twitter
    For Quick Alerts
    ALLOW NOTIFICATIONS  
    For Daily Alerts

    10 ವರ್ಷದ ಹಿಂದೆ ನಮ್ ಸ್ಟಾರ್ಸ್ ಹೇಗಿದ್ರು, ಯಾವ ಸಿನಿಮಾ ಮಾಡ್ತಿದ್ರು?

    |

    ದಶಕ ಮುಗಿದಿದೆ. 2010 ರಿಂದ 2020 ಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ Beginning of the decade ಮತ್ತು End of the decade ಎನ್ನುವ ಪೋಸ್ಟ್ ಗಳು ಗಮನ ಸೆಳೆಯುತ್ತಿದೆ.

    ಇದೇ ರೀತಿ ಕನ್ನಡದ ಸ್ಟಾರ್ ಗಳು ದಶಕದ ಹಿಂದೆ ಏನು ಮಾಡುತ್ತಿದ್ದರು. ಅವರ ಚಿತ್ರರಂಗದ ಸ್ಥಿತಿ ಹೇಗಿತ್ತು ಎನ್ನುವುದು ಕುತೂಹಲ ಮೂಡಿಸಿದೆ. ನಟ ಉಪೇಂದ್ರ,

    ಯಶ್, ಶಿವರಾಜ್ ಕುಮಾರ್, ದರ್ಶನ್, ಪುನೀತ್ ರಾಜ್ ಕುಮಾರ್, ಸುದೀಪ್ 2010 ರಲ್ಲಿ ಮಾಡಿದ ಸಿನಿಮಾಗೂ ಈಗ ಮಾಡುತ್ತಿರುವ ಸಿನಿಮಾ ಬಹಳ ವ್ಯತ್ತಾಸ ಇದೆ.

    ಈ ವರ್ಷ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡಿದ ಹೊಸ ನಟ-ನಟಿಯರಿವರುಈ ವರ್ಷ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡಿದ ಹೊಸ ನಟ-ನಟಿಯರಿವರು

    ಕನ್ನಡ ಸ್ಟಾರ್ ಗಳ Beginning of the decade ಮತ್ತು End of the decade ಹೀಗಿದೆ...

    ಮತ್ತೆ ಡೈರೆಕ್ಟರ್ ಆಗಿದ್ರು ಉಪೇಂದ್ರ

    ಮತ್ತೆ ಡೈರೆಕ್ಟರ್ ಆಗಿದ್ರು ಉಪೇಂದ್ರ

    2010 ರಲ್ಲಿ ಉಪೇಂದ್ರ ನಿರ್ದೇಶನ ಮಾಡಿದ್ದರು. 'ಉಪೇಂದ್ರ' ಸಿನಿಮಾದ ನಂತರ 10 ವರ್ಷ ಆದ ಮೇಲೆ ಮತ್ತೆ ಡೈರೆಕ್ಟರ್ ಆಗಿದ್ದರು. ಅವರ 'ಸೂಪರ್' ಸಿನಿಮಾ ಸರಿಯಾಗಿ ದಶಕದ ಹಿಂದೆ ಬಿಡುಗಡೆ ಆಗಿತ್ತು. ಮತ್ತೆ ಉಪೇಂದ್ರ ತಮ್ಮ ಬುದ್ದಿವಂತಿಯ ಸಿನಿಮಾ ಮಾಡಿ ಗೆದ್ದರು. ಸಿನಿಮಾ 50 ಕೋಟಿ ಗಳಿಕೆ ಮಾಡಿತ್ತು.

    ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದ ಯಶ್

    ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದ ಯಶ್

    10 ವರ್ಷದ ಹಿಂದೆ ಯಶ್ ಚಿತ್ರರಂಗದಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದರು. ಕೇವಲ 6 ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದರು. 'ಮೊಗ್ಗಿನ ಮನಸ್ಸು' ಸಿನಿಮಾ ಮಾತ್ರ ದೊಡ್ಡ ಹಿಟ್ ಆಗಿತ್ತು. 'ಮೊದಲಸಲ' ಸಿನಿಮಾದಲ್ಲಿ ಅವರು ನಟಿಸುತ್ತಿದ್ದರು. 'ತಮಸ್ಸು' ಚಿತ್ರದಲ್ಲಿ ಶಿವಣ್ಣನ ಜೊತೆಗೆ ತೆರೆ ಹಂಚಿಕೊಂಡಿದ್ದರು. ಒಂದು ಫಿಲ್ಮ್ ಫೇರ್ ಪ್ರಶಸ್ತಿ ಅವರ ಕೈನಲ್ಲಿತ್ತು.

    ಈ ವರ್ಷ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಕನ್ನಡ ಸಿನಿಮಾಗಳಿವುಈ ವರ್ಷ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಕನ್ನಡ ಸಿನಿಮಾಗಳಿವು

    'ಜಾಕಿ'ಯಾಗಿ ಕೇಕೆ ಹಾಕಿದ್ದ ಅಪ್ಪು

    'ಜಾಕಿ'ಯಾಗಿ ಕೇಕೆ ಹಾಕಿದ್ದ ಅಪ್ಪು

    ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 2010ರಲ್ಲಿ 'ಜಾಕಿ' ಸಿನಿಮಾ ಮಾಡಿದ್ದರು. ಈ ಸಿನಿಮಾದ ಮೂಲಕ ಮೊದಲ ಬಾರಿಗೆ ನಿರ್ದೇಶಕ ಸೂರಿ ಹಾಗೂ ಅಪ್ಪು ಒಂದಾಗಿದ್ದರು. ಈ ಸಿನಿಮಾ ಪುನೀತ್ ಕೆರಿಯರ್ ನಲ್ಲಿ ದೊಡ್ಡ ಹಿಟ್ ಆಗಿತ್ತು. ಹಾಡುಗಳು ಹೊಸ ಟ್ರೆಂಡ್ ಸೃಷ್ಟಿಸಿದ್ದವು. 'ಜಾಕಿ' ಜೊತೆಗೆ 'ಪೃಥ್ವಿ' ಸಿನಿಮಾ ಕೂಡ 2010 ರಲ್ಲಿಯೇ ಬಿಡುಗಡೆ ಆಗಿತ್ತು.

    ಅಮಿತಾಭ್ ಜೊತೆ ಸುದೀಪ್ ಸಿನಿಮಾ

    ಅಮಿತಾಭ್ ಜೊತೆ ಸುದೀಪ್ ಸಿನಿಮಾ

    2008 ರಲ್ಲಿ ಸುದೀಪ್ 'ಫೂಂಕ್' ಸಿನಿಮಾ ಮೂಲಕ ಬಾಲಿವುಡ್ ಪ್ರವೇಶ ಮಾಡಿದ್ದರು. 2010 ರಲ್ಲಿ ಕಿಚ್ಚ ಎರಡನೇ ಹಿಂದಿ ಸಿನಿಮಾ ಮಾಡಿದರು. ಮೊದಲ ಬಾರಿಗೆ ಅಮಿತಾಭ್ ಬಚ್ಚನ್ ಜೊತೆಗೆ ತೆರೆ ಹಂಚಿಕೊಂಡಿದ್ದರು. ಆ ವರ್ಷ ಸುದೀಪ್ ಬರೋಬ್ಬರಿ 8 ಸಿನಿಮಾದಲ್ಲಿ ನಟಿಸಿದ್ದರು. ಅದರಲ್ಲಿ ನಿರ್ದೇಶನದ 'ಜಸ್ಟ್ ಮಾತ್ ಮಾತಲ್ಲಿ' ಒಂದಾಗಿದೆ.

