2024ರ ಬಹುನಿರೀಕ್ಷಿತ ಸಿನಿಮಾಗಳನ್ನು ಘೋಷಿಸಿದ ಐಎಂಡಿಬಿ: ಕನ್ನಡದ ಯಾವ ಸಿನಿಮಾಗೆ ಸ್ಥಾನ?

ಸಿನಿಮಾ, ಕಿರುತೆರೆ ಶೋ ಹಾಗೂ ಸಿನಿಮಾ ತಾರೆಯರ ಅಧಿಕೃತ ಮಾಹಿತಿ ಮೂಲವೆನಿಸಿಕೊಂಡಿರುವ ವಿಶ್ವ ಪ್ರಸಿದ್ಧ ತಾಣ ಐಎಂಡಿಬಿ. ಜನವರಿ 9 ರಂದು 2024ರ ಬಹುನಿರೀಕ್ಷಿತ ಭಾರತೀಯ ಸಿನಿಮಾಗಳ ಪಟ್ಟಿಯನ್ನು ಘೋಷಿಸಿದೆ. ಐಎಂಡಿಬಿ ವೆಬ್‌ಸೈಟ್‌ಗೆ ಭೇಟಿ ನೀಡುವ ಲಕ್ಷಾಂತರ ಬಳಕೆದಾರರ ಮಾಸಿಕ ಪೇಜ್‌ ವೀವ್ಸ್ ಆಧರಿಸಿ ಈ ಪಟ್ಟಿ ಸಿದ್ಧಪಡಿಸಲಾಗಿದೆ.

2024ರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಅಗ್ರ ಸ್ಥಾನದಲ್ಲಿ ಇರುವುದು ನಟ ಹೃತಿಕ್ ರೋಷನ್ ನಟನೆಯ ಫೈಟರ್. "ಇದು ನಂಬಲಾಗದ ಪಾಸಿಟಿವ್ ಅಪ್‌ಡೇಟ್. ಐಎಂಡಿಬಿ ಪ್ರಕಾರ 'ಫೈಟರ್' ಸಿನಿಮಾ 2024ರ ಬಹುನಿರೀಕ್ಷಿತ ಚಿತ್ರ ಎಂದು ತಿಳಿದು ಬಂದಿದೆ. ಫೈಟರ್ ಸಿನಿಮಾದ ಟೀಸರ್ ಮತ್ತು ಹಾಡುಗಳಿಗೆ ಲಭಿಸಿರುವ ಪ್ರತಿಕ್ರಿಯೆ ಅದ್ಭುತವಾಗಿದೆ. ಈ ಸಿನಿಮಾ ಜನವರಿ 25, 2024ರಂದು ಚಿತ್ರ ತೆರೆ ಕಾಣಲಿದೆ" ಎಂದು ಐಎಂಡಿಬಿ ತಿಳಿಸಿದೆ.

 Bagheera, Pushpa 2, Fighter and others: IMDB announced Most Awaited Indian Movies of 2024

2024ರ ಐಎಂಡಿಬಿಯ ಬಹುನಿರೀಕ್ಷಿತ ಭಾರತೀಯ ಚಿತ್ರಗಳು

1. ಫೈಟರ್

2. ಪುಷ್ಪ: ದಿ ರೂಲ್ - ಭಾಗ 2

3. ವೆಲ್‌ಕಂ ಟು ದಿ ಜಂಗಲ್

4. ಸಿಂಘಂ ಅಗೇನ್

5. ಕಲ್ಕಿ 2898ಎಡಿ

6. ಬಘೀರ

7. ಹನುಮಾನ್

8. ಬಡೆ ಮಿಯಾ ಛೋಟೆ ಮಿಯಾ

9. ಕಂಗುವಾ

10. ದೇವರ ಭಾಗ -1

11. ಛಾವಾ

12. ಗುಂಟುರು ಖಾರಂ

13. ಮಲೈಕೊಟ್ಟೈ ವಾಲಿಬನ್

14. ಮೆರಿ ಕ್ರಿಸ್‌ಮಸ್

15. ಕ್ಯಾಪ್ಟನ್‌ ಮಿಲ್ಲರ್

16. ತಂಗಾಲನ್

17. ಇಂಡಿಯನ್ 2

18. ಯೋಧ

19. ಮೈ ಅಟಲ್ ಹೂನ್

20. ಜಿಗರ

 Bagheera, Pushpa 2, Fighter and others: IMDB announced Most Awaited Indian Movies of 2024

