2026ರಲ್ಲಿ ಯಶ್, ರಿಷಬ್ ನಿರೀಕ್ಷೆ ತಲುಪೋದು ಕಷ್ಟನಾ? ಈ ವರ್ಷ ಇಬ್ಬರ ಭವಿಷ್ಯ ಹೇಗಿದೆ?

ಹೊಸ ವರ್ಷ ಕನ್ನಡ ಚಿತ್ರರಂಗಕ್ಕೆ ಹೊಸ ಹುರುಪು ತಂದಿದೆ. ದೊಡ್ಡ ದೊಡ್ಡ ಸಿನಿಮಾಗಳು ಈ ವರ್ಷ ತೆರೆಗೆ ಬರಲು ಸಜ್ಜಾಗಿದೆ. ಯಶ್ ನಟನೆಯ 'ಟಾಕ್ಸಿಕ್' ಹಾಗೂ 'ರಾಮಾಯಣ' ಚಿತ್ರಗಳು ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಇತ್ತ ರಿಷಬ್ ಶೆಟ್ಟಿ 'ಕಾಂತಾರ' -1 ಬಳಿಕ 'ಜೈ ಹನುಮಾನ್' ಚಿತ್ರದಲ್ಲಿ ನಟಿಸಲು ಸಜ್ಜಾಗುತ್ತಿದ್ದಾರೆ.

ಜಾತಕ, ಜೋತಿಷ್ಯ, ಭವಿಷ್ಯವನ್ನು ಕೆಲವರು ನಂಬುತ್ತಾರೆ. ಕೆಲವರು ನಂಬಲ್ಲ. ಕೋಟಿ ಕೋಟಿ ವ್ಯವಹಾರ ನಡೆಯುವ ಕ್ಷೇತ್ರ ಚಿತ್ರರಂಗ. ಇಲ್ಲಿ ಜ್ಯೋತಿಷ್ಯ, ಭವಿಷ್ಯ ನಂಬುವವರ ಸಂಖ್ಯೆ ದೊಡ್ಡದಿದೆ. ಕನ್ನಡದ ನಟರಾದ ಯಶ್ ಹಾಗೂ ರಿಷಬ್ ಈಗ ಪ್ಯಾನ್ ಇಂಡಿಯಾ ಸ್ಟಾರ್‌ಗಳಾಗಿ ಮೆರೆಯುತ್ತಿದ್ದಾರೆ. 2026ರ ವರ್ಷ ನಟ ಯಶ್ ಹಾಗೂ ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ ಅದೃಷ್ಟ ತಂದುಕೊಡುತ್ತಾ? ಎನ್ನುವ ಬಗ್ಗೆ ಖ್ಯಾತ ಡಾ. ಜ್ಯೋತಿಷಿ ಮುಗೂರು ಮಧುದೀಕ್ಷಿತ್ ವಿಶ್ಲೇಷಿಸಿದ್ದಾರೆ. 'ಆತ್ಮೀಯ ಕನ್ನಡಿಗ' ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮಾತನಾಡಿ ನಿರೀಕ್ಷೆಗೆ ತಕ್ಕಂತೆ ಇಬ್ಬರಿಗೆ ಈ ವರ್ಷ ಗೆಲುವು ಸಿಗುವುದು ಕಷ್ಟ ಎಂದು ಹೇಳಿದ್ದಾರೆ.

Astrologer Predicts a Cautious 2026 for Yash and Rishab Shetty Despite Pan-India Hype

'KGF'- 2 ಬಳಿಕ ಯಶ್ ನಟಿಸಿದ ಯಾವುದೇ ಸಿನಿಮಾ ಬಿಡುಗಡೆ ಆಗಿಲ್ಲ. ಹೆಚ್ಚು ಕಮ್ಮಿ 4 ವರ್ಷಗಳ ಬಳಿಕ 'ಟಾಕ್ಸಿಕ್' ಸಿನಿಮಾ ತೆರೆಗೆ ಬರ್ತಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಚಿತ್ರಕ್ಕೆ ಯಶ್ ಬಂಡವಾಳ ಸಹ ಹೂಡಿದ್ದಾರೆ. ನಿರ್ದೇಶಕಿ ಜೊತೆ ಕಥೆ, ಚಿತ್ರಕಥೆ ಸಿದ್ಧಪಡಿಸಿದ್ದಾರೆ. ಹಾಗಾಗಿ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಇನ್ನು ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರದಲ್ಲಿ ರಾವಣನಾಗಿ ಯಶ್ ಅಬ್ಬರಿಸಿದ್ದಾರೆ. ಎರಡೂ ಸಿನಿಮಾ ಇದೇ ವರ್ಷ ಬಿಡುಗಡೆ ಆಗಲಿದೆ.

