Sandalwood 2022: ಕನ್ನಡದ ಈ ಹಿಟ್ ಡೈಲಾಗ್ಸ್ ಹೊಡೆಯುತ್ತಾ ಹಳೇ ವರ್ಷಕ್ಕೆ ಬೈ ಬೈ ಹೇಳಿ

ಕನ್ನಡ ಚಿತ್ರರಂಗದಲ್ಲಿ ಈ ವರ್ಷ 200ಕ್ಕೂ ಅಧಿಕ ಸಿನಿಮಾಗಳು ಪ್ರೇಕ್ಷಕರ ಮುಂದೆ ಬಂದಿತ್ತು. ಕಳೆದ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಕನ್ನಡ ಸಿನಿಮಾಗಳ ಸಾಧನೆ ಉತ್ತಮವಾಗಿದೆ. ಇನ್ನು ಹಿಟ್ ಸಿನಿಮಾಗಳಲ್ಲಿದ್ದ ಜಬರ್ದಸ್ತ್‌ ಡೈಲಾಗ್‌ಗಳು ಸಖತ್ ಸದ್ದು ಮಾಡಿದ್ದವು.

ಹೀರೊ ಎಲಿವೇಷನ್ಸ್ ಸೀನ್ಸ್‌ನಲ್ಲಿ ಕಿಕ್ ಕೊಡೋ ಡೈಲಾಗ್ಸ್ ಇದ್ದರೆ ಚೆಂದ. ಥಿಯೇಟರ್‌ನಲ್ಲಿ ಚಪ್ಪಾಳೆ ಶಿಳ್ಳೆ ಗಿಟ್ಟಿಸುವಂತಹ ಸಂಭಾಷಣೆಗಳನ್ನು ಬರೆಯಲು ಬರಹಗಾರರು ಸಾಕಷ್ಟು ಕಸರತ್ತು ನಡೆಸ್ತಾರೆ. ಕೆಲವೊಮ್ಮೆ ಕಥೆಗೆ, ಸನ್ನಿವೇಶಕ್ಕೆ ಅಗತ್ಯ ಇಲ್ಲದೇ ಇದ್ದರೂ ಪಂಚಿಂಗ್ ಡೈಲಾಗ್ಸ್ ಬರೀತಾರೆ. ಈ ವರ್ಷ ಕನ್ನಡದಲ್ಲಿ ಅರ್ಧ ಡಜನ್‌ಗೂ ಹೆಚ್ಚು ಸಿನಿಮಾಗಳು ಹಿಟ್ ಲಿಸ್ಟ್ ಸೇರಿವೆ. ಅದರಲ್ಲಿ ಒಂದಕ್ಕೊಂದು ಡೈಲಾಗ್ ಸಿನಿರಸಿಕರ ಗಮನ ಸೆಳೆದಿತ್ತು. ಡಬ್‌ಸ್ಮಾಶ್‌ನಲ್ಲಿ ಇನ್‌ಸ್ಟಾ ರೀಲ್‌ಗಳಲ್ಲಿ ಇಂತಹ ಡೈಲಾಗ್‌ಗಳು ಮತ್ತಷ್ಟು ವೈರಲ್ ಆಗಿವೆ.

ಒಂದ್ಕಾಲದಲ್ಲಿ ಕೌಂಟರ್‌ ಡೈಲಾಗ್‌ಗಳು ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಸದ್ದು ಮಾಡಿದ್ದವು. ಇತ್ತೀಚಿಗೆ ಅದು ಕಮ್ಮಿ ಆಗಿದೆ. ಪ್ರಶಾಂತ್ ನೀಲ್ ನಿರ್ದೇಶನದ KGF- 2 ಪಂಚಿಂಗ್ ಡೈಲಾಗ್‌ಗಳು ಕೊಂಚ ಜಾಸ್ತಿನೇ ಇದ್ದವು.

