For Quick Alerts
  ALLOW NOTIFICATIONS  
  For Daily Alerts

  'ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿ ಪಡೆದ ದಕ್ಷಿಣ ಭಾರತ ಸೆಲೆಬ್ರಿಟಿಗಳ ಸಂಪೂರ್ಣ ಮಾಹಿತಿ ಇಲ್ಲಿದೆ

  |

  ಸಿನಿಮಾ ಕ್ಷೇತ್ರದಲ್ಲಿ ನೀಡುವ ಅತ್ಯುನ್ನತ ಪ್ರಶಸ್ತಿ ದಾದಾ ಸಾಹೇಬ್ ಫಾಲ್ಕೆ. ಜೀವಮಾನ ಸಾಧನೆಗಾಗಿ ಭಾರತೀಯ ಸಿನಿಮಾ ರಂಗದ ಪಿತಾಮಹ ದಾದಾ ಸಾಹೇಬ್ ಫಾಲ್ಕೆ ಅವರ ಹೆಸರಿನಲ್ಲಿ ಭಾರತ 1969ರಿಂದ ಪ್ರಶಸ್ತಿ ನೀಡುತ್ತಿದೆ. ಪ್ರತಿ ವರ್ಷ ಚಿತ್ರೋದ್ಯಮದ ಅತ್ಯುತ್ತಮ ಪ್ರತಿಭೆಗಳಿಗೆ ನೀಡಲಾಗುತ್ತಿದೆ.

  ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಚಲನಚಿತ್ರೋತ್ಸವಗಳ ನಿರ್ದೇಶನಾಲಯದಿಂದ ಆಯೋಜಿಸಲಾಗುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ. ಪ್ರಶಸ್ತಿ ಸ್ವರ್ಣ ಕಮಲ ಪದಕ, ಶಾಲು ಮತ್ತು 10 ಲಕ್ಷ ನಗದು ಬಹುಮಾನ ಒಳಗೊಂಡಿರುತ್ತದೆ.

  ಈ ಬಾರಿ ಪ್ರತಿಷ್ಠಿತ ಫಾಲ್ಕೆ ಪ್ರಶಸ್ತಿ ಸೂಪರ್ ಸ್ಟಾರ್ ದಕ್ಷಿಣ ಭಾರತೀಯ ಸಿನಿಮಾರಂಗದ ಲೆಜೆಂಡ್ ರಜಿನಿಕಾಂತ್ ಅವರಿಗೆ ಬಂದಿದೆ. ಭಾರತ ಸರ್ಕಾರ ನೀಡುವ ಅತ್ಯುನ್ನತ ಗೌರವವನ್ನು ಪಡೆದ ದಕ್ಷಿಣ ಭಾರತ ಚಿತ್ರರಂಗದ ತಾರೆಯರ ಬಗ್ಗೆ ಒಂದು ವಿವರ ಇಲ್ಲಿದೆ.

  ಬಿ.ಎನ್ ರೆಡ್ಡಿ

  ಬಿ.ಎನ್ ರೆಡ್ಡಿ

  ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಮೊದಲ ಬಾರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದವರು ಬಿ ಎನ್ ರೆಡ್ಡಿ. ತೆಲುಗು ಸಿನಿಮಾರಂಗದ ನಿರ್ದೇಶಕ, ನಿರ್ಮಾಪಕ, ಕತೆಗಾರರಾಗಿ ಖ್ಯಾತಗಳಿಸಿದ್ದಾರೆ. 1974ರಲ್ಲಿ ಬಿ ಎನ್ ರೆಡ್ಡಿ ಅವರಿಗೆ ಪ್ರತಿಷ್ಠಿತ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

  ಪೈದಿ ಜಯರಾಜ್

  ಪೈದಿ ಜಯರಾಜ್

  ನಟ ಮತ್ತು ನಿರ್ದೇಶಕ ಪೈದಿ ಜಯರಾಜ್ ಅವರು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹಿಂದಿ ಮತ್ತು ತೆಲುಗು ಸಿನಿಮಾರಂಗದಲ್ಲಿ ಖ್ಯಾತಿಗಳಿಸಿರುವ ಪೈದಿ ಜಯರಾಜ್ ಅವರಿಗೆ 1980ರಲ್ಲಿ ದಾದಾ ಸಾಹೇಬ್ ಫಾಲ್ಕೆ ನೀಡಿ ಗೌರವಿಸಲಾಗಿದೆ.