ಈ ವರ್ಷ ಯಶ್ ಭವಿಷ್ಯ ಹೇಗಿರುತ್ತದೆ ಎಂದು ಜ್ಯೋತಿಷಿ ಮುಗೂರು ಮಧುದೀಕ್ಷಿತ್ ಹೇಳಿದ್ದಾರೆ. "ಯಶ್ ಅಂದರೆ ಎಕ್ಸ್‌ಪ್ರೆಶನ್ ನಂಬರ್ 1 ಬರುತ್ತದೆ. ಈ ವರ್ಷ ಅವರ ಪರ್ಸನಲ್ ನಂಬರ್ ಕೂಡ 1. ಆದರೆ ಈ ವರ್ಷಕ್ಕೆ ಅವರ ಜನ್ಮ ದಿನಾಂಕ '8' ಮ್ಯಾಚ್ ಆಗ್ತಿಲ್ಲ. 'KGF' ಸಕ್ಸಸ್ ಗಮನದಲ್ಲಿಟ್ಟುಕೊಂಡು ನೋಡಿದ್ರೆ, ಈ ವರ್ಷ ಅವರ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗೆಲ್ತಾವೆ. ಬ್ಯುಸಿನೆಸ್ ಚೆನ್ನಾಗಿ ಆಗುತ್ತೆ. ಆದರೆ ವೈಯಕ್ತಿಕವಾಗಿ ಅವರ ನಿರೀಕ್ಷೆ ತಲುಪುತ್ತಾ ಅಂದ್ರೆ ಕಷ್ಟ. ಸಿನಿಮಾ ರಿಲೀಸ್ ಡೇಟ್ ತಡವಾಗಬಹುದು, ಅಂದುಕೊಂಡ ಸಮಯಕ್ಕೆ 2 ಸಿನಿಮಾ ಮುಗಿಯದೇ ಇರಬಹುದು. ನಿರೀಕ್ಷೆಗೆ ತಕ್ಕಂತೆ ಯಶಸ್ಸು ಸಿಗದೇ ಇರಬಹುದು. ಹಾಗಾಗಿ ಈ ವರ್ಷ ಯಶ್ ಎಚ್ಚರಿಕೆಯಿಂಧ ಹೆಜ್ಜೆ ಇಡಬೇಕು" ಎಂದು ಸಲಹೆ ನೀಡಿದ್ದಾರೆ.

Astrologer Predicts a Cautious 2026 for Yash and Rishab Shetty Despite Pan-India Hype

ರಿಷಬ್ ಶೆಟ್ಟಿ ತಂದೆ ಭಾಸ್ಕರ್‌ ಶೆಟ್ಟಿ ಕೂಡ ಖ್ಯಾತ ಜ್ಯೋತಿಷಿ ಹಾಗೂ ಸಂಖ್ಯಾಶಾಸ್ತ್ರಜ್ಞರು. ಹಾಗಾಗಿ ರಿಷಬ್‌ಗೆ ಸಂಖ್ಯಾಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ನಂಬಿಕೆಯಿದೆ. ಪ್ರಶಾಂತ್ ಶೆಟ್ಟಿ ಎಂಬ ಅವರ ಹೆಸರನ್ನು ತಂದೆಯ ಸೂಚನೆಯಂತೆ ರಿಷಬ್ ಶೆಟ್ಟಿ ಎಂದು ಬದಲಿಸಿಕೊಂಡಿದ್ದರು. ಅದು ಅವರಿಗೆ ಯಶಸ್ಸು ತಂದುಕೊಟ್ಟಿದ್ದು ಗೊತ್ತೇಯಿದೆ. 'ಕಾಂತಾರ- 1' ಸಿನಿಮಾ ಮಾಡಿ ರಿಷಬ್ ಗೆದ್ದಿದ್ದಾರೆ. 'ಕಾಂತಾರ- 2' ಮಾಡುವುದಾಗಿ ಕೂಡ ಘೋಷಿಸಿದ್ದಾರೆ. ಆದರೆ ರಿಷಬ್ 'ಕಾಂತಾರ' ಸರಣಿ ಸಿನಿಮಾಗಳನ್ನು ನಿಲ್ಲಿಸುವುದು ಒಳಿತು ಎಂದು ಜ್ಯೋತಿಷಿ ಮುಗೂರು ಸಲಹೆ ನೀಡಿದ್ದಾರೆ.

