4 ಚಿತ್ರಗಳು 500 ಕೋಟಿ ರೂ. ಗಳಿಕೆ; ಪ್ರಭಾಸ್ ಹೊಸ ದಾಖಲೆ

ಸದ್ಯ ಪ್ಯಾನ್ ಇಂಡಿಯಾ ಸಿನಿಮಾಗಳ ಜಮಾನ ನಡೆಯುತ್ತಿದೆ. ದೊಡ್ಡ ಸಿನಿಮಾಗಳ ಕಲೆಕ್ಷನ್ ಟಾರ್ಗೆಟ್ 500 ಕೋಟಿ ರೂ. 1000 ಕೋಟಿ ರೂ. ಎನ್ನುವಂತಾಗಿದೆ. 2 ವರ್ಷಕ್ಕೆ ಒಂದು ಸಿನಿಮಾ ಮಾಡಿ ಒಟ್ಟಿಗೆ ಬಾಕ್ಸಾಫೀಸ್ ಕೊಳ್ಲೆ ಹೊಡೆಯುವ ಪ್ರಯತ್ನ ನಡೀತಿದೆ.

ಭಾರೀ ಬಂಡವಾಳ, ದೊಡ್ಡ ಸ್ಟಾರ್‌ಕಾಸ್ಟ್, 5 ಭಾಷೆಗಳಲ್ಲಿ ಸಿನಿಮಾ ರಿಲೀಸ್ ಮಾಡಿ ಬಾಕ್ಸಾಫೀಸ್ ಶೇಕ್ ಮಾಡುವ ಲೆಕ್ಕಾಚಾರ ಹೆಚ್ಚಾಗಿದೆ. ಆದರೆ ಈ ಹಾದಿಯಲ್ಲಿ ತೆಲುಗು ನಟ ಪ್ರಭಾಸ್ ಬಹಳ ಮುಂದೆ ಇದ್ದಾರೆ. 'ಬಾಹುಬಲಿ' ಸರಣಿ ಚಿತ್ರರಂಗಗಳಿಂದ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟ ಅಲಂಕರಿಸಿದ ಯಂಗ್ ರೆಬೆಲ್ ಸ್ಟಾರ್ ಅದನ್ನು ಮುಂದುವರೆಸಿಕೊಂಡು ಬರ್ತಿದ್ದಾರೆ.

Baahubali to kalki 4 Prabhas films 500 cr club at global box office

'ಬಾಹುಬಲಿ' ಸರಣಿ ಬಳಿಕ ನಟಿಸಿದ 3 ಸಿನಿಮಾಗಳು ನಿರಾಸೆ ಮೂಡಿಸಿದ್ದವು. ಆದರೆ 'ಸಲಾರ್' ಆಗಿ ಅಬ್ಬರಿಸಿ ಕಂಬ್ಯಾಕ್ ಮಾಡಿದ ಡಾರ್ಲಿಂಗ್ ಇದೀಗ 'ಕಲ್ಕಿ 2898 AD' ಚಿತ್ರದಿಂದ ಮತ್ತೆ ದರ್ಬಾರ್ ನಡೆಸುತ್ತಿದ್ದಾರೆ. 4 ದಿನಕ್ಕೆ ಸಿನಿಮಾ 500 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಈ ವಿಚಾರವನ್ನು ಸ್ವತಃ ಚಿತ್ರತಂಡ ಘೋಷಿಸಿದೆ. ಆ ಮೂಲಕ ಪ್ರಭಾಸ್ ನಟಿಸಿದ 4ನೇ ಸಿನಿಮಾ 500 ಕೋಟಿ ರೂ. ಕ್ಲಬ್ ಸೇರಿದಂತಾಗಿದೆ.

1. ಬಾಹುಬಲಿ ದಿ ಬಿಗಿನಿಂಗ್

ರಾಜಮೌಳಿ ನಿರ್ದೇಶನದ 'ಬಾಹುಬಲಿ ದಿ ಬಿಗಿನಿಂಗ್' ಸಿನಿಮಾ 9 ವರ್ಷಗಳ ಹಿಂದೆ ತೆರೆಗಪ್ಪಳಿಸಿತ್ತು. ಪ್ರಭಾಸ್ ಡಬಲ್ ರೋಲ್‌ನಲ್ಲಿ ಕಾಣಿಸಿಕೊಂಡು ಮೋಡಿ ಮಾಡಿದ್ದರು. 2 ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು. ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಹುಟ್ಟುಹಾಕಿದ್ದೇ ಈ ಸಿನಿಮಾ. 'ಬಾಹುಬಲಿ ದಿ ಬಿಗಿನಿಂಗ್' ಚಿತ್ರ ವಿಶ್ವದಾದ್ಯಂತ 600 ಕೋಟಿ ರೂ. ಗಳಿಕೆ ಕಂಡಿತ್ತು.

