ರಯತ್ನ ಮಾಡುತ್ತಾರೆ. ಇನ್ನೂ ಕೆಲವರು....

ಬಂದ ದಾರಿಗೆ ಸುಂಕ ಇಲ್ಲ ಎಂದು ಮನೆಗೆ ಮರಳುತ್ತಾರೆ. ಈ ವರ್ಷ ಕೂಡ ಬಾಲಿವುಡ್‌ ಇದೆಲ್ಲದರಿಂದ ಹೊರತಾಗಿಲ್ಲ. 2025ರ ಈ 07 ತಿಂಗಳಿನಲ್ಲಿ ಹಲವಾರು ಜನ ತಮ್ಮ ತಂದೆ-ತಾಯಿ ಮತ್ತು ಸಂಬಂಧಿಕರ ಹೆಸರು ಹೇಳಿಕೊಂಡು ಚಿತ್ರರಂಗಕ್ಕೆ ಬಂದಿದ್ದಾರೆ. ತಮ್ಮ ಅದೃಷ್ಟ ಪರೀಕ್ಷೆಯನ್ನು ಕೂಡ ಮಾಡಿಕೊಂಡಿದ್ದಾರೆ. ಹಾಗಿದ್ದರೆ ಈ ವರ್ಷ ಯಾರೆಲ್ಲ ಸ್ಟಾರ್‌ ಗಳ ಮಕ್ಕಳು ಚಿತ್ರರಂಗಕ್ಕೆ ಬಂದಿದ್ಧಾರೆ..? ಅವರ ಚಿತ್ರಗಳ ಫಲಿತಾಂಶವೇನಾಯ್ತು.. ? ಎಂದು ತಿಳಿಯಲು ಮುಂದೆ ಓದಿ.

Aryan Khan amp amp Co The Class of 2025 That Rewrote the Bollywood Debut Rulebook

ಅಹಾನ್ ಪಾಂಡೆ

ಅಹಾನ್ ಪಾಂಡೆ.. ಬಾಲಿವುಡ್‌ನ ನಟ ಚಂಕಿ ಪಾಂಡೆಯ ಸಹೋದರನ ಮಗ. ಎಲ್ಲ ಸ್ಟಾರ್‌ ಮಕ್ಕಳಂತೆ ಅಹಾನ್ ಕೂಡ ಚಿತ್ರರಂಗಕ್ಕೆ ಬಂದಿದ್ದಾರೆ. ವಿಶೇಷ ಅಂದರೆ ತಮ್ಮ ಮೊದಲ ಪ್ರಯತ್ನದಲ್ಲಿಯೇ ಐತಿಹಾಸಿಕ ದಾಖಲೆಯನ್ನು ಬರೆದಿದ್ದಾರೆ. ಇವರ ಅಭಿನಯದ ಚೊಚ್ಚಲ ಚಿತ್ರ '' ಸೈಯಾರ'' ಈ ವರ್ಷದ ಬ್ಲಾಕ್‌ಬಸ್ಟರ್‌ ಚಿತ್ರಗಳಲ್ಲೊಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಆರ್ಯನ್ ಖಾನ್

ತಂದೆ ತಾಯಿಯ ಜಾಡು ಹಿಡಿದು ಚಿತ್ರರಂಗಕ್ಕೆ ಬಂದವರಲ್ಲಿ ಆರ್ಯನ್ ಖಾನ್ ಕೂಡ ಇದ್ದಾರೆ. ಆದರೆ.. ಶಾರುಖ್ ಖಾನ್ ಮಗ ಆರ್ಯನ್ ಸ್ಟಾರ್ ಆಗಿ ಈ ವರ್ಷ ಚಿತ್ರರಂಗಕ್ಕೆ ಬಂದಿಲ್ಲ. ಬದಲಿಗೆ ನಿರ್ದೇಶಕರಾಗಿ ಆರ್ಯನ್ ಖಾನ್ ಪ್ರಯತ್ನ ಮಾಡಿದ್ದಾರೆ. ತಮ್ಮ ಚೊಚ್ಚಲ ಚಿತ್ರ ''ದಿ ಬ್ಯಾಡ್ಸ್ ಆಫ್ ಬಾಲಿವುಡ್‌'' ಮೂಲಕ ಗೆಲುವನ್ನು ಕೂಡ ಕಂಡಿದ್ದಾರೆ. ಇವರ ನಿರ್ದೇಶನದ ಶೈಲಿಗೆ ಇಡೀ ಬಾಲಿವುಡ್ ಫಿದಾ ಆಗಿದ್ದು, ಪ್ರೇಕ್ಷಕರು ಕೂಡ ಈ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಆರ್ಯನ್‌ಗೆ ನಿಮ್ಮ ನಿರ್ದೇಶನದ ಮುಂದಿನ ಸಿನಿಮಾ ಯಾವುದು ಎನ್ನುವ ಪ್ರಶ್ನೆಗಳನ್ನು ಕೂಡ ಮಾಡುತ್ತಿದ್ದಾರೆ.