ವೈಲೆನ್ಸ್.. ವೈಲೆನ್ಸ್.. ವೈಲೆನ್ಸ್

ವೈಲೆನ್ಸ್.. ವೈಲೆನ್ಸ್.. ವೈಲೆನ್ಸ್

ಯಶ್ ನಟನೆಯ KGF- 2 ಚಿತ್ರಕ್ಕೆ ಪ್ರಶಾಂತ್ ನೀಲ್, ಚಂದ್ರಮೌಳಿ ಪಂಚಿಂಗ್ ಡೈಲಾಗ್ಸ್ ಬರೆದಿದ್ದರು. "ವೈಲೆನ್ಸ್... ವೈಲೆನ್ಸ್... ವೈಲೆನ್ಸ್... ಐ ಡೋಂಟ್ ಲೈಕ್ ಇಟ್. ಐ ಅವಾಯ್ಡ್, ಬಟ್ ವೈಲೆನ್ಸ್ ಲೈಕ್ಸ್ ಮಿ, ಐ ಕಾಂಟ್ ಅವಾಯ್ಡ್" ಡೈಲಾಗ್ ಸಖತ್ ಕಿಕ್ ಕೊಟ್ಟಿತ್ತು. ಕೆಲವರು ಇದನ್ನು ತಮಗೆ ಬೇಕಾದಂತೆ ಬದಲಿಸಿಕೊಂಡು ಹೇಳಿ ಖುಷಿಪಟ್ಟರು. ಫಸ್ಟ್ ಚಾಪ್ಟರ್‌ನಲ್ಲಿ "ಪವರ್​ ಫುಲ್ ಪೀಪಲ್​ ಕಮ್​ ಫ್ರಂ ಪವರ್​ ಫುಲ್​ ಪ್ಲೇಸಸ್" ಎಂದು ಅನಂತ್ ನಾಗ್ ಹೇಳಿದ್ದರೆ ಚಾಪ್ಟರ್‌- 2ನಲ್ಲಿ "ಪವರ್‌ಫುಲ್ ಪೀಪಲ್ ಮೇಕ್ ಪ್ಲೇಸಸ್ ಪವರ್‌ಫುಲ್" ಎಂದು ಪ್ರಕಾಶ್ ರಾಜ್ ಹೇಳಿದ್ದರು.

ವರ್ಲ್ಡ್ ಈಸ್ ಮೈ ಟೆರಿಟರಿ

ವರ್ಲ್ಡ್ ಈಸ್ ಮೈ ಟೆರಿಟರಿ

"ಏನಂದೆ ನೀನು. ಒಂದು ಹೆಜ್ಜೆ ಇಟ್ಟು ಬಂದೋನು ಅಂತಾನಾ? ಗಡಿಯಾರದಲ್ಲಿ ಒಂದು ಗಂಟೆಯಾಗೋಕೆ ದೊಡ್ಡ ಮುಳ್ಳು 60 ಹೆಜ್ಜೆ ಇಡಬೇಕು. ಚಿಕ್ಕ ಮುಳ್ಳು ಒಂದು ಹೆಜ್ಜೆ ಇಟ್ಟರೆ ಸಾಕು. ನಾನು ಹೆಜ್ಜೆ ಇಟ್ಟಾಗಿದೆ, ಆಟದ ರೇಂಜ್ ಚೇಂಜ್ ಆಗಿದೆ. ನಿನ್ನ ಹಾವು ಏಣಿ ಆಟಕ್ಕೆ ಮುಂಗುಸಿ ಇಳಿದಿದೆ. ಇನ್ಮೇಲೆಯಿಂದ ಆ ಟೆರಿಟರಿ ನಂದು, ಈ ಟೆರಿಟರಿ ನಿಂದು ಅನ್ನೋದೆಲ್ಲ ಬಿಟ್ಟುಬಿಡಿ, ವರ್ಲ್ಡ್ ಈಸ್ ಮೈ ಟೆರಿಟರಿ" ಅನ್ನೋ ಡೈಲಾಗ್ ಮತ್ತಷ್ಟು ಸದ್ದು ಮಾಡಿತ್ತು. 2 ವರ್ಷದ ಹಿಂದೆ ಯಶ್ ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಈ ಡೈಲಾಗ್ ಹೇಳಿದ್ದರು. ಇನ್ನು ಸಿನಿಮಾದಲ್ಲಿ ಮತ್ತಷ್ಟು ಮಜಾ ಕೊಟ್ಟಿತ್ತು.

