10 ಸಾವಿರ ರೂಪಾಯಿ ಶೂ ತಂದು ಅಪ್ಪಾಜಿ ಬಳಿ ಅಪ್ಪು ಹೇಳುತ್ತಿದ್ದ ಬೆಲೆ ಎಷ್ಟು?

ಪುನೀತ್ ರಾಜ್‌ಕುಮಾರ್ ತಮ್ಮ ತಂದೆ ಜೊತೆಗಿನ ಒಡನಾಟದ ಬಗ್ಗೆ ಸಾಕಷ್ಟು ಸಂದರ್ಭಗಳಲ್ಲಿ ಮಾತನಾಡಿದ್ದರು. ಅಪ್ಪಾಜಿ ಜೊತೆ ವ್ಯಾಯಾಮ ಮಾಡುತ್ತಿದ್ದದ್ದು ವಿದೇಶ ಪ್ರವಾಸಕ್ಕೆ ಹೋಗಿದ್ದು ನಾನಾ ರೆಸ್ಟೋರೆಂಟ್‌ಗಳಿಗೆ ಕರೆದುಕೊಂಡು ಹೋಗುತ್ತಿದ್ದದ್ದು ಹೀಗೆ ಹಲವು ಸಂಗತಿಗಳನ್ನು 'ವೀಕೆಂಡ್ ವಿತ್ ರಮೇಶ್' ಶೋನಲ್ಲಿ ಕೂಡ ಬಿಚ್ಚಿಟ್ಟಿದ್ದರು.

ಅಣ್ಣಾವ್ರು ದುಂದುವೆಚ್ಚವನ್ನು ಒಪ್ಪುತ್ತಿರಲಿಲ್ಲ. ಆದರೆ ತಂದೆಗೆ ಒಳ್ಳೆ ವಸ್ತುಗಳನ್ನು ಕೊಡಿಸಬೇಕು, ದೊಡ್ಡ ರೆಸ್ಟೋರೆಂಟ್‌ಗಳಿಗೆ ಕರೆದುಕೊಂಡು ಹೋಗಬೇಕು, ಸದಾ ಬಿಳಿ ಅಂಗಿ ಬಿಳಿ ಪಂಚೆಯಲ್ಲಿ ಇರುತ್ತಿದ್ದ ಅವರನ್ನು ಕಲರ್‌ಫುಲ್ ಕಾಸ್ಟ್ಯೂಮ್‌ನಲ್ಲಿ ನೋಡಬೇಕು ಎನ್ನುವುದು ಅಪ್ಪು ಆಸೆ ಆಗಿತ್ತು. ರೆಸ್ಟೋರೆಂಟ್ ಬಿಲ್, ವಸ್ತುಗಳ ನಿಜವಾದ ಬೆಲೆ ಗೊತ್ತಾದ್ದರೆ ಅಪ್ಪಾಜಿ ಬೇಸರ ಮಾಡಿಕೊಳ್ಳುತ್ತಾರೆ, ಬೇಡ ಎನ್ನುತ್ತಾರೆ ಎಂದು ಪುನೀತ್ ಎಚ್ಚರಿಕೆ ವಹಿಸುತ್ತಿದ್ದರು. ಈ ಬಗ್ಗೆ ಸಾಕಷ್ಟು ಬಾರಿ ಮಾತನಾಡಿದ್ದಾರೆ. ಇಂಥದ್ದೇ ವಿಷಯವನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ನೆನಪಿಸಿಕೊಂಡಿದ್ದಾರೆ.

Ashwini Puneeth Rajkumar Shares Heartwarming Memories of Appu and Dr Rajkumar

ಪಿಆರ್‌ಕೆ ಫ್ಯಾನ್‌ಡಮ್ ಆಪ್‌ನಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಪಾಡ್‌ಕಾಸ್ಟ್ ಪ್ರಸಾರವಾಗುತ್ತಿರುವುದು ಗೊತ್ತೇಯಿದೆ. 'ನಾ ಕಂಡ ಅಪ್ಪು' ಎಂಬ ಈ ಸಂದರ್ಶನವನ್ನು ಅನುಶ್ರೀ ನಿರೂಪಣೆ ಮಾಡುತ್ತಾರೆ. ಅಶ್ವಿನಿ ಸೇರಿ ಹಲವರು ಅಪ್ಪು ಜೊತೆಗಿನ ತಮ್ಮ ಒಡನಾಟವನ್ನು ಇದರಲ್ಲಿ ಹಂಚಿಕೊಳ್ಳುತ್ತಾ ಬರ್ತಿದ್ದಾರೆ. ಮುಂದಿನ ಎಪಿಸೋಡ್ ಹೊಸ ಪ್ರೋಮೊ ರಿಲೀಸ್ ಆಗಿದೆ.