  ಎಲ್ ವಿ ಪ್ರಸಾದ್

  ಎಲ್ ವಿ ಪ್ರಸಾದ್

  ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾರಂಗದಲ್ಲಿ ಖ್ಯಾತಿಗಳಿಸಿರುವ ನಟ, ನಿರ್ದೇಶಕ, ನಿರ್ಮಾಪಕ ಎಲ್ ವಿ ಪ್ರಸಾದ್ ಅವರು ಸಹ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಎಲ್ ವಿ ಪ್ರಸಾದ್ ಮೂರು ಭಾಷೆಯಲ್ಲಿ ನಿರ್ಮಿಸಿದ ಮೊದಲ ಟಾಕಿ ಸಿನಿಮಾದಲ್ಲಿ ನಟಿಸಿದ ಹೆಗ್ಗಳಿಕೆ ಇವರದ್ದು. ಹಿಂದಿ ಅಲಂ ಅರಾ, ತಮಿಳಿನ ರಾಳಿದಾಸ ತೆಲುಗಿನ ಭಕ್ತ ಪ್ರಹ್ಲಾದ ಅಂತಹ ಐತಿಹಾಸಿಕ ಸಿನಿಮಾಗಳನ್ನು ಮಾಡಿರುವ ಎಲ್ ವಿ ಪ್ರಸಾದ್ ಅವರಿಗೆ 1982ರಲ್ಲಿ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

  ಬಿ ನಾಗಿ ರೆಡ್ಡಿ

  ಬಿ ನಾಗಿ ರೆಡ್ಡಿ

  1950ರ ದಶಕದಲ್ಲಿ ಸುಮಾರು 50 ಹೆಚ್ಚು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಬಿ ನಾಗಿ ರೆಡ್ಡಿ ಅವರಿಗೆ 1986ರಲ್ಲಿ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ರೆಡ್ಡಿ ಸ್ಥಾಪಿಸಿರುವ ವಿಜಯ ವಾಹಿನಿ ಸ್ಟುಡಿಯೋ ಆ ಕಾಲದ ಏಷ್ಯಾದ ಅತಿದೊಡ್ಡ ಚಲನಚಿತ್ರ ಸ್ಟುಡಿಯೋವಾಗಿತ್ತು.

  ಅಕ್ಕಿನೇನಿ ನಾಗೇಶ್ವರ ರಾವ್

  ಅಕ್ಕಿನೇನಿ ನಾಗೇಶ್ವರ ರಾವ್

  ತೆಲುಗು ಸಿನಿಮಾದ ಖ್ಯಾತ ನಟ ಅಕ್ಕಿನೇನಿ ನಾಗೇಶ್ವರ್ ರಾವ್ ಅವರಿಗೆ ಭಾರತ ಸರ್ಕಾರ 1990ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಿದೆ. 250ಕ್ಕೂ ಅಧಿಕ ಸಿನಿಮಾದಲ್ಲಿ ನಾಗೇಶ್ವರ ರಾವ್ ನಟಿಸಿದ್ದಾರೆ. ಅಕ್ಕಿನೇನಿ ಕುಟುಂಬದ ಸದ್ಯ ನಾಗಾರ್ಜುನ್ ಮತ್ತು ಮಕ್ಕಳು ಚಿತ್ರರಂಗದಲ್ಲಿ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ.

  ಡಾ.ರಾಜ್ ಕುಮಾರ್

  ಡಾ.ರಾಜ್ ಕುಮಾರ್

  ಕನ್ನಡ ಸಿನಿಮಾದಲ್ಲಿ ಮೊದಲ ಬಾರಿಗೆ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ನಟ ಡಾ.ರಾಜ್ ಕುಮಾರ್. 1995ರಲ್ಲಿ ಡಾ.ರಾಜ್ ಅವರಿಗೆ ಭಾರತ ಸರ್ಕಾರ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅದ್ಭುತ ಪಾತ್ರಗಳ ಮೂಲಕ ಚಿತ್ರಪ್ರೇಕ್ಷಕರನ್ನು ರಂಜಿಸಿ ಮರೆಯಾದ ಕನ್ನಡದ ಮಾಣಿಕ್ಯ ಡಾ.ರಾಜ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಬಂದಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ.