    1 ವರ್ಷದ ಚಿತ್ರರಂಗ: ಹಿಟ್ ಎಷ್ಟು? ಫ್ಲಾಫ್ ಎಷ್ಟು?1 ವರ್ಷದ ಚಿತ್ರರಂಗ: ಹಿಟ್ ಎಷ್ಟು? ಫ್ಲಾಫ್ ಎಷ್ಟು?

    99 ಸಿನಿಮಾ ಪೂರೈಸಿದ ಶಿವಣ್ಣ

    99 ಸಿನಿಮಾ ಪೂರೈಸಿದ ಶಿವಣ್ಣ

    ಹತ್ತು ವರ್ಷಗಳ ಹಿಂದೆ ಶಿವರಾಜ್ ಕುಮಾರ್ ತಮ್ಮ 99 ಸಿನಿಮಾವನ್ನು ಪೂರೈಸಿದ್ದರು. 'ಮೈಲಾರಿ' ಅವರ 99ನೇ ಚಿತ್ರ. ಈ ಸಿನಿಮಾ ನೂರು ದಿನಗಳ ಕಾಲ ಯಶಸ್ವಿ ಪ್ರದರ್ಶನ ಕಂಡಿತ್ತು. ಆ ವರ್ಷ ಅವರು ನಾಲ್ಕು ಸಿನಿಮಾ ಮಾಡಿದ್ದರು. 'ಚೆಲುವೆ ನಿನ್ನೆ ನೋಡಲು', 'ತಮಸ್ಸು' ಈ ಪೈಕಿ ಪ್ರಮುಖ ಸಿನಿಮಾಗಳಾಗಿವೆ.

    'ಪೊರ್ಕಿ'ಯಾದ ದರ್ಶನ್

    'ಪೊರ್ಕಿ'ಯಾದ ದರ್ಶನ್

    2010 ರಲ್ಲಿ ದರ್ಶನ್ 'ಪೊರ್ಕಿ' ಸಿನಿಮಾ ಮಾಡಿದ್ದರು. 'ಅಭಯ್' ಹಾಗೂ 'ಯೋಧ' ಸಿನಿಮಾಗಳು ಯಶಸ್ಸು ಕಾಣದೆ ಇದ್ದಾಗ ಈ ಸಿನಿಮಾ ಬಂತು. ಕಮರ್ಷಿಯಲ್ ಆಗಿ ಸಿನಿಮಾ ಹಿಟ್ ಆಯ್ತು. 'ಶೌರ್ಯ' ಸಿನಿಮಾ ಕೂಡ ಅದೇ ವರ್ಷ ಬಿಡುಗಡೆ ಆಗಿತ್ತು.

    ರಕ್ಷಿತ್ ಚಿತ್ರರಂಗದ ಪ್ರವೇಶ

    ರಕ್ಷಿತ್ ಚಿತ್ರರಂಗದ ಪ್ರವೇಶ

    'ಅವನೇ ಶ್ರೀಮನ್ನಾರಾಯಣ' ರಕ್ಷಿತ್ ಶೆಟ್ಟಿ ಹತ್ತು ವರ್ಷಗಳ ಹಿಂದೆ ಚಿತ್ರರಂಗದ ಪ್ರವೇಶ ಮಾಡಿದ್ದರು. 'ನಮ್ ಏರಿಯಲ್ ಒಂದಿನಾ' ಅವರ ಮೊದಲ ಸಿನಿಮಾವಾಗಿದ್ದು, 2010 ರಲ್ಲಿ ಬಿಡುಗಡೆ ಆಗಿತ್ತು. ಆದರೆ, 2013 ರಲ್ಲಿ ಬಂದ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಸಿನಿಮಾ ರಕ್ಷಿತ್ ಗೆ ಬ್ರೇಕ್ ನೀಡಿತ್ತು.

    English summary
    Beginning of the decade and End of the decade of Kannada actors.
    Wednesday, January 8, 2020, 15:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X