"ಆ ವ್ಯಕ್ತಿ ನನ್ನ ಹೊಟ್ಟೆಗೆ ಕಾಲಿನಿಂದ ಬಲವಾಗಿ ಒದ್ದಿದ್ರು"- ಭಾವನಾ ರಾಮಣ್ಣ

ಕನ್ನಡ ನಟಿ ಭಾವನಾ ರಾಮಣ್ಣ ತಮ್ಮ ಪ್ರೆಗ್ನೆನ್ಸಿ ವಿಚಾರವನ್ನು ಇತ್ತೀಚೆಗೆ ಬಹಿರಂಗಪಡಿಸಿದ್ದರು. ಮದುವೆಯಾಗದೇ ಐವಿಎಫ್‌ ಚಿಕಿತ್ಸೆ ಮೂಲಕ ಆಕೆ ಅವಳಿ ಮಕ್ಕಳನ್ನು ಪಡೆಯಲು ಮುಂದಾಗಿದ್ದಾರೆ. ಭಾವನಾ ಅವರ ನಡೆಯ ಬಗ್ಗೆ ಪರ ವಿರೋಧ ಚರ್ಚೆ ನಡೀತಿದೆ. ಇನ್ನು ಕೆಲ ಗೊಂದಲಗಳಿಗೆ ಸ್ವತಃ ಸ್ಪಷ್ಟನೆ ಕೊಡುತ್ತಿದ್ದಾರೆ.

29 ವರ್ಷಗಳ ಹಿಂದೆ ನಟಿ ಭಾವನಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. 'ಮಾರಿಬಲೆ' ಎಂಬ ತುಳು ಚಿತ್ರದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು. 'ನಂಬರ್ 1' ಎಂಬ ಚಿತ್ರರ ಮೂಲಕ ಕನ್ನಡದಲ್ಲಿ ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದರು. ಆಕೆಯ ನಟನೆಗ 3 ರಾಜ್ಯಪ್ರಶಸ್ತಿಗಳು ಸಿಕ್ಕಿದೆ. ಗ್ಲಾಮರಸ್ ಪಾತ್ರಗಳಲ್ಲಿ ಕೂಡ ನಟಿಸಿ ಹುಬ್ಬೇರಿಸಿದ್ದಾರೆ. ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡಿದ್ದಾರೆ.

Bhavana Ramanna Recalls Number 1 Film bad Experience Amid IVF Pregnancy Announcement

ಮದುವೆಯಾಗದೇ ಐವಿಎಫ್‌ನಿಂದ ತಾಯಿಯಾಗಲು ಮುಂದಾಗಿರುವ ತಮ್ಮ ನಿರ್ಣಯವನ್ನು ಭಾವನಾ ಸಮರ್ಥಿಸಿಕೊಂಡಿದ್ದಾರೆ. ಸಾಕಷ್ಟು ಜನ ಅದನ್ನು ಸ್ವಾಗತಿಸಿದ್ದಾರೆ. ಕೆಲವರು ಮಾತ್ರ ಚಕಾರ ಎತ್ತಿದ್ದಾರೆ. ಕುಟುಂಬ ವ್ಯವಸ್ಥೆಯ ವಿರುದ್ಧ ನಾನು ಹೋಗುತ್ತಿಲ್ಲ. ನಾನು ಸಮಾಜಕ್ಕೆ ಸವಾಲು ಹಾಕಬೇಕು ಎಂದು ಈ ನಿರ್ಧಾರಕ್ಕೆ ಬರಲಿಲ್ಲ ಎಂದು ನಟಿ ಭಾವನಾ ರಾಮಣ್ಣ ಹೇಳಿದ್ದಾರೆ. ನನಗೆ ತಾಯಿಯಾಗಬೇಕು ಎನ್ನುವ ಬಯಕೆ ಬಹಳ ದಿನಗಳಿಂದ ಇತ್ತು. ಅದನ್ನು ಈಡೇರಿಸಿಕೊಳ್ಳಲು ಈ ನಿರ್ಧಾರಕ್ಕೆ ಬಂದೆ ಎಂದಿದ್ದಾರೆ.

ನಾನು ಕೂಡ ಒಂದು ಕುಟುಂಬದಲ್ಲಿ ನಾನು ಹುಟ್ಟಿಬೆಳೆದವಳು. ಅದೇ ಕುಟುಂಬದಲ್ಲಿ ಇದ್ದೀನಿ, ಮುಂದೆ ಕೂಡ ಇರ್ತೀನಿ, ಅದನ್ನು ಬೇಡ ಎನ್ನುವುದಿಲ್ಲ ಎಂದು 'ಅವನಿಯಾನ' ಯೂಟ್ಯೂಬ್ ಸಂದರ್ಶನದಲ್ಲಿ ಭಾವನಾ ಹೇಳಿದ್ದಾರೆ. ಭಾರತದಲ್ಲಿ 35 ವರ್ಷಕ್ಕೆ ಎಲ್ಲರಿಗೂ ಮದುವೆ ಆಗಿರುತ್ತದೆ. ಹಾಗಾಗಿ ಸಂಗಾತಿಯನ್ನು ಹುಡುಕುವುದು ಕೂಡ ಕಷ್ಟ. ಸಂಗಾತಿ ಸಿಕ್ಕ ಕೂಡಲೇ ಮಗು ಆಗುವುದಿಲ್ಲ. ಅದು ಸುಲಭ ಕೂಡ ಅಲ್ಲ. ಅದಕ್ಕೆ ಸಾಕಷ್ಟು ವಿಚಾರಗಳು ಕೂಡಿ ಬರಬೇಕು ಎಂದು ಭಾವನಾ ಅಭಿಪ್ರಾಯಪಟ್ಟಿದ್ದಾರೆ.