  ಅಡೂರು ಗೋಪಾಲಕೃಷ್ಣ

  ಅಡೂರು ಗೋಪಾಲಕೃಷ್ಣ

  ಮಲಯಾಳಂ ಸಿನಿಮಾರಂಗದ ಖ್ಯಾತ ನಿರ್ದೇಶಕ ಅಡೂರು ಗೋಪಾಲಕೃಷ್ಣ ಅವರಿಗೆ 2004ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಮಲಯಾಳಂನಲ್ಲಿ ಹೊಸ ರೀತಿಯ ಸಿನಿಮಾ ಆಂದೋಲನದ ಪ್ರವರ್ತಕ ಎಂಬ ಹೆಗ್ಗಳಿಕೆಗೆ ಕೂಡ ಪಾತ್ರರಾಗಿದ್ದಾರೆ. ಚೊಚ್ಚಲ ನಿರ್ದೇಶನದ ಸ್ವಯಂವರಂ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ.

  ವಿ.ಕೆ ಮೂರ್ತಿ

  ವಿ.ಕೆ ಮೂರ್ತಿ

  ಖ್ಯಾತ ಛಾಯಾಗ್ರಾಹಕ ವಿ.ಕೆ ಮೂರ್ತಿ ಮೈಸೂರಿನವರು ಎನ್ನುವುದೇ ಕನ್ನಡಿಗರಿಗೆ ಹೆಮ್ಮೆಯ ವಿಚಾರ. ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ವಿ.ಕೆ ಮೂರ್ತಿ ಬಳಿಕ ಛಾಯಾಗ್ರಾಹಕರಾಗಿ ಖ್ಯಾತಿಗಳಿಸಿದ್ದಾರೆ. ಖ್ಯಾತ ನಿರ್ದೇಶಕ ಗುರುದತ್ ಅವರ ಜೊತೆ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ಭಾರತದ ಮೊದಲ ಸಿನಿಸ್ಕೋಪ್ ಚಿತ್ರವನ್ನು ಸೆರೆಹಿಡಿದ ಖ್ಯಾತಿ ಇವರದ್ದು. 2008ರಲ್ಲಿ ವಿ.ಕೆ ಮೂರ್ತಿ ಅವರಿಗೆ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

  ಕೆ.ಬಾಲಚಂದರ್

  ಕೆ.ಬಾಲಚಂದರ್

  ತೆಲುಗು ಮತ್ತು ತಮಿಳಿನ ಖ್ಯಾತ ನಿರ್ದೇಶಕ ಕೆ ಬಾಲಚಂದರ್ ಅವರಿಗೆ ಭಾರತ ಸರ್ಕಾರ 2010ರಲ್ಲಿ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಿದೆ. ನಿರ್ದೇಶಕರಾಗಿ ಮತ್ತು ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಕೆ ಬಾಲಚಂದರ್ ತಮ್ಮ ಬ್ಯಾನರ್ ನಲ್ಲಿ 100ಕ್ಕೂ ಅಧಿಕ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.

  ಕೆ. ವಿಶ್ವನಾಥ್

  ಕೆ. ವಿಶ್ವನಾಥ್

  ತೆಲುಗು ಸಿನಿಮಾರಂಗದ ಖ್ಯಾತ ನಿರ್ದೇಶಕ ಕೆ ವಿಶ್ವನಾಥ್ ಅವರಿಗೆ 2016ರಲ್ಲಿ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸೌಂಡ್ ರೆಕಾರ್ಡರ್ ಆಗಿ ಕೆಲಸ ಪ್ರಾರಂಭಿಸಿದ ಕೆ. ವಿಶ್ವನಾಥ್ ಬಳಿಕ ನಿರ್ದೇಶಕರಾಗಿ ಖ್ಯಾತಿಗಳಿಸಿದ್ದಾರೆ. 60 ವರ್ಷಗಳ ಜೀವನದಲ್ಲಿ ವಿಶ್ವನಾಥ್ 50ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.

  ರಜನಿಕಾಂತ್

  ರಜನಿಕಾಂತ್

  ಈ ಬಾರಿಯ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಒಲಿದಿದೆ. ರಜನಿಕಾಂತ್ ಅವರಿಗೆ ಭಾರತೀಯ ಸಿನಿಮಾ ರಂಗದ ಗಣ್ಯರು ಮತ್ತು ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಕನ್ನಡದ ಕೆಲವು ಸಿನಿಮಾಗಳು ಮತ್ತು ತಮಿಳಿನಲ್ಲಿ ನಟಿಸಿರುವ ರಜನಿಕಾಂತ್ ಅದ್ಭುತ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಇಂದಿಗೂ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

  English summary
  B N Reddy to Rajinikanth: Here is the list of South stars who've won the Dadasaheb Phalke award. Take a look.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X