Aryan Khan amp amp Co The Class of 2025 That Rewrote the Bollywood Debut Rulebook

ರಾಶಾ ತಡಾನಿ ಮತ್ತು ಅಮಾನ್ ದೇವಗನ್

''ಉಪೇಂದ್ರ'' ಮತ್ತು ''ಕೆಜಿಎಫ್ 2'' ಚಿತ್ರದ ಮೂಲಕ ಕನ್ನಡಿಗರ ಹೃದಯ ಗೆದ್ದಿರುವ ರವೀನಾ ಟಂಡನ್ ಅವರ ಮಗಳು ರಾಶಾ ಈ ವರ್ಷ ಚಿತ್ರರಂಗಕ್ಕೆ ಪ್ರವೇಶ ನೀಡಿದವರಲ್ಲಿ ಮೊದಲಿಗರು. ಇವರ ಮೊದಲ ಚಿತ್ರದಲ್ಲಿ ಇವರಿಗೆ ಜೋಡಿಯಾಗಿದ್ದು ಬೇರೆ ಯಾರು ಅಲ್ಲ ಬದಲಿಗೆ ಅಜಯ್ ದೇವಗನ್ ಅವರ ಸೋದರಳಿಯ ಅಮಾನ್ ದೇವಗನ್ ಎನ್ನುವುದು ವಿಶೇಷ.

ಅಭಿಷೇಕ್ ಕಪೂರ್ ನಿರ್ದೇಶನದ ''ಆಜಾದ್'' ಚಿತ್ರದಲ್ಲಿ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದರು. ಈ ವರ್ಷದ ಆರಂಭದಲ್ಲಿ ಅಂದರೆ ಜನವರಿ 17ರಂದು ತೆರೆಗೆ ಬಂದ ಈ ಚಿತ್ರದಲ್ಲಿ ಅಜಯ್ ದೇವಗನ್ ಕೂಡ ಗೆಸ್ಟ್ ರೋಲ್ ಮಾಡಿದ್ದರು.

ಇನ್ನು ಬಿಡುಗಡೆಗೂ ಮುನ್ನ ಚಿತ್ರದ ಹಾಡುಗಳು ಮತ್ತು ಟ್ರೇಲರ್ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದವು. ಈ ಹಿನ್ನೆಲೆ.. ಮೊದಲ ಪ್ರಯತ್ನದಲ್ಲಿಯೇ ಇಬ್ಬರಿಗೆ ಗೆಲುವಿನ ಗುಲಾಬ್ ಜಾಮೂನು ಸಿಗುತ್ತೆ ಎಂದೇ ಅನೇಕರು ಅಂದುಕೊಂಡಿದ್ದರು. ಆದರೆ ಆಗಿದ್ದು ಉಲ್ಟಾ. ರಾಶಾ ಅಭಿನಯವನ್ನು ಅನೇಕರು ಮೆಚ್ಚಿಕೊಂಡರಷ್ಟೇ. ಅಮಾನ್ ದೇವಗನ್‌ಗೆ ಯಾರು ಕೇರ್ ಮಾಡಲಿಲ್ಲ. ಚಿತ್ರ ಬಾಕ್ಸಾಫೀಸ್‌ನಲ್ಲಿ ಗೆಲ್ಲಲಿಲ್ಲ.

ಇಬ್ರಾಹಿಂ ಅಲಿ ಖಾನ್

ಸೈಫ್ ಅಲಿ ಖಾನ್ ಅವರ ಮುದ್ದಿನ ಮಗ ಇಬ್ರಾಹಿಂ ಅಲಿ ಖಾನ್ ಕೂಡ ಈ ವರ್ಷ ಚಿತ್ರರಂಗಕ್ಕೆ ಬಂದರು. ಸಾರಾ ಅಲಿ ಖಾನ್ ಈಗಾಗಲೇ ಬಾಲಿವುಡ್‌ನಲ್ಲಿ ನೆಲೆಯೂರಿರುವ ಹಿನ್ನೆಲೆ ಇಬ್ರಾಹಿಂ ಮೇಲೆ ಕೂಡ ನಿರೀಕ್ಷೆ ಇತ್ತು. ಆದರೆ ಈ ನಿರೀಕ್ಷೆಯೆಂಬ ಮೊದಲ ಪರೀಕ್ಷೆಯಲ್ಲಿ ಇಬ್ರಾಹಿಂ ಫೇಲ್ ಆದರು. ಇಬ್ರಾಹಿಂ ಅಭಿನಯದ ನಾದಾನಿಯಾ ಚಿತ್ರವನ್ನು ಪ್ರೇಕ್ಷಕರು ನೋಡಲು ನಿರಾಕರಿಸಿದರು. ವಿಮರ್ಷಕರು ಕೂಡ ಚಿತ್ರವನ್ನು ನೋಡಿ ತಲೆ ಚಚ್ಚಿಕೊಂಡರು.

