twitter
    For Quick Alerts
    ALLOW NOTIFICATIONS  
    For Daily Alerts

    'ನವರಂಗ್' ಚಿತ್ರಮಂದಿರ ಕಟ್ಟಿದ ಕಥೆ, ಮೊದಲು ಪ್ರದರ್ಶನ ಕಂಡ ಚಿತ್ರ ಯಾವುದು?

    |

    ಕೆಂಪೇಗೌಡ ರಸ್ತೆ, ಕನ್ನಡ ಚಿತ್ರರಂಗಕ್ಕೆ ಹೃದಯ ಭಾಗ ಇದ್ದಂತೆ. ಕನ್ನಡ ಸಿನಿಮಾಗಳಿಗೆ ಮುಖ್ಯ ಚಿತ್ರಮಂದಿರ ಎನ್ನುವ ಖುಷಿ ಕೊಡುವ ಜಾಗ. ಒಂದು ಸಮಯದಲ್ಲಿ ಹತ್ತಕ್ಕೂ ಹೆಚ್ಚು ಚಿತ್ರಮಂದಿರಗಳು ಕೆಜಿ ರಸ್ತೆಯಲ್ಲಿದ್ದವು. ಆದ್ರೀಗ, ಕೆಲವು ಸಿನಿಮಾ ಥಿಯೇಟರ್‌ಗಳು ಮುಚ್ಚಿವೆ. ಹೃದಯ ಭಾಗದ ಹೊರಗಡೆ ಇದ್ದು ಅಷ್ಟೇ ಗಮನ ಸೆಳೆದ ಚಿತ್ರಮಂದಿರ ನವರಂಗ್. ರಾಜಾಜಿನಗರದಲ್ಲಿರುವ ನವರಂಗ್ ಥಿಯೇಟರ್‌ಗೂ ಬಹಳ ದೊಡ್ಡ ಇತಿಹಾಸ ಇದೆ.

    'ನವರಂಗ್' ಚಿತ್ರಮಂದಿರ ಸ್ಥಾಪಿಸಿ ಸುಮಾರು 60 ವರ್ಷ ಆಗಿದೆ. ಆಗಿನ ಸಮಯಕ್ಕೆ ದಕ್ಷಿಣ ಭಾರತದಲ್ಲಿ 70 ಎಂಎಂ ತಂತ್ರಜ್ಞಾನದಲ್ಲಿ ನಿರ್ಮಾಣವಾದ ಮೊದಲ ಚಿತ್ರಮಂದಿರ. ಭಾರತದ ಖ್ಯಾತ ಸಿನಿಮಾ ಥಿಯೇಟರ್‌ಗಳನ್ನು ಸುತ್ತಿ, ಭವ್ಯವಾದ ಹಾಲ್ ನಿರ್ಮಾಣ ಮಾಡಲಾಗಿತ್ತು. ಅಂದ್ಹಾಗೆ, ಈ ಚಿತ್ರಮಂದಿರ ಕಟ್ಟಿದ್ದು ಕೆಸಿಎನ್ ಗೌಡರು (ಕೆಸಿ ನಂಜುಂಡೇಗೌಡ). ಈಗ ಅವರ ಮಗ ಕೆಸಿಎಸ್ ಮೋಹನ್ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

    ಗ್ಲಾಮರ್ ಗೊಂಬೆಯಾಗಿದ್ದ ತಾಪ್ಸಿ ಪನ್ನು ಉರಿವ ಚೆಂಡಾಗಿದ್ದು ಹೇಗೆ?ಗ್ಲಾಮರ್ ಗೊಂಬೆಯಾಗಿದ್ದ ತಾಪ್ಸಿ ಪನ್ನು ಉರಿವ ಚೆಂಡಾಗಿದ್ದು ಹೇಗೆ?