ಈ ವರ್ಷ(2026) ರಿಷಬ್ ಶೆಟ್ಟಿ ಭವಿಷ್ಯ ಹೇಗಿರಲಿದೆ ಎಂದು ಜ್ಯೋತಿಷಿ ಮುಗೂರು ಮಧುದೀಕ್ಷಿತ್ ವಿವರಿಸಿದ್ದಾರೆ. "ರಿಷಬ್ ನಂಬರ್ 5.. ಕೇತುಗೆ 7 ಹಾಗೂ 5 ಕೇತುಗೆ ಬೆಂಬಲವಾಗಿರುತ್ತದೆ. ಅವರಿಗೆ 5 ಸಂಖ್ಯೆ ಬಹಳ ಯಶಸ್ಸು ತಂದುಕೊಡುತ್ತದೆ. 'ಕಾಂತಾರ' ಒಟ್ಟು ಮಾಡಿದ್ರೆ 7, ರಿಷಬ್ 5, ಹಾಗಾಗಿ ಬೆಸ್ಟ್ ಕಾಂಬಿನೇಷನ್. ಕಾಂತಾರ-1 ಅಂದರೆ 8 ಅದು ಚೆನ್ನಾಗಿತ್ತು. ಆದರೆ ಈ ವರ್ಷದ ರೂಲಿಂಗ್ ನಂಬರ್ ಸಪೋರ್ಟಿವ್ ಆಗಿಲ್ಲ. ಹಾಗಾಗಿ 2026ರ ವರ್ಷ ರಿಷಬ್ ಶೆಟ್ಟಿ 50-50 ಎನ್ನಬಹುದು. ನಿರೀಕ್ಷೆಗೆ ತಕ್ಕಂತೆ ಗೆಲುವು ಸಿಗಲ್ಲ, ಓಕೆ ಓಕೆ ಎನ್ನಬಹುದು" ಎಂದು ತಿಳಿಸಿದ್ದಾರೆ.

'ಕಾಂತಾರ' ಚಿತ್ರದ ಮತ್ತೊಂದು ಸೀಕ್ವೆಲ್ ಮಾಡದೇ ಇರುವುದು ಒಳ್ಳೆಯದು ಎಂದು ಮಧುದೀಕ್ಷಿತ್ ಹೇಳಿದ್ದಾರೆ. ನನ್ನ ಪ್ರಕಾರ ರಿಷಬ್ ಶೆಟ್ಟಿ 'ಕಾಂತಾರ' ಸರಣಿ ಬಿಟ್ಟು ಬೇರೆ ಸಿನಿಮಾ ಮಾಡುವುದು ಒಳಿತು. ಆಧ್ಯಾತ್ಮಿಕ ನಂಬರ್ ಹೋಗ್ತಾ ಹೋಗ್ತಾ ಅವರನ್ನೇ ಆಧ್ಯಾತ್ಮಕ್ಕೆ ಸೆಳೆದುಬಿಡುತ್ತೆ, ಅಥವಾ ಬ್ರೇಕ್ ಹಾಕಿಬಿಡುತ್ತೆ. ಹಾಗಾಗಿ ನನ್ನ ಪ್ರಕಾರ 'ಕಾಂತಾರ' ಸರಣಿ ಬಿಟ್ಟು ಬೇರೆ ಸಿನಿಮಾ ಮಾಡಿದರೆ ಯಶಸ್ಸು ಸಿಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

More from Filmibeat

Read more about: new year 2026 yash rishab shetty
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X