2. ಬಾಹುಬಲಿ ದಿ ಕನ್‌ಕ್ಲೂಷನ್

ಒಂದೇ ಕಥೆಯನ್ನು ಎರಡು ಭಾಗಗಳಾಗಿ ಹೇಳುವ ಪ್ರಯತ್ನಕ್ಕೂ ರಾಜಮೌಳಿ ಶ್ರೀಕಾರ ಹಾಡಿದ್ದರು. 'ಬಾಹುಬಲಿ' ಸರಣಿಯ 2ನೇ ಸಿನಿಮಾ ಬಾಕ್ಸಾಫೀಸ್‌ ಕೊಳ್ಳೆ ಹೊಡೆದಿತ್ತು. 1500 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಎಲ್ಲರ ಹುಬ್ಬೇರಿಸಿತ್ತು. ದಕ್ಷಿಣ ಭಾರತದ ಚಿತ್ರವೊಂದು ಈ ಮಟ್ಟದಲ್ಲಿ ಗಳಿಕೆ ಮಾಡಬಹುದಾ? ಎಂದು ಎಲ್ಲರೂ ಹುಬ್ಬೇರಿಸಿದ್ದರು. ಮತ್ತೊಮ್ಮೆ ಪ್ರಭಾಸ್ 'ಬಾಹುಬಲಿ'ಯಾಗಿ ಆರ್ಭಟ ನಡೆಸಿ ಗೆದ್ದಿದ್ದರು.

Baahubali to kalki 4 Prabhas films 500 cr club at global box office

3. ಸಲಾರ್-1 ಸೀಜ್ ಫೈರ್

'ಬಾಹುಬಲಿ' ಸರಣಿ ಬಳಿಕ ಪ್ರಭಾಸ್ ನಟಿಸಿದ 'ಸಾಹೋ', 'ರಾಧೆಶ್ಯಾಮ್' ಹಾಊ 'ಆದಿಪುರುಷ್' ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದ್ದವು. ಭರ್ಜರಿ ಓಪನಿಂಗ್ ಸಿಕ್ಕರೂ ಬಳಿಕ ಸಿನಿಮಾಗಳು ಗೆಲ್ಲಲಿಲ್ಲ. ಆದರೆ ಕಳೆದ ವರ್ಷ ಡಿಸೆಂಬರ್ 22ಕ್ಕೆ 'ಸಲಾರ್-1 ಸೀಜ್ ಫೈರ್' ಬಿಡುಗಡೆಯಾಗಿ ಸದ್ದು ಮಾಡಿತ್ತು. 700 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಗಮನ ಸೆಳೆದಿತ್ತು.

4. ಕಲ್ಕಿ 2898 AD

ಸದ್ಯ ನಾಗ್ ಅಶ್ವಿನ್ ನಿರ್ದೇಶನದ 'ಕಲ್ಕಿ 2898 AD' ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದೆ. ಫಸ್ಟ್ ವೀಕೆಂಡ್‌ನಲ್ಲೇ ಸಿನಿಮಾ 500 ಕೋಟಿ ರೂ. ಗಳಿಕೆ ಕಂಡು ಮುನ್ನುಗ್ಗುತ್ತಿದೆ. ಸಿನಿಮಾ 1000 ಕೋಟಿ ರೂ. ಗಡಿ ದಾಟಬಹುದು ಎನ್ನುವುದು ಕೆಲವರ ಲೆಕ್ಕಾಚಾರ. ಚಿತ್ರದ ಬಗ್ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೂ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಪ್ರಭಾಸ್ ಸ್ಟಾರ್‌ಡಮ್ ಅಷ್ಟರಮಟ್ಟಿಗೆ ವರ್ಕ್ ಆಗುತ್ತಿದೆ. ಹಿಂದಿ ಬೆಲ್ಟ್‌ನಲ್ಲಿ ಸಿನಿಮಾ ಗಳಿಕೆ ಉತ್ತಮವಾಗಿದೆ. ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ.

More from Filmibeat

English summary
Kalki 2898 AD Becomes 4th Film of Prabhas to Cross 500 Cr Worldwide Milestone
Read more about: prabhas baahubali salaar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X