ಗರ ಗರ ಗರ ಗಗ್ಗರ ಗರ್ಬ

ಗರ ಗರ ಗರ ಗಗ್ಗರ ಗರ್ಬ

ಟೀಸರ್‌ನಿಂದಲೇ 'ಗುಮ್ಮ ಬಂದ ಗುಮ್ಮ' ಬಂದ ಎಂದು ಸದ್ದು ಮಾಡಿದ್ದ ವಿಕ್ರಾಂತ್ ರೋಣ ಚಿತ್ರದಲ್ಲಿ ಒಂದು ಡೈಲಾಗ್ ಇತ್ತು. ಕಿಚ್ಚನ ಬೇಸ್‌ ವಾಯ್ಸ್‌ನಲ್ಲಿ ಈ ಡೈಲಾಗ್ ಕೇಳೊ ಮಜಾನೇ ಬೇರೆ. "ಗರ ಗರ ಗರ ಗಗ್ಗರ ಗರ್ಬ.. ಪಿರ ನೆಲ್ಕುರಿ ನೆತ್ತರ ಪರ್ಬ" ಎನ್ನುವ ಸಾಲುಗಳು ಟ್ರೈಲರ್‌ನಲ್ಲೇ ಸಕತ್ ವೈರಲ್ ಆಗಿತ್ತು. ಇನ್ನು ಥಿಯೇಟರ್‌ಗಳಲ್ಲಿ ಅಭಿಮಾನಿಗಳು ಈ ಡೈಲಾಗ್‌ಗೆ ಹುಚ್ಚೆದ್ದು ಕುಣಿದಿದ್ದರು.

ಸಿಂಹ ಕಿರುಚಿದರೆ ಮಾತ್ರ ಘರ್ಜನೆ

ಸಿಂಹ ಕಿರುಚಿದರೆ ಮಾತ್ರ ಘರ್ಜನೆ

ಬಹದ್ದೂರ್ ಚೇತನ್‌ ಕುಮಾರ್ ನಿರ್ದೇಶನದ 'ಜೇಮ್ಸ್' ಚಿತ್ರದಲ್ಲೂ ಒಂದಷ್ಟು ಡೈಲಾಗ್ಸ್ ಇದ್ದವು. "ಅಪ್ಪ ಅಮ್ಮ ಹೆಸರಿಟ್ಟರೆ ವಾಡಿಕೆ, ನಮಗೆ ನಾವೇ ಹೆಸರಿಟ್ಕೊಂಡ್ರೆ ಅದು ಬೇಡಿಕೆ" ಎನ್ನುವ ಅಪ್ಪು ಡೈಲಾಗ್ ಮೂಲಕ ಸಿನಿಮಾ ಶುರುವಾಗಿತ್ತು. ಈ ಡೈಲಾಗ್‌ ಅಭಿಮಾನಿಗಳಿಗೆ ಇಷ್ಟವಾಗಿತ್ತು. ಇನ್ನು ಟ್ರೇಡ್‌ಮಾರ್ಕ್ ಸಾಂಗ್ ನಡುವೆ ಯುವ ರಾಜ್‌ಕುಮಾರ್ ಹೊಡೆದ "ಸಿಂಹ ಕಿರುಚಿದ್ರೆ ಮಾತ್ರ ಕಣೋ ಘರ್ಜನೆ.. ಕಿಂಗ್ ಈಸ್ ಆಲ್ವೇಸ್ ಕಿಂಗು ಮಾಮ" ಡೈಲಾಗ್ ಹಿಟ್ ಆಗಿತ್ತು.

More from Filmibeat

English summary
Best Kannada Movies Dialogues Of 2022 You Will Absolutely Love. Prashanth Neel wrote power punch dialogues For KGF Chapter 2. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X