Bhavana Ramanna Recalls Number 1 Film bad Experience Amid IVF Pregnancy Announcement

ಹೆಣ್ಣು ತಾಯಿಯಾಗುವುದು, ಮಗುವಿಗೆ ಜನ್ಮ ಕೊಡುವುದು ಈಗ ಅಷ್ಟು ಸುಲಭ ಅಲ್ಲ, ಅದಕ್ಕೆ ದೈಹಿಕವಾಗಿ ಮಾನಸಿಕವಾಗಿ ಸಿದ್ಧರಾಗಬೇಕು. ಇದು ಯಾಂತ್ರಿಕವಾಗಿ ನಡೆಯುವಂಥದ್ದು ಅಲ್ಲ, ಆಗಿನ ಕಾಲದಲ್ಲಿ 10, 12 ಮಕ್ಕಳು ಮಾಡಿಕೊಳ್ಳುತ್ತಿದ್ದರು. ಅದೇ ಹೇಗೆ ಎನ್ನುವುದು ಗೊತ್ತಿಲ್ಲ. ಆ ಹೆಣ್ಣುಮಕ್ಕಳು ಈ ನೋವನ್ನು ಹೇಳಿಕೊಳ್ಳುತ್ತಿರಲಿಲ್ಲ. ಅದನ್ನು ಹೇಳಲು ನಾವು ಬಿಡಲಿಲ್ಲ. ಆದರೆ ಈಗಿನ ಹೆಣ್ಣು ಅದನ್ನು ಒಪ್ಪಿಕೊಳ್ಳು ಅವಶ್ಯಕತೆ ಇಲ್ಲ ಎಂದು ಭಾವನಾ ವಿವರಿಸಿದ್ದಾರೆ.

ದೈಹಿಕವಾಗಿ ಪುರುಷ ಹಾಗೂ ಮಹಿಳೆಯರು ಬಹಳ ಭಿನ್ನವಾಗಿರುತ್ತಾರೆ. ಗಂಡು ಹಾಗೂ ಹೆಣ್ಣಿನ ದೃಷ್ಠಿಕೋನಗಳೇ ಬೇರೆ ಬೇರೆ. ಗಂಡಿಗೂ ಎಮೋಷನ್, ಭಾವನ ಬೇರೆ ಬೇರೆ ಇದೆ. ಇಲ್ಲ ಎನ್ನುವುದಿಲ್ಲ, ಮಹಿಳೆಯ ಎಮೋಷನ್ ಬೇರೆ. ಹುಡುಗಿಯರ ದೇಹಸ್ಥಿತಿ ಬಹಳ ಸೂಕ್ಷ್ಮ. ನಾವು ಎಷ್ಟೇ ಆದ್ರೂ ಪುರುಷರಿಗೆ ಸಮ ಅಲ್ಲ. ನಾನು 'ನಂಬರ್-1' ಎಂಬ ಸಿನಿಮಾ ಮಾಡುವಾಗ ಸ್ಟಂಟ್ ಮಾಸ್ಟರ್ ಎಡವಟ್ಟು ಮಾಡಿಬಿಟ್ರು. ನನ್ನ ಹೊಟ್ಟೆಗೆ ಕಾಲಿನಿಂದ ಬಲವಾಗಿ ಒದ್ದುಬಿಟ್ರು. ನಾನು ಅಷ್ಟು ದೂರ ಹೋಗಿ ಬಿದ್ದಿದ್ದೆ. ನಮ್ಮಮ್ಮ ಕೂತು ಅಳುತ್ತಿದ್ದರು. ನೈಸರ್ಗಿಕವಾಗಿ ನನ್ನ ದೇಹ ಬೇರೆ ರೀತಿಯಿದೆ, ನಾನು ಗಂಡು ಅಲ್ಲ. ನಾನು ಹೆಣ್ಣು, ನನ್ನ ಮನಸ್ಸು ಬಲಿಷ್ಠವಾಗಿದ್ದರೂ ದೇಹ ಸೂಕ್ಷ್ಮ" ಎಂದು ಆ ಘಟನೆಯನ್ನು ನಟಿ ಭಾವನಾ ರಾಮಣ್ಣ ನೆನಪಿಸಿಕೊಂಡಿದ್ದಾರೆ.

More from Filmibeat

English summary
Kannada actress Bhavana Ramanna, who recently announced her IVF pregnancy without marriage, recalls a traumatic on-set injury during her debut Kannada film 'Number 1';
Read more about: bhavana sandalwood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X