    1960ರ ಸಮಯ. ಬೆಂಗಳೂರಿನಲ್ಲಿದ್ದ ಬಹುತೇಕ ಚಿತ್ರಮಂದಿರಗಳನ್ನು ಗುಜರಾತಿ, ಮಾರ್ವಾಡಿ ಜನರು ನಿಯಂತ್ರಿಸುತ್ತಿದ್ದರು. ಬಿಡಿಎ ಅವರಿಂದ ನವರಂಗ್ ಇರುವ ಸ್ಥಳವನ್ನು ಹರಾಜಿಗೆ ಆಹ್ವಾನಿಸಲಾಯಿತು. ಪತ್ರಿಕೆಯಲ್ಲಿ ಈ ಪ್ರಕಟಣೆ ಕಂಡ ದೊಡ್ಡಬಳ್ಳಾಪುರ ಮೂಲದ ಕೆಸಿಎನ್ ಗೌಡರು, ತಾವು ಈ ಸ್ಥಳ ಖರೀದಿ ಮಾಡಲು ನಿರ್ಧರಿಸಿ ಹರಾಜಿನಲ್ಲಿ ಭಾಗವಹಿಸಿದರು. ಅದಕ್ಕೂ ಮುಂಚೆ ಕೆಸಿಎನ್ ಗೌಡರು ದೊಡ್ಡಬಳ್ಳಾಪುರದಲ್ಲಿ ಟೆಕ್ಸಿಟೈಲ್ಸ್ ಉದ್ಯಮದಲ್ಲಿದ್ದರು. ಅತಿ ಹೆಚ್ಚು ಬೆಲೆಗೆ ಹರಾಜು ಕೂಗಿ ಸ್ಥಳ ಸಹ ಖರೀದಿ ಮಾಡಿದರು. ಯಾರೋ ಹೊಸ ವ್ಯಕ್ತಿ ಈ ಜಾಗ ತೆಗೆದುಕೊಂಡು ಬಿಟ್ಟನಲ್ಲ ಎಂದು ಇತರರು ಹರಾಜಿಗಿಂತ ಹೆಚ್ಚು ಹಣ ಕೊಡ್ತೇವೆ ಎಂದು ಆಫರ್ ಕೊಟ್ಟರು. ಆದರೆ, ಕೆಸಿಎನ್ ಗೌಡರು ಬಿಟ್ಟುಕೊಡುವ ಮನಸ್ಸು ಮಾಡಿಲ್ಲ.

    Bangalore famous Film theatre Navrang History

    ಈ ಜಾಗದಲ್ಲಿ ಚಿತ್ರಮಂದಿರ ಕಟ್ಟಬೇಕು ಎಂದು ಚೆನ್ನೈನ ಖ್ಯಾತ ಇಂಜಿನಿಯರ್ ವಿನ್ಸಂಟ್ ಐಸಾಕ್ ಎನ್ನುವವರನ್ನು ಸಂಪರ್ಕಿಸಿ ಪ್ರಾಜೆಕ್ಟ್ ಒಪ್ಪಿಸಿದರು. ಇಡೀ ದೇಶ ಸುತ್ತಾಡಿ ಪ್ರಮುಖ ಚಿತ್ರಮಂದಿರ ಡಿಸೈನ್ ಪರಿಶೀಲಿಸಿ ಒಳ್ಳೆಯ ಥಿಯೇಟರ್ ಇದಾಗಲಿ ಎಂದು ಕೆಲಸ ಆರಂಭಿಸಿದರು. 1961ರಲ್ಲಿ ಕೆಲಸ ಶುರು ಮಾಡಿ, 1963ರಲ್ಲಿ ಮುಕ್ತಾಯ ಮಾಡಿದರು. ಎರಡು ವರ್ಷದಲ್ಲಿ ನವರಂಗ್ ಸಿನಿಮಾ ಮಂದಿರ ರೆಡಿ ಆಯಿತು.

    ಆಗಷ್ಟೇ ಪ್ರದರ್ಶನಕ್ಕೆ ಸಜ್ಜಾಗಿದ್ದ ನವರಂಗ್ ಚಿತ್ರಮಂದಿರದಲ್ಲಿ ಮೊದಲು ಪ್ರದರ್ಶನ ಕಂಡ ಸಿನಿಮಾ ವೀರಕೇಸರಿ. ಡಾ ರಾಜ್ ಕುಮಾರ್, ಉದಯ್ ಕುಮಾರ್, ಬಾಲಕೃಷ್ಣ, ಲೀಲಾವತಿ ಸೇರಿ ಹಲವರು ನಟಿಸಿದ್ದ ವೀರಕೇಸರಿ ಸಿನಿಮಾ 1963ರಲ್ಲಿ ರಿಲೀಸ್ ಆಗಿತ್ತು.