Aryan Khan amp amp Co The Class of 2025 That Rewrote the Bollywood Debut Rulebook

ಈ ಚಿತ್ರದಲ್ಲಿ ಇಬ್ರಾಹಿಂ ಅಲಿ ಖಾನ್ ಎದುರು ಜಾಹ್ನವಿ ಕಪೂರ್ ಅವರ ಸಹೋದರಿ ಖುಷಿ ಕಪೂರ್ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದರು. 2023ರಲ್ಲಿ ''ದಿ ಆರ್ಚಿಸ್'' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಖುಷಿ ಪಾಲಿಗೆ ಇದು ಮೂರನೇ ಪ್ರಯತ್ನ. ಆದರೆ.. ಖುಷಿಗೆ ಗೆಲುವಿನ ಖುಷಿ ಸಿಗಲಿಲ್ಲ.

ಅಂದ್ಹಾಗೇ ಈ ಚಿತ್ರ ಚಿತ್ರಮಂದಿರಗಳಲ್ಲಿ ಅಲ್ಲ ಬದಲಿಗೆ ನೇರವಾಗಿ ನೆಟ್‌ಪ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿತ್ತು. ಇದಾದ ನಂತರ ಇಬ್ರಾಹಿಂ ಅಲಿ ಖಾನ್‌ ''ಸರ್‌ಜಮೀನ್'' ಎಂಬ ಚಿತ್ರವನ್ನು ಕೂಡ ಮಾಡಿದ್ದರು. ಆದರೆ ಇವರಿಗೆ ಇಲ್ಲಿಯೂ ದಕ್ಕಿದ್ದು ನಿರಾಸೆ ಮಾತ್ರ.

ವೀರ್ ಪಹಾರಿಯಾ

ಮಾಜಿ ಮುಖ್ಯಮಂತ್ರಿ ಸುಶೀಲ್​ಕುಮಾರ್​ಶಿಂಧೆ ಅವರ ಮೊಮ್ಮಗ ವೀರ್‌ ಪಹಾರಿಯಾ ಕೂಡ ಈ ವರ್ಷ ಚಿತ್ರರಂಗಕ್ಕೆ ಬಂದರು. ಅಕ್ಷಯ್ ಕುಮಾರ್ ಅಭಿನಯದ ''ಸ್ಕ್ರೈ ಫೋರ್ಸ್'' ಚಿತ್ರದಲ್ಲಿ ಪ್ರಮುಖವಾದ ಪಾತ್ರವನ್ನು ನಿರ್ವಹಿಸಿದರು. ಆದರೆ.. ರಾಶಾ ಮತ್ತು ಇಬ್ರಾಹಿಂ ಅಲಿ ಖಾನ್ ಅವರಂತೆ ಇವರಿಗೆ ಮೊದಲ ಪ್ರಯತ್ನದಲ್ಲಿ ಸೋಲಿನ ದರ್ಶನವಾಗಲಿಲ್ಲ. ಹಾಗಂಥ ಗೆಲ್ಲಲೂ ಇಲ್ಲ. ಬದಲಿಗೆ ಸಮಾಧಾನಕರ ಬಹುಮಾನವನ್ನು ಪ್ರೇಕ್ಷಕರು ಮತ್ತು ವಿಮರ್ಷಕರು ವೀರ್ ಪಹಾರಿಯಾಗೆ ನೀಡಿದರು.

ಶನಾಯಾ ಕಪೂರ್

ಅನಿಲ್ ಕಪೂರ್ ಸಹೋದರ ಸಂಜಯ್ ಕಪೂರ್ ಮತ್ತು ಅವರ ಪತ್ನಿ ಮಹೀಪ್ ಕಪೂರ್ ಅವರ ಮುದ್ದಿನ ಮಗಳು ಶನಾಯಾ ಕಪೂರ್ ಕೂಡ ಈ ವರ್ಷ ಚಿತ್ರರಂಗಕ್ಕೆ ಬಂದರು. ಶನಾಯಾ ಅಭಿನಯದ ಚೊಚ್ಚಲ ಚಿತ್ರ ''ಆಂಖೋಂ ಕಿ ಗುಸ್ತಾಖಿಯಾನ್''ದಲ್ಲಿ ವಿಕ್ರಾಂತ್ ಮೆಸ್ಸಿ ನಾಯಕನ ಪಾತ್ರವನ್ನು ನಿರ್ವಹಿಸಿದ್ದರು. ಇವರಿಗೂ ಕೂಡ ತಮ್ಮ ಮೊದಲ ಪ್ರಯತ್ನದಲ್ಲಿ ಗೆಲುವು ಸಿಗಲಿಲ್ಲ.