ಅಶ್ವಿನಿ ಪುನೀತ್ ರಾಜ್‌ಕುಮಾರ್ ಮಾತನಾಡಿ "ನಮ್ಮ ಹಳೇ ಮನೆಯಲ್ಲಿ ಕೆಳಗೆ ಜಿಮ್ ಇತ್ತು. ಅಲ್ಲಿ ಅಪ್ಪಾಜಿ ಹಾಗೂ ಅಪ್ಪು ವರ್ಕ್‌ಔಟ್ ಮಾಡುತ್ತಿದ್ದರು. ನಾನು ವಾಕಿಂಗ್ ಮುಗಿಸಿ ಬಂದು ಅವರೊಟ್ಟಿಗೆ ಸೇರಿ ವ್ಯಾಯಾಮ ಮಾಡ್ತಿದ್ದೆ. ಅಪ್ಪಾಜಿಗೆ ಮಂಡಿ ನೋವು ಜಾಸ್ತಿ ಆಗಿತ್ತು. ಆಗ ಅಪ್ಪು ಅವರಿಗೆ ಆರಾಮದಾಯಕವಾದ ಶೂ ತಂದುಕೊಟ್ಟಿದ್ರು" ಎಂದು ಆ ಘಟನೆ ನೆನಪು ಮಾಡಿಕೊಂಡಿದ್ದಾರೆ.

10 ಸಾವಿರ ರೂ. ಬೆಲೆಯ ಶೂ ತಂದೆ 200 ರೂ. ಎಂದು ಅಪ್ಪಾಜಿ ಬಳಿ ಹೇಳುತ್ತಿದ್ರು. ಚೆನ್ನ(ಅಣ್ಣಾವ್ರ ಆಪ್ತ ಸಹಾಯಕ) ಬಳಿ ಕೂಡ ಈ ಶೂ ಬೆಲೆ ಹೆಚ್ಚು ಅಂತ ಹೇಳ್ಬೇಡಿ ಅಪ್ಪಾಜಿ ಹಾಕಲ್ಲ, ಎಂದು ಅಪ್ಪು ಹೇಳುತ್ತಿದ್ರು ಅಂತ ಅಶ್ವಿನಿ ಮೆಲುಕು ಹಾಕಿದ್ದಾರೆ. ಅಪ್ಪಾಜಿ ಸಿನಿಮಾ ನೋಡುವಾ ಮನೆಯ ಸಿಬ್ಬಂದಿ ಕೂಡ ಜೊತೆಗಿರಬೇಕಿತ್ತು. ಅವ್ರು ಕೆಲಸ ಮಾಡಿದ್ದು ಸಾಕು, ಅವ್ರಿಗೆ ಮನರಂಜನೆ ಬೇಕು ಎನ್ನುತ್ತಿದ್ರು ಎಂದು ಅಶ್ವಿನಿ ವಿವರಿಸಿದ್ದಾರೆ.

ಮನೆಯಲ್ಲಿ ಎಲ್ಲರಿಗೂ ಧಾರಾವಾಹಿಗಳಂದ್ರೆ ಅಚ್ಚು ಮೆಚ್ಚಾಗಿತ್ತು. ಅಮ್ಮ(ಪಾರ್ವತಮ್ಮ)ನ ಕಾರ್ ಬರುವ ಶಬ್ಧ ಕೇಳಿದ್ರೆ ಎಲ್ಲರೂ ಟಿವಿ ಆಫ್ ಮಾಡಿ ಓಡುತ್ತಿದ್ರು. ಒಂದು ಧಾರಾವಾಹಿ ಬಹಳ ಇಷ್ಟವಾಗಿ ಅದರಲ್ಲಿ ನಟಿಸಿರುವವರನ್ನು ಮನೆಗೆ ಕರೆಸಿದ್ರು. ನಾನು ಆ ಧಾರಾವಾಹಿ ನೋಡುತ್ತಿರಲಿಲ್ಲ. ಆದರೆ ಅವತ್ತು ಇವರೆಲ್ಲರ ಸಂಭ್ರಮ ನೋಡಿ ಅಚ್ಚರಿ ಆಗಿತ್ತು ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೇಳಿ ನಕ್ಕಿದ್ದಾರೆ. ಸದ್ಯ ಈ ಪ್ರೋಮೊ ವೈರಲ್ ಆಗ್ತಿದ್ದು ಶೀಘ್ರದಲ್ಲೇ ಎಪಿಸೋಡ್ ಅಪ್‌ಲೋಡ್ ಆಗಲಿದೆ.

ಇಂತಹ ಸಾಕಷ್ಟು ವಿಚಾರಗಳನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ನಿರ್ದೇಶಕ ಯೋಗರಾಜ್ ಭಟ್, ನಟ ಲೂಸ್ ಮಾದ ಯೋಗಿ ಕೂಡ ಮಾತನಾಡಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಜನ ಪುನೀತ್ ಜೊತೆಗಿನ ತಮ್ಮ ಒಡನಾಟವನ್ನು ಬಿಚ್ಚಿಡಲಿದ್ದಾರೆ. ಇನ್ನು ಮಕ್ಕಳ ದಿನಾಚರಣೆ ವಿಶೇಷವಾಗಿ 'ಚೋಟಾ ಅಪ್ಪು' ಸ್ಪೆಷಲ್ ವೀಡಿಯೋ ಕೂಡ ಬಂದಿದೆ. ಎಐ ಬಳಸಿ ಬಹಳ ಸೊಗಸಾಗಿ ವೀಡಿಯೋ ಮಾಡಿ ಪುನೀತ್ ಮಕ್ಕಳ ದಿನಾಚರಣೆ ಶುಭಾಶಯ ಕೋರಿದ್ದ ಹಳೇ ವೀಡಿಯೋವನ್ನು ಸೇರಿಸಲಾಗಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X