    'ನಾನು, ನನ್ನ ಥಿಯೇಟರ್': ಚಿತ್ರಮಂದಿರಗಳು ಹೇಳುವ ಕತೆ ಕೇಳಿ'ನಾನು, ನನ್ನ ಥಿಯೇಟರ್': ಚಿತ್ರಮಂದಿರಗಳು ಹೇಳುವ ಕತೆ ಕೇಳಿ

    ನವರಂಗ್ ಕಡೆ ಪ್ರಯಾಣ ಮಾಡೋಕೆ ಬಸ್ ಸಹ ಇರಲಿಲ್ಲ. ಆ ಸುತ್ತಮುತ್ತಲೂ ತಮಿಳಿಗರು ಹೆಚ್ಚು ಜನರಿದ್ದರು. ಆ ಕಾರಣಕ್ಕಾಗಿ ತಮಿಳು ಸಿನಿಮಾಗಳನ್ನೇ ಹೆಚ್ಚು ಪ್ರದರ್ಶನ ಮಾಡಲಾಯಿತು. ಆದರೂ ತಮಿಳು ಚಿತ್ರಗಳನ್ನು ನವರಂಗ್ ಥಿಯೇಟರ್‌ಗೆ ಕೊಡ್ತಿರಲಿಲ್ಲ.

    Bangalore famous Film theatre Navrang History

    'ಗೀತಾ ಸೂಪರ್ ಶ್ರೀ' ಸಂಸ್ಥೆ ಮೂರು ಚಿತ್ರಮಂದಿರಗಳನ್ನು ಇಟ್ಟಕೊಂಡು ತಮಿಳು ಸಿನಿಮಾಗಳನ್ನು ಪ್ರದರ್ಶನ ಮಾಡ್ತಿತ್ತು. ಆ ಸಂಸ್ಥೆಯನ್ನು ಕೆಸಿಎನ್ ಗೌಡರು ಬೋಗ್ಯಕ್ಕೆ ಹಾಕಿಕೊಂಡರು. ಈ ಮೂರು ಥಿಯೇಟರ್‌ ಜೊತೆಗೆ ನವರಂಗ್ ಸೇರಿಸಿಕೊಳ್ಳಲಾಯಿತು. ಆಮೇಲೆ ನಾಲ್ಕು ಚಿತ್ರಮಂದಿರಗಳಲ್ಲಿ ಒಟ್ಟಿಗೆ ಸಿನಿಮಾ ಬಿಡುಗಡೆ ಮಾಡಲಾಗುತ್ತಿತ್ತು.

    ನವರಂಗ್ ಸಿನಿಮಾ ಆರಂಭದಲ್ಲಿ ಅಷ್ಟು ಸುಲಭವಾಗಿ ಇರಲಿಲ್ಲ. ನಗರದಿಂದ ಹೊರಗೆ ಇದ್ದ ಕಾರಣ ಕುಂಟುತ್ತಾ ಕುಂಟುತ್ತಲೇ ಸಾಗಿತ್ತು. ಆ ಮೇಲೆ ಚಿತ್ರ ವಿತರಣೆ ಹಾಗು ನಿರ್ಮಾಣ ಮಾಡಬಹುದು ಎಂಬ ಆಲೋಚನೆಯಿಂದ ಪುಟ್ಟಣ್ಣ ಕಣಗಾಲ್ ಜೊತೆ ಸೇರಿದರು.

    ಕೆಸಿಎನ್ ಗೌಡರ ಜರ್ನಿ ಮುಂದುವರಿಯುತ್ತದೆ.....

    English summary
    KCN Gowda built the Navrang Cinema hall in Rajajinagar at 1962. dr rajkumar starrer 'Veera Kesari' film premiered for the first time in this theater.
    Monday, August 2, 2021, 22:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X