For Quick Alerts
  ALLOW NOTIFICATIONS  
  For Daily Alerts

  ಕಳೆದ ವರ್ಷ ಕನ್ನಡ ಇಂಡಸ್ಟ್ರಿಯಲ್ಲಿ ಸೌಂಡ್ ಮಾಡಿದ ಟಾಪ್ ಡೈಲಾಗ್ ಯಾವುದು?

  |

  2019ನೇ ವರ್ಷ ಮುಗಿತು. ಕಳೆದ ವರ್ಷ ಹಲವು ಸೂಪರ್ ಹಿಟ್ ಸಿನಿಮಾಗಳು ತೆರೆಕಂಡಿವೆ. ಕಳೆದ ವರ್ಷ ರಿಲೀಸ್ ಆದ ಚಿತ್ರಗಳ ಪೈಕಿ ಕೆಲವು ಡೈಲಾಗ್ ಗಳು ಸಿಕ್ಕಾಪಟ್ಟೆ ಸೌಂಡ್ ಮಾಡಿದೆ.

  ಡೈಲಾಗ್ ನಿಂದಲೇ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿತ್ತು. ಕೆಲವು ಡೈಲಾಗ್ ಗಳಂತೂ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗಳನ್ನೇ ಹುಟ್ಟುಹಾಕಿತ್ತು.

  ಡೈಲಾಗ್ ಬರೆಯೋರಿಗೆ ಮೊದಲೇ ಎಚ್ಚರಿಕೆ ಕೊಟ್ಟಿರ್ತಾರಂತೆ ದಾಸಡೈಲಾಗ್ ಬರೆಯೋರಿಗೆ ಮೊದಲೇ ಎಚ್ಚರಿಕೆ ಕೊಟ್ಟಿರ್ತಾರಂತೆ ದಾಸ

  ಅದರಲ್ಲಿ ಕೆಲವು ಡೈಲಾಗ್ ಗಳನ್ನು ಕೌಂಟರ್ ಡೈಲಾಗ್ ಅಂದ್ರು...ಮತ್ತೊಬ್ಬರಿಗೆ ಟಾಂಗ್ ಕೊಟ್ಟಿದ್ದಾರೆ ಅಂದ್ರು...ಇದೆಲ್ಲವನ್ನು ಮೀರಿ ಅದು ಆ ಚಿತ್ರಕ್ಕೆ ತಾಕತ್ ಹೆಚ್ಚಿಸಿತ್ತು. ಹಾಗಿದ್ರೆ, 2019ನೇ ಸಾಲಿನಲ್ಲಿ ಬಿಡುಗಡೆಯಾದ ಚಿತ್ರಗಳ ಪೈಕಿ ಯಾವ ಡೈಲಾಗ್ ಹೆಚ್ಚು ಸದ್ದು ಮಾಡಿತ್ತು? ಡೈಲಾಗ್ ಮುಂದೆ ಓದಿ...

  ಬಜಾರ್ ಡೈಲಾಗ್

  ಬಜಾರ್ ಡೈಲಾಗ್

  ''ಹಾವಾಡಿಸೋವ್ನಾ ಹಾವಾಡಿಗ ಅಂತಾರೆ...

  ಆನೆ ಪಳಗಿಸೋವ್ನಾ ಮಾವುತಿಗ ಅಂತಾರೆ

  ಜನರನ್ನು ಮೋಡಿ ಮಾಡೋವ್ನಾ ಗಾರುಡಿಗ ಅಂತಾರೆ..

  ಆದರೆ,

  ಎದುರುಗಡೆ ನಿಲ್ಲೋ ಶತ್ರುವಿನ ಎದೆ ಸೀಳೋವ್ನಾ ಕನ್ನಡಿಗ ಅಂತಾರೆ ಲೇ.....''

  ಯಜಮಾನ ಡೈಲಾಗ್

  ಯಜಮಾನ ಡೈಲಾಗ್

  ''ಆಕಾಶಕ್ಕೆ ತಲೆಕೊಟ್ಟು...

  ಭೂಮಿಗೆ ಬೆವರಿಳಿಸಿ...

  ನಿಯತ್ತಿಂದ ಕಟ್ಟಿರೋ ...