ಐಎಂಡಿಬಿ ಪಟ್ಟಿಯಲ್ಲಿ ಕನ್ನಡದ ಬಘೀರ

ಈ ಇಪ್ಪತ್ತು ಸಿನಿಮಾಗಳು 2024 ರಲ್ಲಿ ಬಿಡುಗಡೆಯಾಗುತ್ತಿರುವ ಭಾರತೀಯ ಸಿನಿಮಾಗಳಲ್ಲಿ ಅತಿ ಹೆಚ್ಚು ನಿರೀಕ್ಷೆ ಮೂಡಿಸಿವೆ. ಇದರಲ್ಲಿ ಕನ್ನಡದ 'ಬಘೀರ' ಸಿನಿಮಾ ಕೂಡ ಸೇರಿಕೊಂಡಿದೆ. ಹೊಂಬಾಳೆ ಫಿಲ್ಮಸ್ ನಿರ್ಮಾಣ ಮಾಡುತ್ತಿರುವ, ನಟ ಶ್ರೀಮುರಳಿ ಅಭಿನಯದ ಸಿನಿಮಾ ಸಕತ್ ನಿರೀಕ್ಷೆ ಹುಟ್ಟು ಹಾಕಿರುವುದು ಸುಳ್ಳಲ್ಲ.

ಐಎಂಡಿಬಿ ಪಟ್ಟಿಯಲ್ಲಿರುವ 20 ಸಿನಿಮಾಗಳಲ್ಲಿ ಒಂಬತ್ತು ಹಿಂದಿ ಸಿನಿಮಾಗಳು, ಐದು ತೆಲುಗು, ನಾಲ್ಕು ತಮಿಳು, ಒಂದು ಮಲಯಾಳಂ ಮತ್ತು ಒಂದು ಕನ್ನಡ ಸಿನಿಮಾ ಎಂಬುದು ಗಮನಾರ್ಹ. ಪಟ್ಟಿಯಲ್ಲಿರುವ ಮೊದಲ ಐದು ಸಿನಿಮಾಗಳ ಪೈಕಿ ಮೂರರಲ್ಲಿ ಅಂದರೆ ಫೈಟರ್, ಸಿಂಗಮ್ ಎಗೈನ್ ಮತ್ತು ಕಲ್ಕಿ 2898 AD ಸಿನಿಮಾಗಳಲ್ಲಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಜೊತೆಗೆ ದೀಪಿಕಾ ಪಡುಕೋಣೆ ಐಎಂಡಿಬಿ 2023 ರ ಅತ್ಯಂತ ಜನಪ್ರಿಯ ಭಾರತೀಯ ತಾರೆಯರ ಪಟ್ಟಿಯಲ್ಲಿ 3 ನೇ ಸ್ಥಾನದಲ್ಲಿದ್ದಾರೆ.

ಸಿಕ್ವೇಲ್‌ಗಳಿಗೆ ಹೆಚ್ಚು ಬೇಡಿಕೆ

ಇನ್ನು, ಪಟ್ಟಿಯಲ್ಲಿ ನಾಲ್ಕು ಸಿನಿಮಾಗಳು ಜನಪ್ರಿಯ ಸಿನಿಮಾಗಳ ಸೀಕ್ವೆಲ್‌ಗಳು ಸೇರಿಕೊಂಡಿವೆ ಪುಷ್ಪಾ: ದಿ ರೂಲ್ - ಭಾಗ 2, ವೆಲ್ಕಮ್ ಟು ದಿ ಜಂಗಲ್, ಸಿಂಗಮ್ ಎಗೇನ್ ಮತ್ತು ಇಂಡಿಯನ್ 2 ಬಹು ನಿರೀಕ್ಷೆ ಮೂಡಿಸಿರುವ ಸಿನಿಮಾಗಳ ಸಾಲಿನಲ್ಲಿವೆ.

ಐಎಂಡಿಬಿ

ಐಎಂಡಿಬಿಯು ಸಿನಿಮಾ, ಟಿವಿ ಶೋಗಳು ಮತ್ತು ಸ್ಟಾರ್‌ಗಳಿಗೆ ಸಂಬಂಧಿಸಿದ ಅಧಿಕೃತ ಮಾಹಿತಿಯ ಮೂಲವಾಗಿದೆ. ಅಭಿಮಾನಿಗಳು ಏನನ್ನೂ ವೀಕ್ಷಿಸಬೇಕು ಮತ್ತು ಎಲ್ಲಿ ವೀಕ್ಷಿಸಬೇಕು ಎಂಬುದನ್ನು ನಿರ್ಧರಿಸುವುದಕ್ಕೆ ನೆರವಾಗುತ್ತದೆ. ಇನ್ನು, ಐಎಂಡಿಬಿ ಟಿವಿ ಎಂಬ ಉಚಿತವಾದ ಸ್ಟ್ರೀಮಿಂಗ್‌ ಚಾನೆಲ್‌ ಹೊಂದಿದ್ದು, ಐಎಂಡಿಬಿ ಒರಿಜಿನಲ್‌ ವಿಡಿಯೋ ಸರಣಿಗಳನ್ನೂ ನಿರ್ಮಾಣ ಮಾಡುತ್ತದೆ.

More from Filmibeat

English summary
IMDB announced most awaited Indian movies of 2024.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X