Aryan Khan amp amp Co The Class of 2025 That Rewrote the Bollywood Debut Rulebook


ಐಶ್ವರ್ಯ್ ಠಾಕ್ರೆ

ಕನ್ನಡದಲ್ಲಿ ಈಗಾಗಲೇ ಹಲವು ರಾಜಕಾರಣಿಗಳ ಮಕ್ಕಳು ಚಿತ್ರರಂಗಕ್ಕೆ ಬಂದಿದ್ದಾರೆ. ಬಾಲಿವುಡ್‌ನಲ್ಲಿ ಕೂಡ ಹಲವರು ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದಾರೆ. ಈ ಸಾಲಿಗೆ ಈ ವರ್ಷ ಶಿವಸೇನಾ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆಯವರ ಮೊಮ್ಮಗ ಐಶ್ವರ್ಯ್ ಠಾಕ್ರೆ ಕೂಡ ಸೇರಿಕೊಂಡಿದ್ದಾರೆ. ಅನುರಾಗ್ ಕಶ್ಯಪ್ ನಿರ್ದೇಶನದ ನಿಶಾಂಚಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಐಶ್ವರ್ಯ್ ಠಾಕ್ರೆ ಬಂದಿದ್ದಾರೆ. ಈ ಚಿತ್ರವನ್ನು ಪ್ರೇಕ್ಷಕರು ಮತ್ತು ವಿಮರ್ಷಕರು ಮೆಚ್ಚಿಕೊಂಡರು, ಐಶ್ವರ್ಯ್ ಠಾಕ್ರೆ ಅಭಿನಯವನ್ನು ಕೂಡ ಕೊಂಡಾಡಿದರು. ಆದರೆ.. ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುವಲ್ಲಿ ಈ ಚಿತ್ರ ವಿಫಲವಾಯ್ತು.

ಸಿಮರ್ ಭಾಟಿಯಾ

ಅಕ್ಷಯ್ ಕುಮಾರ್ ಅವರ ಮಕ್ಕಳು ಚಿತ್ರರಂಗಕ್ಕೆ ಇನ್ನೂ ಬಂದಿಲ್ಲ. ಆದರೇನಂತೆ, ಅಕ್ಷಯ್ ಕುಮಾರ್ ಅವರ ಸೋದರ ಸೊಸೆ ಸಿಮರ್ ಭಾಟಿಯಾ ಈ ವರ್ಷ ಬಾಲಿವುಡ್ ಪ್ರವೇಶ ಮಾಡಿದ್ದಾರೆ. ಇವರು ಅಭಿನಯಿಸಿರುವ ಚೊಚ್ಚಲ ಚಿತ್ರ ''ಇಕ್ಕಿಸ್'' ಇದೇ ಡಿಸೆಂಬರ್ 25ರಂದು ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಬಿಡುಗಡೆಯಾಗುತ್ತಿದೆ. ಪ್ರೇಕ್ಷಕರ ಪ್ರೀತಿ ಇವರಿಗೆ ಸಿಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

Aryan Khan amp amp Co The Class of 2025 That Rewrote the Bollywood Debut Rulebook

ಹೀಗೆ ತಮ್ಮ ತಂದೆ ತಾಯಿಯ ಚಿಕ್ಕಪ್ಪ ದೊಡ್ಡಪ್ಪನ ಹೆಸರು ಹೇಳಿಕೊಂಡು ಈ ವರ್ಷ ಚಿತ್ರರಂಗಕ್ಕೆ ಇವರೆಲ್ಲಾ ಬಂದಿದ್ದಾರೆ. ಇವರ ಜೊತೆ ಚಿತ್ರರಂಗದ ಯಾವ ಹಿನ್ನೆಲೆ ಇಲ್ಲದ ಸಾರಾ ಅರ್ಜುನ್ ''ಧುರಂಧರ್'' ಚಿತ್ರದ ಮೂಲಕ ಚಿತ್ರರಸಿಕರಿಗೆ ಪರಿಚಯವಾಗಿದ್ದಾರೆ. ಅನೀತ್ ಪಡ್ಡಾ ''ಸೈಯಾರ'' ಮೂಲಕ ಗೆದ್ದಿದ್ದಾರೆ. 2021ರ ಮಿಸ್ ಯೂನಿವರ್ಸ್ ಹರ್ನಾಜ್ ಸಂಧು ''ಬಾಘಿ 4'' ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ್ದಾರೆ.

More from Filmibeat

English summary
The definitive 2025 Bollywood debut report card is here. Analyzing the success and failure of star kids like Ibrahim Ali Khan, Shanaya Kapoor, and the surprising breakout star who defined the year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X