  ಸ್ವಂತಾ ಬ್ಯ್ರಾಂಡೋ...

  ಸೌಂಡ್ ಜಾಸ್ತಿನೇ ಇರುತ್ತೆ....''

  ಯಜಮಾನನ ಈ ಎರಡು ಡೈಲಾಗ್ ಬಗ್ಗೆ ಇಂತಹದೊಂದು ಚರ್ಚೆ.!ಯಜಮಾನನ ಈ ಎರಡು ಡೈಲಾಗ್ ಬಗ್ಗೆ ಇಂತಹದೊಂದು ಚರ್ಚೆ.!

  ಯಜಮಾನ ಡೈಲಾಗ್ 2

  ಯಜಮಾನ ಡೈಲಾಗ್ 2

  ''ಹೇ ಕ್ಯಾಡ್ಬರೀಸ್..

  ಆನೆ ನಡೆದಿದ್ದೆ ದಾರಿ...

  ಬರ್ತಾ ಇದ್ದೀನಿ...

  ತಾಕತ್ ಇದ್ರೆ,

  ಕಟ್ಟಾಕೋ...''

  ಅಮರ್ ಡೈಲಾಗ್

  ಅಮರ್ ಡೈಲಾಗ್

  (ಹೀರೋ ತರ ಪೋಸ್ ಕೊಡ್ತಾವ್ನೆ...)

  ''ಹೀರೋ ತರನಾ...?

  ಚಾನ್ಸೇ ಇಲ್ಲ....

  ಹೇ...ನಾನು ಹೀರೋನೇ...''

  ರುಸ್ತುಂ ಡೈಲಾಗ್

  ರುಸ್ತುಂ ಡೈಲಾಗ್

  ''ಅರೆಸ್ಟ್ ಅಂದ್ರೆ ಅಲರ್ಜಿ...

  ಎನ್ ಕೌಂಟರ್ ಅಂದ್ರೆ ಎನರ್ಜಿ...''


  (ಶಿವಣ್ಣನ ಈ ಡೈಲಾಗ್ ಇಡೀ ಸಿನಿಮಾದಲ್ಲಿ ಬಹುದೊಡ್ಡ ಹೈಲೈಟ್)

  ಪೈಲ್ವಾನ್ ಡೈಲಾಗ್

  ಪೈಲ್ವಾನ್ ಡೈಲಾಗ್

  ''ನಾನು ಗೆಲ್ತಿನೋ ಗೆಲ್ಲೊದಿಲ್ವೋ ನನಗೆ ಗೊತ್ತಿಲ್ಲ...

  ಆದರೆ,

  ಸೋಲನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳೋನು ನಾನಲ್ಲ...''

  ಭರಾಟೆ ಡೈಲಾಗ್

  ಭರಾಟೆ ಡೈಲಾಗ್

  ''ಜೀವನದಲ್ಲಿ ಬಿದ್ದು ಎದ್ದು ಮೈಕೊಡವ್ಕೊಂಡು ನಿಂತಿರುವ ದೇಹ ಕಣೋ ಇದು...

  ಹಾವಳಿ, ದೀಪಾವಳಿ ಎರಡು ನನ್ನ ಕ್ಯಾರೆಕ್ಟರ್ ನಲ್ಲೇ ಇದೆ...

  ಸಲಾಂ ಹೊಡೆಯೋ ಸೀನೇ ಇಲ್ಲ ಡಾರ್ಲಿಂಗ್

  ಸುಮ್ಮನೆ ನುಗ್ತಾ ಇರೋದೆ....ತೊಡೆ ತಟ್ತಾ ಇರೋದೆ...''

  Bharaate Review: ಮಾಸ್ ಪ್ರೇಕ್ಷಕರಿಗೆ ಕಿಕ್ ಹೆಚ್ಚಿಸುವ ಭರಾಟೆBharaate Review: ಮಾಸ್ ಪ್ರೇಕ್ಷಕರಿಗೆ ಕಿಕ್ ಹೆಚ್ಚಿಸುವ ಭರಾಟೆ

  English summary
  Best-known dialogues in Kannada films in this year.. Listed some Best Dialogues throughout the year 2019. What's your favorite dialogue?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X